ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ 3ನೇ ಹಂತ ಮುಕ್ತಾಯ: 63.24% ಮತದಾನ

|
Google Oneindia Kannada News

ನವದೆಹಲಿ, ಏ.23: ಲೋಕಸಭಾ ಚುನಾವಣೆಗೆ ಮೂರನೇ ಹಂತದ ಮತದಾನ ಇಂದು(ಏ.23)ರಂದು ಮತದಾನ ನಡೆಯಲಿದೆ. ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 15 ರಾಜ್ಯಗಳಲ್ಲಿ ಚುನಾವಣಾ ನಡೆಯಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

15 ರಾಜ್ಯಗಳು ಕರ್ನಾಟಕ(14), ಗುಜರಾತ್(26), ಕೇರಳ(20), ಗೋವಾ(2), ದಾದ್ರಾ ಮತ್ತು ಹವೇಲಿ(1) ದಮನ್ ಮತ್ತು ದಿಯು(1) ಅಸ್ಸಾಂ(4), ಬಿಹಾರ(5), ಛತ್ತೀಸ್‌ಗಢ(7), ಜಮ್ಮು ಮತ್ತು ಕಾಶ್ಮೀರ(1) , ಮಹಾರಾಷ್ಟ್ರ(14), ಒಡಿಶಾ(6) ಉತ್ತರಪ್ರದೇಶ(10, ಮತ್ತು ಪಶ್ಚಿಮ ಬಂಗಾಳದ 5 ಕ್ಷೇತ್ರಗಳಲ್ಲಿ ಮಂಗಳವಾರ ಚುನಾವಣೆ ನಡೆಯಲಿದೆ.

2ನೇ ಹಂತದ ಲೋಕಸಭಾ ಚುನಾವಣೆ : ಅಂಕಿ-ಸಂಖ್ಯೆಗಳ ಲೆಕ್ಕ2ನೇ ಹಂತದ ಲೋಕಸಭಾ ಚುನಾವಣೆ : ಅಂಕಿ-ಸಂಖ್ಯೆಗಳ ಲೆಕ್ಕ

ಮೇ 23ರಂದು 17ನೇ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

Lok sabha elections 2019 phase 3 polling live updates in Kannada

-ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ( ಕಾಂಗ್ರೆಸ್), ಉಮೇಶ್ ಜಾಧವ್(ಬಿಜೆಪಿ)-ರಾಂಪುರ: ಅಜಂ ಖಾನ್(ಸಮಾಜವಾದಿ ಪಾರ್ಟಿ),, ಜಯಪ್ರದಾ(ಬಿಜೆಪಿ -ತಿರುವನಂತಪುರಂ: ಶಶಿ ತರೂರ್(ಕಾಂಗ್ರೆಸ್), ರಾಜಶೇಖರನ್(ಬಿಜೆಪಿ) -ಭಾರಮತಿ: ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ(ಎನ್‌ಸಿಪಿ), ಕಾಂಚನಾ ಕುಲು(ಬಿಜೆಪಿ) -ಮೈನ್‌ಪುರಿ: ಮುಲಾಯಂಸಿಂಗ್ ಯಾದವ್(ಎಸ್‌ಪಿ) , ಪ್ರೇಮಸ್‌ಸಿಂಗ್ ಶಾಕ್ಯ(ಬಿಜೆಪಿ) -ಪಿಲಿಭಿಟ್: ವರುಣ್ ಗಾಂಧಿ(ಬಿಜೆಪಿ), ಹೇಮರಾಜ್ ವರ್ಮಾ(ಎಸ್‌ಪಿ)

Newest FirstOldest First
7:32 PM, 23 Apr

ಒಡಿಸ್ಸಾ - 58.18%, ತ್ರಿಪುರಾ - 78.52%, ಉತ್ತರ ಪ್ರದೇಶ - 57.74%, ಪಶ್ಚಿಮ ಬಂಗಾಳ - 79.36, ಚತ್ತೀಸ್‌ಘಡ - 65.91%, ದಾದರ್ ಮತ್ತು ನಗರ ಹವೇಲಿ - 71.43%, ದಾಮನ್ ಮತ್ತು ದಿಯು - 65.34%, ಅಸ್ಸಾಂ - 78.29%, ಬಿಹಾರ್ - 59.97%, ಗೋವಾ - 71.09%, ಗುಜರಾತ್‌ - 60.21%, ಜಮ್ಮು ಮತ್ತು ಕಾಶ್ಮೀರ - 12.86%, ಕರ್ನಾಟಕ - 64.14%, ಕೇರಳ - 70.21%, ಮಹಾರಾಷ್ಟ್ರ - 56.57% ಮತದಾನವಾಗಿದೆ.
7:29 PM, 23 Apr

ಲೋಕಸಭೆ ಚುನಾವಣೆ 2019ರ ಮೂರನೇ ಹಂತದ ಮತದಾನ ಇಂದು ಮುಕ್ತಾಯವಾಗಿದ್ದು 14 ರಾಜ್ಯಗಳಲ್ಲಿ ಇಂದು ಮತದಾನವಾಗಿದೆ. 14 ರಾಜ್ಯಗಳ 115 ಕ್ಷೇತ್ರದಲ್ಲಿ ಒಟ್ಟು 63.24% ಮತದಾನವಾಗಿದೆ.
4:18 PM, 23 Apr

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮತದಾನಕ್ಕೆ ಅಡ್ಡಿಯಾಗಿದೆ. ಶಿವಮೊಗ್ಗದ ಕೆಲವೆಡೆ ಆಲಿಕಲ್ಲು ಮಳೆಯಾಗುತ್ತಿದೆ.
3:50 PM, 23 Apr

ಮತಗಟ್ಟೆ ಏಜೆಂಟ್

ಮತಗಟ್ಟೆ ಏಜೆಂಟ್ ಬಾಬುಲಾಲ್ ಮುರ್ಮು ಅವರ ಮೃತದೇಹ ಪಶ್ಚಿಮ ಬಂಗಾಳದ ಬುನಿಯಾದ್‌ಪುರದ ಮನೆಯಲ್ಲಿ ಪತ್ತೆ
3:41 PM, 23 Apr

ಮತಗಟ್ಟೆ

ಒಡಿಶಾ: ಚುನಾವಣಾ ಸಿಬ್ಬಂದಿ ಮತಗಟ್ಟೆಯಲ್ಲೇ ಕುಸಿದು ಬಿದ್ದು ಸಾವು
3:30 PM, 23 Apr

ಪ್ರಜ್ಞಾ ಸಿಂಗ್‌

ಮಧ್ಯಪ್ರದೇಶ: ಪ್ರಜ್ಞಾ ಸಿಂಗ್‌ಗೆ ಕಪ್ಪು ಬಟ್ಟೆ ತೋರಿಸಿದ ಎನ್‌ಸಿಪಿ ಕಾರ್ಯಕರ್ತರನ್ನು ಥಳಿಸಿದ ಬಿಜೆಪಿ ಕಾರ್ಯಕರ್ತರು
3:18 PM, 23 Apr

ಟಿಎಂಸಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ

ಪಶ್ಚಿಮ ಬಂಗಾಳದಲ್ಲಿ ಪುನಃ ಟಿಎಂಸಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ಮುಂದುವರೆದಿದ್ದು, ಸರತಿಯಲ್ಲಿ ಮತದಾನ ಮಾಡಲು ನಿಂತಿದ್ದ ಮತದಾರನೋರ್ವ ಮೃತಪಟ್ಟಿದ್ದಾರೆ.
Advertisement
2:37 PM, 23 Apr

ಪಿಡಿಪಿ ಮುಖ್ಯಸ್ಥೆ

ಜಮ್ಮು ಮತ್ತು ಕಾಶ್ಮೀರ: ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅನಂತ್‌ನಾಗ್‌ನಲ್ಲಿ ಮತ ಚಲಾಯಿಸಿದರು.
1:54 PM, 23 Apr

ಪಶ್ಚಿಮ ಬಂಗಾಳ

1 ಗಂಟೆವರೆಗೆ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಅಂದರೆ ಶೇ.35ರಷ್ಟು ಮತದಾನವಾಗಿದೆ.
1:33 PM, 23 Apr

ಎಲ್‌ಕೆ ಅಡ್ವಾಣಿ

ಎಲ್‌ಕೆ ಅಡ್ವಾಣಿ ಅವರು ಅಹಮದಾಬಾದ್‌ನ ಶಾಹ್‌ಪುರ ಹಿಂದಿ ಶಾಲೆಯಲ್ಲಿ ಮತ ಚಲಾಯಿಸಿದರು
1:26 PM, 23 Apr

ಕೇರಳದ ಕಣ್ಣೂರಿನ ಮತಗಟ್ಟೆಯಲ್ಲಿ ಹಾವು ಪ್ರತ್ಯಕ್ಷ,

ಕೇರಳದ ಕಣ್ಣೂರಿನ ಮತಗಟ್ಟೆಯಲ್ಲಿ ಹಾವು ಪ್ರತ್ಯಕ್ಷ,ಹಾವು ತೆರವುಗೊಳಿಸಿದ ಬಳಿಕ ಮತ್ತೆ ಮತದಾನ ಆರಂಭ
1:16 PM, 23 Apr

ಥಳಿತ

ಎಸ್‌ಪಿಗೆ ಮತ ಹಾಕು ಎಂದ ಚುನಾವಣಾ ಅಧಿಕಾರಿಗೆ ಥಳಿತ
Advertisement
12:57 PM, 23 Apr

ಮತದಾನ

ಅಸ್ಸಾಂ-ಶೇ.28.64, ಬಿಹಾರ-ಶೇ.25.65, ಗೋವಾ-ಶೇ.27.21, ಗುಜರಾತ್-ಶೇ.23.11, ಜಮ್ಮು ಮತ್ತು ಕಾಶ್ಮೀರ-ಶೇ.4.72, ಕರ್ನಾಟಕ-ಶೇ.20.63, ಕೇರಳ-ಶೇ24.61, ಮಹಾರಾಷ್ಟ್ರ-ಶೇ14.95, ಒಡಿಶಾ-ಶೇ17.19, ತ್ರಿಪುರಾ- ಶೇ.25.06, ಪಶ್ಚಿಮ ಬಂಗಾಳ-ಶೇ.34.58, ಛತ್ತೀಸ್‌ಗಢ-ಶೇ.26.57, ದಾದ್ರಾ-17.67, ದಮನ್ -23.27
12:56 PM, 23 Apr

ಬೆಳಗ್ಗೆ 11 ಗಂಟೆವರೆಗೆ

ಮೂರನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ಆರಂಭವಾಗಿದೆ. ಬೆಳಗ್ಗೆ 11 ಗಂಟೆವರೆಗೆ ಒಟ್ಟು ಶೇ.22.68ರಷ್ಟು ಮತದಾನವಾಗಿದೆ. 15 ಜಿಲ್ಲೆ 117 ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಆರಂಭವಾಗಿದೆ. 18 ಕೋಟಿ ಜನಸಂಖ್ಯೆಯಲ್ಲಿ 85 ಲಕ್ಷ ಮತದಾರರಿದ್ದಾರೆ.
12:41 PM, 23 Apr

ಛತ್ತೀಸ್‌ಗಢ

ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮತ ಚಲಾವಣೆ
12:20 PM, 23 Apr

ಮತದಾನದ ವೇಳೆ ವಿಡಿಯೋ

ಮತದಾನದ ವೇಳೆ ವಿಡಿಯೋ ಮಾಡಿದ್ದ ಕಾಂಗ್ರೆಸ್ ಮುಖಂಡನ ವಿರುದ್ಧ ದೂರು ದಾಖಲು
10:31 AM, 23 Apr

ಚುನಾವಣಾ ಸಂಬಂಧ ಘರ್ಷಣೆ

ಚುನಾವಣಾ ಸಂಬಂಧ ಘರ್ಷಣೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಮೂವರು ಕಾರ್ಯಕರ್ತರು ಗಾಯಗೊಂಡಿದ್ದಾರೆ.
10:28 AM, 23 Apr

ಹೀರಾಬೆನ್ ಮೋದಿ

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಮೋದಿ ಅಹಮದಾಬಾದ್‌ನಲ್ಲಿ ಮತದಾನ ಮಾಡಿದರು
10:26 AM, 23 Apr

ಶಶಿ ತರೂರ್

ಕೇರಳ: ತಿರುವನಂತಪುರಂ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಮತ ಚಲಾವಣೆ
10:05 AM, 23 Apr

ಬೆಳಗ್ಗೆ 9 ಗಂಟೆವರೆಗೆ ಎಷ್ಟು ಮತದಾನ

ಬೆಳಗ್ಗೆ 9 ಗಂಟೆವರೆಗೆ ಎಷ್ಟು ಮತದಾನ: ಅಸ್ಸಾಂ ಶೇ.12.36, ಬಿಹಾರ-ಶೇ12.60, ಗೋವಾ-ಶೇ2.29, ಜಮ್ಮು ಮತ್ತು ಕಾಶ್ಮೀರ-ಶೇ.೦.೦೦, ಕರ್ನಾಟಕ-ಶೇ.1.75, ಕೇರಳ ಶೇ.2.48, ಮಹಾರಾಷ್ಟ್ರ-ಶೇ.0.99, ಒಡಿಶಾ-ಶೇ.1.32, ತ್ರಿಪುರ-1.56, ಉತ್ತರಪ್ರದೇಶ ಶೇ.6.84, ಪಶ್ಚಿಮ ಬಂಗಾಳ-10.97,ಛತ್ತೀಸ್‌ಗಢ-ಶೇ.2.24, ದಾದ್ರಾ-ಶೇ.0.00, ದಿಯು-ದಮನ್-ಶೇ.5.83ರಷ್ಟು ಮತದಾನವಾಗಿದೆ.
10:00 AM, 23 Apr

ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್

ಭುವನೇಶ್ವರದಲ್ಲಿ ಮತದಾನ ಮಾಡಿದ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್
9:59 AM, 23 Apr

ಮುಲಾಯಮ್ ಸಿಂಗ್

ಮುಲಾಯಮ್ ಸಿಂಗ್ ಯಾದವ್ ಸಹೋದರ ಅಭಯ್ ಸಿಂಗ್ ಯಾದವ್ ಮೈನ್‌ಪುರಿಯಲ್ಲಿ ಮತಚಲಾಯಿಸಿದರು
9:34 AM, 23 Apr

ಅಮಿತ್ ಶಾ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದರು
9:27 AM, 23 Apr

ಒಡಿಶಾ

ಒಡಿಶಾದ ತಾಲ್‌ಚೇರ್‌ನಲ್ಲಿ ಮತದಾನ ಮಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
9:22 AM, 23 Apr

ಬಂಡೆಪ್ಪ ಕಾಶೆಂಪೂರ್

ಬೀದರ್‌ನ ಓಲ್ಡ್‌ಸಿಟಿಯಲ್ಲಿರುವ ಮತಗಟ್ಟೆಯಲ್ಲಿ ಶಾಸಕ ಬಂಡೆಪ್ಪ ಕಾಶೆಂಪೂರ್ ಮತದಾನ
9:18 AM, 23 Apr

ಬೆಳಗಾವಿ ಲೋಕಸಭಾ ಕ್ಷೇತ್ರ

ಬೆಳಗಾವಿ ಲೋಕಸಭಾ ಕ್ಷೇತ್ರ-ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಸಾಧುನವರ್ ರಿಂದ ವಿಶೇಷ ಪೂಜೆ
9:10 AM, 23 Apr

ಗುಜರಾತ್

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಪತ್ನಿ ಅಂಜಲಿ ಜೊತೆ ರಾಜ್‌ಕೋಟ್‌ನ ಅನಿಲ್ ಜ್ಞಾನ ಮಂದಿರ ಶಾಲೆಯಲ್ಲಿ ಮತ ಚಲಾಯಿಸಿದರು.
9:05 AM, 23 Apr

ಮತದಾನ ಬಹಿಷ್ಕಾರ

ದಾವಣಗೆರೆಯಲ್ಲಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ, ಇನ್ನು ಬಳ್ಳಾರಿಯ ಹರಪನಹಳ್ಳಿಯಲ್ಲೂ ಮಹತದಾನ ಬಹಿಷ್ಕಾರ
9:02 AM, 23 Apr

ಬಿಜೆಪಿ ಅಭ್ಯರ್ಥಿ ಅಪರಾಜಿತಾ

ಭುವನೇಶ್ವರದ ಬಿಜೆಪಿ ಅಭ್ಯರ್ಥಿ ಅಪರಾಜಿತಾ ಸಾರಂಗಿಯಿಂದ ಭುವನೇಶ್ವರದ ಸರ್ಕಾರಿ ಶಾಲೆಯಲ್ಲಿ ಮತ ಚಲಾವಣೆ
8:47 AM, 23 Apr

ಕಾಂಗ್ರೆಸ್‌ಗೆ ಮತ ಹಾಕಿದ ಫೋಟೊ ತೆಗೆದುಕೊಂಡು ಬಂದ ಮತದಾರ

ಕೊಪ್ಪಳದಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ ಫೋಟೊ ತೆಗೆದುಕೊಂಡು ಬಂದ ಮತದಾರ, ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ಘಟನೆ ನಡೆದಿದೆ. ಕೆ ರಾಜಶೇಖರ್ ಹಿಟ್ನಾಳ್‌ಗೆ ಮತಹಾಕಿರುವ ಫೋಟೊ ವೈರಲ್
READ MORE

English summary
Lok Sabha Elections 2019 Phase 3 polling Live updates in Kannada. Including Karnataka ,Gujarat, Kerala, Goa, Assam,Chattisgarh, Jammu and Kashmir 15 states will go to Voting Today.(April 23). Results will be on May 23rd. Lok Sabha elections over all India will Happen in 7 phases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X