ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದ ಮುಸ್ಲಿಂ ವ್ಯಕ್ತಿಗೆ ಥಳಿತ

|
Google Oneindia Kannada News

ಉಜ್ಜಯಿನಿ, ಜನವರಿ 19: ಮುಸ್ಲಿಂ ವ್ಯಕ್ತಿಯನ್ನು ರೈಲಿನಿಂದ ಹೊರಗಡೆ ಎಳೆದು ಗುಂಪೊಂದು ಮನಬಂದಂತೆ ಥಳಿಸಿದ ದಾರುಣ ಘಟನೆಯೊಂದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಥಳಿತಕ್ಕೊಳಗಾದ ವ್ಯಕ್ತಿ ಮುಸ್ಲಿಂ ಆಗಿದ್ದು, ಆತ ತನಗೆ ತಿಳಿದಿರುವ ಹಿಂದೂ ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದ. ಈ ವ್ಯಕ್ತಿಯನ್ನು ಹೊಡೆದವರು ಬಲಪಂಥೀಯ ಸಂಘಟನೆಯ ಸದಸ್ಯರು ಎಂದು ಹೇಳಲಾಗುತ್ತಿದೆ. ಈ ಪೈಕಿ ಪಿಂಟು ಕೌಶಲ್ ಎಂಬ ವ್ಯಕ್ತಿಯ ವಿಡಿಯೋ ಹೊರಬಿದ್ದಿದೆ. ಈ ಪಿಂಟು ಕೌಶಲ್ ಮುಸ್ಲಿಂ ವ್ಯಕ್ತಿ ಮಹಿಳೆಯನ್ನು 'ಲವ್ ಜಿಹಾದ್'ಗೆ ಬಲಿಪಶು ಮಾಡಿದ್ದಾನೆ. ಹೀಗಾಗಿ ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವುದಾಗಿ ಪಿಂಟು ಆರೋಪಿಸಿದ್ದಾರೆ. ಮುಸ್ಲಿಂ ವ್ಯಕ್ತಿಯನ್ನು ಥಳಿಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.

ಘಟನೆಯ ವಿಡಿಯೋ ಹೊರಬಿದ್ದಾಗ ವಿಷಯ ಬೆಳಕಿಗೆ ಬಂದಿದ್ದು, ಇದರಲ್ಲಿ ಗುಂಪೊಂದು ವ್ಯಕ್ತಿಯೊಬ್ಬನನ್ನು ರೈಲಿನಿಂದ ಹೊರಗೆ ಎಳೆದು ಥಳಿಸಿದ್ದಾರೆ. ಆದರೆ ಈ ವೈರಲ್ ವಿಡಿಯೋ ದೃಢಪಟ್ಟಿಲ್ಲ. ಜಿಆರ್‌ಪಿ ಉಜ್ಜಯಿನಿ-ಪೊಲೀಸ್ ವರಿಷ್ಠಾಧಿಕಾರಿ ನಿವೇದಿತಾ ಗುಪ್ತಾ ಅವರ ಹೇಳಿಕೆಯಿಂದಾಗಿ ಇಂದು ಈ ವಿಷಯ ಬಹಿರಂಗಗೊಂಡಿದೆ. "ಹೊಡೆದ ವ್ಯಕ್ತಿ ಮತ್ತು ಆತನ ಜೊತೆಗಿದ್ದ ಮಹಿಳೆ ಕುಟುಂಬದ ಸ್ನೇಹಿತರು ಎಂಬ ಮಾಹಿತಿ ನಮಗೆ ಸಿಕ್ಕಿದೆ. ಇದನ್ನು ಮಹಿಳೆಯ ತಾಯಿ ಖಚಿತಪಡಿಸಿದ್ದಾರೆ. ಆದ್ದರಿಂದ ನಾವು ಅವರನ್ನು ಹೋಗಲು ಬಿಟ್ಟಿದ್ದೇವೆ" ಎಂದು ಗುಪ್ತಾ ಹೇಳಿದ್ದಾರೆ.

ಗುಂಪೊಂದು ವ್ಯಕ್ತಿಯನ್ನು ಥಳಿಸಿರುವುದರ ಬಗ್ಗೆ ಕೇಳಿದಾಗ ಎಸ್ಪಿ, "ಅವರು ಯಾವುದೇ ದೂರು ನೀಡದ ಕಾರಣ, ನಾವು ಸ್ವಯಂ ಪ್ರೇರಿತ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದರು. ಗುಂಪು ಥಳಿಸಿದ ಬಗ್ಗೆ ಯಾವುದೇ ದೂರು ನೀಡಿಲ್ಲ. ಹೀಗಾಗಿ ನಾವು ಯಾರನ್ನೂ ಬಂಧಿಸಿಲ್ಲ ಎಂದು ಅವರು ಹೇಳಿದರು. ಆ ವ್ಯಕ್ತಿ ಮುಸ್ಲಿಂ ಆಗಿದ್ದು, ಆತನನ್ನು ಥಳಿಸಿದವರು ಬಲಪಂಥೀಯ ಸಂಘಟನೆಯ ಸದಸ್ಯರು ಎಂದು ಹೇಳಲಾಗುತ್ತಿದೆ. ವಿವಾಹಿತ ಹಿಂದೂ ಮಹಿಳೆಯನ್ನು ಮುಸ್ಲಿಂ ವ್ಯಕ್ತಿ ಮತಾಂತರಕ್ಕೆ ಬಲವಂತ ಮಾಡಿದ ಎಂದು ಥಳಿಸಿದವರು ಆರೋಪಿಸಿದ್ದಾರೆ. ಮಹಿಳೆ ಈಗಾಗಲೇ ಮದುವೆಯಾಗಿದ್ದಾರೆ ಮತ್ತು ಮಗುವನ್ನು ಹೊಂದಿದ್ದಾರೆ. ಅವರು ರೈಲಿನಲ್ಲಿ ಮದುವೆಗೆಂದು ಉಜ್ಜಯಿನಿಯಿಂದ ಅಜ್ಮೀರ್‌ಗೆ ಹೋಗುತ್ತಿದ್ದರು.

Love Jihad: Group That Beat the Muslim Man

ತನ್ನನ್ನು ಬಲಪಂಥೀಯ ಸಂಘಟನೆಯ ಸದಸ್ಯ ಎಂದು ಬಣ್ಣಿಸಿದ ಕೌಶಲ್, "ನಮಗೆ ಅವನ (ಮುಸ್ಲಿಂ ವ್ಯಕ್ತಿ) ಬಗ್ಗೆ ಮಾಹಿತಿ ಸಿಕ್ಕಿತು. ಆದ್ದರಿಂದ ನಾವು (ಅವನ ಬಳಿಗೆ) ಬಂದು ಅವನನ್ನು ರೈಲಿನಿಂದ ಇಳಿಸಿದ್ದೇವೆ. ನಾವು ಅವನನ್ನು GRP-ಉಜ್ಜಯಿನಿ ಪೊಲೀಸರಿಗೆ ನೀಡಿದ್ದೇವೆ. " ಇದು 'ಲವ್ ಜಿಹಾದ್' ಪ್ರಕರಣವಾಗಿತ್ತು" ಎಂದು ಪಿಂಟು ಹೇಳಿಕೊಂಡಿದ್ದಾರೆ.

ಪೊಲೀಸರು ಹೇಳುವ ಪ್ರಕಾರ, "ದೌರ್ಜನ್ಯಕ್ಕೊಳಗಾದ ವ್ಯಕ್ತಿಯಿಂದ ಯಾವುದೇ ದೂರು ಬಂದಿದ್ದರೆ, ನಂತರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ" ಎಂದರು. ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತ ಅರುಣ್ ಗುರ್ತು ಘಟನೆಯನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕರೆದಿದ್ದಾರೆ. ಈ ಕೃತ್ಯ ನೈತಿಕವಾಗಿ ತಪ್ಪಾಗಿದ್ದು, ಕಾನೂನು ರೀತ್ಯಾ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇಂತಹ ಚಟುವಟಿಕೆಗಳು ಮರುಕಳಿಸದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕು, ಕೇಸರಿ ಸಂಘಟನೆ ಅಥವಾ ಇನ್ಯಾವುದೇ ವ್ಯಕ್ತಿಯನ್ನು ಏಕಾಏಕಿ ನಿಲ್ಲಿಸುವ ಹಕ್ಕು ಮತ್ತು ಸಾರ್ವಜನಿಕವಾಗಿ ಅಡ್ಡಿಪಡಿಸುವ ಹಕ್ಕು ಇಲ್ಲ.

Love Jihad: Group That Beat the Muslim Man

ಲವ್‌ ಜಿಹಾದ್‌ ಎಂದರೇನು?: ಹಿಂದೂ ಸಂಪ್ರದಾಯವಾದಿಗಳು ಹೇಳುವಂತೆ ಲವ್‌ ಜಿಹಾದ್‌ ಎಂದರೆ ಪರೋಕ್ಷವಾಗಿ ಮತಾಂತರ ಮಾಡುವ ಪ್ರಕ್ರಿಯೆ. ಹಿಂದು ಅಥವಾ ಮುಸ್ಲಿಮೇತರ ಯುವತಿಯರನ್ನು ನಂಬಿಸಿ ಮದುವೆಯಾಗುವ ಮುಸ್ಲಿಂ ಯುವಕರು ನಂತರ ಅವರನ್ನು ಬಲವಂತದಿಂದ ಮುಸ್ಲಿಂ ಆಗಿ ಮತಾಂತರ ಮಾಡುತ್ತಾರೆ. ಈ ರೀತಿಯ ಲವ್‌ ಜಿಹಾದ್‌ ಪ್ರಕರಣಗಳು ದಶಕದ ಹಿಂದೆ ಕೇರಳದಲ್ಲಿ ಕಂಡುಬಂದಿತು. ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶಕ್ಕೂ ವ್ಯಾಪಿಸಿದೆ ಎಂದು ಲಕ್ನೋ ವಿಶ್ವವಿದ್ಯಾಲಯಯ ರಾಜೀವ್‌ ಶುಕ್ಲಾ ಹೇಳುತ್ತಾರೆ.

Recommended Video

INS ರಣವೀರ್ ಯುದ್ಧನೌಕೆಯಲ್ಲಿ ಸ್ಫೋಟ,ಭಾರತೀಯ ನೌಕಾಪಡೆಯ 3 ಯೋಧರು ಹುತಾತ್ಮ | Oneindia Kannada

English summary
The incident happened in Ujjain in Madhya Pradesh after a Muslim man was dragged off the train and beaten by a mob.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X