• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದು'ತೋಳ ಚಂದ್ರ ಗ್ರಹಣ': ಏನು ಮಾಡಬೇಕು, ಏನು ಮಾಡಬಾರದು?

|

ಬೆಂಗಳೂರು, ಜನವರಿ 9: ಸೂರ್ಯಗ್ರಹಣದ ಬೆನ್ನಲ್ಲೇ ವರ್ಷದ ಮೊದಲ ಚಂದ್ರಗ್ರಹಣವೂ ಇಂದು ಗೋಚರವಾಗಲಿದೆ.

   Nasa credits a Chennai Techie for finding Vikram lander debris | Oneindia Kannada

   ಗ್ರಹಣ ಸಮಯದಲ್ಲಿ ಯಾವ ನಿಯಮ ಪಾಲಿಸಬೇಕು. ಗ್ರಹಣದ ಅಪಾಯದಿಂದ ಪಾರಾಗೋದು ಹೇಗೆ?.. ಹೀಗೆ ನಾನಾ ಪ್ರಶ್ನೆಗಳು ಉದ್ಭವಿಸುವುದು ಸಹಜ ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

   ಗ್ರಹಣಗಳು ಸಂಭವಿಸಿದಾಗ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ. ಆದರೆ ಈ ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೂ ನೋಡಬಹುದೆನ್ನುವುದು ತಜ್ಞರ ಅಭಿಪ್ರಾಯವಾಗಿದೆ.

   2020ರ ಮೊದಲ ಚಂದ್ರಗ್ರಹಣ: ನಿಮಗೆ ತಿಳಿದಿರಬೇಕಾದ ಸಂಗತಿಗಳು

   ಚಂದ್ರ ಗ್ರಹಣದಲ್ಲಿ ಎರಡು ಹಂತಗಳಿವೆ. ಒಂದನೇ ಹಂತದಲ್ಲಿ ಚಂದ್ರನ ಒಂದು ಭಾಗದ ಮೇಲೆ ಭೂಮಿಯ ನೆರಳು ಹಾದುಹೋಗುತ್ತದೆ, ಅಂದರೆ ಪಾರ್ಶ್ವ ಚಂದ್ರಗ್ರಹಣ. ಇನ್ನೊಂದು ಹಂತವೆಂದರೆ ಸಂಪೂರ್ಣ ಚಂದ್ರಗ್ರಹಣ ಅಂದರೆ ಭೂಮಿಯ ನೆರಳು ಸಂಪೂರ್ಣವಾಗಿ ಚಂದ್ರನನ್ನು ಆವರಿಸುತ್ತದೆ.

   ಸೂರ್ಯಗ್ರಹಣದಂತೆ ಚಂದ್ರಗ್ರಹಣ ವೀಕ್ಷಿಸಲು ವಿಶೇಷ ಕನ್ನಡಕ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

   ತೋಳ ಚಂದ್ರಗ್ರಹಣ ಎಂದರೇನು?

   ತೋಳ ಚಂದ್ರಗ್ರಹಣ ಎಂದರೇನು?

   ಗ್ರಹಣದ ಸಮಯದಲ್ಲಿ ಚಂದ್ರನ ಮೇಲ್ಮೈಯ ಶೇಕಡಾ 90ರಷ್ಟು ಭಾಗವು ಭೂಮಿಯಿಂದ ಆವರಿಸಲ್ಪಡುತ್ತದೆ. ನೆರಳಿನ ಹೊರಭಾಗ ಮಾತ್ರ ಕಾಣಿಸಿಕೊಳ್ಳುತ್ತದೆ. ಪೆನಂಬ್ರಲ್‌ ಚಂದ್ರ ಗ್ರಹಣವು ಸಾಮಾನ್ಯವಾಗಿ ಸ್ವಲ್ಪ ಗಾಢವಾಗಿದ್ದರೂ, ಹುಣ್ಣಿಮೆಯ ದಿನ ವೀಕ್ಷಿಸಲು ಸಾಧ್ಯವಿಲ್ಲ, ಆದರೆ ಆಕಾಶವು ಸ್ಪಷ್ಟವಾಗಿದ್ದರೆ ಮಾತ್ರ ಕಾಣಿಸಿಕೊಳ್ಳುತ್ತದೆ. ಇದನ್ನು ನೋಡಲು ಸಾಧ್ಯವಾದರೆ ಖಂಡಿತವಾಗಿಯೂ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದು. ಇದು ಭಾರತದಲ್ಲೂ ಗೋಚರವಾಗಲಿದೆ.

   ಗ್ರಹಣ ಎಷ್ಟು ಹೊತ್ತಿಗೆ ಗೋಚರವಾಗುತ್ತೆ?

   ಗ್ರಹಣ ಎಷ್ಟು ಹೊತ್ತಿಗೆ ಗೋಚರವಾಗುತ್ತೆ?

   ಗ್ರಹಣದ ದಿನ : ಶುಕ್ರವಾರ

   ಗೃಹಣದ ಸಮಯ: ರಾತ್ರಿ 10.30 ರಿಂದ 2.35 ರ ತನಕ

   ಗ್ರಹಣ ಗೋಚರಿಸುವ ಒಟ್ಟು ಸಮಯ: 4 ಗಂಟೆ 5 ನನಗರಗಳು

   ಗೋಚರಿಸುವ ಸ್ಥಳಗಳು: ಏಷ್ಯಾ, ಆಫ್ರೀಕಾ, ಯುರೂಪ್, ಆಸ್ಟ್ರೇಲಿಯಾ ಮತ್ತು ಭಾರತದ ಎಲ್ಲಾ ನಗರಗಳು

   ಗ್ರಹಣಕ್ಕೂ ಮುನ್ನ ನೀವು ಏನು ಮಾಡಬಾರದು?

   ಗ್ರಹಣಕ್ಕೂ ಮುನ್ನ ನೀವು ಏನು ಮಾಡಬಾರದು?

   -ದೇವಸ್ಥಾನಕ್ಕೆ ಭೇಟಿ ನೀಡಬೇಡಿ

   -ಗರ್ಭಿಣಿಯರು ಮನೆಯಿಂದ ಹೊರಗೆ ಬರಬಾರದು

   -ಸ್ನಾನ ಮಾಡಬಾರದು

   -ಊಟ ಮಾಡಬಾರದು

   ಗ್ರಹಣಕ್ಕೂ ಮುನ್ನ ಏನು ಮಾಡಬೇಕು?

   ಗ್ರಹಣಕ್ಕೂ ಮುನ್ನ ಏನು ಮಾಡಬೇಕು?

   -ಮನೆಯ ವಾಸ್ತುವಿಗೆ ದರ್ಬೆ ಹಾಕಬೇಕು

   -ಗರ್ಭಿಣಿಯರು ಊಟ ಮಾಡಬೇಕು

   -ಮನೆಯ ಸುತ್ತ ಹಾಲು ಅಥವಾ ಮೊಸರನ್ನ ಚೆಲ್ಲಬೇಕು

   -ಶಿವನ ಪ್ರಾರ್ಥನೆ ಮಾಡಬೇಕು

   English summary
   Lunar eclipses are much more common than solar eclipses, but are still a sight to behold. There are three types of lunar eclipses - total, partial, and penumbral.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X