ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ ಶತ್ರುಘ್ನ ಸಿನ್ಹಾ ಪಟ್ನಾ ಸಾಹಿಬ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ? ಖಾಮೋಶ್!

|
Google Oneindia Kannada News

ನವದೆಹಲಿ, ಮಾರ್ಚ್ 20 : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟ್ಟರ್ ಮತ್ತು ಸಮಾರಂಭಗಳಲ್ಲಿ ತೀವ್ರ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ.

ಬಿಹಾರದ ಪಟ್ನಾ ಸಾಹಿಬ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಜಯಗಳಿಸಿರುವ ಶತ್ರುಘ್ನ ಸಿನ್ಹಾ, ಸತತ ಮೂರನೇ ಬಾರಿ ಈ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಆದರೆ, ಅವರು ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರಲಿದ್ದಾರೆ.

ಶತ್ರುಘ್ನ ಸಿನ್ಹಾ ಅವರು ಶೀಘ್ರದಲ್ಲಿಯೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಪಟ್ನಾ ಸಾಹಿಬ್‌ನಲ್ಲಿ ಕಳೆದ ಚುನಾವಣೆಯಲ್ಲಿ ಸುಮಾರು 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಸಿನ್ಹಾ, ಅಲ್ಲಿ ಸಾಕಷ್ಟು ಪ್ರಭಾವಳಿ ಹೊಂದಿದ್ದಾರೆ.

ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟ, 'ರೆಬೆಲ್' ಸಂಸದ ಶತ್ರುಘ್ನ ಸಿನ್ಹಾ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟ, 'ರೆಬೆಲ್' ಸಂಸದ ಶತ್ರುಘ್ನ ಸಿನ್ಹಾ

ಈ ಮಧ್ಯೆ ಶತ್ರುಘ್ನ ಸಿನ್ಹಾ ಅವರು ಮೋದಿ ವಿರುದ್ಧದ ವಾಗ್ದಾಳಿ ಮುಂದುವರಿಸಿದ್ದಾರೆ.

Array

ಅವರದು ಕಲಬೆರಕೆ, ನಿಮ್ಮದು?

'ಸರ್‌ಜಿ 20ಕ್ಕೂ ಹೆಚ್ಚು ಪಕ್ಷಗಳ ಮೈತ್ರಿಕೂಟ ನಿಮ್ಮ ಪಾಲಿಗೆ ಕಲಬೆರಕೆ. ಮತ್ತೆ ನಿಮಗೆ 40ಕ್ಕೂ ಹೆಚ್ಚು ಪಕ್ಷಗಳು ಬೆಂಬಲ ನೀಡಿವೆ. ಅದನ್ನು ಜನರು ಏನೆಂದು ಕರೆಯಬೇಕು? ಪೀಟರ್‌ಗೆ ಸರಿಯೆನಿಸಿದ್ದು, ಪಾಲ್‌ಗೂ ಸರಿಯೆನಿಸಬೇಕೆ ಸರ್?' ಎಂದು ಶತ್ರುಘ್ನ ಸಿನ್ಹಾ ಟ್ವಿಟ್ಟರ್‌ನಲ್ಲಿ ಟ್ರಾಲ್ ಮಾಡಿದ್ದಾರೆ.

ಬಿಜೆಪಿ ಮೇಲೆ ಮುನಿಸಿಕೊಂಡ ಶತ್ರುಘ್ನ ಸಿನ್ಹಾಗೆ ಆರ್ಜೆಡಿಯಿಂದ ಆಫರ್! ಬಿಜೆಪಿ ಮೇಲೆ ಮುನಿಸಿಕೊಂಡ ಶತ್ರುಘ್ನ ಸಿನ್ಹಾಗೆ ಆರ್ಜೆಡಿಯಿಂದ ಆಫರ್!

Array

ಆಶ್ವಾಸನೆಗಳು ಏನಾದವು?

'ನಿಮ್ಮ ಎಲ್ಲ ಅಥವಾ ಕೆಲವೊಂದು ಭರವಸೆಗಳನ್ನು ಈಡೇರಿಸಿ ಮತ್ತು ಆಶ್ವಾಸನೆ ಹಾಗೂ ಕಾರ್ಯ ಪ್ರದರ್ಶನದ ನಡುವಿನ ಅಂತರ ತಗ್ಗಿಸಿ. ಇರಲಿ, ನೀವು ಭರವಸೆ ನೀಡಿದ ನೂರು ಸ್ಮಾರ್ಟ್ ಸಿಟಿ ಯೋಜನೆಯ ಕಥೆ ಏನಾಯಿತು? ಒಂದಾದರೂ ಹೆಸರು ಹೇಳಬಲ್ಲಿರಾ?'

ಹೈಕಮಾಂಡ್ ಸೂಚಿಸಿದರೆ ಪಕ್ಷ ಬಿಡಲು ಸಿದ್ಧ: ಶತ್ರುಘ್ನ ಸಿನ್ಹಾಹೈಕಮಾಂಡ್ ಸೂಚಿಸಿದರೆ ಪಕ್ಷ ಬಿಡಲು ಸಿದ್ಧ: ಶತ್ರುಘ್ನ ಸಿನ್ಹಾ

ವಿಧೇಯ ಸಲಹೆ, ಪ್ರಶ್ನೆ

ಇವೆಲ್ಲವೂ ನಿಮ್ಮ ಸ್ನೇಹಿತ ಮತ್ತು ಶತ್ರುಗಳಾಗಿರುವ ವ್ಯಕ್ತಿಯ ವಿಧೇಯ ಸಲಹೆ ಮತ್ತು ಪ್ರಶ್ನೆಗಳು. ನೀವು ದೇಶದ ಗೌರವಾನ್ವಿತ ಪ್ರಧಾನಿ. ಚಪ್ಪಾಳೆಗೆ ನಾಯಕರಾದಂತೆ ನಿಂದನೆಗೂ ನಾಯಕರಾಗುತ್ತೀರ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ರವಿಶಂಕರ್ ಪ್ರಸಾದ್ ಎದುರಾಳಿ?

ರವಿಶಂಕರ್ ಪ್ರಸಾದ್ ಎದುರಾಳಿ?

ರಾಜ್ಯಸಭೆಯ ಸದಸ್ಯರಾಗಿ ಬಿಹಾರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು ಪಟ್ನಾ ಸಾಹಿಬ್ ಕ್ಷೇತ್ರದಿಂದ ಶತ್ರುಘ್ನ ಎದುರಾಳಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಹಲವು ದಿನಗಳಿಂದ ರವಿಶಂಕರ್ ಪ್ರಸಾದ್ ಹೆಸರು ಕೇಳಿಬರುತ್ತಿದ್ದು, ಇದರಿಂದ ಪಟ್ನಾ ಸಾಹಿಬ್ ಮಹತ್ವದ ಜಿದ್ದಾಜಿದ್ದಿನ ಕ್ಷೇತ್ರವಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

ಕೀರ್ತಿ ಆಜಾದ್ ಟಿಕೆಟ್ ಆಕಾಂಕ್ಷೆ

ಕೀರ್ತಿ ಆಜಾದ್ ಟಿಕೆಟ್ ಆಕಾಂಕ್ಷೆ

ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರೂ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ದರ್ಭಾಂಗಾ ಕ್ಷೇತ್ರದಿಂದ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದ ಅವರು, ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧ ಆರೋಪಗಳನ್ನು ನಡೆಸಿದ್ದಕ್ಕಾಗಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ಅವರನ್ನು ಅಮಾನತು ಮಾಡಲಾಗಿತ್ತು.

English summary
Lok sabha elections 2019: BJP rebel MP Shatrughan Sinha may contest in Patna Sahib from Congress. Union Minister Ravishankar Prasad possibly the BJP candidate against Sinha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X