ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನಿದು ರಕ್ತಚಂದ್ರ, ನೀಲಿಚಂದ್ರ? ಬಾನಂಗಳದಲ್ಲಾಗುತ್ತಾ ಕೋಲಾಹಲ?!

|
Google Oneindia Kannada News

Recommended Video

Lunar Eclipse on 27, July 2018 : ಸೂಪರ್ ಮೂನ್, ರಕ್ತ ಚಂದ್ರ ಹಾಗು ನೀಲಿ ಚಂದ್ರ ಎಂದರೇನು?

ಅವರವರ ಮನದಂತೆ ದೃಷ್ಟಿಯೂ ಬೇರೆ
ಕವಿಯ ಕಣ್ಣಿಗೆ ಚಂದ್ರ ಹೆಂಡತಿಯ ಮೋರೆ
ಚಿಕ್ಕ ಮಕ್ಕಳಿಗೆ ಶಶಿ ಬಾಂದಳದ ಚೆಂಡು
ವಿಜ್ಞಾನಿಗಳಿಗೆಲ್ಲ ಬರಿ ಕಲ್ಲು ಗುಂಡು!

ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಈ ಚುಟುಕು ಈ ಹೊತ್ತಲ್ಲಿ ನೆನಪಿಗೆ ಬರುವುದಕ್ಕೂ ಕಾರಣವಿದೆ!

ಇಂದು ಸಂಭವಿಸಲಿರುವ ಶತಮಾನದ ಸುದೀರ್ಘ ಚಂದ್ರಗ್ರಹಣ ಖಗೋಳದ ವಿಸ್ಮಯಗಳಲ್ಲೊಂದು. ಆದರೆ ಅದೇ ಗ್ರಹಣವನ್ನಿಟ್ಟುಕೊಂಡು ಭಯಬಿತ್ತುವ ಕೆಲಸವೂ ಆಗುತ್ತಿದೆ. ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರ ವಿಜ್ಞಾನಿಗಳ ಲೆಕ್ಕದಲ್ಲಿ ಒಂದು ಕಲ್ಲುಗುಂಡಷ್ಟೇ. ಗ್ರಹಣವೂ ತೀರಾ ಸಹಜ ಎನ್ನಿಸುವ ನೈಸರ್ಗಿಕ ಪ್ರಕ್ರಿಯೆ.

ಶತಮಾನದ ಸುದೀರ್ಘ ಚಂದ್ರಗ್ರಹಣ: ತಿಳಿಯಬೇಕಾದ 6 ಸಂಗತಿಶತಮಾನದ ಸುದೀರ್ಘ ಚಂದ್ರಗ್ರಹಣ: ತಿಳಿಯಬೇಕಾದ 6 ಸಂಗತಿ

ಆದರೆ ಪ್ರತಿ ಗ್ರಹಣವೂ ಒಂದಿಲ್ಲೊಂದು ರಾಶಿಗೆ ಕೆಡುಕುಂಟು ಮಾಡುತ್ತದೆ, ಇನ್ಯಾವುದಕ್ಕೋ ಶುಭ ಉಂಟು ಮಾಡುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಸಂಭವಿಸುವ ಈ ತೀರಾ ಸಹಜ ಪ್ರಕ್ರಿಯೆಗೆ 'ಬ್ಲೂ ಮೂನ್', 'ಬ್ಲಡ್ ಮೂನ್' 'ಸೂಪರ್ ಮೂನ್'ಎಂಬಿತ್ಯಾದಿ ಉಪಮೇಯಗಳೇಕೆ? ಅಷ್ಟಕ್ಕೂ ಈ ರಕ್ತ ಚಂದ್ರ, ನೀಲಿ ಚಂದ್ರ ಅಂದ್ರೆ ಏನು? ಇಲ್ಲಿದೆ ನೋಡಿ ಸಂಕ್ಷಿಪ್ತ ಮಾಹಿತಿ.

ರಕ್ತ ಚಂದ್ರ ಅಥವಾ ಕೆಂಪು ಚಂದ್ರ

ರಕ್ತ ಚಂದ್ರ ಅಥವಾ ಕೆಂಪು ಚಂದ್ರ

ಗ್ರಹಣದ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರ ಕಾಂತಿ ಕಳೆದುಕೊಳ್ಳುತ್ತಾನೆ. ಖಗ್ರಾಸ ಚಂದ್ರ ಗ್ರಹಣದಲ್ಲಿ ಭೂಮಿಯ ಸಂಪೂರ್ಣ ನೆರಳು ಚಂದ್ರನ ಮೇಲೆ ಬಿದ್ದು, ನಂತರ ಭೂಮಿ ಕೊಂಚ ಸರಿದಾಗ ಸೂರ್ಯ ಕಿರಣಗಳು ಭೂಮಿಯ ಅಂಚಿನಿಂದ ಚಂದ್ರನ ಮೇಲೆ ಬೀಳುತ್ತವೆ. ಆಗ ವಾತಾವರಣದ ಧೂಳಿನ ಕಣಗಳು ಸೂರ್ಯನ ಬೆಳಕಿಗೆ ಅಡ್ಡಬಂದು ಚಂದ್ರ ರಕ್ತವರ್ಣದಲ್ಲಿ ಕಾಣುವಂತೆ ಮಾಡುತ್ತವೆ. ಚಂದ್ರ ಕೆಂಪು ಬಣ್ಣದಲ್ಲಿ ಕಾಣುವುದರಿಂದ ಇದಕ್ಕೆ 'ಬ್ಲಡ್ ಮೂನ್', ರಕ್ತ ಚಂದ್ರ ಎಂದು ಹೆಸರು. ಇದರಲ್ಲಿ ಆತಂಕ ಪಡುವಂಥದ್ದು ಏನೂ ಇಲ್ಲ!

ನೀಲ ಚಂದ್ರಮ ಅಂದ್ರೆ...

ನೀಲ ಚಂದ್ರಮ ಅಂದ್ರೆ...

ಚಂದ್ರ ನೀಲಿ ಆಗ್ತಾನಾ...? ಖಂಡಿತ ಇಲ್ಲ. ನೀಲಿ ಚಂದ್ರ ಎಂದರೆ ಒಂದು ತಿಂಗಳಿನಲ್ಲಿ ಎರಡು ಹುಣ್ಣಿಮೆಗಳು ಬಂದರೆ ಅದನ್ನು 'ನೀಲಿ ಚಂದ್ರ', 'ಬ್ಲೂ ಮೂನ್' ಎನ್ನಲಾಗುತ್ತದೆ. ತಿಂಗಳಿನಲ್ಲಿ ಎರಡು ಬಾರಿ ಹುಣ್ಣಿಮೆಯಾಗಿ, ಆ ಸಮಯದಲ್ಲಿ ಚಂದ್ರಗ್ರಹಣವಾದರೆ ಅದಕ್ಕೆ ಆಗ ಬ್ಲ್ಯೂ ಬ್ಲಡ್ ಮೂನ್, ರಕ್ತ ನೀಲಿ ಚಂದಿರ ಎಂದು ಕರೆಯಲಾಗುತ್ತದೆ.

ಚಂದ್ರ ಗ್ರಹಣದ ವೇಳೆ ಕೈಗೊಳ್ಳಬೇಕಾದ ಶಾಂತಿ-ಪರಿಹಾರದ ಪೂರ್ಣ ವಿವರಚಂದ್ರ ಗ್ರಹಣದ ವೇಳೆ ಕೈಗೊಳ್ಳಬೇಕಾದ ಶಾಂತಿ-ಪರಿಹಾರದ ಪೂರ್ಣ ವಿವರ

ಸೂಪರ್ ಮೂನ್

ಸೂಪರ್ ಮೂನ್

ಸೂಪರ್ ಮೂನ್ ಎಂದರೆ ಚಂದ್ರ ಭೂಮಿಗೆ ತೀರಾ ಹತ್ತಿರ ಬಂದಾಗ, ಆತ ಎಂದಿಗಿಂತ ಶೇ.14 ರಷ್ಟು ದೊಡ್ಡದಾಗಿ ಕಾಣುತ್ತಾನೆ. ಅದನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಈ ವರ್ಷದ ಆಗಸ್ಟ್ ನಲ್ಲಿ ಸಂಭವಿಸಿದ ಚಂದ್ರಗ್ರಹಣದ ಸಮಯದಲ್ಲಿ ಚಂದ್ರ ಭೂಮಿಗೆ ತೀರಾ ಹತ್ತಿರ ಬಂದಿದ್ದರಿಂದ ಅದಕ್ಕೆ ಸೂಪರ್ ಬ್ಲ್ಯೂ ಬ್ಲಡ್ ಮೂನ್ ಎಂದು ಕರೆಯಲಾಗಿತ್ತು.

ಇಂದಿನ ಚಂದ್ರ ಗ್ರಹಣ ಯಾಕೆ ಮಹತ್ವದ್ದು?

ಇಂದಿನ ಚಂದ್ರ ಗ್ರಹಣ ಯಾಕೆ ಮಹತ್ವದ್ದು?

ಇಂದು(ಜು.27) ಸಂಭವಿಸಲಿರುವ ಚಂದ್ರ ಗ್ರಹಣ ಯಾಕೆ ತೀರಾ ಮಹತ್ವದ್ದು ಎಂದರೆ ಇದು ಈ 21 ನೇ ಶತಮಾನದಲ್ಲಿ ಸಂಭವಿಸುತ್ತಿರುವ ಸುದೀರ್ಘ ಚಂದ್ರಗ್ರಹಣ. 2100 ರವರೆಗೂ ಇಷ್ಟು ಸುದೀರ್ಘ ಚಂದ್ರಗ್ರಹಣ ಸಂಭವಿಸುವುದಿಲ್ಲ. ಸುಮಾರು 3.45 ನಿಮಿಷಗಳ ಕಾಲ ಈ ಗ್ರಹಣ ಕಾಣಿಸಿಕೊಳ್ಳಿದೆ. ಇದು ಖಗ್ರಾಸ ಚಂದ್ರಗ್ರಹಣ ಎಂಬುದು ಇನ್ನೊಂದು ಮಹತ್ವದ ಸಂಗತಿ. ಖಗ್ರಾಸ ಚಂದ್ರಗ್ರಹಣ ಇಂದು ಬಿಟ್ಟರೆ ಇನ್ನು ಕಾಣುವುದು 2036 ರಲ್ಲಿಯೇ!

English summary
Lunar eclipse 2018 July 27: What is blood moon, red moon, blue moon and super moon? All you need to know about blood moon, red moon, blue moon and super moon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X