ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ತಿಂಗಳು ಇಳಿಕೆ ನಂತರ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ!

|
Google Oneindia Kannada News

ನವದೆಹಲಿ, ಮಾರ್ಚ್ 01: ಮೂರು ತಿಂಗಳುಗಳ ಕಾಲ ಇಳಿಕೆ ಕಂಡಿದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಶುಕ್ರವಾರದಂದು ಏರಿಕೆ ಮಾಡಲಾಗಿದೆ.

ಸಬ್ಸಿಡಿ ಇರುವ ಎಲ್ಪಿಜಿ ಸಿಲಿಂಡರ್ ಬೆಲೆ 2.08 ರೂ. ಏರಿಕೆಯಾಗಿದೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 42.50 ರೂ. ಏರಿಕೆಯಾಗಿದೆ. ಪರಿಷ್ಕೃತ ದರ ಪಟ್ಟಿಯಂತೆ ದೆಹಲಿಯಲ್ಲಿ ಸಬ್ಸಿಡಿಯುಳ್ಳ ಅಡುಗೆ ಅನಿಲ ಪ್ರತಿ ಸಿಲಿಂಡರ್ ಗೆ 495.61 ರು ಆಗಲಿದೆ ಹಾಗೂ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ 701.50 ರು ಆಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೇಳಿದೆ.

ಕೊಳವೆ ಮೂಲಕ ಅಡುಗೆ ಅನಿಲ ಪೂರೈಕೆ, ರಾಜ್ಯದ ಯಾವ ಜಿಲ್ಲೆಗಳಿವೆ? ಕೊಳವೆ ಮೂಲಕ ಅಡುಗೆ ಅನಿಲ ಪೂರೈಕೆ, ರಾಜ್ಯದ ಯಾವ ಜಿಲ್ಲೆಗಳಿವೆ?

ಜೂನ್‌ ತಿಂಗಳಿನಿಂದ ಡಿಸೆಂಬರ್‌ವರೆಗೂ ಸತತ ಆರು ಬಾರಿ ದರ ಏರಿಕೆಯಾಗಿತ್ತು. ಇದರಿಂದ ಗ್ರಾಹಕರು ಕಂಗಾಲಾಗಿದ್ದರು. ಈಗ ಬೆಲೆ ಇಳಿಕೆಯಿಂದ ತುಸು ನೆಮ್ಮದಿ ದೊರೆತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ ಪಿಜಿ ದರ ಕುಸಿತದಿಂದ ಅಮೆರಿಕನ್ ಡಾಲರ್ ಎದುರು ರೂಪಾಯಿ ವಿನಿಮಯ ದರ ಬಲಗೊಂಡ ಕಾರಣ ಎಲ್ ಪಿಜಿ ದರ ಇಳಿಕೆಯಾಗಿತ್ತು. ಆದರೆ, ಇಂಧನ ಮಾರುಕಟ್ಟೆ ತೆರಿಗೆ ದರ ಹೆಚ್ಚಳವಾಗಿರುವ ಕಾರಣ ಅಡುಗೆ ಅನಿಲ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದೆ

LPG Cylinder Becomes Costlier After three months of rate cuts

ವರ್ಷಕ್ಕೆ 14.2 ಕೆಜಿ ತೂಕದ 12 ಸಿಲಿಂಡರ್‌ಗಳಿಗೆ ಸರ್ಕಾರ ಸಬ್ಸಿಡಿ ಒದಗಿಸುತ್ತಿದ್ದು, ಅದು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ.

ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ.

English summary
LPG prices were increased on Friday, marking the first upwards revision after three straight monthly cuts. In Delhi, while the subsidised LPG will cost Rs. 2.08 per cylinder more in March, non-subsidised LPG rate prices have been increased by Rs. 42.50 per cylinder, according to Indian Oil Corporation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X