
ಲೂಧಿಯಾನ ಕೋರ್ಟ್ ಸ್ಫೋಟದ ಆರೋಪಿ, ಭಯೋತ್ಪಾದಕ ಹರ್ಪ್ರೀತ್ ಸಿಂಗ್ ಅರೆಸ್ಟ್
ದೆಹಲಿ ಡಿಸೆಂಬರ್ 2: ಎನ್ಐಎ ಭಯೋತ್ಪಾದಕ ಹರ್ಪ್ರೀತ್ ಸಿಂಗ್ನನ್ನು ಬಂಧಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಡಿಸೆಂಬರ್ 1 ರಂದು ಮಲೇಷ್ಯಾದ ಕೌಲಾಲಂಪುರ್ನಿಂದ ಆಗಮಿಸಿದ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ಭಯೋತ್ಪಾದಕ ಹರ್ಪ್ರೀತ್ ಸಿಂಗ್ನನ್ನು ಬಂಧಿಸಿದೆ. ಲೂಧಿಯಾನ ಕೋರ್ಟ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಹರ್ಪ್ರೀತ್ ಸಿಂಗ್ ಆಗಿದ್ದನು. ಹರ್ಪ್ರೀತ್ ಸಿಂಗ್ ಪಾಕಿಸ್ತಾನ ಮೂಲದ ಇಂಟರ್ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ (ಐಎಸ್ವೈಎಫ್) ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್ ಅವರ ಸಹವರ್ತಿ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹೇಳಿದೆ. ಮತ್ತು ಹರ್ಪ್ರೀತ್, ಲಖ್ಬೀರ್ ಸಿಂಗ್ ರೋಡ್ ಜೊತೆಗೆ ಡಿಸೆಂಬರ್ 2021 ಲುಧಿಯಾನ ಕೋರ್ಟ್ ಕಟ್ಟಡ ಸ್ಫೋಟದ ಸಂಚುಕೋರರಲ್ಲಿ ಒಬ್ಬರು. ಲೂಧಿಯಾನ ಕೋರ್ಟ್ನಲ್ಲಿ ನಡೆದ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.
Delhi | National Investigation Agency (NIA) on December 1 arrested absconding terrorist Harpreet Singh when he arrived from Kaula Lumpur, Malaysia: NIA
— ANI (@ANI) December 2, 2022
ಲಖ್ಬೀರ್ ಸಿಂಗ್ ಸೂಚನೆಯ ಮೇರೆಗೆ ಹರ್ಪ್ರೀತ್ ವಿಶೇಷವಾಗಿ ತಯಾರಿಸಿದ ಐಇಡಿಗಳನ್ನು ಪಾಕಿಸ್ತಾನದಿಂದ ಭಾರತದಲ್ಲಿರುವ ತನ್ನ ಸಹಚರರಿಗೆ ಕಳುಹಿಸಿದ್ದ ಎಂದು ಎನ್ಐಎ ಹೇಳಿದೆ. ಲುಧಿಯಾನ ಕೋರ್ಟ್ ಕಾಂಪ್ಲೆಕ್ಸ್ ಸ್ಫೋಟದಲ್ಲಿ ಈ ಐಇಡಿ ಬಳಸಲಾಗಿತ್ತು ಎನ್ನಲಾಗಿದೆ.