ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬಿಪಿ ಸಮೀಕ್ಷೆ: ಎನ್‌ಡಿಎಗೆ 300, ಯುಪಿಎಗೆ 116, ಇತರೆ 127 ಸ್ಥಾನಗಳು

|
Google Oneindia Kannada News

ನವದೆಹಲಿ, ನವೆಂಬರ್ 01: ರಾಹುಲ್ ಗಾಂಧಿ ಏನೇ ಮಾಡಿದರೂ ಸಹ ಬಿಜೆಪಿ ನೇತೃತ್ವದ ಎನ್‌ಡಿಎಯು ಯುಪಿಎಗಿಂತಲೂ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ಎಬಿಪಿ ನ್ಯೂಸ್‌ನ 'ದೇಶ್‌ ಕಾ ಮೂಡ್' ಸಮೀಕ್ಷೆ ಹೇಳುತ್ತಿದೆ.

ಎನ್‌ಡಿಎ ಯೇತರ ಅಥವಾ ಎಡ ಪಕ್ಷಗಳು ಒಟ್ಟಾದರೂ ಸಹ ಎನ್‌ಡಿಎಯನ್ನು ಸೋಲಿಸಲು ಈ ಬಾರಿಯಂತೂ ಸಾಧ್ಯವಿಲ್ಲ, ಆದರೆ ಎನ್‌ಡಿಎಗೆ ಸನಿಹ ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳುತ್ತಿದೆ.

ಎಬಿಪಿ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಲ್ಲ ಕಿಮ್ಮತ್ತು ಎಬಿಪಿ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಲ್ಲ ಕಿಮ್ಮತ್ತು

ಸಮೀಕ್ಷೆ ಪ್ರಕಾರ ಎನ್‌ಡಿಎಯು ಸುಮಾರು 300 ಸ್ಥಾನಗಳನ್ನು ಗಳಿಸಿ ಮತ್ತೆ ಅಧಿಕಾರ ಹಿಡಿಯಲಿದೆ. ಅದೇ ಯುಪಿಎಯು 116 ಸೀಟುಗಳನ್ನು ಗೆಲ್ಲಲಿದೆ. ಇತರೆ ಪಕ್ಷಗಳೆಲ್ಲವೂ ಸೇರಿ 127 ಸೀಟುಗಳನ್ನು ಗೆಲ್ಲಲಿವೆ ಎಂದಿದೆ ಸಮೀಕ್ಷೆ.

Lok Sabha elections 2019 survey, NDA will come to power again

ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನಗಳಂತಹಾ ಬಿಜೆಪಿ ಪ್ರಭಾವದ ರಾಜ್ಯಗಳಲ್ಲಿ ಈ ಬಾರಿ ಬಿಜೆಪಿಗೆ ಸಣ್ಣ ಹೊಡೆತ ಬೀಳಲಿದೆ. ಆದರೆ ಪಶ್ಚಿಮ ಬಂಗಾಳ, ಕೇರಳ, ಒಡಿಶಾಗಳಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ತೋರಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.

ಎಬಿಪಿ ಸಮೀಕ್ಷೆ: ಉ.ಪ್ರ.ದಲ್ಲಿ ಎನ್ ಡಿಎ ತಡೆಯಲು ಮಹಾಘಟಬಂಧನ್ ಆಗಬೇಕುಎಬಿಪಿ ಸಮೀಕ್ಷೆ: ಉ.ಪ್ರ.ದಲ್ಲಿ ಎನ್ ಡಿಎ ತಡೆಯಲು ಮಹಾಘಟಬಂಧನ್ ಆಗಬೇಕು

ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನ್‌ ಬಿಜೆಪಿಗೆ ಪ್ರತಿರೋಧ ತೋರಲಿದೆ. ಬಿಜೆಪಿಯು ಮೈಮರೆತದ್ದೇ ಆದಲ್ಲಿ ಫಲಿತಾಂಶ ಬಂದ ನಂತರ ಒದ್ದಾಡಬೇಕಾಗುತ್ತದೆ ಎಂದು ಸಮೀಕ್ಷೆಯ ವರದಿ ಸಾರಾಂಶ ತಿಳಿಸುತ್ತದೆ.

ಎಬಿಪಿ ನ್ಯೂಸ್ ಸಮೀಕ್ಷೆ: ರಾಜಸ್ತಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಹವಾ ಎಬಿಪಿ ನ್ಯೂಸ್ ಸಮೀಕ್ಷೆ: ರಾಜಸ್ತಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಹವಾ

English summary
As per ABP news's desh ka mood survey NDA will come to power once again with 300 seats. UPA will get 116 seats and other parties will get 127 seats. Mahagatabandhan will give little threat to NDA but its not worry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X