ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈತ 7,000ಕೋಟಿ ಲಾಟರಿ ಹಗರಣದ ಕಿಂಗ್ ಪಿನ್ !

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ.27: ಒಂದಂಕಿ ಲಾಟರಿ ದಂಧೆಯ ತನಿಖೆಯನ್ನು ಸಿಬಿಐಗೆ ಕರ್ನಾಟಕ ಸರ್ಕಾರ ವಹಿಸುತ್ತಿದ್ದಂತೆ ಅತ್ತ ತಮಿಳುನಾಡಿನಲ್ಲಿ ಲಾಟರಿ ಕಿಂಗ್ ಪಿನ್ ಗಳಾದ ಮೈಕಲ್ ಹಾಗೂ ಸ್ಯಾಂಟಿಯಾಗೋ ಮಾರ್ಟಿನ್ ಎದೆಯಲ್ಲಿ ಡವ ಡವ ಶುರುವಾಗಿದೆ. ಸರಿ ಸುಮಾರು 7,000 ಕೋಟಿ ರು ಮೌಲ್ಯದ ಕತ್ತಲ ಸಾಮ್ರಾಜ್ಯವನ್ನು ಸಿಬಿಐ ಯಾವಾಗ ನಾಶಪಡಿಸುತ್ತದೋ ಕಾದು ನೋಡಬೇಕಿದೆ.

ದಕ್ಷಿಣ ಭಾರತದ ಲಾಟರಿ ದಂಧೆ ಏಜೆಂಟ್ ಗಳ ಪೈಕಿ ಒಬ್ಬನಾದ ಬಂಗಾರಪೇಟೆ ಮೂಲದ ಪಾರಿ ರಾಜನ್ ನಿಂದಾಗಿ ಸದ್ಯಕ್ಕೆ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ಅಮಾನತಾಗಿದೆ. ಸಿಐಡಿ ತನಿಖೆಯಿಂದ ಸಿಬಿಐ ತನಿಖೆಗೆ ಪ್ರಕರಣ ಹಸ್ತಾಂತರವಾಗುತ್ತಿದೆ.

Kingpin Santiago Martin will be re-visited

ದಕ್ಷಿಣ ಭಾರತವೇ ಅಲುಗಾಡಲಿದೆ: ಸಿಬಿಐ ಈ ಪ್ರಕರಣ ಕೈಗೆತ್ತಿಕೊಂಡಿರುವುದರಿಂದ ಹಳೆ ಕಡತಗಳೆಲ್ಲ ಹೊರಕ್ಕೆ ಬರುವ ಸಾಧ್ಯತೆಯಿದೆ. ಕರ್ನಾಟಕದ ಐಪಿಎಸ್, ಐಎಎಸ್ ಅಧಿಕಾರಿಗಳು ರಾಜಕಾರಣಿಗಳಲ್ಲದೆ ತಮಿಳುನಾಡು, ಕೇರಳ, ಈಶಾನ್ಯ ಭಾರತದ ರಾಜ್ಯಗಳ ಮುಖಂಡರಿಗೂ ತಲೆಬಿಸಿಯಾಗಲಿದೆ.

ಮಾರ್ಟಿನ್ ಗೆ ಶುರುವಾಗಿದೆ ನಡುಕ: ಕೊಯಮತ್ತೂರು ಮೂಲದ ಲಾಟರಿ ಮಾರ್ಟಿನ್ ಎಂದೇ ಕುಖ್ಯಾತಿಗೊಳಗಾಗಿರುವ ಕೊಯಮತ್ತೂರು ಮೂಲದ ಸ್ಯಾಂಟಿಯಾಗೊ ಮಾರ್ಟಿನ್ ಕೂಡಾ ಪಾರಿ ರಾಜನ್ ನಂತೆ ಲಾಟರಿ ದಂಧೆ ಜೊತೆಗೆ ರಾಜಕಾರಣಿಗಳ ನಂಟು, ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸಿಕೊಂಡು 7,000 ಕೋಟಿ ರುಗೂ ಮೀರಿದ ಸಾಮ್ರಾಜ್ಯ ಕಟ್ಟಿ ಬೆಳೆಸಿದವರು.

ಕೊಯಮತ್ತೂರಿನ ಗಾಂಧಿನಗರಂನ 6ನೇ ಅಡ್ಡರಸ್ತೆ ಮನೆ ತೊರೆದ ಲಾಟರಿ ಮಾರ್ಟಿನ್ ನಂತರ ತುಡಿಯಲೂರ್ ಕಡೆಗೆ ಸಾಗಿದ್ದ. 2011ರಲ್ಲಿ ಬಂಧನಕ್ಕೊಳಪಟ್ಟ ಮಾರ್ಟಿನ್ ಸುಮಾರು 2000 ಕೋಟಿ ರು ಸ್ವಂತ ಆಸ್ತಿ ಮಾಡಿಕೊಂಡಿದ್ದ ಎನ್ನಲಾಗಿದೆ. ಕೊನೆಗೆ ಮಾರ್ಟಿನ್ ಪತ್ನಿ ಹೋಗಿ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿಯಾ ಕಾಲು ಹಿಡಿದುಕೊಂಡು ಬೇಡಿಕೊಂಡ ಮೇಲೆ ಮಾರ್ಟಿನ್ ಮೇಲೆ ಕೇಸು ಹಾಕುವುದು ನಿಲ್ಲಿಸಲಾಯಿತು.

English summary
The decision to hand over the investigation into the Lottery scam to the Central Bureau of Investigation was necessary as it is an empire that is a little over Rs 7,000 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X