ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ 48 ಗಂಟೆಯಲ್ಲಿ ರಾಜ್ಯದ ಹಲವೆಡೆ ಮಳೆ ಸಾಧ್ಯತೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 08: ಬಂಗಾಳ ಕೊಲ್ಲಿಯಲ್ಲಿ ತೀವ್ರವಾಗಿ ವಾಯುಭಾರ ಕುಸಿಸತವಾಗಿರುವ ಕಾರಣ ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕೆಲವೆಡೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಂಗಳೂರಿನಲ್ಲಿ ಚಂಡಮಾರುತದ ಭೀತಿ: ಲಂಗರು ಹಾಕಿದ ಸಾವಿರಾರು ಬೋಟ್‌ಗಳು ಮಂಗಳೂರಿನಲ್ಲಿ ಚಂಡಮಾರುತದ ಭೀತಿ: ಲಂಗರು ಹಾಕಿದ ಸಾವಿರಾರು ಬೋಟ್‌ಗಳು

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಸೃಷ್ಠಿಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ಸಮಯದಲ್ಲಿ ಅರಬ್ಬಿ ಸಮುದ್ರದಲ್ಲಿ ಸಹ ವಾಯುಭಾರ ಕುಸಿತ ಉಂಟಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ, ಬೆಂಗಳೂರು ಸೇರಿದಂತೆ ಒಳನಾಡಿನ ಅಲ್ಲಲ್ಲಿ ಸತತ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮಂಗಳೂರಿಗರಲ್ಲಿ ಭಯ ಹುಟ್ಟಿಸಿದ ಕಾರ್ಮೋಡ ಹೊತ್ತುತಂದ ಕತ್ತಲು ಮಂಗಳೂರಿಗರಲ್ಲಿ ಭಯ ಹುಟ್ಟಿಸಿದ ಕಾರ್ಮೋಡ ಹೊತ್ತುತಂದ ಕತ್ತಲು

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಕೇರಳ, ತಮಿಳುನಾಡು, ಒಡಿಸ್ಸಾಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಕರಾವಳಿಯಲ್ಲಿ ಭಾರೀ ಮಳೆ: ಆಳ ಸಮುದ್ರದಿಂದ ಮರಳುತ್ತಿರುವ ಮೀನುಗಾರರುಕರಾವಳಿಯಲ್ಲಿ ಭಾರೀ ಮಳೆ: ಆಳ ಸಮುದ್ರದಿಂದ ಮರಳುತ್ತಿರುವ ಮೀನುಗಾರರು

Low pressure in Bay of Bengal expected heavy rain in 48 hours

ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರ ಎರಡರಲ್ಲೂ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಕೇರಳದಲ್ಲಿ ಅಲರ್ಟ್‌ ಘೋಷಿಸಲಾಗಿದೆ. ಒಡಿಸ್ಸಾಕ್ಕೂ ತೀವ್ರ ಮಳೆಯ ಎಚ್ಚರಿಕೆ ನೀಡಿದೆ.

English summary
Low pressure in Bay of Bengal. expected heavy rain in 48 hours in south India. Karnataka, Kerala, Tamilnadu will have rain in 48 hours. Odissa will also see heavy rains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X