ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿನಾಕಾ ರಾಕೆಟ್‌ ವ್ಯವಸ್ಥೆ ಯಶಸ್ವಿ ಪರೀಕ್ಷೆ ನಡೆಸಿದ ಡಿಆರ್‌ಡಿಒ

|
Google Oneindia Kannada News

ನವದೆಹಲಿ, ನವೆಂಬರ್ 04: ಗಡಿಯಲ್ಲಿ ಚೀನಾ ಎಷ್ಟೇ ಉಪಟಳ ನೀಡುತ್ತಿದ್ದರೂ ಅದರೆಡೆ ಗಮನ ನೀಡದೆ ತಮ್ಮ ಗುರಿಯತ್ತ ಗಮನ ನೀಡಿ, ಡಿಆರ್‌ಡಿಒ ಪಿನಾಕಾ ರಾಕೆಟ್ ವ್ಯವಸ್ಥೆಯ ಯಶಸ್ವಿ ಪ್ರಯೋಗವನ್ನುಮಾಡಿ ಮುಗಿಸಿದೆ.

ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (ಡಿಆರ್ಡಿಒ) ಅಭಿವೃದ್ಧಿಪಡಿಸಿದ ಪಿನಾಕಾ ರಾಕೆಟ್ ಸಿಸ್ಟಮ್ನ ವರ್ಧಿತ ಆವೃತ್ತಿಯನ್ನು ಇಂದು ಒಡಿಶಾ ಕರಾವಳಿಯ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಿಂದ ಯಶಸ್ವಿಯಾಗಿ ಹಾರಾಟ ಪರೀಕ್ಷಿಸಲಾಗಿದೆ ಎಂದು ಡಿಆರ್‌ಡಿಒ ಟ್ವೀಟ್ ಮಾಡಿದೆ.

ಭಾರತೀಯ ವಾಯುಪಡೆ: ಮತ್ತೆ 3 ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ ಭಾರತೀಯ ವಾಯುಪಡೆ: ಮತ್ತೆ 3 ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ

ಆರ್‌ಡಿಒ ಒಡಿಶಾ ಕರಾವಳಿಯಲ್ಲಿ ಪಿನಾಕಾ ರಾಕೆಟ್ ವ್ಯವಸ್ಥೆಯ ಹೊಸ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.ಕಳೆದ ಎರಡು ತಿಂಗಳುಗಳಲ್ಲಿ ಭಾರತ ಹಲವಾರು ಕ್ಷಿಪಣಿಗಳ ಪರೀಕ್ಷೆ ನಡೆಸಿದೆ. ಮೇಲ್ಮೈಯಿಂದ ಮೇಲ್ಮೈಗೆ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್ ಹಾಗೂ ಹೊಸ ಆವೃತ್ತಿಯ ರುದ್ರಂ-1 ಕ್ಷಿಪಣಿ ಸೇರಿವೆ.

Long Range Pinaka Rocket System Test-Fired Off Odisha Coast

ಪಿನಾಕಾ ರಾಕೆಟ್ ವ್ಯವಸ್ಥೆಯ ವರ್ಧಿತ ಆವೃತ್ತಿಯು ಪ್ರಸ್ತುತ ಉತ್ಪಾದನೆಯಲ್ಲಿರುವ ಪಿನಾಕಾ ಎಂಕೆ-ಐ ರಾಕೆಟ್‌ಗಳನ್ನು ಬದಲಾಯಿಸುತ್ತದೆ ಎಂದು ಡಿಆರ್‌ಡಿಒ ಹೇಳಿದೆ. ಪಿನಾಕಾ ರಾಕೆಟ್‌ಗಳು ಸುಮಾರು 37 ಕಿ.ಮೀ ವ್ಯಾಪ್ತಿಯನ್ನು ಹೊಂದಿವೆ.

English summary
The DRDO on Wednesday said it successfully test-fired a new version of the Pinaka rocket system off the coast of Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X