• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್‌ಟಿಸಿ ಹಗರಣ : ಸಂಸದರ ವಿರುದ್ಧ ಸಿಬಿಐ ಎಫ್ಐಆರ್

By Prasad
|

ನವದೆಹಲಿ, ಜೂ. 13 : ಎಲ್ಲೂ ಪ್ರವಾಸ ಹೋಗದೆ ಮನೆಯಲ್ಲಿಯೇ ಕುಳಿತು ಸುಳ್ಳು ದಾಖಲೆ ಸೃಷ್ಟಿಸಿ, ಪ್ರವಾಸ ಶುಲ್ಕ (ಎಲ್‌ಟಿಸಿ) ಮರುಪಾವತಿ ಮಾಡಿಸಿಕೊಂಡ ಮೂವರು ಹಾಲಿ ಮತ್ತು ಮೂವರು ಮಾಜಿ ರಾಜ್ಯಸಭಾ ಸದಸ್ಯರ ವಿರುದ್ಧ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಶುಕ್ರವಾರ ಮೊಕದ್ದಮೆ ದಾಖಲಿಸಿದೆ.

ಹಾಲಿ ಸಂಸದರಾದ ತೃಣಮೂಲ ಕಾಂಗ್ರೆಸ್ ನ ಡಿ ಬಂಡೋಪಾಧ್ಯಾಯ, ಬಹುಜನ ಸಮಾಜ ಪಕ್ಷದ ಬ್ರಜೇಶ್ ಪಾಠಕ್, ಮಿಜೋ ನ್ಯಾಷನಲ್ ಫ್ರಂಟ್ ನ ಲಾಲ್‌ಮಿಂಗ್ ಲಿಯಾನಾ ಮತ್ತು ಮಾಜಿ ರಾಜ್ಯಸಭಾ ಸದಸ್ಯರಾದ ಬಿಜೆಪಿಯ ಜೆಪಿಎನ್ ಸಿಂಗ್, ರಾಷ್ಟ್ರೀಯ ಲೋಕ ದಳದ ಮಹಮೂದ್ ಎ ಮದಾನಿ ಮತ್ತು ಬಿಜು ಜನತಾದಳದ ರೇಣು ಪ್ರಧಾನ್ ವಿರುದ್ಧ ಕೇಸು ದಾಖಲಿಸಲಾಗಿದೆ.

ಕೆಲ ಪ್ರವಾಸಿ ಏಜೆಂಟರ ವಿರುದ್ಧವೂ ಕೇಸು ದಾಖಲಿಸಲಾಗಿದೆ. ಪ್ರಕರಣದಲ್ಲಿ ಹೆಸರಿಸಲಾಗಿರುವ ಸಂಸದರು ಮತ್ತು ಪ್ರವಾಸಿ ಏಜೆಂಟರ ದೆಹಲಿ ಮತ್ತು ಓರಿಸ್ಸಾದಲ್ಲಿರುವ ಮನೆಗಳ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ನಕಲಿ ವಿಮಾನ ಟಿಕೆಟ್ ಮತ್ತು ಬೋರ್ಡಿಂಗ್ ಪಾಸ್ ಗಳನ್ನು ಸೃಷ್ಟಿಸಿ ಕೋಟ್ಯಂತರ ರುಪಾಯಿಯಷ್ಟು ಹಣವನ್ನು ಇವರು ಗುಳುಂ ಮಾಡಿದ್ದಾರೆ. [ರಾಜ್ಯದಿಂದ ರಾಜ್ಯಸಭೆಗೆ ನಾಲ್ವರು ಅವಿರೋಧ ಆಯ್ಕೆ]

ಎಂಪಿಗಳ ಹೊರತಾಗಿ ಏರ್ ಇಂಡಿಯಾ ಗ್ರಾಹಕ ಸೇವೆ ಏಜೆಂಟ್ ರುಬೈನಾ ಅಖ್ತರ್, ಲಾಜಪತ್ ನಗರದಲ್ಲಿರುವ ಪ್ರವಾಸಿ ಏಜೆಂಟ್, ಏರ್ ಕ್ರೂಸ್ ಟ್ರಾವೆಲ್ಸ್ ಪ್ರೈ.ಲಿ.ಗಳನ್ನೂ ಎಫ್ಐಆರ್ ನಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ. ಸಂಸದರೆಲ್ಲ ನಿಮಯಗಳನ್ನು ಗಾಳಿಗೆ ತೂರಿ, ಪ್ರವಾಸಿ ಏಜೆಂಟ್ ಜೊತೆ ಸೇರಿಕೊಂಡು ಸರಕಾರಕ್ಕೆ ನಾಮವಿಕ್ಕಿದ್ದಾರೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿದ ನಂತರ ಈ ಹಗರಣದ ಬಗ್ಗೆ ಏರ್ ಇಂಡಿಯಾದ ಜಾಗೃತ ವಿಭಾಗಕ್ಕೆ ಇದರ ಸುಳಿವು ನೀಡಲಾಗಿತ್ತು. ಬಂಧಿತನ ಬಳಿ 600ಕ್ಕೂ ಹೆಚ್ಚು ನಕಲಿ ಬೋರ್ಡಿಂಗ್ ಪಾಸ್ ಗಳಿದ್ದವು.

ರಾಜ್ಯಸಭಾ ಸದಸ್ಯರಿಗೆ ಕೈತುಂಬ ಪಗಾರ ಹೊರತುಪಡಿಸಿ, ದೈನಂದಿನ ಭತ್ಯೆ, ಕ್ಷೇತ್ರ ಭತ್ಯೆ, ಕಚೇರಿ ಖರ್ಚು, ಹೆಂಡತಿ ಮಕ್ಕಳು ಸೇರಿ ರೈಲು, ವಿಮಾನ, ಬಸ್ ಅಡ್ಡಾಟದ ಖರ್ಚು, ದೂರವಾಣಿ ವೆಚ್ಚ, ಇತರ ಅಡ್ಡಾಟದ ಖರ್ಚು, ಉಚಿತ ನೀರು, ವಿದ್ಯುತ್, ಉಚಿತ ಬಾಡಿಗೆ ಮನೆ, ಉಚಿತ ವೈದ್ಯಕೀಯ ಖರ್ಚುವೆಚ್ಚಗಳನ್ನು ನೀಡಲಾಗುತ್ತಿದ್ದರೂ ಇಂಥ ಹಲ್ಕಾ ಕೆಲಸ ಮಾಡುವುದನ್ನು ಮಾತ್ರ ಕೆಲವರು ಬಿಡುವುದಿಲ್ಲ. [ವಿವರಗಳು ಇಲ್ಲಿವೆ ನೋಡಿರಿ]

ಇನ್ನು ಅದೆಷ್ಟು ಹಾಲಿ ಮಾಜಿಗಳು ಸರಕಾರಕ್ಕೆ ಟೋಪಿ ಹಾಕಿದ್ದಾರೋ? ಅದೆಷ್ಟು ಸಂಸದರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೋ? ಎಲ್ಲವೂ ಒಂದೊಂದಾಗಿ ಬಯಲಿಗೆಳೆಯಬೇಕು. ಜನರು ನೀಡುವ ತೆರಿಗೆ ಹಣವನ್ನು ಹೀಗೆ ಪೋಲು ಮಾಡುವುದಕ್ಕೆ, ಮಜಾ ಉಡಾಯಿಸುವುದಕ್ಕೆ ಅವಕಾಶ ನೀಡಬಾರದು. [ಪಿಟಿಐ]

English summary
The CBI Friday registered cases against six current and former Rajya Sabha MPs in the Leave and Travel Concession (LTC) scam. Lakhs of rupees are said to have been fraudulently claimed from the government through fake Leave Travel Concession (LTC) claims, availed by government officials to get concessional tickets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more