ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಇಂಧನ ಬೆಲೆ ಇಳಿಸದಿದ್ದರೆ ಅನಿರ್ದಿಷ್ಟ ಮುಷ್ಕರ ನಡೆಸುತ್ತೇವೆ' ಎಂದ ಲಾರಿ ಮಾಲೀಕರು

|
Google Oneindia Kannada News

ನವದೆಹಲಿ, ಜು.22: ದಕ್ಷಿಣ ವಲಯದ ಮೋಟಾರು ಸಾಗಣೆದಾರರ ಕಲ್ಯಾಣ ಸಂಘ (ಸಿಮ್ಟಾ) ಆಗಸ್ಟ್ 9 ರೊಳಗೆ ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ. ಒಂದು ವೇಳೆ ಸರ್ಕಾರ ಡಿಸೇಲ್‌ ಬೆಲೆ ಇಳಿಕೆ ಮಾಡುವಲ್ಲಿ ವಿಫಲವಾದರೆ ಸಂಘವು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಹೇಳಿದೆ.

ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ ದಕ್ಷಿಣ ರಾಜ್ಯಗಳ ಲಾರಿ ಮಾಲೀಕರ ಉನ್ನತ ಸಂಸ್ಥೆಯಾಗಿರುವ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಷಣ್ಮುಗಪ್ಪ, "ಆಗಸ್ಟ್ 9 ರೊಳಗೆ ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವಂತೆ ಸರ್ಕಾರಕ್ಕೆ ಗಡುವು ನೀಡಿದ್ದೇವೆ. ಸರ್ಕಾರ ಬೆಲೆ ಇಳಿಕೆ ಮಾಡದಿದ್ದರೆ ಸಂಘವು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದೆ," ಎಂದು ತಿಳಿಸಿದ್ದಾರೆ.

ಶತಕ ದಾಟಿದ ಪೆಟ್ರೋಲ್‌ ಬೆಲೆ: 38 ಕಿ.ಮೀ. ಸೈಕಲ್‌ ತುಳಿದು ವಿಧಾನಸಭೆ ತಲುಪಿದ ಟಿಎಂಸಿ ಸಚಿವಶತಕ ದಾಟಿದ ಪೆಟ್ರೋಲ್‌ ಬೆಲೆ: 38 ಕಿ.ಮೀ. ಸೈಕಲ್‌ ತುಳಿದು ವಿಧಾನಸಭೆ ತಲುಪಿದ ಟಿಎಂಸಿ ಸಚಿವ

"ಕಳೆದ ಒಂದು ವರ್ಷದಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 28 ರು. ಹೆಚ್ಚಾಗಿದೆ ಹಾಗೂ ಬೆಲೆಯು 36 ಬಾರಿ ಹೆಚ್ಚಳವಾಗಿದೆ," ಎಂದು ಬುಧವಾರ ಈರೋಡ್‌ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಷಣ್ಮುಗಪ್ಪ ಹೇಳಿದರು.

Lorry owners urges Govt to reduce diesel price, mull indefinite strike over fuel price hike

"ದಕ್ಷಿಣ ಭಾರತದ ರಾಜ್ಯಗಳ 26 ಲಕ್ಷ ಲಾರಿಗಳಲ್ಲಿ, ಏಳು ಲಕ್ಷಕ್ಕಿಂತ ಕಡಿಮೆ ಲಾರಿಗಳನ್ನು ಅಗತ್ಯ ಸೇವೆಗಳಿಗಾಗಿ ನಿರ್ವಹಿಸಲಾಗಿದ್ದರೆ, ಈ ದರ ಏರಿಕೆಯಿಂದಾಗಿ 40% ಕ್ಕಿಂತ ಹೆಚ್ಚು ಲಾರಿಗಳನ್ನು ನಿರ್ವಹಿಸಲು ಸಾಧ್ಯವಿಲ್ಲ," ಎಂದರು.

"ಎರಡೂ ಸರ್ಕಾರಗಳು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಮತ್ತು ಬೆಲೆಯನ್ನು ಕಡಿಮೆ ಮಾಡಬೇಕು," ಎಂದು ಹೇಳಿದ ಷಣ್ಮುಗಪ್ಪ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಡೀಸೆಲ್ ಬೆಲೆಯನ್ನು 4 ರಷ್ಟು ಇಳಿಸುವ ಭರವಸೆಯನ್ನು ಪೂರೈಸುತ್ತಾರೆ ಎಂದಿದ್ದಾರೆ.

 1973 ರ ಪ್ರತಿಭಟನೆ ವಿಡಿಯೋ ವೈರಲ್‌: ಬಿಜೆಪಿಗೆ ಹಳೆಯ ದಿನಗಳ ನೆನಪಿಸಿದ ಶಶಿ ತರೂರ್‌ 1973 ರ ಪ್ರತಿಭಟನೆ ವಿಡಿಯೋ ವೈರಲ್‌: ಬಿಜೆಪಿಗೆ ಹಳೆಯ ದಿನಗಳ ನೆನಪಿಸಿದ ಶಶಿ ತರೂರ್‌

"ತಮಿಳುನಾಡಿನಲ್ಲಿ 33 ಸೇರಿದಂತೆ ದೇಶಾದ್ಯಂತ 571 ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕ ಸಂಗ್ರಹಿಸುವ ಪರವಾನಗಿ ಒಪ್ಪಂದದ ಅವಧಿ ಮುಗಿದಿದೆ. ಆದರೆ ಶುಲ್ಕವನ್ನು ಆ ಟೋಲ್ ಪ್ಲಾಜಾಗಳಲ್ಲಿ ಸಂಗ್ರಹಿಸುತ್ತಿದೆ," ಎಂದು ಈ ವೇಳೆಯೇ ಜಿ.ಆರ್. ಷಣ್ಮುಗಪ್ಪ ಉಲ್ಲೇಖಿಸಿದ್ದಾರೆ.

ಈ ದರ ಏರಿಕೆ ವಿಚಾರದಲ್ಲಿ ಸರ್ಕಾರ ನಮ್ಮನ್ನು ಮಾತುಕತೆಗೆ ಆಹ್ವಾನಿಸಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು, ಸರ್ಕಾರ ಮಾತುಕತೆ ನಡೆಸಲು ವಿಫಲವಾದರೆ, ನಾವು ಸಭೆ ನಡೆಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡುತ್ತೇವೆ," ಎಂದು ಎಚ್ಚರಿಕೆ ನೀಡಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Lorry owners urges Government to reduce price of diesel, mull strike over fuel price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X