ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಹಿಸುದ್ದಿ: ಮನೆಯಲ್ಲಿ ಕುಳಿತುಕೊಂಡೇ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡಲು ಸುಲಭ ವಿಧಾನ

|
Google Oneindia Kannada News

ನವದೆಹಲಿ, ಆಗಸ್ಟ್ 10: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಖಾಲಿ ಆಗಿದೆಯೇ. ಅಯ್ಯೋ ನಮಗೆ ಗ್ಯಾಸ್ ಬುಕ್ ಮಾಡುವುದಕ್ಕೆ ಬರುವುದಿಲ್ಲ. ಸಿಲಿಂಡರ್ ಬುಕ್ಕಿಂಗ್ ಕಚೇರಿಗೆ ಹೋಗುವುದು ಯಾರಪ್ಪಾ ಎಂದು ಚಿಂತಿಸುವ ಅಗತ್ಯವಿಲ್ಲ. ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ವಿನೂತನ ಯೋಜನೆಯೊಂದನ್ನು ಪರಿಚಯಿಸಿದೆ.

ಇಂಡಿಯನ್ ಆಯಿಲ್ ಕಾರ್ಪೋರೇಷನ್ ತನ್ನ ಗ್ರಾಹಕರು ಅಡುಗೆ ಅನಿಲ ನೋಂದಣಿಗೆ ಸುಲಭ ಮಾರ್ಗವನ್ನು ಸೂಚಿಸಿದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಒಂದೇ ಒಂದು ಮಿಸ್ಡ್ ಕಾಲ್ ನೀಡಿದರೆ ನಿಮ್ಮ ಮನೆ ಬಾಗಿಲಿಗೆ ಅಡುಗೆ ಅನಿಲದ ಸಿಲಿಂಡರ್ ತಲುಪುತ್ತದೆ. ದೂರವಾಣಿ ಸಂಖ್ಯೆ 8454955555ಕ್ಕೆ ಮಿಸ್ಡ್ ಕಾಲ್ ನೀಡುವುದರ ಮೂಲಕ ಗ್ರಾಹಕರು ಅಡುಗೆ ಅನಿಲದ ಸಂಪರ್ಕವನ್ನು ಪಡೆದುಕೊಳ್ಳಬಹುದು ಹಾಗೂ ಸಿಲಿಂಡರ್ ಬುಕ್ಕಿಂಗ್ ಮಾಡುಬಹುದು ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ತಿಳಿಸಿದೆ.

ಗ್ರಾಹಕರೇ ಗಮನಿಸಿ: ವಾಣಿಜ್ಯ ಬಳಕೆ ಅಡುಗೆ ಅನಿಲ ದರ ಏರಿಕೆಗ್ರಾಹಕರೇ ಗಮನಿಸಿ: ವಾಣಿಜ್ಯ ಬಳಕೆ ಅಡುಗೆ ಅನಿಲ ದರ ಏರಿಕೆ

ಭಾರತದ ಯಾವುದೇ ಮೂಲೆಯಲ್ಲಿನ ಗ್ರಾಹಕರು ಕೇವಲ ಒಂದೇ ಒಂದು ಮಿಸ್ಡ್ ಕಾಲ್ ನೀಡುವುದರ ಮೂಲಕ ಗ್ಯಾಸ್ ಸಂಪರ್ಕರವನ್ನು ಪಡೆದುಕೊಳ್ಳುವ ಸೌಲಭ್ಯಕ್ಕೆ ಸೋಮವಾರ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಎಸ್ ಎಂ ವೈದ್ಯ ಚಾಲನೆ ನೀಡಿದರು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಸೇವೆ ಮತ್ತು ಗ್ಯಾಸ್ ಸಂಪರ್ಕ ಪಡೆದುಕೊಳ್ಳಲು ಕಂಪನಿ ಜಾರಿಗೊಳಿಸಿರುವ ಹೊಸ ನಿಯಮಗಳ ಬಗ್ಗೆ ಮುಂದೆ ತಿಳಿಯೋಣ.

ನಿಮ್ಮ ಮನೆ ಬಾಗಿಲಿನಲ್ಲೇ ಅವಳಿ ಸಿಲಿಂಡರ್ ಸೌಲಭ್ಯ

ನಿಮ್ಮ ಮನೆ ಬಾಗಿಲಿನಲ್ಲೇ ಅವಳಿ ಸಿಲಿಂಡರ್ ಸೌಲಭ್ಯ

ಗ್ರಾಹಕರು ತಮ್ಮ ಮನೆಗಳಲ್ಲಿ ಕುಳಿತುಕೊಂಡೇ ಅವಳಿ ಸಿಲಿಂಡರ್ ಸೌಲಭ್ಯವನ್ನು ಪಡೆದುಕೊಳ್ಳುವ ಯೋಜನೆಗೂ ಸೋಮವಾರ ಚಾಲನೆ ನೀಡಲಾಯಿತು. ಒಂದೇ ಸಿಲಿಂಡರ್ ಹೊಂದಿರುವ ಗ್ರಾಹಕರು ಜೋಡಿ ಸಿಲಿಂಡರ್ ಪಡೆದುಕೊಳ್ಳುವುದಕ್ಕೆ ಕಚೇರಿಗೆ ಅಲೆದಾಡಬೇಕಿಲ್ಲ. ಗ್ರಾಹಕರು ಮಿಸ್ಡ್ ಕಾಲ್ ನೀಡುವುದರ ಮೂಲಕ ಒಂದು ಸಿಲಿಂಡರ್ ಹೊಂದಿರುವವರು ಜೋಡಿ ಸಿಲಿಂಡರ್ ಪಡೆದುಕೊಳ್ಳಬಹುದು ಎಂದಿದ್ದಾರೆ. ವಿಶೇಷವೆಂದರೆ ಗ್ರಾಹಕರು ಸಾಮಾನ್ಯವಾಗಿ 14.2 ಕೆಜಿ ಸಿಲಿಂಡರ್ ಬದಲಿಗೆ 5 ಕೆಜಿ ಸಿಲಿಂಡರ್ ಅನ್ನು ಬ್ಯಾಕಪ್ ಆಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.

8454955555 ಗೆ ಮಿಸ್ಡ್ ಕಾಲ್ ನೀಡಿ ಸೇವೆ ಪಡೆಯಿರಿ

8454955555 ಗೆ ಮಿಸ್ಡ್ ಕಾಲ್ ನೀಡಿ ಸೇವೆ ಪಡೆಯಿರಿ

"ಎಲ್ಲಾ ದೇಶೀಯ ಗ್ರಾಹಕರಿಗೆ ಹೊಸ ಎಲ್‌ಪಿಜಿ ಸಂಪರ್ಕವನ್ನು ಪಡೆಯಲು ಇಂಡಿಯನ್ ಆಯಿಲ್ ಕಾರ್ಪೋರೇಷನ್ ತನ್ನ ಮಿಸ್ಡ್ ಕಾಲ್ ಸೌಲಭ್ಯವನ್ನು ವಿಸ್ತರಿಸಿದೆ. ದೇಶಾದ್ಯಂತ ನಿರೀಕ್ಷಿತ ಗ್ರಾಹಕರು ಹೊಸ ಸಂಪರ್ಕವನ್ನು ಪಡೆಯಲು 8454955555 ಗೆ ಮಿಸ್ಡ್ ಕಾಲ್ ನೀಡಬಹುದು" ಎಂದು ಕಂಪನಿಯು ಹೇಳಿದೆ. ದೇಶದ ತೈಲ ಮಾರುಕಟ್ಟೆಯಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಈ ಸೌಲಭ್ಯವನ್ನು ಒದಗಿಸಿರುವ ಮೊದಲ ಕಂಪನಿಯಾಗಿದೆ.

ಗ್ರಾಹಕರ ಸೇವೆಗಾಗಿ ಹೊಸ ಸೌಲಭ್ಯಗಳ ಪರಿಚಯ

ಗ್ರಾಹಕರ ಸೇವೆಗಾಗಿ ಹೊಸ ಸೌಲಭ್ಯಗಳ ಪರಿಚಯ

"ದೇಶದಾದ್ಯಂತ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವ ಕಂಪನಿಯಾಗಿದೆ. ನಿನ್ನೆಯ ಸೇವೆಗಿಂತ ಇಂದು ಉತ್ತಮ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರುತ್ತದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಮೂಲಕ ಗ್ರಾಹಕರಿಗೆ ಹೊಸ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ," ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಎಸ್ ಎಂ ವೈದ್ಯ ಹೇಳಿದ್ದಾರೆ.

ಗ್ರಾಹಕರ ಸಮಯ ಉಳಿಸುವ ಉದ್ದೇಶದಿಂದ ಯೋಜನೆ

ಗ್ರಾಹಕರ ಸಮಯ ಉಳಿಸುವ ಉದ್ದೇಶದಿಂದ ಯೋಜನೆ

ಕಳೆದ 2021ರ ಜನವರಿ ತಿಂಗಳಿನಲ್ಲಿ ಗ್ಯಾಸ್ ತುಂಬಿಸಿಕೊಳ್ಳುವ ಮತ್ತು ಹೊಸ ಸಿಲಿಂಡರ್ ಸಂಪರ್ಕ ಪಡೆಯಲು ಮಿಸ್ಡ್ ಕಾಲ್ ಸೌಲಭ್ಯವನ್ನು ಪರಿಚಯಿಸಲಾಗಿತ್ತು. ಉಚಿತ ಮಿಸ್ಡ್ ಕಾಲ್ ಸೌಲಭ್ಯದಿಂದಾಗಿ ಗ್ರಾಹಕರ ಸಮಯ ಉಳಿತಾಯವಾಗುತ್ತದೆ. ಇದರ ಜೊತೆಗೆ ಯಾವುದೇ ಮುಂಗಡ ಹಣ ಪಾವತಿ ಇಲ್ಲದೇ ಹೊಸ ಗ್ಯಾಸ್ ಸಿಲಿಂಡರ್ ನೋಂದಣಿ ಮಾಡಿಕೊಳ್ಳುವುದಕ್ಕೆ ಸುಲಭ ಮಾರ್ಗವಾಗಿದೆ. ವಿಶೇಷವಾಗಿ ಈ ಯೋಜನೆಯಲ್ಲಿ ವಯಸ್ಕರು ಮತ್ತು ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಜಾರಿಗೊಳಿಸಲಾಗುತ್ತಿದೆ. ಎಲ್ ಪಿಜಿ ಸಿಲಿಂಡರ್ ಬುಕ್ಕಿಂಗ್ ಮತ್ತು ರಿ-ಫಿಲ್ಲಿಂಗ್ ಅನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡಿದೆ," ಎಂದಿದ್ದಾರೆ.

ಎಲ್ ಪಿಜಿ ಸಿಲಿಂಡರ್ ತುಂಬಿಸಿಕೊಳ್ಳುವುದಕ್ಕೆ ಅಥವಾ ಹಣ ಪಾವತಿಸಲು ಗ್ರಾಹಕರು ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು. ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್, ಇಂಡಿಯನ್ ಆಯಿಲ್ ಒನ್ ಆಪ್ ಅಥವಾ https://cx.indianoil.in ಮೂಲಕ ಗ್ಯಾಸ್ ಬುಕ್ಕಿಂಗ್ ಮತ್ತು ಹಣ ಪಾವತಿ ಮಾಡಬಹುದಾಗಿದೆ. "ಗ್ರಾಹಕರು ವಾಟ್ಸಾಪ್ (7588888824), SMS/IVRS (7718955555) ಮೂಲಕ ಗ್ಯಾಸ್ ಬುಕ್ ಮಾಡಬಹುದು ಮತ್ತು ಹಣ ಪಾವತಿಸಬಹುದು.

English summary
LPG Cylinder Booking: Customers can now book cylinders via a missed call service from Indian, Dial 8454955555 and get LPG connection at your doorsteps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X