ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ, ಶಾ ವಿರುದ್ಧ ದೂರು: ಮೇ 6ರ ಒಳಗೆ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್ ಸೂಚನೆ

|
Google Oneindia Kannada News

ನವದೆಹಲಿ, ಮೇ 2: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ದಾಖಲಾಗಿರುವ ನೀತಿ ಸಂಹಿತೆ ಉಲ್ಲಂಘನೆಯ ಒಂಬತ್ತು ಪ್ರಕರಣಗಳ ಕುರಿತು ಮೇ 6ರ ಒಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಮೋದಿ ಮತ್ತು ಅಮಿತ್ ಶಾ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ದಾಖಲಿಸಿರುವ 11 ದೂರುಗಳ ಪೈಕಿ ಈಗಾಗಲೇ ಎರಡು ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ಚುನಾವಣಾ ಸಮಿತಿಯು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿತು.

ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಆಯೋಗದಿಂದ ಮೋದಿಗೆ ಕ್ಲೀನ್ ಚಿಟ್ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಆಯೋಗದಿಂದ ಮೋದಿಗೆ ಕ್ಲೀನ್ ಚಿಟ್

ಇಬ್ಬರು ನಾಯಕರ ವಿರುದ್ಧ 11 ದೂರುಗಳನ್ನು ನೀಡಿದ್ದರೂ ಎರಡು ಪ್ರಕರಣಗಳನ್ನು ಮಾತ್ರ ಚುನಾವಣಾ ಆಯೋಗ ವಿಲೇವಾರಿ ಮಾಡಿದೆ ಎಂದು ಕಾಂಗ್ರೆಸ್ ಸಂಸದೆ ಸುಷ್ಮಿತಾ ದೇವ್ ಅವರ ಪರ ಹಾಜರಾದ ವಕೀಲ ಅಭಿಷೇಕ್ ಮನು ಸಿಂಘ್ವಿ ಸುಪ್ರೀಂಕೋರ್ಟ್‌ಗೆ ತಿಳಿಸಿದರು.

Lok Sabha elections 2019 Supreme court directs EC decide complaints modi amit shah may 6

'ನಾವು ಈ ವಿಚಾರವನ್ನು ಸೋಮವಾರ (ಮೇ 6) ಮತ್ತೆ ಕೈಗೆತ್ತಿಕೊಳ್ಳುವ ವೇಳೆ ಅರ್ಜಿದಾರರ ಉಳಿದ ದೂರುಗಳನ್ನು ನಿರ್ಧರಿಸಬೇಕು' ಎಂದು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು.

ನೀತಿ ಸಂಹಿತೆ ಉಲ್ಲಂಘನೆ: ಆಜಮ್‌ ಖಾನ್‌ ಪ್ರಚಾರಕ್ಕೆ ಮತ್ತೆ ನಿಷೇಧನೀತಿ ಸಂಹಿತೆ ಉಲ್ಲಂಘನೆ: ಆಜಮ್‌ ಖಾನ್‌ ಪ್ರಚಾರಕ್ಕೆ ಮತ್ತೆ ನಿಷೇಧ

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ದಾಖಲಾದ ಆರೋಪಗಳ ಪೈಕಿ ಎರಡು ಆರೋಪಗಳಲ್ಲಿ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿತ್ತು.

English summary
Lok Sabha elections 2019: Supreme Court on Thursday directed Election Commisson to decide the Congress complaints alleging violation of Code of Conduct by Narendra Modi and Amit Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X