ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇರೆ ಕೆಲ್ಸ ನೋಡ್ಕೊಳ್ಳಿ: ತನ್ನ ಉದ್ಯೋಗಿಗಳಿಗೆ ನೀರವ್ ಮೋದಿ ಈಮೇಲ್

|
Google Oneindia Kannada News

ಮುಂಬೈ, ಫೆ 21: ಭಾರತೀಯ ಸ್ಟೇಟ್ ಬ್ಯಾಂಕ್ ನಂತರ ದೇಶದ ಸಾರ್ವಜನಿಕ ವಲಯದ ಎರಡನೇ ಅತಿದೊಡ್ಡ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿ ಮುಂಡಾಯಿಸಿ, ದೇಶ ಬಿಟ್ಟು ಹೋಗಿರುವ ನೀರವ್ ಮೋದಿ, ತನ್ನ ಉದ್ಯೋಗಿಗಳಿಗೆ ಈಮೇಲ್ ಬರೆದಿದ್ದಾರೆ.

ಮಂಗಳವಾರ (ಫೆ 21) ತನ್ನ ಸಂಸ್ಥೆಯ ಉದ್ಯೋಗಿಗಳಿಗೆ ಮೇಲ್ ಮೂಲಕ ಮನವಿ ಮಾಡಿರುವ ನೀರವ್, ಬೇರೆ ಕೆಲಸ ನೋಡಿಕೊಳ್ಳಿ. ತನಿಖಾ ಸಂಸ್ಥೆಗಳು ನನ್ನ ಎಲ್ಲಾ ಬ್ಯಾಂಕ್ ಅಕೌಂಟ್ ಗಳನ್ನು ಜಪ್ತಿಮಾಡಿದೆ. ಹಾಗಾಗಿ, ಸಂಬಳ ಕೊಡುವ ಸ್ಥಿತಿಯಲ್ಲಿಲ್ಲ ಎಂದು ಮೇಲ್ ಮೂಲಕ ತಿಳಿಸಿದ್ದಾರೆ.

"The near future is uncertain" ಎನ್ನುವ ಶೀರ್ಷಿಕೆ ಮೂಲಕ ಬರೆದಿರುವ ಮೇಲ್ ನಲ್ಲಿ, ನಮ್ಮ ಕಂಪನಿಯ ಭವಿಷ್ಯ ಡೋಲಾಯಮಾನವಾಗಿದೆ. ಸಿಬಿಐ ಮತ್ತು ಜಾರಿ ನಿದೇಶನಾಲಯ ನಮ್ಮ ಕಂಪನಿಯ ಆಸ್ತಿಗಳನ್ನು ವಶಕ್ಕೆ ಪಡೆದುಕೊಂಡಿದೆ.

Look for other jobs, Nirav Modi emial to employees after PNB fraud

ಆದಾಯ ತೆರಿಗೆ ಇಲಾಖೆ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ನನ್ನ ಎಲ್ಲಾ ಉದ್ಯೋಗಿಗಳು ಬೇರೆ ಕೆಲಸ ಹುಡುಕಿಕೊಂಡು ಹೋಗುವುದು ಸೂಕ್ತ ಎಂದು ನೀರವ್ ಮೋದಿ ಬರೆದಿರುವ ಈಮೇಲ್ ಉಲ್ಲೇಖಿಸಿ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಈ ನಡುವೆ ಜ್ಯುವೆಲ್ಲರಿ ಉದ್ಯಮಿ ನೀರವ್ ಮೋದಿಗೆ ಸೇರಿದ 29 ಆಸ್ತಿಗಳನ್ನು ಐಟಿ ಇಲಾಖೆ ಜಪ್ತಿ ಮಾಡಿದ್ದು, ಅದರಲ್ಲಿ ಕೇವಲ 6 ಫ್ಲ್ಯಾಟ್ ಗಳ ಬೆಲೆಯೇ 900 ಕೋಟಿ ರೂಪಾಯಿ ದಾಟುತ್ತದೆ ಎಂದು ಐಟಿ ಇಲಾಖೆ ಅಂದಾಜಿಸಿದೆ.

ನೀರವ್ ಮೋದಿ ದಂಪತಿ ಇನ್ನೂ 4 ಗ್ರಾಸ್ವೆನರ್ ಹೌಸ್ ಗಳನ್ನು ಹೊಂದಿದ್ದು, ಇತರ ಹಲವು ದುಬಾರಿ ಆಸ್ತಿಗಳನ್ನು ಹೊಂದಿದ್ದಾರೆ ಎನ್ನುವ ಮಾಹಿತಿ ತನಿಖೆಯ ವೇಳೆ ತಿಳಿದು ಬಂದಿದೆ.

ನಾಲ್ಕು ವರ್ಷದ ಹಿಂದೆ ನೀವು ಮಾಡಿದ ಆಣೆ, ಪ್ರಮಾಣಗಳು ಜನರಿಗಿನ್ನೂ ನೆನಪಿನಲ್ಲಿವೆ. ಆದರೆ ನಾಲ್ಕು ವರ್ಷದ ಹಿಂದೆ ನಿಮ್ಮನು ನಂಬಿದ್ದ ಜನರ್ಯಾರೂ ಈಗ ನಿಮ್ಮನ್ನು ನಂಬುತ್ತಿಲ್ಲ. ಮುಂದಿನ ಬಾರಿ ವಿದೇಶಕ್ಕೆ ಹೋದಾಗ ನೀರವ್ ಮೋದಿಯನ್ನು ಭಾರತಕ್ಕೆ ಕರೆದುಕೊಂಡು ಬನ್ನಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದರು.

English summary
Businessman Nirav Modi on Tuesday (Feb 21) wrote an email to his employees in India saying they should look for other jobs because he will not be able to pay them, with investigative agencies seizing the stock of all his companies and the income tax department freezing their bank accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X