ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಘ್ನ ನಿವಾರಕ ಗಣೇಶನಿಗೆ ಪರೀಕ್ಷೆ ಟಿಕೆಟ್ ಕೊಟ್ಟ ಬಿಹಾರದ ವಿವಿ

By ವಿಕಾಸ್ ನಂಜಪ್ಪ
|
Google Oneindia Kannada News

ಪಾಟ್ನ, ಅಕ್ಟೋಬರ್ : ಬಿಹಾರದ ವಿಶ್ವವಿದ್ಯಾಲಯವೊಂದಕ್ಕೆ ವಿಘ್ನ ನಿವಾರಕ, ಪ್ರಥಮ ಪೂಜ್ಯ ಗಣೇಶ ಪರೀಕ್ಷೆ ಬರೆಯಲು ಬರುತ್ತಾನಾ? ಎಂಬ ಸಂಶಯ ಮೂಡುತ್ತಿದೆ. ಗಣಪತಿಗೂ ಪರೀಕ್ಷೆ ಬರೆಯಲು ಅನುಮತಿ ಇರುವ ಪತ್ರವೊಂದು ಈಗ ಸುದ್ದಿಯಲ್ಲಿದೆ.

ದರ್ಭಂಗಾ ಜಿಲ್ಲೆಯಲ್ಲಿರುವ ಲಲಿತ್ ನಾರಾಯಣ್ ಮಿಥಿಲಾ ಯೂನಿವರ್ಸಿಟಿ, ಜೆಎನ್ ಕಾಲೇಜಿನ ಬಿಕಾಂ ಮೊದಲ ವರ್ಷದ ವಿದ್ಯಾರ್ಥಿ ಕೃಷ್ಣನ್ ಕುಮಾರ್ ರಾಯ್ ಗೆ ಅಡ್ಮಿಟ್ ಕಾರ್ಡ್ ವಿತರಿಸಿದೆ.

Lord Ganesha to write commerce exam at Bihar University?

ಅಡ್ಮಿಟ್ ಕಾರ್ಡ್ ನಲ್ಲಿ ವಿದ್ಯಾರ್ಥಿ ಭಾವಚಿತ್ರದ ಜಾಗದಲ್ಲಿ ಗಣಪತಿಯ ಫೋಟೋ ಹಾಕಲಾಗಿದೆ. ಪರೀಕ್ಷಾ ಪ್ರವೇಶ ಪತ್ರದಲ್ಲಿ ಯೂನಿವರ್ಸಿಟಿ ಸಿಬ್ಬಂದಿ ಮಾಡಿರೋ ಎಡವಟ್ಟಿನಿಂದಾಗಿ ಅದನ್ನು ಸರಿಪಡಿಸಲು ವಿದ್ಯಾರ್ಥಿ ಕೃಷ್ಣ ಕುಮಾರ್ ರಾಯ್ ತಿಂಗಳುಗಟ್ಟಲೆ ಅಲೆದಿದ್ದಾನೆ. ವಿದ್ಯಾರ್ಥಿ ಪರೀಕ್ಷೆಯ ಫಾರ್ಮ್ ಅನ್ನು ಆನ್ ಲೈನ್ ನಲ್ಲಿ ಭರ್ತಿ ಮಾಡಿದ್ದ.

ಆ ಸೈಬರ್ ಕೆಫೆಯಲ್ಲಿ ಈ ರೀತಿ ಆಗಿರಬಹುದು ಅಂತಾ ಯೂನಿವರ್ಸಿಟಿ ಜಾರಿಕೊಳ್ಳುವ ಪ್ರಯತ್ನ ಮಾಡಿದೆ. ಕೊನೆಗೂ ಖುದ್ದು ಪ್ರಾಂಶುಪಾಲರು ಪರಿಶೀಲನೆ ಮಾಡಿ ಸಿಬ್ಬಂದಿಯಿಂದಾದ ಪ್ರಮಾದವನ್ನು ಸರಿಪಡಿಸಿದ್ದಾರೆ. ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ಈ ಅಡ್ಮಿಟ್ ಕಾರ್ಡ್ ಮಾತ್ರ ಆನ್ ಲೈನ್ ನಲ್ಲಿ ಓಡಾಡಿಕೊಂಡಿದೆ.

English summary
If one goes by an admit card issued by a university in Bihar, it seems as though Lord Ganesha himself would be writing the examination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X