ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ ಸಮೀಕ್ಷೆ: ದೀದಿಗೆ ಕಠಿಣ ಸವಾಲೆಸೆಯಲಿದೆ ಮೋದಿ ಬಳಗ

|
Google Oneindia Kannada News

ನವದೆಹಲಿ, ಫೆಬ್ರವರಿ 14: ಸಿಬಿಐ ವಿವಾದದ ಬಳಿಕ ಇಡೀ ದೇಶದ ಗಮನವನ್ನು ತನ್ನ ಕಡೆಗೆ ಸೆಳೆದುಕೊಂಡಿರುವ ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯ ಬಳಿಕವೂ ದೀದಿ ಮಮತಾ ಬ್ಯಾನರ್ಜಿಯ ಪಾರಮ್ಯ ಮುಂದುವರಿಯಲಿದೆ ಎಂದು ನ್ಯೂಸ್‌ ನೇಷನ್ ಸಮೀಕ್ಷೆ ತಿಳಿಸಿದೆ.

ಎಡರಂಗದ ಪ್ರಭಾವಳಿ ದಟ್ಟವಾಗಿರುವ ಈ ಕೋಟೆಗೆ ಸವಾಲು ಹಾಕಿರುವ ಬಿಜೆಪಿ, ಅದನ್ನು ದೊಡ್ಡಮಟ್ಟದಲ್ಲಿ ಭೇದಿಸಲು ಸಾಧ್ಯವಾಗದೆ ಇದ್ದರೂ, ತನ್ನ ಪಾಲನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

ನ್ಯೂಸ್ ನೇಷನ್ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 31 ಸೀಟುಗಳನ್ನು ತನ್ನದಾಗಿಸಿಕೊಳ್ಳಲಿದೆ. ಹಿಂದಿನ ಚುನಾವಣೆಯಲ್ಲಿ ಕೇವಲ ಎರಡು ಸೀಟುಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ ಏಳು ಕ್ಷೇತ್ರಗಳಲ್ಲಿ ಜಯಭೇರಿ ಮೊಳಗಿಸುವ ಮೂಲಕ ಎಡಪಂಥೀಯ ಸಿದ್ಧಾಂತದ ನೆಲದಲ್ಲಿ ತನ್ನ ಬೇರನ್ನು ಬಲಗೊಳಿಸಿಕೊಳ್ಳಲಿದೆ. ಇನ್ನು ಕಾಂಗ್ರೆಸ್ ಕೇವಲ ಎರಡು ಸೀಟುಗಳನ್ನು ಪಡೆದುಕೊಳ್ಳಲಿದೆ. ಎಡಪಕ್ಷ ಕೂಡ ಕೇವಲ ಎರಡು ಸೀಟುಗಳನ್ನಷ್ಟೇ ಜಯಿಸಲಿದೆ.

ರಾಜಸ್ಥಾನದ ಸಮೀಕ್ಷೆ: ಲೋಕಸಭೆ ಸಮರದಲ್ಲಿ ಕೇಸರಿ ಪಡೆಗೆ ಜಯರಾಜಸ್ಥಾನದ ಸಮೀಕ್ಷೆ: ಲೋಕಸಭೆ ಸಮರದಲ್ಲಿ ಕೇಸರಿ ಪಡೆಗೆ ಜಯ

ಸಮೀಕ್ಷೆ ಪ್ರಕಾರ ಟಿಎಂಸಿ ಶೇ 36ರಷ್ಟು ಮತಗಳನ್ನು ಪಡೆದುಕೊಳ್ಳಲಿದೆ. ಶೇ 23ರಷ್ಟು ಮತಗಳು ಬಿಜೆಪಿ ಪಾಲಾಗಲಿದೆ. ಎಡಪಕ್ಷವು ಶೇ 26ರಷ್ಟು ಮತ ಗಳಿಸಲಿದೆ. ಇನ್ನು ಶೇ 7ರಷ್ಟು ಮತಗಳು ಮಾತ್ರ ಕಾಂಗ್ರೆಸ್ ಪಾಲಿಗೆ ದೊರಕಲಿವೆ.

Array

ಸೀಟು ಹಂಚಿಕೆ ಎಷ್ಟೆಷ್ಟು?

ತೃಣಮೂಲ ಕಾಂಗ್ರೆಸ್: 29-33
ಕಾಂಗ್ರೆಸ್: 1-3
ಬಿಜೆಪಿ: 5-9
ಸಿಪಿಐ (ಎಂ): 1-3

ನ್ಯೂ ನೇಷನ್ ಸಮೀಕ್ಷೆ : ರಾಜಸ್ಥಾನದಲ್ಲಿ ಮೋದಿಗೇ ಜೈ, ಗಾಂಧಿಗೆ ಬೈನ್ಯೂ ನೇಷನ್ ಸಮೀಕ್ಷೆ : ರಾಜಸ್ಥಾನದಲ್ಲಿ ಮೋದಿಗೇ ಜೈ, ಗಾಂಧಿಗೆ ಬೈ

ಮೋದಿಯದ್ದೇ ಮೇಲುಗೈ

ಪ್ರಧಾನಿ ಯಾರಾಗಬೇಕು ಎಂಬ ಪ್ರಶ್ನೆಗೆ ಪಶ್ಚಿಮ ಬಂಗಾಳದ ಜನರು ನರೇಂದ್ರ ಮೋದಿ ಅವರ ಕಡೆಗೇ ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ.

ಶೇ 31ರಷ್ಟು ಮಂದಿ ಮೋದಿಯೇ ಪ್ರಧಾನಿಯಾಗಬೇಕು ಎಂದಿದ್ದರೆ ಶೇ 17ರಷ್ಟು ಮಂದಿ ರಾಹುಲ್ ಗಾಂಧಿ ಉತ್ತಮ ಪ್ರಧಾನಿಯಾಗಬಲ್ಲರು ಎಂದಿದ್ದಾರೆ. ಶೇ 29ರಷ್ಟು ಮಂದಿ ಬೇರೆ ಅಭ್ಯರ್ಥಿಗಳ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯಾವ ಪಕ್ಷ ಸಮಸ್ಯೆ ಬಗೆಹರಿಸಬಲ್ಲದು?

ಯಾವ ಪಕ್ಷವು ನಿಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು ಎಂಬ ಪ್ರಶ್ನೆಗೆ ಕೂಡ ಬಂಗಾಳದ ಜನತೆ ಟಿಎಂಸಿಯನ್ನು ಆಯ್ದುಕೊಂಡಿದ್ದಾರೆ.

ತೃಣಮೂಲ ಕಾಂಗ್ರೆಸ್: 36%
ಕಾಂಗ್ರೆಸ್: 8%
ಬಿಜೆಪಿ: 21%
ಸಿಪಿಐ (ಎಂ): 27%
ಇತರೆ: 3%

ಟಿಎಂಸಿ ಆಡಳಿತ ತೃಪ್ತಿ ತಂದಿದೆಯೇ?

ಕೇಂದ್ರದಲ್ಲಿನ ಬಿಜೆಪಿ ಆಡಳಿತದ ಬಗ್ಗೆ ಬಹುಪಾಲು ಅಂದರೆ, ಶೇ 51ರಷ್ಟು ಮಂದಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಶೇ 32ರಷ್ಟು ಮಂದಿಗೆ ಮೋದಿ ಆಡಳಿತ ಖುಷಿ ನೀಡಿದೆ. ಇನ್ನು ಶೇ 17ರಷ್ಟು ಮಂದಿ ಪ್ರತಿಕ್ರಿಯೆ ನೀಡಿಲ್ಲ.

ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್ ಆಡಳಿತ ತೃಪ್ತಿ ನೀಡಿದೆಯೇ ಎಂಬ ಪ್ರಶ್ನೆಗೆ ಟಿಎಂಸಿ ಹಿನ್ನಡೆ ಅನುಭವಿಸಿದೆ. ಶೇ 40ರಷ್ಟು ಮಂದಿ ಟಿಎಂಸಿ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೇ 41ರಷ್ಟು ಮಂದಿ ಟಿಎಂಸಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಶೇ 19ರಷ್ಟು ಮಂದಿ ಗೊಂದಲ ವ್ಯಕ್ತಪಡಿಸಿದ್ದಾರೆ.

ಮೀಸಲಾತಿ ಕೋಟಾದಿಂದ ನೆರವಾಗಲಿದೆಯೇ?

ಆರ್ಥಿಕವಾಗಿ ದುರ್ಬಲವಾಗಿರುವ ಎಲ್ಲ ಸಮುದಾಯದ ಜನರಿಗೂ ಶೇ 10ರಷ್ಟು ಮೀಸಲಾತಿ ನೀಡುವ ಬಿಜೆಪಿ ಸರ್ಕಾರದ ನಿರ್ಧಾರದಿಂದ 2019ರ ಚುನಾವಣೆಯಲ್ಲಿ ಅದಕ್ಕೆ ಲಾಭವಾಗಲಿದೆಯೇ ಎಂಬ ಪ್ರಶ್ನೆಯನ್ನು ಮುಂದಿಡಲಾಗಿತ್ತು. ಅದರಲ್ಲಿ ಶೇ 36ರಷ್ಟು ಮಂದಿ ಹೌದು ಎಂದರೆ, ಶೇ 49ರಷ್ಟು ಮಂದಿ ಇಲ್ಲ ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಶೇ 15ರಷ್ಟು ಮಂದಿ ಲಾಭ ನಷ್ಟದ ಬಗ್ಗೆ ಹೇಳಲಾಗದು ಎಂದಿದ್ದಾರೆ.

ರಾಹುಲ್ ಗಾಂಧಿ ರಫೇಲ್ ವಾಗ್ದಾಳಿ

ರಾಹುಲ್ ಗಾಂಧಿ ಅವರು ಮೋದಿ ಸರ್ಕಾರದ ಮೇಲೆ ಮಾಡಿರುವ ರಫೇಲ್ ಒಪ್ಪಂದ ಅವ್ಯವಹಾರ ಒಪ್ಪಂದ.

ರಾಹುಲ್ ಆರೋಪ ಗಂಭೀರವಾದದ್ದು: 43%
ಆರೋಪ ಅಧಾರರಹಿತ: 40%
ಏನೂ ಹೇಳಲು ಸಾಧ್ಯವಿಲ್ಲ: 17%

ಯಾವ ವಿಚಾರಕ್ಕೆ ಮಹತ್ವ

ಚುನಾವಣೆಯಲ್ಲಿ ಯಾವ ವಿಚಾರಗಳು ಪ್ರಮುಖವಾಗಿ ಪರಿಣಾಮ ಬೀರುತ್ತವೆ ಎಂಬ ಪ್ರಶ್ನೆಗೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ಮೂಲ ಸೌಕರ್ಯ: 19%
ನಿರುದ್ಯೋಗ: 17%
ಹಣದುಬ್ಬರ: 12%
ನಕ್ಸಲಿಸಂ: 11%
ಭ್ರಷ್ಟಾಚಾರ: 8%
ಅಕ್ರಮ ವಲಸೆ: 7%
ಸ್ಥಿರ ಸರ್ಕಾರ: 5%
ಕೋಮುವಾದ: 4%
ಇತರೆ: 8%

English summary
Lok Sabha Elections 2019: As per News Nation poll survey in West bengal, TMC is projected to win 31 seats, BJP may get 7 seats, Congress and CPI (M) likely to get 2 seats each.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X