ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ LIVE: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತದಾನ

|
Google Oneindia Kannada News

ನವದೆಹಲಿ, ಮೇ 19: ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಇಂದು(ಮೇ 19)ರಂದು ಮತದಾನ ನಡೆಯಲಿದೆ. ಅಂತಿಮ ಹಂತದ ಮತದಾನ ಇದಾಗಿದ್ದು, ಪ್ರಧಾನಿ ಮೋದಿ ಸೇರಿ ಘಟಾನುಘಟಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇಂದು ನಡೆಯಲಿರುವ 7ನೇ ಹಾಗೂ ಅಂತಿಮ ಹಂತದ ಮತದಾನದಲ್ಲಿ ಒಟ್ಟು 8 ರಾಜ್ಯಗಳ 59 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಉತ್ತರ ಪ್ರದೇಶ ಮತ್ತು ಪಂಜಾಬ್ ನ ತಲಾ 13 ಕ್ಷೇತ್ರಗಳು, ಪಶ್ಚಿಮ ಬಂಗಾಳದ 9, ಬಿಹಾರ ಮತ್ತು ಮದ್ಯ ಪ್ರದೇಶದ ತಲಾ ಕ್ಷೇತ್ರಗಳು, ಹಿಮಾಚಲ ಪ್ರದೇಶದ ನಾಲ್ಕು, ಜಾರ್ಖಂಡ್ ನ ಮೂರು ಮತ್ತ ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಒಂದು ಕ್ಷೇತ್ರ ಸೇರಿದಂತೆ ಒಟ್ಟು 59 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಮೊದಲು ದೇಶ ಸುತ್ತಿ ಎಂದು ಭಾರತೀಯರಿಗೆ ಕರೆ ನೀಡಿದ ಪ್ರಧಾನಿ ಮೋದಿಮೊದಲು ದೇಶ ಸುತ್ತಿ ಎಂದು ಭಾರತೀಯರಿಗೆ ಕರೆ ನೀಡಿದ ಪ್ರಧಾನಿ ಮೋದಿ

ಪ್ರಮುಖವಾಗಿ ವಾರಣಾಸಿ ಕ್ಷೇತ್ರದಿಂದ 2ನೇ ಬಾರಿಗೆ ಕಣಕ್ಕಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಒಟ್ಟು 918 ಅಭ್ಯರ್ಥಿಗಳ ಭವಿಷ್ಯ ವನ್ನು ಒಟ್ಟು 10.01 ಲಕ್ಷ ಮತದಾರರು ನಿರ್ಧರಿಸಲಿದ್ದಾರೆ.

ravishankar

ಒಟ್ಟಾರೆ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರ ಭವಿಷ್ಯ ನಾಳೆ ಮತಪೆಟ್ಟಿಗೆ ಸೇರಲಿದೆ. ಇನ್ನು ಇದೇ ಮೇ 23ರಂದು ಲೋಕಾಸಮರದ ಫಲಿತಾಂಶ ಪ್ರಕಟವಾಗಲಿದೆ.

ಇನ್ನು ವಾರಣಾಸಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಜಯ್ ರಾಯ್ ಅವರು ಸ್ಪರ್ಧೆ ಮಾಡಿದ್ದು, ಕಳೆದ ಬಾರಿಯೂ ಇದೇ ಅಜಯ್ ರಾಯ್ ಮೋದಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಇದೇ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಶಾಲಿನಿ ಯಾದವ್ ಅವರು ಸ್ಪರ್ಧೆ ಮಾಡಿದ್ದಾರೆ.

918 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿರುವ 10 ಕೋಟಿ ಮತದಾರರು918 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿರುವ 10 ಕೋಟಿ ಮತದಾರರು

ಇತ್ತ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಬಿಜೆಪಿಯ ಮಾಜಿ ರೆಬೆಲ್ ನಾಯಕ ಶೃತೃಘ್ನ ಸಿನ್ಹಾ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಬಿಜೆಪಿಯಿಂದ ರವಿಶಂಕರ್ ಪ್ರಸಾದ್ ಅವರು ಕಣಕ್ಕಿಳಿದಿದ್ದಾರೆ.

Newest FirstOldest First
5:09 PM, 19 May

ಸಂಜೆ 5 ಗಂಟೆಯವರೆಗೆ ಎಷ್ಟು ಮತದಾನ

ಸಂಜೆ 5 ಗಂಟೆಯವರೆಗೆ ಶೇ.53.03ರಷ್ಟು ಮತದಾನವಾಗಿದೆ. ಬಿಹಾರದಲ್ಲಿ ಶೇ.46.75, ಹಿಮಾಚಲಪ್ರದೇಶದಲ್ಲಿ ಶೇ.57.43, ಮಧ್ಯಪ್ರದೇಶದಲ್ಲಿ ಶೇ.59.75, ಪಂಜಾಬ್‌ನಲ್ಲಿ ಶೇ.50.49, ಉತ್ತರಪ್ರದೇಶದಲ್ಲಿ ಶೇ.47.21, ಪಶ್ಚಿಮ ಬಂಗಾಳದಲ್ಲಿ ಶೇ.64.87, ಚಂಡೀಗಢದಲ್ಲಿ 51.18ರಷ್ಟು ಮತದಾನವಾಗಿದೆ.
4:46 PM, 19 May

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತದಾನ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತ್ತದಲ್ಲಿ ಮತದಾನ ಮಾಡಿದರು.
4:09 PM, 19 May

ಮಧ್ಯಾಹ್ನ 3 ಗಂಟೆವರೆಗೆ ಶೇ.51.95ರಷ್ಟು ಮತದಾನ

ಮಧ್ಯಾಹ್ನ 3 ಗಂಟೆ ವೇಳೆಗೆ ಒಟ್ಟು 51.95ರಷ್ಟು ಮತದಾನವಾಗಿದೆ. ಬಿಹಾರದಲ್ಲಿ ಶೇ.46.66, ಹಿಮಾಚಲಪ್ರದೇಶದಲ್ಲಿ ಶೇ.49.43, ಮಧ್ಯಪ್ರದೇಶದಲ್ಲಿ ಶೇ.57.27, ಪಂಜಾಬಿನಲ್ಲಿ ಶೇ.48.18, ಉತ್ತರಪ್ರದೇಶದಲ್ಲಿ ಶೇ.46.07, ಪಶ್ಚಿಮ ಬಂಗಾಳದಲ್ಲಿ 63.58, ಜಾರ್ಖಂಡ್‌ನಲ್ಲಿ 64.81, ಚಂಡೀಗಢದಲ್ಲಿ ಶೇ.50.24ರಷ್ಟು ಮತದಾನವಾಗಿದೆ.
3:58 PM, 19 May

ಬೋಗಸ್ ವೋಟಿಂಗ್ ತಡೆಯಲು ಹೋದ ಪೊಲೀಸರಿಗೆ ಥಳಿತ

ಬಿಹಾರದಲ್ಲಿ ಬೋಗಸ್ ಮತದಾನ ತಡೆಯಲು ಹೋದ ಪೊಲೀಸರಿಗೆ ಥಳಿಸಿರುವ ಘಟನೆ ವರದಿಯಾಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರೂ ಕೂಡ ಮತದಾನಕ್ಕೆ ಯಾವುದೇ ಅಡ್ಡಿಯಾಗಿಲ್ಲ.
3:56 PM, 19 May

ಸೌರವ್ ಗಂಗೂಲಿ ಮತ ಚಲಾವಣೆ

ಕೋಲ್ಕತ್ತದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಮತ ಚಲಾಯಿಸಿದರು.
3:07 PM, 19 May

ಬಿಹಾರದ ಪಾಲಿಗಂಜ್‌

ಬಿಹಾರದ ಪಾಲಿಗಂಜ್‌ನ ಮತಗಟ್ಟೆ ಸಂಖ್ಯೆ 101,102ರಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಪರಿಣಾಮ ಮತದಾನವನ್ನು ಸ್ಥಗಿತಗೊಳಿಸಲಾಗಿದೆ.
2:39 PM, 19 May

37 ಮಂದಿ ಅಂಧ ಮಹಿಳೆಯರು ಮತದಾನ

ಮಧ್ಯಪ್ರದೇಶದ ಇಂದೋರ್‌ನ ಗ್ರೀನ್ ಫೀಲ್ಡ್‌ ಶಾಲೆಯಲ್ಲಿ 37 ಮಂದಿ ಅಂಧ ಮಹಿಳೆಯರು ಮತದಾನ ಮಾಡಿದರು
Advertisement
1:45 PM, 19 May

ನವ್‌ಜೋತ್ ಸಿಂಗ್ ಸಿಧು ಮತದಾನ

ಪಂಜಾಬ್ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ನವ್‌ಜೋತ್‌ಸಿಂಗ್ ಸಿಧು ಹಾಗೂ ಪತ್ನಿ ನವ್‌ಜೋತ್ ಕೌರ್ ಅಮೃತಸರದಲ್ಲಿ ಮತದಾನ ಮಾಡಿದರು.
1:28 PM, 19 May

ಮಧ್ಯಾಹ್ನ 1 ಗಂಟೆವರೆಗೆ ಎಷ್ಟು ಮತದಾನ

ಮಧ್ಯಾಹ್ನ 1 ಗಂಟೆವರೆಗೆ ಮತದಾನ: ಒಟ್ಟು ಶೇ.39.85 ರಷ್ಟು ಮತದಾನವಾಗಿದೆ. ಬಿಹಾರ ಶೇ.36.20, ಹಿಮಾಚಲಪ್ರದೇಶ ಶೇ.34.47, ಮಧ್ಯ ಪ್ರದೇಶ ಶೇ.43.89, ಪಂಜಾಬ್‌ ಶೇ.36.66, ಉತ್ತರ ಪ್ರದೇಶ-ಶೇ.36.37, ಪಶ್ಚಿಮ ಬಂಗಾಳ 47.55, ಶೇ.ಜಾರ್ಖಂಡ್ 35.60ರಷ್ಟು ಮತದಾನವಾಗಿದೆ.
12:58 PM, 19 May

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದಲ್ಲಿ 80 ವರ್ಷದ ತಾಯಿಯನ್ನು ಮತಗಟ್ಟೆಗೆ ಕರೆದುಕೊಂಡು ಬಂದ ಮಗ
11:59 AM, 19 May

ಬಿಹಾರದ ಚಾಂದೋರ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿದೆ. ಇವಿಎಂ ಮತ್ತು ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್ ಕಾರನ್ನು ಜಖಂಗೊಳಿಸಲಾಗಿದೆ. ನೋ ವೋಟ್, ನೋ ರೋಡ್ಸ್‌ ಎಂದು ಜನರು ಘೋಷಣೆ ಕೂಗಿದ್ದಾರೆ.
11:23 AM, 19 May

ಇಂಧೋರ್‌ನ ಮತಗಟ್ಟೆಯಲ್ಲಿ ಲೋಕಸಭಾ ಸ್ಪೀಕರ್, ಬಿಜೆಪಿ ನಾಯಕಿ ಸುಮಿತ್ರಾ ಮಹಾಜನ್ ಮತಚಲಾವಣೆ ಮಾಡಿದರು.
Advertisement
10:30 AM, 19 May

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮಂಡಿ ಜಿಲ್ಲೆಯಲ್ಲಿ ಮತ ಚಲಾಯಿಸಿದರು
10:23 AM, 19 May

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ರಾಯ್‌ಗಂಜ್‌ನಲ್ಲಿ ಸಿಪಿಐ(ಎಂ) ಅಭ್ಯರ್ಥಿ ಮೊಹಮದ್ ಸಲೀಂ ಮತ ಚಲಾಯಿಸಿದರು.
10:08 AM, 19 May

ಪವನ್ ಕುಮಾರ್ ಬನ್ಸಾಲ್

ಚಂಡೀಗಢದ ಕಾಂಗ್ರೆಸ್ ಅಭ್ಯರ್ಥಿ ಪವನ್ ಕುಮಾರ್ ಬನ್ಸಾಲ್ ಮತಹಕ್ಕು ಚಲಾಯಿಸಿದರು.
10:06 AM, 19 May

ಟಿಎಂಸಿ ಕಾರ್ಯಕರ್ತರು

ನಮ್ಮ ಕಾರ್ಯಕರ್ತರಿಂದ ನಿನ್ನೆ ರಾತ್ರಿ ಕರೆ ಬಂದಿತ್ತು, ಟಿಎಂಸಿ ಕಾರ್ಯಕರ್ತರು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಟಿಎಂಸಿ ಕಾರ್ಯಕರ್ತರಿಗೆ ಹಾಗೂ ಉಗ್ರರ ನಡುವೆ ವ್ಯತ್ಯಾಸ ಏನೂ ಕಾಣುತ್ತಿಲ್ಲ- ಸಿಕೆ ಬೋಸ್
10:02 AM, 19 May

103 ವರ್ಷದ ಮಹಿಳೆ ಮತದಾನ

ತಮಿಳುನಾಡಿನ ಸೂಳೂರಿನಲ್ಲಿ 103 ವರ್ಷದ ಮಹಿಳೆ ಮತದಾನ ಮಾಡಿದರು. ನಡೆಯಲು ಶಕ್ತಿ ಇಲ್ಲದಿದ್ದರೂ ಕೋಲೂರಿಕೊಂಡೇ ಮತಗಟ್ಟೆಗೆ ಬಂದು ಅವರು ಮತ ಚಲಾಯಿಸಿದರು.
9:32 AM, 19 May

ಬೆಳಗ್ಗೆ 9 ಗಂಟೆಯವರೆಗೆ ಎಷ್ಟು ಮತದಾನ

ಬೆಳಗ್ಗೆ 9 ಗಂಟೆಯವರೆಗೆ ಬಿಹಾರದಲ್ಲಿ ಶೇ.10.65, ಹಿಮಾಚಲ ಪ್ರದೇಶದಲ್ಲಿ ಶೇ.0.87, ಮಧ್ಯಪ್ರದೇಶದಲ್ಲಿ ಶೇ.7.16, ಪಂಜಾಬ್‌ನಲ್ಲಿ ಶೇ.4.64, ಉತ್ತರ ಪ್ರದೇಶದಲ್ಲಿ ಶೇ.5.97, ಪಶ್ಚಿಮ ಬಂಗಾಳದಲ್ಲಿ ಶೇ.10.54, ಜಾರ್ಖಂಡ್‌ನಲ್ಲಿ ಶೇ.13.19ರಷ್ಟು ಮತದಾನವಾಗಿದೆ.
9:15 AM, 19 May

ಮತ ಚಲಾವಣೆ

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮತ ಚಲಾವಣೆ
9:00 AM, 19 May

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪಟ್ನಾದ ಮಹಿಳಾ ಕಾಲೇಜಿಗೆ ಮತಹಕ್ಕು ಚಲಾಯಿಸಲು ಆಗಮಿಸಿದ್ದಾರೆ.
8:25 AM, 19 May

ರಾಹುಲ್ ಸಿನ್ಹಾ

ಪಶ್ಚಿಮ ಬಂಗಾಳದಲ್ಲಿ ಕೋಲ್ಕತ್ತ ಉತ್ತರ ಬಿಜೆಪಿ ಅಭ್ಯರ್ಥಿ ರಾಹುಲ್ ಸಿನ್ಹಾ ಜಾಧವಪುರದಲ್ಲಿ ಮತದಾನ ಮಾಡಿದರು
8:11 AM, 19 May

ರಿಕೆಟಿಗ ಹರ್ಬಜನ್ ಸಿಂಗ್

ಪಂಜಾಬ್‌ನ ಜಲಂಧರ್‌ನಲ್ಲಿ ಕ್ರಿಕೆಟಿಗ ಹರ್ಬಜನ್ ಸಿಂಗ್ ಮತದಾನಕ್ಕೆಂದು ಸರತಿಯಲ್ಲಿ ನಿಂತಿರುವುದು
7:46 AM, 19 May

ಸುಶೀಲ್ ಮೋದಿ

ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮತದಾನ
7:45 AM, 19 May

ಮತದಾನ ಅವಧಿ

ಮತದಾನ ಅವಧಿ ಕುರಿತು ಎಲ್ಲಾ ಪಕ್ಷಗಳ ನಾಯಕರಿಗೆ ಪತ್ರ ಬರೆಯುತ್ತೇನೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಹಂತದಿಂದ ಹಂತದ ನಡುವೆ ಅಂತರ ಹೆಚ್ಚಾಗಿದೆ. ಒಟ್ಟಾರೆ ಮತದಾನದ ಅವಧಿ ಸುದೀರ್ಘವಾಗಿತ್ತು. ಇಷ್ಟೊಂದು ವಿಳಂಬವಾಗಿ ಮತದಾನ ವೇಳಾಪಟ್ಟಿ ಮಾಡಕೂಡದು ಎಂದರು.
7:39 AM, 19 May

ನಿತೀಶ್ ಕುಮಾರ್

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಾಟ್ನಾದಲ್ಲಿ ಮತದಾನ ಮಾಡಿದರು
7:23 AM, 19 May

ಮತದಾರರ ಕೈಗೆ ಶಾಯಿ

ಉತ್ತರಪ್ರದೇಶದ ಸ್ಥಳೀಯ ಬಿಜೆಪಿ ಮುಖಂಡರು ಮತದಾರರ ಕೈಗೆ ಶಾಯಿ ಹಾಕಿದ್ದಾರೆ ಎಂಬ ಆರೋಪ ಎದುರಾಗಿದ್ದು, ಪ್ರತಿಪಕ್ಷಗಳಿಗೆ ಮತದಾನ ಮಾಡುತ್ತಾರೆ ಎಂಬ ನಿರೀಕ್ಷೆ ಮೇರೆಗೆ ಈ ಹಳ್ಳಿಯ ಮತದಾರರ ಕೈಗೆ ಮತದಾನಕ್ಕೂ ಮೊದಲೇ ಶಾಯಿ ಹಚ್ಚಲಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಲಾಗಿದೆ.
7:09 AM, 19 May

ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೋರಖ್‌ಪುರದಲ್ಲಿ ಮತದಾನ
7:04 AM, 19 May

ಮತದಾನ ಆರಂಭ

59 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭ, ಬಿಹಾರ,ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢದಲ್ಲಿ ಮತದಾನ ಆರಂಭ
6:51 AM, 19 May

ಮತದಾನಕ್ಕೆ ಸಿದ್ಧತೆ

ಮಧ್ಯಪ್ರದೇಶದ ಮಹಾಕಾಳಿ ಮಾರ್ಗದಲ್ಲಿ ಮತಗಟ್ಟೆ 22ರಲ್ಲಿ ಮತದಾನಕ್ಕೆ ಸಿದ್ಧತೆ
6:49 AM, 19 May

ಮತದಾನ

ಕೆಲವೇ ಕ್ಷಣಗಳಲ್ಲಿ ಮತದಾನ ಆರಂಭ
READ MORE

English summary
Lok Sabha Elections 2019 Phase 7 polling Live updates in Kannada. Including West Bengal, Punjab, Uttar Pradesh, Madhya Pradesh, Bihar, Jharkhand, Chandigarh.8 states will go to voting Today(May 19).Results will be on May 23rd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X