ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿನಲ್ಲಿ ಬಾಡಿಗೆ ತಾಯ್ತನ ಮಸೂದೆ ತಿದ್ದುಪಡಿಯೊಂದಿಗೆ ಅಂಗೀಕಾರ

|
Google Oneindia Kannada News

ನವದೆಹಲಿ, ಡಿಸೆಂಬರ್ 19: ಬಾಡಿಗೆ ತಾಯ್ತನ(ತಿದ್ದುಪಡಿ) ಕಾಯ್ದೆ 2016 ಲೋಕಸಭೆಯಲ್ಲಿ ಇಂದು ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಮಂಡಿಸಿ, ಇದೊಂದು ಐತಿಹಾಸಿಕ ಕ್ಷಣ ಎಂದಿದ್ದಾರೆ.

ಬಾಡಿಗೆ ತಾಯ್ತನ: ಅನುಮತಿ ಇನ್ಮುಂದೆ ಕಡ್ಡಾಯ ಬಾಡಿಗೆ ತಾಯ್ತನ: ಅನುಮತಿ ಇನ್ಮುಂದೆ ಕಡ್ಡಾಯ

ಬಾಡಿಗೆ ತಾಯ್ತನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದನ್ನು ನಿರ್ಬಂಧಿಸುವುದು ಈ ಕಾಯ್ದೆಯಿಂದ ಸಾಧ್ಯವಾಗಲಿದೆ. ಮಸೂದೆ ಮಂಡನೆಯಾಗಿ ಅಂಗೀಕಾರವಾಗುವುದಕ್ಕೂ ಮುನ್ನ ಕಾಂಗ್ರೆಸ್ ಹಾಗೂ ಎಐಎಡಿಎಂಕೆ ಸದಸ್ಯರು ಭಾರಿ ಪ್ರತಿಭಟನೆ ಮಾಡಿ ಸದನದ ಕಲಾಪಕ್ಕೆ ಅಡ್ಡಿ ಪಡಿಸಿದ ಘಟನೆ ನಡೆಯಿತು.

ಬಾಡಿಗೆ ತಾಯಿ ಎಂದರೆ ಮಹಿಳೆ ಯೊಬ್ಬಳು ಕೃತಕ ಗರ್ಭಧಾರಣೆ ಮೂಲಕ ಯಾವುದೇ ವ್ಯಕ್ತಿ ಅಥವಾ ದಂಪತಿಗಾಗಿ ಮಗುವನ್ನು ಹೆತ್ತುಕೊಡುವುದು.

Lok Sabha passes Surrogacy (Regulation) Bill amid disruptions

ಭಾರತದಲ್ಲಿ ಬಾಡಿಗೆ ತಾಯ್ತನ ಮಾರುಕಟ್ಟೆಯು 1,000 ದಿಂದ 5,000 ಕೋಟಿ ರು. ವಹಿವಾಟು ಕಾಣುತ್ತಿದೆ. ಜರ್ಮನಿ, ಫ್ರಾನ್ಸ್, ಪೋಲೆಂಡ್, ಜೆಕ್ ಗಣರಾಜ್ಯ, ಇಟಲಿ, ನೆದರ್‌ಲೆಂಡ್, ಬೆಲ್ಜಿಯಂ ಮತ್ತು ಸ್ಪೇನ್ ರಾಷ್ಟ್ರಗಳ ದೂತಾವಾಸ ನಿರ್ದೇಶನಾಲಯಗಳು ಮುಂಬೈಯಲ್ಲಿ 10 ಕ್ಕೂ ಹೆಚ್ಚು ಗರ್ಭಧಾರಣೆ ಕ್ಲಿನಿಕ್‌ಗಳನ್ನು ಗುರುತಿಸಿದ್ದು, ತನ್ನ ನಾಗರಿಕರಿಗೆ ಬಾಡಿಗೆ ತಾಯ್ತನ ನೆರವು ನೀಡದಂತೆ ಸೂಚಿಸಿದೆ' ಎಂದು ಗರ್ಭಧಾರಣೆಯೊಂದರ ವೈದ್ಯರು ತಿಳಿಸಿದ್ದಾರೆ.

 ಮೆಟರ್ನಿಟಿ ಬಿಲ್ ಪ್ರಸವ ಸುಸೂತ್ರ : ಹೆರಿಗೆ ರಜಾ 6 ತಿಂಗಳಿಗೆ ವಿಸ್ತರಣೆ ಮೆಟರ್ನಿಟಿ ಬಿಲ್ ಪ್ರಸವ ಸುಸೂತ್ರ : ಹೆರಿಗೆ ರಜಾ 6 ತಿಂಗಳಿಗೆ ವಿಸ್ತರಣೆ

ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ತಾಯ್ತನ ಒಪ್ಪಂದ ಅನೇಕ ಯುರೋಪ್ ರಾಷ್ಟ್ರಗಳಲ್ಲೂ ಕಾನೂನುಬಾಹಿರವಾಗಿದೆ. ಗಮನಾರ್ಹವೆಂದರೆ ಭಾರತದಲ್ಲಿಯೂ ಇದರ ಬಗ್ಗೆ ಯಾವುದೇ ಕಾನೂನು ಸ್ಪಷ್ಟವಾಗಿಲ್ಲ. ಆದರೆ ಇದರ ಅಗತ್ಯ ಬಹಳಷ್ಟಿದೆ ಎಂಬುದು ವೈದ್ಯಕೀಯ ಕ್ಷೇತ್ರದ ಅಭಿಪ್ರಾಯ.

English summary
A bill that bars commercial surrogacy and allows the process only by close relatives for "altruistic" reasons was passed by the Lok Sabha Wednesday with Health Minister J P Nadda terming the proposed legislation historic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X