ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ನೌ ಸಮೀಕ್ಷೆ : ದಕ್ಷಿಣ ಭಾರತದಲ್ಲಿ ಎನ್ಡಿಎ ವಿರುದ್ಧ ಯುಪಿಎಗೆ ಜಯ

|
Google Oneindia Kannada News

ನವದೆಹಲಿ, ಜನವರಿ 30: ಲೋಕಸಭೆ ಚುನಾವಣೆ 2019ಗೂ ಮುನ್ನ ಚುನಾವಣಾ ಪೂರ್ವ ಸಮೀಕ್ಷೆ, ಜನಾಭಿಪ್ರಾಯ ಸಂಗ್ರಹ ಜೋರಾಗಿ ನಡೆದಿದೆ.

ಟೈಮ್ಸ್ ನೌ ಹಾಗೂ ವಿಎಂಆರ್ ಸಂಸ್ಥೆಯು ಬುಧವಾರ(ಜನವರಿ 30) ಸಂಜೆ ಪ್ರಕಟಿಸಿದ ಸಮೀಕ್ಷಾ ವರದಿಯಂತೆ ದಕ್ಷಿಣ ಭಾರತದಲ್ಲಿ ಕಮಲ ಪಕ್ಷದ ಬಲ ಕ್ಷೀಣಿಸಿದೆ. ಎನ್ಡಿಎ ಮಿತ್ರ ಕೂಟದ ಮೇಲೆ ಯುಪಿಎ ಜಯಭೇರಿ ಬಾರಿಸುವ ಸಾಧ್ಯತೆ ಹೆಚ್ಚಿದೆ.

ಸುಪ್ರೀಂ ಕೋರ್ಟ್ ಮತ್ತು ಸಂಸತ್ತುಗಿಂತ ಪಿಎಂಒ ಹೆಚ್ಚು ವಿಶ್ವಾಸಾರ್ಹವಾಗಿದೆ. ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ, ತಮಿಳುನಾಡು ಗಳಲ್ಲಿ ರಾಹುಲ್ ಗಾಂಧಿ ಹೆಚ್ಚು ಜನಪ್ರಿಯ ನಾಯಕರಾಗಿದ್ದಾರೆ ಎಂದು ಐಪಿಎಸ್ಒಎಸ್ ಫಸ್ಟ್ ಪೋಸ್ಟ್ ನ್ಯಾಶನಲ್ ಟ್ರಸ್ಟ್ ಸಮೀಕ್ಷೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಫಸ್ಟ್ ನ್ಯೂಸ್ ಸಮೀಕ್ಷೆ: ಮೋದಿ-ಅತ್ಯಂತ ವಿಶ್ವಾಸಾರ್ಹ ರಾಜಕೀಯ ನಾಯಕಫಸ್ಟ್ ನ್ಯೂಸ್ ಸಮೀಕ್ಷೆ: ಮೋದಿ-ಅತ್ಯಂತ ವಿಶ್ವಾಸಾರ್ಹ ರಾಜಕೀಯ ನಾಯಕ

ಜನವರಿ ತಿಂಗಳಿನಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ದಕ್ಷಿಣ ಭಾರತದಲ್ಲಿ ಎನ್ಡಿಎಗೆ ಮಿತ್ರ ಪಕ್ಷಗಳ ಜತೆಗಿನ ಸಾಮರಸ್ಯ ಹದಗೆಟ್ಟಿರುವ ಕಾರಣ, ಈ ಬಾರಿ ಉತ್ತಮ ಫಲಿತಾಂಶ ಹೊರ ಹಾಕಲು ಸಾಧ್ಯವಾಗುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ತಮಿಳುನಾಡು 39 ಸ್ಥಾನ

ತಮಿಳುನಾಡು 39 ಸ್ಥಾನ

ತಮಿಳುನಾಡು 39
ಯುಪಿಎ : 35/39
ಎಐಎಡಿಎಂಕೆ: 4
ಬಿಜೆಪಿ ನೇತೃತ್ವದ ಎನ್ಡಿಎ: 0

2014ರಲ್ಲಿ ಯುಪಿಎ : 0; ಎಐಎಡಿಎಂಕೆ 37, ಬಿಜೆಪಿ ಪ್ಲಸ್ ಇತರರು ತಲಾ ಒಂದೊಂದುಸ್ಥಾನ ಗಳಿಸಿದ್ದರು.

ಟೈಮ್ಸ್‌ ನೌ ಸಮೀಕ್ಷೆ : ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸೀಟು?ಟೈಮ್ಸ್‌ ನೌ ಸಮೀಕ್ಷೆ : ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸೀಟು?

ಕೇರಳದಲ್ಲಿ 20 ಸ್ಥಾನ

ಕೇರಳದಲ್ಲಿ 20 ಸ್ಥಾನ

ಕೇರಳ 20 ಸ್ಥಾನ
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮ್ರೊಕ್ರಾಟಿಕ್ ಫ್ರಂಟ್ (ಯುಡಿಎಫ್) : 16
ಲೆಫ್ಟ್ ಡೆಮೋಕ್ರಾಟಿಕ್ ಫ್ರಂಟ್ : 3
ಬಿಜೆಪಿ : 1

2014ರಲ್ಲಿ ಯುಡಿಎಫ್ : 12; ಎಡಿಎಫ್ : 8

ಆಂಧ್ರಪ್ರದೇಶ 25 ಸ್ಥಾನ

ಆಂಧ್ರಪ್ರದೇಶ 25 ಸ್ಥಾನ

ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರು ಈ ಬಾರಿ ಕಿಂಗ್ ಮೇಕರ್ ಆಗುವ ಸಾಧ್ಯತೆ ಹೆಚ್ಚಿದೆ. ವೈಎಸ್ಸಾರ್ ಕಾಂಗ್ರೆಸ್ 23 ಸ್ಥಾನ ಗಳಿಸುವ ಸಾಧ್ಯತೆ ಕಂಡು ಬಂದಿದೆ. ತೆಲುಗು ದೇಶಂ ಪಕ್ಷಕ್ಕೆ ಕೇವಲ 2 ಸ್ಥಾನ ಲಭಿಸಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಈ ಬಾರಿ ಖಾತೆ ತೆರೆಯುವುದಿಲ್ಲ.

2014ರಲ್ಲಿ ಟಿಡಿಪಿ 15 ಸ್ಥಾನ, ವೈಎಸ್ಸಾರ್ ಕಾಂಗ್ರೆಸ್ 8, ಬಿಜೆಪಿ 2 ಗಳಿಸಿತ್ತು.

ತೆಲಂಗಾಣ 17 ಸ್ಥಾನ

ತೆಲಂಗಾಣ 17 ಸ್ಥಾನ

ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) 10 ಸ್ಥಾನ ಗಳಿಸುವ ಸಾಧ್ಯತೆಯಿದೆ. ಕಾಂಗ್ರೆಸ್ 5, ಬಿಜೆಪಿ ಪ್ಲಸ್ 1, ಇತರೆ 01. 2014ರಲ್ಲಿ ಟಿಆರ್ ಎಸ್ 12 ಸ್ಥಾನ ಗಳಿಸಿತ್ತು. ಕಾಂಗ್ರೆಸ್ 2 ಹಾಗೂ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ 1 ಹಾಗೂ ಇತರರಿಗೆ 2 ಸ್ಥಾನ ಸಿಕ್ಕಿತ್ತು.

ಕರ್ನಾಟಕದಲ್ಲಿ 28 ಸ್ಥಾನ

ಕರ್ನಾಟಕದಲ್ಲಿ 28 ಸ್ಥಾನ

ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರಿ ಪೈಪೋಟಿ ಏರ್ಪಡಲಿದ್ದು, ಈ ಬಾರಿ ಸಮಬಲದ ಹೋರಾಟದ ನಿರೀಕ್ಷೆಯಿದೆ. ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ, ಕಾಂಗ್ರೆಸ್ ನೇತೃತ್ವದ ಯುಪಿಎಗೆ ತಲಾ 14 ಸ್ಥಾನಗಳು ಲಭಿಸಲಿವೆ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 17 ಹಾಗೂ ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನ ಗಳಿಸಿತ್ತು.

ಇನ್ನಿತರ ಪುಟ್ಟ ರಾಜ್ಯಗಳ ಸಮೀಕ್ಷೆ

ಇನ್ನಿತರ ಪುಟ್ಟ ರಾಜ್ಯಗಳ ಸಮೀಕ್ಷೆ

ಪುದುಚೇರಿ 1
2014ರಲ್ಲಿ ಬಿಜೆಪಿ ಪ್ಲಸ್ ಗೆ ಸಂಸತ್ ಸ್ಥಾನ ಲಭಿಸಿತ್ತು. ಆದರೆ, ಈ ಬಾರಿ ಯುಪಿಎಗೆ ಏಕೈಕ ಸ್ಥಾನ ಲಭಿಸುವ ನಿರೀಕ್ಷೆಯಿದೆ.

* ಅಂಡಮಾನ್ ಹಾಗೂ ನಿಕೋಬಾರ್ 1 : ಬಿಜೆಪಿ ತನ್ನ ಸ್ಥಾನ ಉಳಿಸಿಕೊಳ್ಳಲಿದೆ

* ಗೋವಾ 2
ಆಡಳಿತಾರೂಢ ಬಿಜೆಪಿ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. 2014ರಲ್ಲಿ ಎರಡು ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. 2019ರಲ್ಲಿ ಬಿಜೆಪಿ 1, ಕಾಂಗ್ರೆಸ್ 1 ಗಳಿಸುವ ಸಾಧ್ಯತೆಯಿದೆ.

* ಡಮನ್ ಹಾಗೂ ಡಿಯು 1
ಕೇಂದ್ರಾಡಳಿತ ಪ್ರದೇಶ ಡಮನ್ ಹಾಗೂ ಡಿಯುನಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲಿದೆ.

* ದಾದ್ರಾ ನಗರ ಹವೇಲಿಯಲ್ಲಿನ 1 ಸ್ಥಾನವನ್ನು ಬಿಜೆಪಿ ಈ ಬಾರಿಯೂ ಗೆಲ್ಲುವ ನಿರೀಕ್ಷೆಯಿದೆ.

English summary
Lok Sabha Elections 2019: Times Now-VMR Opinion Poll: UPA likely to outshine NDA in South India. Times Now-VMR conducted an opinion poll to assess what the performance of each of the leading alliances would be in case the Parliamentary Elections were to be held today. The poll, conducted in January 2019, also tried to ascertain the choice for the prime minister post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X