ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿಯಲ್ಲ ಎಂದ ಅಧ್ಯಯನಕ್ಕೆ ಆಧಾರವೇ ಇಲ್ಲ"

|
Google Oneindia Kannada News

ನವದೆಹಲಿ, ಜೂನ್ 09: ಭಾರತದಲ್ಲಿ ನೀಡಲಾಗುತ್ತಿರುವ ಕೊರೊನಾ ಲಸಿಕೆಗಳ ಪೈಕಿ ಕೋವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್‌ ಹೆಚ್ಚು ಪರಿಣಾಮಕಾರಿ ಎಂದು ಈಚೆಗೆ ಅಧ್ಯಯನವೊಂದು ತಿಳಿಸಿದ್ದು, ಈ ಅಧ್ಯಯನದ ಕುರಿತು, ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ.

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ನಡುವಿನ ರೋಗನಿರೋಧಕ ಶಕ್ತಿ ಉತ್ಪತ್ತಿ ಸಾಮರ್ಥ್ಯವನ್ನು ಹೋಲಿಕೆ ಮಾಡಿರುವ ಈ ಅಧ್ಯಯನವು ವಿದ್ವತ್ಪೂರ್ಣ ಪ್ರಕಟಣೆಯಲ್ಲ ಎಂದು ಹೇಳಿದೆ. ಕೋವ್ಯಾಕ್ಸಿನ್ ಲಸಿಕೆಗಿಂತ ಕೋವಿಶೀಲ್ಡ್‌ ಲಸಿಕೆ ಹೆಚ್ಚಿನ ಮಟ್ಟದಲ್ಲಿ ಪ್ರತಿಕಾಯಗಳನ್ನು ಉತ್ಪತ್ತಿ ಮಾಡುತ್ತದೆ ಎಂದು Covat ಪ್ರಾಥಮಿಕ ಅಧ್ಯಯನ ತಿಳಿಸಿತ್ತು. ಕೋವ್ಯಾಕ್ಸಿನ್‌ಗೆ ಹೋಲಿಸಿದರೆ, ಮೊದಲ ಡೋಸ್ ಲಸಿಕೆ ಪಡೆದ ನಂತರ ಸೋಂಕಿನ ವಿರುದ್ಧ ಹೋರಾಡಲು ಕೋವಿಶೀಲ್ಡ್‌ನಲ್ಲಿ ಹೆಚ್ಚಿನ ಪ್ರತಿಕಾಯ ಸೃಷ್ಟಿಯಾಗಿರುವುದು ಕಂಡುಬಂದಿದೆ. ಕೋವಿಶೀಲ್ಡ್‌ನಲ್ಲಿ ಸೆರೊಪಾಸಿಟಿವಿಟಿ ಪ್ರಮಾಣವೂ ಹೆಚ್ಚಿದೆ ಎಂದು ಅಧ್ಯಯನ ತಿಳಿಸಿತ್ತು. ಮುಂದೆ ಓದಿ...

 ವರದಿಯಲ್ಲಿ ಸಾಕಷ್ಟು ನ್ಯೂನತೆಗಳಿವೆ ಎಂದ ಸಂಸ್ಥೆ

ವರದಿಯಲ್ಲಿ ಸಾಕಷ್ಟು ನ್ಯೂನತೆಗಳಿವೆ ಎಂದ ಸಂಸ್ಥೆ

ಭಾರತದಲ್ಲಿ ಉತ್ಪಾದಿಸಲಾದ ಲಸಿಕೆಗಳ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆದ ನಂತರ ದೇಹದಲ್ಲಿ ರೋಗನಿರೋಧಕ ಶಕ್ತಿಯ ಪ್ರಮಾಣ ಹಾಗೂ ಪ್ರತಿಕಾಯಗಳ ಮೌಲ್ಯಮಾಪನವನ್ನು ಇತ್ತೀಚೆಗೆ ಅಧ್ಯಯನವೊಂದು ಮಾಡಿದೆ. ಆದರೆ ಈ ತುಲನಾತ್ಮಕ ವರದಿಯಲ್ಲಿ ಸಾಕಷ್ಟು ನ್ಯೂನತೆಗಳಿವೆ. ಈ ವರದಿಯಲ್ಲಿ ಕೋವಿಶೀಲ್ಡ್ ಅತಿ ಹೆಚ್ಚು ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಇದಕ್ಕೆ ಸೂಕ್ತ ಪುರಾವೆಗಳನ್ನು ನೀಡಿಲ್ಲ ಎಂದು ಭಾರತ್ ಬಯೋಟೆಕ್ ಪ್ರಶ್ನಿಸಿದೆ.

ಕೋವಿಶೀಲ್ಡ್, ಕೋವ್ಯಾಕ್ಸಿನ್‌ನಲ್ಲಿ ಯಾವ ಲಸಿಕೆ ಹೆಚ್ಚು ಪರಿಣಾಮಕಾರಿ?ಕೋವಿಶೀಲ್ಡ್, ಕೋವ್ಯಾಕ್ಸಿನ್‌ನಲ್ಲಿ ಯಾವ ಲಸಿಕೆ ಹೆಚ್ಚು ಪರಿಣಾಮಕಾರಿ?

 ಅಂಕಿ ಸಂಖ್ಯೆ, ವೈಜ್ಞಾನಿಕ ನೆಲೆಗಟ್ಟಿಲ್ಲ

ಅಂಕಿ ಸಂಖ್ಯೆ, ವೈಜ್ಞಾನಿಕ ನೆಲೆಗಟ್ಟಿಲ್ಲ

ಇದು ವಿದ್ವತ್ಪೂರ್ಣ ಪ್ರಕಟಣೆಯಲ್ಲ. ಅಧ್ಯಯನದಲ್ಲಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಯಾವುದೇ ಅಂಕಿ ಸಂಖ್ಯೆಯನ್ನು, ವೈಜ್ಞಾನಿಕ ನೆಲೆಗಟ್ಟನ್ನು ನೀಡಿಲ್ಲ. ಇದು ತಾತ್ಕಾಲಿಕ ವಿಶ್ಲೇಷಣೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಈ ಅಧ್ಯಯನವನ್ನು ಸಿಟಿಆರ್‌ಐ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಲ್ಲ. ಸಿಡಿಎಸ್‌ಸಿಒ ಹಾಗೂ ಸಿಇಸಿಯಿಂದಲೂ ಅನುಮೋದನೆ ಪಡೆದಿಲ್ಲ ಎಂದು ಹೇಳಿದೆ.

"ಸಂಶೋಧಕರು ತೀರ್ಮಾನಕ್ಕೆ ಬರುತ್ತಿರುವುದು ಆಶ್ಚರ್ಯ"

"ಈ ವರದಿಯಲ್ಲಿ ಸಾಕಷ್ಟು ಲೋಪಗಳಿವೆ. ಆದರೆ ಆಧಾರವಿಲ್ಲದ ಅಧ್ಯಯನದ ಮೇಲೆ ಮಾಧ್ಯಮ ಹಾಗೂ ಸಂಶೋಧಕರು ತೀರ್ಮಾನಕ್ಕೆ ಬರುತ್ತಿರುವುದು ಆಶ್ಚರ್ಯವಾಗಿದೆ" ಎಂದು ಭಾರತ್ ಬಯೋಟೆಕ್‌ನ ಬಿಸಿನೆಸ್ ಡೆವಲಪ್ಮೆಂಟ್ ಮುಖ್ಯಸ್ಥ ರಾಚೆಸ್ ಎಲ್ಲಾ ಟ್ವೀಟ್ ಮಾಡಿದ್ದರು.

 ಅಧ್ಯಯನ ಹೇಳಿದ್ದೇನು?

ಅಧ್ಯಯನ ಹೇಳಿದ್ದೇನು?

Covat ಅಧ್ಯಯನದಲ್ಲಿ, ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ಉತ್ತಮ ರೋಗನಿರೋಧಕ ಪ್ರತಿಕ್ರಿಯೆ ನೀಡಿರುವುದು ಕಂಡುಬಂದಿದೆ. ಆದರೆ ಹೋಲಿಕೆಯಲ್ಲಿ ಕೋವಿಶೀಲ್ಡ್‌ನಲ್ಲಿ ಪ್ರತಿಕಾಯ ಸೃಷ್ಟಿ ಹೆಚ್ಚಿದೆ. ಮೊದಲ ಡೋಸ್ ಪಡೆದ ನಂತರ ಕೋವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್‌ನಲ್ಲಿ ಹೆಚ್ಚಿನ ಪ್ರತಿಕಾಯ ಸೃಷ್ಟಿ ಕಂಡುಬಂದಿದೆ. ಆದರೆ ಎರಡೂ ಡೋಸ್‌ಗಳನ್ನು ಪಡೆದುಕೊಂಡ ನಂತರ ಎರಡೂ ಲಸಿಕೆಗಳು ಉತ್ತಮ ಪ್ರತಿಕ್ರಿಯೆ ತೋರಿಸಿವೆ ಎಂದು ತಿಳಿಸಿದೆ.

ಒಟ್ಟು 552 ಆರೋಗ್ಯ ಕಾರ್ಯಕರ್ತರನ್ನು ಈ ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿತ್ತು. ಅದರಲ್ಲಿ 456 ಮಂದಿಗೆ ಕೋವಿಶೀಲ್ಡ್‌ ಹಾಗೂ 96 ಮಂದಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗಿತ್ತು. ಹೋಲಿಕೆಯಲ್ಲಿ 79.3% ಸೆರೊಪಾಸಿಟಿವಿಟಿ ಪ್ರಮಾಣ ದಾಖಲಾಗಿದೆ. ಇದರಲ್ಲಿ ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಹೆಚ್ಚಿನ ಆ್ಯಂಟಿ ಸ್ಪೈಕ್ ಪ್ರತಿಕಾಯ ಸೃಷ್ಟಿಯಾಗಿರುವುದು ಕಂಡುಬಂದಿರುವುದಾಗಿ ಅಧ್ಯಯನ ತಿಳಿಸಿತ್ತು.

English summary
Bharat Biotech said that a study that compares the immune response of the two vaccines ( Covishield and Covaxin) used in India is not peer-reviewed journal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X