ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಖಾತೆಗೆ ನೇರವಾಗಿ ಎಲ್ ಪಿಜಿ ಸಬ್ಸಿಡಿ ಪಾವತಿ

|
Google Oneindia Kannada News

ನವದೆಹಲಿ, ಜ. 1: ಎಲ್ ಪಿಜಿ ನೇರ ನಗದು ಸಬ್ಸಿಡಿ ಯೋಜನೆ ಜನವರಿ 1 ರಿಂದ ದೇಶಾದ್ಯಂತ ಜಾರಿಯಾಗಿದೆ. ಮಾರುಕಟ್ಟೆ ದರದಲ್ಲಿ ಸಿಲಿಂಡರ್ ಗಳನ್ನು ಗ್ರಾಹಕರು ಖರೀದಿಸಬಹುದು. ಆದರೆ ಸಬ್ಸಿಡಿ ಮೊತ್ತ ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆಯಾಗುವುದು. ಇದಕ್ಕೆ ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯ ಎಂದು ತಿಳಿಸಲಾಗಿದೆ.

ಹಿಂದೆ ಹೇಳಿದಂತೆ ಸಿಲಿಂಡರ್ ಖರೀದಿ ಮಾಡಿದ ನಂತರ ಗ್ರಾಹಕರಿಗೆ ಸಬ್ಸಿಡಿ ನೀಡುವ ಬದಲು ಖರೀದಿಗೆ ಮುನ್ನವೇ ರಿಯಾಯಿತಿ ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಆಧಾರ್ ಲಿಂಕ್ ಮಾಡಿದ ತಕ್ಷಣ ಗ್ರಾಹಕರ ಖಾತೆಗೆ ಸಬ್ಸಿಡಿ ಮೊತ್ತ ಜಮಾ ಆಗುತ್ತದೆ[ಬಿಪಿಎಲ್ ಕುಟುಂಬಗಳಿಗೆ ಹೊಸ ವರ್ಷದ ಕೊಡುಗೆ ಏನು?]

lpg

ಈ ಯೋಜನೆ ದೇಶದ 676 ಜಿಲ್ಲೆಗಳ 15 ಕೋಟಿಗೂ ಅಧಿಕ ಗ್ರಾಹಕರನ್ನು ತಲುಪಲಿದೆ. ಸುಮಾರು 6 ಕೋಟಿಗೂ ಅಧಿಕ ಜನ ಈ ಯೋಜನೆಗೆ ಆಧಾರ್ ಲಿಂಕ್ ಮಾಡಿಸಿಕೊಂಡಿದ್ದು ಲಾಭ ಪಡೆದುಕೊಳ್ಳಲಿದ್ದಾರೆ.

ಲಿಂಕ್ ಮಾಡಿಸಿದರೆ ಮಾತ್ರ ಲಾಭ
ಸದ್ಯ ಆಧಾರ್ ಅಥವಾ ಬ್ಯಾಂಕ್ ಖಾತೆ ಲಿಂಕ್ ಮಾಡುಸಿದರೆ ಮಾತ್ರ ಸಬ್ಸಿಡಿ ಲಾಭ ಪಡೆಯಬಹುದಾಗಿದೆ. ಲಿಂಕ್ ಮಾಡಿಸಿಲ್ಲದವರು ಹಿಂದಿನಂತೆ ನಗದು ನೀಡಿ ಸಿಲಿಂಡರ್ ಖರೀದಿಸಬೇಕು. ಆದರೆ 2015 ರ ಮಾರ್ಚ್ ನಂತರ ಸಬ್ಸಿಡಿ ದರದಲ್ಲಿ ಸಿಲಿಂಡರ್ ವಿತರಣೆಯನ್ನು ಸಂಪೂರ್ಣ ನಿಲ್ಲಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

English summary
LPG consumers across the country to get cash subsidy directly into their bank accounts so that they buy the cooking fuel at market price. Domestic LPG users will get Rs. 568 in the bank account the moment they join the Direct Benefit Transfer Scheme for LPG.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X