ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕ ಚುನಾವಣೆ: ವಾಜಪೇಯಿ ಮಾರ್ಗದಲ್ಲಿ ಮೋದಿ

By Srinath
|
Google Oneindia Kannada News

ನವದೆಹಲಿ, ಫೆ. 25- ಮಹಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷದ ಸಿದ್ಧತೆ ಒಂದು ಹಂತಕ್ಕೆ ಬಂದಿದ್ದು ಇದೀಗ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನು ಎಲ್ಲಿಂದ ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಚಿಂತನೆ ನಡೆಸುತ್ತಿದೆ.

ಮೋದಿ ಸ್ಪರ್ಧೆ, ಸ್ವ ರಾಜ್ಯವಾದ ಗುಜರಾತಿನಲ್ಲೋ ಅಥವಾ ಬಿಜೆಪಿ ಪಕ್ಷದ ಹಿಂದುತ್ವ ನೆಲೆಯಾದ ಉತ್ತರ ಪ್ರದೇಶದಿಂದಲೋ? ಎಂಬುದು ಸದ್ಯದ ಪ್ರಶ್ನೆಯಾಗಿದೆ.

Lok Sabha election 2014- BJP PM candidate Narendra Modi may contest Lucknow or Ahmedabad constituency
ಅಹಮದಾಬಾದ್ ಸೇಫ್: ಅದಕ್ಕೂ ಮುನ್ನ ಮೋದಿ ಅವರ ಮನದ ಇಂಗಿತ ಏನು ಎಂದು ನೋಡಿದಾಗ ಗುಜರಾತಿನಿಂದಲೇ ನಿಲ್ಲುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಅಂದರೆ ಗುಜರಾತಿಂದ ಸ್ಪರ್ಧಿಸಿದರೆ ಪ್ರಚಾರಕ್ಕಾಗಿ ಹೆಚ್ಚು ಸಮಯ ವ್ಯಯ ಮಾಡುವ ಅಗತ್ಯವಿರುವುದಿಲ್ಲ. ಅದೇ ಸಮಯವನ್ನು ದೇಶದ ಇತರೆ ಕಡೆಗಳಲ್ಲಿ ಬೇರೆ ಅಭ್ಯರ್ಥಿಗಳ ಪ್ರಚಾರದಲ್ಲಿ ತೊಡಗಿಸಿಕೊಳ್ಳಬಹುದು ಎಂಬುದು ಮೋದಿ ಎಣಿಕೆಯಾಗಿದೆ.

ಆದರೆ ಪಕ್ಷದ ಲೆಕ್ಕಾಚಾರವೇ ಬೇರೆಯದ್ದಾಗಿದೆ. ಮೋದಿ ಉತ್ತರ ಪ್ರದೇಶದಲ್ಲಿ ನಿಂತರೆ 80 ಎಂಪಿ ಸೀಟುಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಬಿಜೆಪಿ ಅನಾಯಾಸವಾಗಿ 10 ಸ್ಥಾನಗಳು ಗೆಲ್ಲಲಿದೆ. ಉಳಿದ ಸ್ಥಾನಗಳಿಗೆ ಖಡಕ್ ಅಭ್ಯರ್ಥಿಗಳನ್ನು ನಿಲ್ಲಿಸುವ ಮೂಲಕ ಉತ್ತರಪ್ರದೇಶದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಬೇಕು ಎಂಬ ಲೆಕ್ಕಾಚಾರವಿದೆ.

ವಾಜಪೇಯಿ ಮಾರ್ಗದಲ್ಲಿ ಮೋದಿ:
ಕಳೆದ ನವೆಂಬರಿನಿಂದ ಪಕ್ಷ ಅರಿತುಕೊಂಡಿರುವ ಮತದಾರರ ನಾಡಿಮಿಡಿತ ಇದಾಗಿದೆ. ನವೆಂಬರಿನಲ್ಲಿ ಪಕ್ಷ ನಡೆಸಿದ್ದ ಮೊದಲ ಸಮೀಕ್ಷೆಯಿಂದ ಬಿಜೆಪಿಗೆ 40 ಸ್ಥಾನ ಬರಲಿದೆ ಎನ್ನಲಾಗಿತ್ತು. ಆದರೆ ಫೆಬ್ರವರಿಯಲ್ಲಿ ನಡೆದ ಆಂತರಿಕ ಸಮೀಕ್ಷೆಯ ಫಲಿತಾಂಶದ ಪ್ರಕಾರ ಪಕ್ಷವು 80ರ ಪೈಕಿ 60 ಸ್ಥಾನ ಗಳಿಸುವ ಸಾಧ್ಯತೆಯಿದೆ.

ಅಂದಹಾಗೆ, ನಾಳಿದ್ದು ಗುರುವಾರ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ಸೇರುತ್ತಿದೆ. ಆ ಸಂದರ್ಭದಲ್ಲಿ ಮೋದಿ ಹೆಸರನ್ನು ಪ್ರಕಟಿಸುತ್ತದಾ? ಎಂಬುದು ಕಾದುನೋಡಬೇಕಿದೆ. ಇನ್ನು, ಮಾರ್ಚ್ 3ರಂದು ಮೋದಿ ಲಖ್ನೋದಲ್ಲಿ ಸಮಾವೇಶ ನಡೆಸಲಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಗೆ ಲಖ್ನೋ ಲೋಕಸಭಾ ಕ್ಷೇತ್ರ ಬಹಳ ಮಹತ್ವದ್ದಾಗಿದೆ. ಪಕ್ಷದ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಇಲ್ಲಿಂದಲೇ ಸ್ಪರ್ಧಿಸಿದ್ದರು. ಮುಂದೆ ಅವರು ಪ್ರಧಾನಿಯೂ ಆದರು. ಮೋದಿ ಸಹ ಅದೇ ಹಾದಿಯಲ್ಲಿ ಸಾಗಲಿ ಎಂಬುದು ಬಿಜೆಪಿಯ ಸಚಿಂತನೆಯಾಗಿದೆ.

English summary
Lok Sabha polls 2014: BJP PM candidate Narendra Modi may contest Lucknow or Ahmedabad constituency. Party leaders indicated that Modi is inclined to contest from Gujarat as that would mean no worries about his home turf. He could rather devote more time to campaigning across the country. But Modi's presence in UP would mean 10 more seats for BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X