ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ: 15 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್‌

|
Google Oneindia Kannada News

ನವದೆಹಲಿ, ಮಾರ್ಚ್‌ 07: ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್‌ನ 15 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ. ಗುಜರಾತ್ ಮತ್ತು ಉತ್ತರ ಪ್ರದೇಶದ 15 ಕ್ಷೇತ್ರಗಳ ಅಭ್ಯರ್ಥಿಗಳಷ್ಟೆ ಪಟ್ಟಿಯಲ್ಲಿದ್ದಾರೆ.

ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂಬ ಸುದ್ದಿಗಳಿಗೆ ತೆರೆ ಎಳೆದಿರುವ ಸೋನಿಯಾ ಗಾಂಧಿ ಅವರು ತಮ್ಮ ಕ್ಷೇತ್ರ ರಾಯ್‌ಬರೇಲಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ತಮ್ಮ ಸ್ವಕ್ಷೇತ್ರ ಅಮೇಥಿಯಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ.

ಲೋಕಸಭಾ ಚುನಾವಣೆ : ಕರ್ನಾಟಕ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಲೋಕಸಭಾ ಚುನಾವಣೆ : ಕರ್ನಾಟಕ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಪ್ರಸ್ತುತ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಉತ್ತರ ಪ್ರದೇಶ ಮತ್ತು ಗುಜರಾತ್‌ನ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಮಾತ್ರವೇ ಇದೆ. 11 ಉತ್ತರ ಪ್ರದೇಶದ ಹಾಗೂ 4 ಗುಜರಾತ್‌ನ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ.

Lok sabha elections Congress releases 1st list of 15 candidate

ಗುಜರಾತ್‌ನ ಅಹ್ಮದಾಬಾದ್ ಪಶ್ಚಿಮದಿಂದ ರಾಜು ಮರಮ್ವಾರ್, ಆನಂದ್ ಕ್ಷೇತ್ರದಿಂದ ಭರತ್‌ಸಿಂಗ್.ಎಂ.ಸೋಲಂಕಿ, ವಡೋದರಾದಿಂದ ಶರದ್ ಪಟೇಲ್, ಚೊಟ್ಟಾ ಉದಯ್‌ಪುರದಿಂದ ರಂಜಿತ್ ಮೋಹನ್ ಸಿಂಗ್ ರಾತ್ವಾ ಸ್ಪರ್ಧಿಸುತ್ತಿದ್ದಾರೆ.

ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಸೋನಿಯಾ ಗಾಂಧಿ, ಅಮೇಥಿಯಿಂದ ರಾಹುಲ್ ಗಾಂಧಿ, ಸಹರನ್‌ಪುರದಿಂದ ಇಮ್ರಾನ್ ಮಸೂದ್, ಬದುವನ್ ಕ್ಷೇತ್ರದಿಂದ ಸಲೀಂ ಇಕ್ಬಾಲ್ ಶೇರ್ವಾನಿ, ದಹುರಾವ್ರಾ ಕ್ಷೇತ್ರದಿಂದ ಜಿತಿನ್ ಪ್ರಸಾದ್, ಉನ್ನಾವೋ ಇಂದ ಮಹಿಳೆ ಅನ್ನು ಟಂಡನ್, ಫರ್ರೂಕಾಬಾದ್‌ ನಿಂದ ಸಲ್ಮಾನ್ ಖುರ್ಷಿದ್, ಅಕ್ಬರ್‌ಪುರದಿಂದ ರಾಜಾರಾಂ ಪಾಲ್, ಜಲೂನ್‌ನಿಂದ ಬ್ರಿಜ್ ಲಾಲ್ ಕಬ್ರಿ, ಫೈಜಾಬಾದ್‌ನಿಂದ ನಿರ್ಮಲ್ ಖಾತ್ರಿ, ಖುಷಿ ನಗರದಿಂದ ಆರ್‌.ಪಿ.ಎನ್.ಸಿಂಗ್ ಅವರು ಸ್ಪರ್ಧಿಸುತ್ತಿದ್ದಾರೆ.

English summary
Congress Thursday released the first list of 15 candidates for Lok Sabha elections 2019. Congress President Rahul Gandhi and former party president Sonia Gandhi are in the list of 11 candidates from Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X