ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕ ತೂಕವಿರುವವರಿಗೆ ಕೊರೊನಾ ಸೋಂಕಿನಿಂದ ಹೆಚ್ಚು ಅಪಾಯ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 18: ಕೊರೊನಾ ಸೋಂಕನ್ನು ದೂರವಿಡುವ ಉಪಾಯ ನಿಮ್ಮ ಕೈಯಲ್ಲಿದೆ .

ತೂಕ ಇಳಿಕೆ, ಆರೋಗ್ಯಕರ ಜೀವನ ಶೈಲಿಯಿಂದಲೂ ಕೂಡ ಕೊವಿಡ್ 19 ರೋಗವನ್ನು ಹಿಮ್ಮೆಟ್ಟಿಸಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಕೊರೊನಾ ಸೋಂಕಿನಿಂದಾಗಿ ಸಾಯುವ ಅಪಾಯವನ್ನೂ ಹೆಚ್ಚಿಸುತ್ತದೆ ಎಂದು ಜಾಗತಿಕ ಅಧ್ಯಯನಗಳನ್ನು ಉಲ್ಲೇಖಿಸಿ, ಆರೋಗ್ಯ ಇಲಾಖೆಯು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಅಗತ್ಯತೆಯನ್ನು ಮತ್ತೆ ಮತ್ತೆ ಹೇಳುತ್ತದೆ.

ಇದೇ ವಿಚಾರವಾಗಿ ಬ್ರಿಟನ್ ನ ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಇಲಾಖೆಯ ಕಾರ್ಯನಿರ್ವಾಹಕ ಸಂಸ್ಥೆಯಾದ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಅಭಿಪ್ರಾಯಪಟ್ಟಿರುವಂತೆ, ಹೆಚ್ಚಿನ ತೂಕ ಹೊಂದಿರುವ ಜನರಿಗೆ ಆಸ್ಪತ್ರೆಯ ಪ್ರವೇಶ ಅಥವಾ ತೀವ್ರ ನಿಗಾ ಅಗತ್ಯತೆ ಹೆಚ್ಚಿನ ಅಪಾಯ ಉಂಟುಮಾಡುತ್ತದೆ.

ಕೊವಿಡ್ 19 ಲಸಿಕೆಗಳಿಗಿಂತ ಮಾಸ್ಕ್ ಹೆಚ್ಚು ಸುರಕ್ಷಿತ ಎಂದ ವಿಜ್ಞಾನಿಗಳುಕೊವಿಡ್ 19 ಲಸಿಕೆಗಳಿಗಿಂತ ಮಾಸ್ಕ್ ಹೆಚ್ಚು ಸುರಕ್ಷಿತ ಎಂದ ವಿಜ್ಞಾನಿಗಳು

ಆರೋಗ್ಯಕರ ಮತ್ತು ಪೌಷ್ಠಿಕ ಆಹಾರಕ್ಕೆ ಅಂಟಿಕೊಳ್ಳುವ ಅಗತ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಸ್ಥೂಲಕಾಯತೆಯನ್ನು ನಿಭಾಯಿಸಲು ಯುಕೆ ಸರ್ಕಾರ ಹೊಸ ರಾಷ್ಟ್ರೀಯ ಕಾರ್ಯತಂತ್ರವನ್ನು ಬಿಡುಗಡೆ ಮಾಡಿದೆ. ಇದೇ ರೀತಿಯ ಕಾರ್ಯತಂತ್ರವನ್ನು ಎಲ್ಲ ರಾಜ್ಯಗಳು ಅನುಸರಿಸಬೇಕು.

ಸ್ಥೂಲಕಾಯತೆ ಮತ್ತು ಕೊವಿಡ್-19 ಇರುವವರು ಆಸ್ಪತ್ರೆಯಲ್ಲೇ ಸಾವನ್ನಪ್ಪುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಮತ್ತು ಸ್ಥೂಲಕಾಯತೆಯೊಂದಿಗೆ ತೀವ್ರ ನಿಗಾ ಚಿಕಿತ್ಸೆಯಲ್ಲಿ ದಾಖಲಾಗುವ ಶೇಕಡಾ 74 ರಷ್ಟು ಕೊರೊನಾ ಸೋಂಕಿತರು ಸಾಯುವ ಅಪಾಯವೂ ಹೆಚ್ಚಿದೆ.

 ಅನಾರೋಗ್ಯಕರ ಆಹಾರ ಪದ್ಧತಿ

ಅನಾರೋಗ್ಯಕರ ಆಹಾರ ಪದ್ಧತಿ

ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆ ಇಲ್ಲಿದ ಜಡ ಜೀವನಶೈಲಿಯೊಂದಿಗೆ ಆರೋಗ್ಯಕರ ದೇಹ ಕೂಡ ಸಮಸ್ಯೆಗಳ ಗೂಡಾಗಬಹುದು. ಸ್ಥೂಲಕಾಯತೆಯು ಆಸ್ಪತ್ರೆಗೆ ದಾಖಲಾಗುವ ಅಪಾಯವನ್ನು ದ್ವಿಗುಣಗೊಳಿಸುತ್ತದೆ

 ರೋಗಿಗಳು ಸ್ಥೂಲಕಾಯದಿಂದ ಬಳಲುತ್ತಿದ್ದಾರೆ

ರೋಗಿಗಳು ಸ್ಥೂಲಕಾಯದಿಂದ ಬಳಲುತ್ತಿದ್ದಾರೆ

ಕೊವಿಡ್ ರೋಗದಿಂದ ಆಸ್ಪತ್ರೆಗೆ ದಾಖಲಾಗಿರುವವರ ಬಹುತೇಕ ಮಂದಿ ಸ್ಥೂಲಕಾಯತೆಯಿಂದ ಬಳಲುತ್ತಿರುವುದು ಕಂಡುಬಂದಿದ್ದು. ಈ ಬಗ್ಗೆ ಯುವಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಕೇರಳ ಆರೋಗ್ಯ ಇಲಾಖೆ ನೀಡಿರುವ ದತ್ತಾಂಶಗಳ ಅನ್ವಯ 'ರಾಜ್ಯದಲ್ಲಿ ತೀವ್ರ ನಿಗಾ ಘಟಕ ಮತ್ತು ವೆಂಟಿಲೇಟರ್ ಗಳಿಗೆ ದಾಖಲಾಗುತ್ತಿರುವ ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

 ವಯಸ್ಸಾದವರಿಗೆ ವೆಂಟಿಲೇಟರ್ ಅಗತ್ಯ

ವಯಸ್ಸಾದವರಿಗೆ ವೆಂಟಿಲೇಟರ್ ಅಗತ್ಯ

ವಯಸ್ಸಾದವರಿಗೆ ಮತ್ತು ಕೊಮೊರ್ಬಿಡಿಟಿ ಇರುವವರಿಗೆ ಐಸಿಯು ಅಥವಾ ವೆಂಟಿಲೇಟರ್ ಆರೈಕೆಯ ಅಗತ್ಯವಿರುತ್ತದೆ ಎಂಬುದು ಸ್ಪಷ್ಟ. ಆದರೆ ಈಗ, ಯುವ ರೋಗಿಗಳಿಗೆ ಐಸಿಯು ಪ್ರವೇಶದ ಅಗತ್ಯವಿರುತ್ತದೆ ಮತ್ತು ಅವರಲ್ಲಿ ಹೆಚ್ಚಿನವರು ಬೊಜ್ಜು ಹೊಂದಿದ್ದಾರೆ ಎಂದು ದತ್ತಾಂಶಗಳಿಂದ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

 ಕೇರಳ ಸರ್ಕಾರದ ಅಭಿಯಾನ

ಕೇರಳ ಸರ್ಕಾರದ ಅಭಿಯಾನ

ಇದೇ ಕಾರಣಕ್ಕೆ ಕೇರಳ ಸರ್ಕಾರ ಕೋವಿಡ್ ರೋಗವನ್ನು ಸೋಲಿಸಲು ತೂಕ ಇಳಿಸಿಕೊಳ್ಳಿ ಮತ್ತು ಸರಿಯಾದ ಆಹಾರ ಸೇವಿಸಿ ಎಂಬ ಅಭಿಯಾನ ಆರಂಭಿಸಿದೆ.

Recommended Video

Sandalwood Drug mafia ವಿಚಾರವಾಗಿ Akul , santosh ,yuvarajಗೆ CCB ಬುಲಾವ್ | Oneindia Kannada
 ಬೊಜ್ಜು ಕೂಡ ಒಂದು ಸಮಸ್ಯೆ

ಬೊಜ್ಜು ಕೂಡ ಒಂದು ಸಮಸ್ಯೆ

ಅತಿಯಾದ ತೂಕ ಅಥವಾ ಸ್ಥೂಲಕಾಯ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ದುರ್ಬಲ ರೋಗ ನಿರೋಧಕ ಶಕ್ತಿಯಂತಹ ಇತರ ಸಮಸ್ಯೆಗಳಿಗೆ ಕಾರಣವಾಗಬಹುದು.

ಸಾಂಕ್ರಾಮಿಕವಲ್ಲದ ಕಾಯಿಲೆಗಳ ರಾಜ್ಯ ನೋಡಲ್ ಅಧಿಕಾರಿ ಡಾ. ಬಿಪಿನ್ ಗೋಪಾಲ್ ಅವರು, ಬೊಜ್ಜು ಒಂದು ಸಮಸ್ಯೆಯಾಗಿದ್ದು, ಯುವ ಪೀಳಿಗೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತಿದೆ. ಕೊವಿಡ್-19 ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಪ್ರಚೋದಕ ಅಂಶಗಳಲ್ಲಿ ಇದು ಒಂದು ಎಂದು ಹೇಳಿದ್ದಾರೆ.

English summary
The unhealthy food habits coupled with the sedentary lifestyle of Keralites could prove fatal as the state braces for the Covid-19 case peak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X