ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಪರಮಶಿವ ಮುಸ್ಲಿಮರ ಮೊದಲ ಪ್ರವಾದಿ"

By Mahesh
|
Google Oneindia Kannada News

ಲಕ್ನೋ, ಫೆ.19: ಶಿವರಾತ್ರಿ ಕಳೆಯುತ್ತಿದ್ದಂತೆ ಹಿಂದೂ ಭಕ್ತಾದಿಗಳು ಶಿವ ಭಜನೆ ಮರೆತಿರಬಹುದು ಅದರೆ, ಜಮಾತೆ ಉಲೆಮಾ ಮುಖ್ಯಸ್ಥರೊಬ್ಬರು ಪರಮಶಿವನನ್ನು ಕೊಂಡಾಡಿದ್ದಾರೆ. ಜಗತ ಪಿತರಂ ವಂದೇ ಪಾರ್ವತಿ ಪರಮೇಶ್ವರಂ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಜಮಾತೆ ಉಲೆಮಾ ಮುಖ್ಯಸ್ಥ ಮುಫ್ತಿ ಮಹಮ್ಮದ್ ಇಲಿಯಾಸ್ ನೀಡಿರುವ ಹೇಳಿಕೆ ಮುಸ್ಲಿಮರಿಗೆ ಆರಗಿಸಿಕೊಳ್ಳಲು ಕಷ್ಟವಾಗುತ್ತಿದೆ.

ಹಿಂದೂಗಳ ತ್ರಿಮೂರ್ತಿಗಳಲ್ಲಿ ಒಬ್ಬರಾದ ಮಹಾಶಿವ ಮುಸ್ಲಿಮರ ಪ್ರಥಮ ಪ್ರವಾದಿ ಎಂದು ಮುಫ್ತಿ ಮಹಮ್ಮದ್ ಇಲಿಯಾಸ್ ಹೇಳಿದ್ದಾರೆ. ಅಲ್ಲದೆ, ಪರಮಶಿವ ಹಾಗೂ ಮಾತೆ ಪಾರ್ವತಿ ಜಗತ್ತಿನ ಆದಿ ಪೋಷಕರು ಎಂದಿದ್ದಾರೆ.

Lord Shiva is first Muslim Prophet, says Muslim Ulema

ಜಮಾತೆ ಉಲೆಮಾ ಮುಖ್ಯಸ್ಥ ಮುಫ್ತಿ ಅವರು ತಮಾಷೆಗೆ ಈ ರೀತಿ ಹೇಳಿಕೆ ನೀಡಿಲ್ಲ. ಮುಸ್ಲಿಮರಿಗೆ ಇಸ್ಲಾಂ ಧರ್ಮ ಬೋಧಿಸಲು ಬಂದ ಮೊದಲ ಪ್ರವಾದಿ ಪರಮ ಶಿವ. ಚೀನಾ ದೇಶದವರನ್ನು ಚೀನಿಯರು, ಜಪಾನ್ ದೇಶದವರನ್ನು ಜಪಾನೀಯರು ಎನ್ನುವಂತೆ ನಾವೆಲ್ಲರೂ ಭಾರತೀಯರು ಒಂದೇ ತಂದೆ (ಶಿವ) ಮಕ್ಕಳು ಎಂದು ಇಲಿಯಾಸ್ ಅವರು ಅಯೋಧ್ಯೆಯಲ್ಲಿ ಇತ್ತೀಚೆಗೆ ಹೇಳಿದ್ದಾರೆ.

ಆರೆಸ್ಸೆಸ್ ಸೇರಿದಂತೆ ಹಲವಾರು ಹಿಂದೂ ಪರ ಸಂಘಟನೆಗಳು ಇತ್ತೀಚೆಗೆ 'ಭಾರತ ಹಿಂದೂರಾಷ್ಟ್ರ' ಎಂದು ನೀಡುತ್ತಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಇಲಿಯಾಸ್, ಭಾರತ ಹಿಂದೂ ರಾಷ್ಟ್ರ ಎಂಬುದರ ಬಗ್ಗೆ ನಮ್ಮ ಆಕ್ಷೇಪವೇನೂ ಇಲ್ಲ ಎಂದಿದ್ದಾರೆ.

ಫೆ.27 ರಂದು ಜಮಾತೆ ಉಲೆಮಾ ವತಿಯಿಂದ ರಾಷ್ಟ್ರೀಯ ಕೋಮಿ ಏಕತಾ ಸಮ್ಮೇಳನವನ್ನು ಬಲರಾಮ್ ಪುರದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನಕ್ಕೆ ಆಗಮಿಸುವಂತೆ ಹಿಂದೂ ಮುಖಂಡರನ್ನು ಆಹ್ವಾನಿಸಲು ಆಯೋಧ್ಯೆಗೆ ಬಂದಿದ್ದಾಗಿ ಹೇಳಿದ್ದಾರೆ.

English summary
This statement may not augur down well amongst the Muslim hardliners.Jamiat Ulema chief Mufti Muhammad Ilyas said that Hindu god 'lord Shiva' was Muslim's first prophet. Not only that, he further said that Lord Shiva and Mata Parvati are their parents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X