• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕ ಕದನ : ಚೆನ್ನೈಯಲ್ಲಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

|

ನವದೆಹಲಿ, ಮಾರ್ಚ್ 13:ಬಹುನಿರೀಕ್ಷಿತ ಲೋಕಸಭಾ ಚುನಾವಣೆಗೆ ಈಗಾಗಲೇ ರಣಕಣ ಸಿದ್ಧವಾಗಿದೆ. ಅಬ್ಬರದ ಪ್ರಚಾರ, ಪರಸ್ಪರ ಕೆಸರೆರಚಾಟ, ಪಕ್ಷಾತರ ಪರ್ವ ಮತ್ತೆ ಸದ್ದು ಮಾಡುತ್ತಿದೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಕ್ಷೇತ್ರವಾದ ವಾರಣಾಸಿಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಚಾರ ನಡೆಸುವುದಾಗಿ ಹೇಳಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿ

ಅಷ್ಟಕ್ಕೂ ನರೇಂದ್ರ ಮೋದಿ ಅವರೇ ಪ್ರಧಾನಿ ಯಾಗುತ್ತಾರಾ? ಅಥವಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ದೇಶದ ಚುಕ್ಕಾಣಿ ಹಿಡಿಯುತ್ತಾರಾ? ಮಹಾಘಟಬಂಧನದ ಮೂಲಕ ಮಮತಾ ದೀದಿ ಪ್ರಧಾನಿಯಾಗುತ್ತಾರಾ...? ಈ ಎಲ್ಲ ಪ್ರಶ್ನೆಗಳಿಗೂ ಉತ್ತರಕ್ಕಾಗಿ ಮೇ 23 ರವರೆಗೆ ಕಾಯಲೇ ಬೇಕು.

Lok Sabha Elections 2019: Political developments LIVE

ಏಪ್ರಿಲ್ 11 ರಿಂದ ಆರಂಭವಾಗುವ ಚುನಾವಣೆ ಮೇ 19 ರವರೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಕಾರಣದ ಬೆಳವಣಿಗೆಯ ಕುರಿತು ಕ್ಷಣಕ್ಷಣದ ಮಾಹಿತಿಯನ್ನು ಪ್ರತಿದಿನವೂ ಒನ್ ಇಂಡಿಯಾ ಕನ್ನಡ ಲೈವ್ ಮೂಲಕ ನೀಡಲಿದೆ.

ಲೋಕ ಸಮರ : 7 ಹಂತದಲ್ಲಿ ಮತದಾನ, ಮೇ 23ರಂದು ಫಲಿತಾಂಶ

Newest First Oldest First
3:20 PM, 13 Mar
ಮಾ.14 ದೆಹಲಿಯಲ್ಲಿ ಸಭೆ ಕರೆದ ಚುನಾವಣಾ ಆಯೋಗ, ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಆಯುಕ್ತ ಮತ್ತು ಮೇಲ್ವಿಚಾರಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
3:07 PM, 13 Mar
ಚೆನ್ನೈನ ಸ್ಟೆಲ್ಲಾ ಮೆರೀಸ್ ಕಾಲೇಜಿನಲ್ಲಿ 'ಹಾಯ್ ಸರ್' ಎಂದು ಸಂಬೋಧಿಸಿದ ವಿದ್ಯಾರ್ಥಿಗೆ, 'ನನ್ನನ್ನು ರಾಹುಲ್ ಎಂದು ಕರೆದರೇ ಉತ್ತಮ' ಎಂದ ರಾಹುಲ್ ಗಾಂಧಿ.
2:50 PM, 13 Mar
ಭ್ರಷ್ಟಾಚಾರದ ಅಸಲಿ ಮುಖ ಎಂದರೆ ರಾಹುಲ್ ಗಾಂಧಿ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಟಾಂಗ್ ನೀಡಿದ್ದಾರೆ. ನವದೆಹಲಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಇರಾನಿ, ರಾಹುಲ್ ಗಾಂಧಿ ಅವರಿಗೂ ಆರ್ಮ್ಸ್ ಡೀಲರ್ ಸಂಜಯ್ ಭಂಡಾರಿ ಅವರಿಗೂ ಇರುವ ಸಂಬಂಧವೇನು ಎಂದು ಹೇಳಿ ಎಂದು ಪ್ರಶ್ನಿಸಿದರು.
1:54 PM, 13 Mar
ದೆಹಲಿಯಲ್ಲಿಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ
1:49 PM, 13 Mar
ತಮಿಳುನಾಡು, ಮಹಾರಾಷ್ಟ್ರ, ಜಾರ್ಖಂಡ್ ಮುಂತಾದ ಹಲವು ರಾಜ್ಯಗಳಲ್ಲಿ ಮೈತ್ರಿಯ ಮಾತುಕತೆ ನಡೆಯುತ್ತಿದೆ. ಬಿಹಾರದಲ್ಲಿ ಈಗಾಗಲೇ ಮಾತುಕತೆ ಮುಗಿದಿದ್ದು, ಜಮ್ಮು-ಕಾಶ್ಮೀರದಲ್ಲೂ ಮಾತುಕತೆ ನಡೆಯುತ್ತಿದೆ- ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
12:40 PM, 13 Mar
ಉಮೇಶ್ ಜಾಧವ್ ಕಲಬುರಗಿಯಲ್ಲಿ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಾರೆ. ಈ ಕುರಿತು ಅಂತಿ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ: ಬಿ ಎಸ್ ಯಡಿಯೂರಪ್ಪ
12:21 PM, 13 Mar
ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಂತು, ಇದು ಯಾಕೆ ಹೀಗೆ, ಅದು ಯಾಕೆ ಹಾಗೆ ಎಂದು ಪ್ರಶ್ನಿಸುವ ಅವಕಾಶ ಇಲ್ಲಿ ಎಷ್ಟು ಜನರಿಗೆ ಸಿಕ್ಕಿದೆ? 3000 ಮಹಿಳೆಯರ ಎದುರು ಪ್ರಶ್ನೆಯನ್ನು ಎದುರಿಸುವ ತಾಕತ್ತು ಮೋದಿಗೆ ಯಾಕಿಲ್ಲ?- ರಾಹುಲ್ ಗಾಂಧಿ
12:18 PM, 13 Mar
ಈ ದೇಶದಲ್ಲಿ ಎರಡು ಸಿದ್ಧಾಂತಗಳಿವೆ. ಒಂದು ಎಲ್ಲರನ್ನೂ ಒಂದುಗೂಡಿಸುವುದು, ಇನ್ನೊಂದು ತಮ್ಮ ಸಿದ್ಧಾಂತಗಳನ್ನು ಎಲ್ಲರ ಮೇಲೆಯೂ ಹೇರುವುದು- ರಾಹುಲ್ ಗಾಂಧಿ
12:16 PM, 13 Mar
ಚೆನ್ನೈ ನ ಸ್ಟೆಲ್ಲಾ ಮೇರಿಸ್ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವ ರಾಹುಲ್ ಗಾಂಧಿ
11:59 AM, 13 Mar
ದೆಹಲಿ: ಪೈಲಟ್ ಅಭಿನಂದನ್ ವರ್ಧಮಾನ್ ಅವರೊಂದಿಗಿನ ಚಿತ್ರ ಶೇರ್ ಮಾಡಿದ್ದಕ್ಕೆ ಬಿಜೆಪಿ ಶಾಸಕ ಒಪಿ ಶರ್ಮಾ ಅವರಿಗೆ ಜಿಲ್ಲಾ ಚುನಾವಣಾ ಆಯೋಗವೊಂದು ಶೋಕಾಸ್ ನೋಟೀಸ್ ನೀಡಿದೆ.
11:20 AM, 13 Mar
ಈ ಚುನಾವಣೆಯಲ್ಲಿ ಗರಿಷ್ಠ ಭಾರತೀಯರು ಮತಗಟ್ಟೆಗೆ ಬಂದು ಮತಚಲಾಯಿಸಿ ಭಾರತವನ್ನು ಮತ್ತಶಃ್ಟು ಬಲಗೊಳಿಸುವಂತೆ ಮಾಡಲಿ ಎಂದು ಕೆ.ಚಂದ್ರಶೇಖರ್ ರಾವ್, ನವೀನ್ ಪಟ್ನಾಯಕ್, ಎಚ್ ಡಿ ಕುಮಾರಸ್ವಾಮಿ, ಎಚ್ ಚಂದ್ರಬಾಬು ನಾಯ್ಡು ಅವರಿಗೂ ನಾನು ಮನವಿ ಮಾಡುತ್ತೇನೆ- ನರೇಂದ್ರ ಮೋದಿ, ಪ್ರಧಾನಿ
11:19 AM, 13 Mar
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿ ಹಿಡಿಯುವಂತೆ ನಾನು ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಶರದ್ ಪವಾರ್, ಮಾಯಾವತಿ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಎಂಕೆ ಸ್ಟಾಲಿನ್ ಅವರಲ್ಲಿ ಮನವಿ ಮಾಡುತ್ತೇನೆ -ನರೇಂದ್ರ ಮೋದಿ, ಪ್ರಧಾನಿ
10:32 AM, 13 Mar
ಲೋಕಸಭಾ ಚುನಾವಣೆಗೆ ಶೇ.40.5 ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಈ ಸಾಧನೆ ಮಾಡಿದ ಮೊದಲ ಪಕ್ಷ ಎನ್ನಿಸಿದೆ.
9:57 AM, 13 Mar
ಬಿಜೆಪಿ ಗೆಲ್ಲಬಹುದು, ಆದರೆ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗುವುದಿಲ್ಲ ಎಂದ ಎನ್ ಸಿಪಿ ನಾಯಕ ಶರದ್ ಪವಾರ್
9:54 AM, 13 Mar
ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಣಾಸಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಚಾರ ನಡೆಸುವುದು ಬಹುತೇಕ ಖಚಿತವಾಗಿದೆ.
9:54 AM, 13 Mar
ಅಖಿಲೇಶ್ ಯಾದವ್ ಮತ್ತು ಮಾಯಾವತಿ ಅವರು ನನ್ನನ್ನು ಕರೆದರೆ ನಾನು ವಾರಣಾಸಿಗೆ ಬಂದು ಪ್ರಚಾರ ಮಾಡುತ್ತೇನೆ. ಅವರಿಗೆ ನನ್ನ ನೈತಿಕ ಬೆಂಬಲವಿದೆ- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha Elections 2019: Political developments LIVE updates in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more