ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕ ಸಮರ : ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಪ್ರಿಯಾ ದತ್ ಅಚ್ಚರಿಯ ಸೇರ್ಪಡೆ

|
Google Oneindia Kannada News

ನವದೆಹಲಿ, ಮಾರ್ಚ್ 14: ಲೋಕಸಭೆ ಚುನವಾಣೆ 2019ಗಾಗಿ ಕಾಂಗ್ರೆಸ್ ಪಕ್ಷವು ಎರಡನೇ ಪಟ್ಟಿಯನ್ನು ಬುಧವಾರ(ಮಾರ್ಚ್ 13)ದಂದು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಉತ್ತರ ಪ್ರದೇಶ ಕಾಂಗ್ರೆಸ್​ರಾಜ್ಯಾಧ್ಯಕ್ಷ ರಾಜ್​ಬಬ್ಬರ್​ಅವರಿಗೆ ಟಿಕೆಟ್ ಸಿಕ್ಕಿದ್ದರೆ, ಮಾಜಿ ಸಂಸದೆ ಪ್ರಿಯಾ ದತ್ ಗೆ ರಾಹುಲ್ ಗಾಂಧಿ ಅವರು ಟಿಕೆಟ್ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಎರಡನೇ ಪಟ್ಟಿಯಲ್ಲಿ ಮಹಾರಾಷ್ಟ್ರದ 5 ಹಾಗೂ ಉತ್ತರ ಪ್ರದೇಶದ 16 ಸೇರಿದಂತೆ 21 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಮಾರ್ಚ್ 07ರಂದು ಮೊದಲ ಪಟ್ಟಿಯಲ್ಲಿ ಉತ್ತರಪ್ರದೇಶದ 11 ಹಾಗೂ ಗುಜರಾತಿನ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು.

ಕಾಂಗ್ರೆಸ್ಸಿನ ಕಾರ್ಯದರ್ಶಿ ಸ್ಥಾನದಿಂದ ಮಾಜಿ ಸಂಸದೆ ಪ್ರಿಯಾದತ್ ವಜಾಕಾಂಗ್ರೆಸ್ಸಿನ ಕಾರ್ಯದರ್ಶಿ ಸ್ಥಾನದಿಂದ ಮಾಜಿ ಸಂಸದೆ ಪ್ರಿಯಾದತ್ ವಜಾ

ಈ ಬಾರಿ ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದರು. 2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಮತ್ತು ನಂತರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲುಗಳನ್ನು ಟೀಕಿಸಿದ್ದ ಪ್ರಿಯಾ ಅವರು ರಾಹುಲ್ ಬಳಗದ ವಿರೋಧ ಕಟ್ಟಿ ಕೊಂಡಿದ್ದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ)ಯು ಮೂಲ ಕಾಂಗ್ರೆಸ್ಸಿಗರು, ಪಕ್ಷದ ನಿಷ್ಠಾವಂತರಿಗೆ ಸರಿಯಾದ ಮನ್ನಣೆ ನೀಡುತ್ತಿಲ್ಲ ಎಂದು ಪ್ರಿಯಾ ಅವರು ದನಿಯೆತ್ತಿದ್ದರು.

 ಶಿವಸೇನಾ ಸೇರುವ ನಿರೀಕ್ಷೆಯಿತ್ತು

ಶಿವಸೇನಾ ಸೇರುವ ನಿರೀಕ್ಷೆಯಿತ್ತು

ಮಾಜಿ ಸಂಸದ, ದಿವಂಗತ ಸುನೀಲ್ ದತ್ ಅವರ ಪುತ್ರಿ, ನಟ ಸಂಜಯ್ ದತ್ ಅವರ ಸೋದರಿ ಪ್ರಿಯಾ ಅವರು ಕಾಂಗ್ರೆಸ್ ಕಾರ್ಯದರ್ಶಿ ಸ್ಥಾನದಿಂದ ವಜಾಗೊಂಡು, ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಬಳಿಕ ಅವರನ್ನು ಸೆಳೆಯಲು ಶಿವಸೇನಾ ಯತ್ನಿಸಿತ್ತು.

ಮುಂಬೈ ವಾಯುವ್ಯ ಹಾಗೂ ಕೇಂದ್ರ ಕ್ಷೇತ್ರದಿಂದ ಗೆದ್ದು ಲೋಕಸಭಾ ಸದಸ್ಯೆಯಾಗಿದ್ದ ಪ್ರಿಯಾ ಅವರು 2014ರಲ್ಲಿ ಬಿಜೆಪಿಯ ಪೂನಮ್ ಮಹಾಜನ್ ವಿರುದ್ಧ 1.86 ಲಕ್ಷ ಅಂತರದ ಮತಗಳಿಂದ ಸೋಲು ಕಂಡಿದ್ದರು.

 ಮೊರಾದಾಬಾದ್​ನಿಂದ ರಾಜ್ ಬಬ್ಬರ್ ಸ್ಪರ್ಧೆ

ಮೊರಾದಾಬಾದ್​ನಿಂದ ರಾಜ್ ಬಬ್ಬರ್ ಸ್ಪರ್ಧೆ

ಕಳೆದ ಬಾರಿ ಗಾಜಿಯಾಬಾದಿನಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ನಟ ಕಮ್ ರಾಜಕಾರಣಿ ರಾಜ್​ಬಬ್ಬರ್ ಅವರು ಈ ಬಾರಿ ಉತ್ತರ ಪ್ರದೇಶದ ಮೊರಾದಾಬಾದ್​ನಿಂದ ಸ್ಪರ್ಧಿಸಲಿದ್ದಾರೆ. ಕಾನ್ಪುರದಿಂದ ಕೇಂದ್ರದ ಮಾಜಿ ಸಚಿವ ಶ್ರೀಪ್ರಕಾಶ್​ ಜೈಸ್ವಾಲ್, ಮುಂಬೈ ಉತ್ತರ-ಕೇಂದ್ರ ಕ್ಷೇತ್ರದಿಂದ ಪ್ರಿಯಾ ದತ್. ಮುಂಬೈ ದಕ್ಷಿಣದಿಂದ ಮಿಲಿಂದ್​ದಿಯೋರಾ ಸ್ಪರ್ಧಿಸಲಿದ್ದಾರೆ.

ಲೋಕಸಭೆ ಚುನಾವಣೆ: 15 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್‌ಲೋಕಸಭೆ ಚುನಾವಣೆ: 15 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್‌

 ವಲಸೆ ಬಂದವರಿಗೂ ಟಿಕೆಟ್ ಭಾಗ್ಯ

ವಲಸೆ ಬಂದವರಿಗೂ ಟಿಕೆಟ್ ಭಾಗ್ಯ

ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್​ಗೆ ಪಕ್ಷಾಂತರಗೊಂಡ ಸಾವಿತ್ರಿ ಬಾಯಿ ಪುಲೆ ಅವರಿಗೆ ಉತ್ತರ ಪ್ರದೇಶದ ಭರಿಯಾಚ್​ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ. ಬಿಎಸ್​ಪಿಯಿಂದ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಕೈಸರ್​ಜಹಾನ್​ ಸೀತಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ. ಓಂವತಿ ದೇವಿ ಜಾತವ್ ಅವರಿಗೆ ನಾಗಿನಾ ಕ್ಷೇತ್ರ, ರಾಕೇಶ್ ಸಾಚನ್ ಅವರಿಗೆ ಫತೇಪುರ್ ನಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಿಗ್ ಶಾಕ್: ಸಂಸದೆ ರಾಜೀನಾಮೆಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಿಗ್ ಶಾಕ್: ಸಂಸದೆ ರಾಜೀನಾಮೆ

ಹಲವು ಪ್ರಮುಖರಿಗೆ ಟಿಕೆಟ್ ಸಿಕ್ಕಿದೆ

ಉತ್ತರ ಪ್ರದೇಶ ಪೂರ್ವ ವಿಭಾಗದ ಉಸ್ತುವಾರಿ ವಹಿಸಿಕೊಂಡಿರುವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಆಪ್ತ ವಲಯದಲ್ಲಿರುವ ಲಲಿತೇಶ್​ಪಾಟಿ ತ್ರಿಪಾಠಿಗೆ ಮಿರ್ಜಾಪುರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್​ ನೀಡಲಾಗಿದೆ. ಕಿಸಾನ್ ಕಾಂಗ್ರೆಸ್ಸಿನ ಮುಖ್ಯಸ್ಥ ನಾನಾ ಪಟೋಲೆ ಅವರಿಗೆ ನಾಗ್ಪುರದಲ್ಲಿ ಹಾಲಿ ಸಂಸದ, ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಸ್ಪರ್ಧಿಸಲು ಸೂಚಿಸಲಾಗಿದೆ.

 ಹಲವು ಮೀಸಲು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ

ಹಲವು ಮೀಸಲು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ

ಉತ್ತರಪ್ರದೇಶದ ಹಲವು ಮೀಸಲು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಮಂಜರಿ ರಾಹಿ(ಮಿಸ್ರಿಖ್), ರಾಮಶಂಕರ್ ಭಾರ್ಗವ (ಮೊಹನ್ ಲಾಲ್ ಗಂಜ್), ರತ್ನಾ ಸಿಂಗ್(ಪ್ರತಾಪ್ ಘರ್), ಪರ್ವೆಜ್ ಖಾನ್ (ಸಂತ್ ಕಬೀರ್ ನಗರ್), ಕುಶ್ ಸೌರಭ್ (ಬಾಸ್ ಗಾಂವ್), ಪಂಕಜ್ ಸೋನ್ಕರ್ (ಲಾಲ್ ಗಜ್), ಭಾಗ್ವತಿ ಪ್ರಸಾದ್ ಚೌಧರಿ(ರಾಬರ್ಟ್ಸ್ ಗಂಜ್)

English summary
The Congress on Wednesday released the second list of 21 candidates for the upcoming Lok Sabha elections 2019. Among the 21 names announced are Priya Dutt and Raj Babbar who would contest from Mumbai North-Central, Maharashtra, and Moradabad, Uttar Pradesh, respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X