ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾ ಎಷ್ಟು ಚೆಂದ..! ಬಾನಂಗಳದಲ್ಲಿ ರಂಗಿನ ರಂಗೋಲಿ ಬರೆದ ರಕ್ತಚಂದ್ರ!

|
Google Oneindia Kannada News

Recommended Video

Lunar Eclipse in a nutshell | ಬಾನಂಗಳದಲ್ಲಿ ರಂಗಿನ ರಂಗೋಲಿ ಬರೆದ ರಕ್ತಚಂದ್ರ! | Oneindia Kannada

ನವದೆಹಲಿ, ಜುಲೈ 28: ಶತಮಾನದ ಸುದೀರ್ಘ ಚಂದ್ರಗ್ರಹಣಕ್ಕೆ ಭಾರತ ಸೇರಿದಂತೆ ವಿಶ್ವದ ನಾನಾ ದೇಶಗಳು ಸಾಕ್ಷಿಯಾದವು.

ಜುಲೈ 27, ಶುಕ್ರವಾರ ಮಧ್ಯರಾತ್ರಿ 11.55 ರಿಂದ ಆರಂಭವಾದ ಗ್ರಹಣ ಜು.28 ಶನಿವಾರ ಬೆಳಗ್ಗಿನ ಜಾವದವರೆಗೂ ಕಾಣಿಸಿಕೊಂಡು ಚಂದ್ರಪ್ರಿಯರ ಮನತಣಿಸಿತು!

ಸಣ್ಣಕಥೆ : ಗ್ರಹಣ ಸಣ್ಣಕಥೆ : ಗ್ರಹಣ

2001 ರಿಂದ 2100 ರ ಅವಧಿಯಲ್ಲಿ ಇಂಥ ಗ್ರಹಣ ಸಂಭವಿಸಿಲ್ಲ, ಸಂಭವಿಸುವುದೂ ಇಲ್ಲ! 1 ಗಂಟೆ 42 ನಿಮಿಷ 57 ಸೆಕೆಂಡ್ ನಷ್ಟು ದೀರ್ಘ ಕಾಲ ಖಗ್ರಾಸ ಗ್ರಹಣ ಸಂಭವಿಸಿದ್ದು, ಒಟ್ಟು ಸುಮಾರು 3:45 ನಿಮಿಷಗಳಷ್ಟು ದೀರ್ಘಕಾಲ ಈ ಗ್ರಹಣ ಕಾಣಿಸಿಕೊಂಡಿದೆ.

ಏನಿದು ರಕ್ತಚಂದ್ರ, ನೀಲಿಚಂದ್ರ? ಬಾನಂಗಳದಲ್ಲಾಗುತ್ತಾ ಕೋಲಾಹಲ?!ಏನಿದು ರಕ್ತಚಂದ್ರ, ನೀಲಿಚಂದ್ರ? ಬಾನಂಗಳದಲ್ಲಾಗುತ್ತಾ ಕೋಲಾಹಲ?!

ಬೆಂಗಳೂರು ಸೇರಿದಂತೆ ಕೆಲವೆಡೆ ಮೋಡ ಕವಿದ ವಾತಾವರಣ ಇದ್ದಿದ್ದರಿಂದ ರಕ್ತಚಂದ್ರನನ್ನು ನೋಡುವ ಅವಕಾಶ ಕೈತಪ್ಪಿತು! ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ರಕ್ತ ಚಂದ್ರ ಬಾನಂಗಳದಲ್ಲಿ ಬರೆದ ರಂಗಿನ ರಂಗೋಲಿ ರಾರಾಜಿಸುತ್ತಿದೆ.

Array

ಶತಮಾನದ ಸುಂದರ ದೃಶ್ಯ

ಭಾರತದಲ್ಲಿ ಕಂಡ ರಕ್ತಚಂದ್ರನ ಚಿತ್ರ ಇದು. ಭಾರತದ ಎಲ್ಲಾ ಕಡೆಯೂ ಗ್ರಹಣ ಬರಿಗಣ್ಣಿನಲ್ಲಿ ಕಾಣುತ್ತಿದ್ದಾರೂ, ಮೋಡದ ಕಾರಣದಿಂದಾಗಿ ಶತಮಾನದ ಈ ಸುಂದರ ದೃಶ್ಯವನ್ನು ನೋಡಲು ಹಲವರಿಗೆ ಸಾಧ್ಯವಾಗಲಿಲ್ಲ.

ಚಂದ್ರ ಗ್ರಹಣದ ವೇಳೆ ಕೈಗೊಳ್ಳಬೇಕಾದ ಶಾಂತಿ-ಪರಿಹಾರದ ಪೂರ್ಣ ವಿವರ ಚಂದ್ರ ಗ್ರಹಣದ ವೇಳೆ ಕೈಗೊಳ್ಳಬೇಕಾದ ಶಾಂತಿ-ಪರಿಹಾರದ ಪೂರ್ಣ ವಿವರ

Array

ನೈಲ್ ನದಿಯೆಲ್ಲ ಕೆಂಪು ಕೆಂಪು!

ಈಜಿಪ್ಟಿನ ನೈಲ್ ನದಿಯನ್ನೆಲ್ಲ ಕೆಂಪಾಗಿಸಿದ ರಕ್ತ ಚಂದ್ರನ ಚಿತ್ರ ಇದು! ಹಿನ್ನೆಲೆಯಲ್ಲಿ ಕಪ್ಪು ಆಕಾಶ, ಅಲ್ಲೊಂದು ಕೇಸರಿ ಚೆಂಡು... ಅಡಿಯಲ್ಲಿ ಕೆಂಪು ನೀರು. ಕಣ್ತುಂಬಲು ಇನ್ನೇನು ಬೇಕು?!

In Pics: ವಿಶ್ವದೆಲ್ಲೆಡೆ ರಕ್ತವರ್ಣದಲ್ಲಿ ಕಂಡ ಚಂದಿರನ ಕಣ್ತುಂಬಿಸಿಕೊಳ್ಳಿ

ಜರ್ಮನಿಯಲ್ಲಿ ಕಂಡ ಕೆಂಪು ಚಂದ್ರ

ಜರ್ಮನಿಯಲ್ಲಿ ಚೆಂದದ ಕಟ್ಟಡವೊಂದರ ಪಕ್ಕ ಕಂಡ ಕೆಂಪು ಚಂದ್ರ ಚೆಂದವೊ ಚೆಂದ! ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ ಮತ್ತು 2036 ರವರೆಗೂ ಮತ್ತೆ ಕಾಣದ ಖಗ್ರಾಸ ಚಂದ್ರಗ್ರಹಣ ಇದು ಎಂಬ ಕಾರಣಕ್ಕೆ ಸಾಕಷ್ಟು ವಿಶೇಷತೆ ಪಡೆದಿತ್ತು.

ಎಂಥ ಚೆಂದ ಈ ಚಂದಮಾಮ!

ವಿಶ್ವದ ಹಲವೆಡೆ ಕಂಡ ಚಂದ್ರಗ್ರಹಣದ ಅಮೋಘ ದೃಶ್ಯವನ್ನು ಸೆರೆ ಹಿಡಿದಿರುವ ಬಿಬಿಸಿ ನ್ಯೂಸ್, ಅದನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಈ ಚೆಂದದ ಚಂದ್ರಂಗೆ ಸಾಟಿ ಯಾರು ಹೇಳಿ?!

ವಿವಿಧ ಹಂತಗಳಲ್ಲಿ

ಗ್ರಹಣ ಸ್ಪರ್ಶದಿಂದ ಹಿಡಿದು ಗ್ರಹಣ ಮೋಕ್ಷದವರೆಗೂ ತೆಗೆದ ಚಿತ್ರವನ್ನು ಉಲ್ರಿಚ್ ಜೇನ್ಸ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಇಂಥ ಗ್ರಹಣದ ಚಿತ್ರ ತೆಗೆಯುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದವರು ಬರೆದುಕೊಂಡಿದ್ದಾರೆ.

ಬಾನಂಗಳದಲ್ಲಿ ಕೆಂಪು ಚೆಂಡು!

ಇಂಡೋನೇಶ್ಯಾದಲ್ಲಿ 103 ನಿಮಿಷಗಳ ದೀರ್ಘ ಕಾಲ ಕಾಣಿಸಿಕೊಂಡ ಈ ಚಂದ್ರ ಬಾನಂಗಳದಲ್ಲೊಂದು ಕೆಂಪು ಚೆಂಡನಿಟ್ಟಂತೆ ಕಂಡ!

English summary
The world witnessed Blood Moon or total lunar eclipse, the longest of the 21st Centuryon July 27. The rare celestial event has seen in its entirety from all parts of India.But some people missed it due to cloudy weather.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X