ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ LIVE: ಮತದಾನ ಮುಕ್ತಾಯ, ಬಹತೇಕ ಶಾಂತಿಯುತ

|
Google Oneindia Kannada News

ನವದೆಹಲಿ, ಏ.18: ಲೋಕಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಇಂದು(ಏ.18)ರಂದು ಮತದಾನ ನಡೆಯಲಿದೆ. ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 12 ರಾಜ್ಯಗಳಲ್ಲಿ ಚುನಾವಣಾ ನಡೆಯಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

12 ರಾಜ್ಯಗಳು ಬಿಹಾರ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಹಾರಾಷ್ಟ್ರ, ಅಸ್ಸಾಂ, ಛತ್ತೀಸ್‌ಗಢ, ಮಣಿಪುರ, ಒಡಿಶಾ, ಪಾಂಡಿಚೇರಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶದಲ್ಲಿ ಮತ ಚಲಾಯಿಸಲಿದ್ದಾರೆ.

ಏ.11ರಂದು ನಡೆದ ಪ್ರಥಮ ಹಂತದ ಮತದಾನದ ವೇಳೆ ಬಹುತೇಕ ಕಡೆ ವಿದ್ಯುನ್ಮಾನ ಮತ ಯಂತ್ರಗಳ(ಇವಿಎಂ) ದೋಷದಿಂದಾಗಿ ಕೆಲಕಾಲ ಚುನಾವಣಾ ಪ್ರಕ್ರಿಯೆಗೆ ಅಡ್ಡಿಯಾಗಿತ್ತು.

Lok sabha elections 2019 phase 2 polling live updates in Kannada

ಎರಡನೆ ಹಂತದಲ್ಲಿ ಇಂಥ ಗೊಂದಲಗಳು ಪುನರಾವರ್ತನೆಯಾಗದಂತೆ ಚುನಾವಣಾ ಆಯೋಗ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

2019ರ ಲೋಕಸಭಾ ಚುನಾವಣೆಯ ನೀವು ತಿಳಿಯಲೇ ಬೇಕಾದ 7 ವಿಶೇಷತೆಗಳು!2019ರ ಲೋಕಸಭಾ ಚುನಾವಣೆಯ ನೀವು ತಿಳಿಯಲೇ ಬೇಕಾದ 7 ವಿಶೇಷತೆಗಳು!

ಏ.11ರಂದು ಆರಂಭವಾದ ಲೋಕಸಭಾ ಸಮರ ಮೇ 19ರ ವರೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ. ಮೇ 23ರಂದು 17ನೆ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

Newest FirstOldest First
6:19 PM, 18 Apr

5 ಗಂಟೆ ವೇಳೆಗೆ ಲೋಕಸಭೆ ಎರಡನೇ ಹಂತದ ಮತದಾನ ನಡೆದ ಅಸ್ಸಾಂನಲ್ಲಿ 73.32%, ಬಿಹಾರ್‌ನಲ್ಲಿ 58.14%, ಚತ್ತೀಸ್‌ಗಡದಲ್ಲಿ 68.70%, ಜಮ್ಮು ಕಾಶ್ಮೀರದಲ್ಲಿ 43.37%, ಕರ್ನಾಟಕದಲ್ಲಿ 61.80%, ಮಹಾರಾಷ್ಟ್ರದಲ್ಲಿ 55.33%, ಮಣಿಪುರದಲ್ಲಿ 74.63%, ಒಡಿಸ್ಸಾದಲ್ಲಿ 57.41%, ಪುದುಚೆರಿಯಲ್ಲಿ 72.40%, ತಮಿಳುನಾಡಿನಲ್ಲಿ 61.52%, ಉತ್ತರ ಪ್ರದೇಶದಲ್ಲಿ 58.12%, ಪಶ್ಚಿಮ ಬಂಗಾಳದಲ್ಲಿ 75.27% ಮತ ಚಲಾವಣೆ ಆಗಿದೆ.
6:13 PM, 18 Apr

ಮತದಾನದ ಸಮಯ ಮುಕ್ತಾಯ. ಸರತಿ ಸಾಲಿನಿಲ್ಲಿ ನಿಂತವರಿಗಷ್ಟೆ ಅವಕಾಶ. ಪಶ್ಚಿಮ ಬಂಗಾಳ ಹೊರತುಪಡಿಸಿ ಬಹುತೇಕ ಕಡೆ ಎರಡನೇ ಹಂತದ ಲೋಕಸಭೆ ಚುನಾವಣೆ ಶಾಂತಿಯುತ.
3:44 PM, 18 Apr

ಮತಗಟ್ಟೆಯಲ್ಲೇ ಕುಸಿದು ಬಿದ್ದು 95 ವರ್ಷದ ವೃದ್ಧ ಸಾವು

ಒಡಿಶಾದ ಗಂಜಂನಲ್ಲಿ ಮತಗಟ್ಟೆಯಲ್ಲೇ ಕುಸಿದು ಬಿದ್ದು 95 ವರ್ಷದ ವೃದ್ಧ ಸಾವು
2:57 PM, 18 Apr

ಶ್ರೀಧರನ್ ಪಿಳ್ಳೈ ವಿರುದ್ಧ ಪ್ರಕರಣ

ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ, ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೈ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು
2:54 PM, 18 Apr

ಮಹಾರಾಷ್ಟ್ರದಲ್ಲಿ ಶೇ.35.4ರಷ್ಟು ಮತದಾನ

ಮಧ್ಯಾಹ್ನ 1 ಗಂಟೆವರೆಗೆ ಮಹಾರಾಷ್ಟ್ರದಲ್ಲಿ ಶೇ.35.4ರಷ್ಟು ಮತದಾನ
2:46 PM, 18 Apr

ಇವಿಎಂ ಕುಟ್ಟಿ ಪುಡಿ ಮಾಡಿ ಆಕ್ರೋಶ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ, ಇವಿಎಂ ಕುಟ್ಟಿ ಪುಡಿ ಮಾಡಿ ಆಕ್ರೋಶ
2:03 PM, 18 Apr

ಫತೇಪುರ್ ಸಿಕ್ರಿ

ಫತೇಪುರ್ ಸಿಕ್ರಿಯಲ್ಲಿ ಮಂಗೋಲಿ ಜನರಿಂದ ಮತದಾನ ಬಹಿಷ್ಕಾರ
Advertisement
1:17 PM, 18 Apr

ಐಇಡಿ ಸ್ಫೋಟ

ಐಇಡಿ ಸ್ಫೋಟಗೊಂಡು ಓರ್ವ ಕಾನ್‌ಸ್ಟೇಬಲ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.
12:54 PM, 18 Apr

ಸಿಪಿಎಂ ಅಭ್ಯರ್ಥಿ ಸಲೀಂ ಅವರ ಕಾರಿನ ಮೇಲೆ ದಾಳಿ

ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಅಭ್ಯರ್ಥಿ ಸಲೀಂ ಅವರ ಕಾರಿನ ಮೇಲೆ ದಾಳಿ, ಇದರ ಹಿಂದೆ ಟಿಎಂಸಿ ಕೈವಾಡವಿದೆ ಎಂದು ಆರೋಪ.
12:33 PM, 18 Apr

ಲೋಕಸಭಾ ಅಭ್ಯರ್ಥಿ ಕನ್ವರ್ ಸಿಂಗ್ ಆರೋಪ

ಬುರ್ಖಾ ಧರಿಸಿ ಬರುವ ಮಹಿಳೆಯರನ್ನು ಪರಿಶೀಲನೆ ಮಾಡಿಲ್ಲ, ಸಾಕಷ್ಟು ಮಂದಿ ನಕಲಿ ಮತ ಚಲಾಯಿಸಿದ್ದಾರೆ ಎಂದು ಉತ್ತರ ಪ್ರದೇಶ ಅಮ್ರೋಹಾದ ಲೋಕಸಭಾ ಅಭ್ಯರ್ಥಿ ಕನ್ವರ್ ಸಿಂಗ್ ಆರೋಪ
12:16 PM, 18 Apr

ತೇಜಸ್ವಿನಿ ಅನಂತ ಕುಮಾರ್

ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್ ಬೆಂಗಳೂರು ಬಸವನಗುಡಿಯ ಶ್ರೀ ವಾಸವಿ ವಿದ್ಯಾನಿಕೇತನದಲ್ಲಿ ಮತಚಲಾಯಿಸಿದರು
11:51 AM, 18 Apr

ರೀನಗರದ ಮುನ್ಶಿಭಾಗ್

ಶ್ರೀನಗರದ ಮುನ್ಶಿಭಾಗ್ ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಿದ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ
Advertisement
11:38 AM, 18 Apr

11 ಗಂಟೆವರೆಗೆ ಮಣಿಪುರದಲ್ಲಿ ಶೇ.32.18ರಷ್ಟು ಮತದಾನ

11 ಗಂಟೆವರೆಗೆ ಮಣಿಪುರದಲ್ಲಿ ಶೇ.32.18ರಷ್ಟು ಮತದಾನ, ಬಿಹಾರದಲ್ಲಿ ಶೇ.18.97ರಷ್ಟು ಮತದಾನವಾಗಿದೆ. ಅಸ್ಸಾಂನಲ್ಲಿ ಶೇ.26.39, ಛತ್ತೀಗಢದಲ್ಲಿ ಶೇ.26.2ರಷ್ಟು ಮತದಾನವಾಗಿದೆ.
11:38 AM, 18 Apr

ಪಶ್ಚಿಮ ಬಂಗಾಳದ ಉತ್ತರ ಡಿಗಿರ್‌ಪರ್ ಕ್ಷೇತ್ರದಲ್ಲಿ ಗಲಭೆ ಪ್ರಾರಂಭವಾಗಿದ್ದು, ಗುಂಪೊಂದು ಕೆಲವರನ್ನು ಮತಚಲಾಯಿಸಿಸುವದರಿಂದ ತಡೆದ ಕಾರಣ. ಪೊಲೀಸರು ಗುಂಪನ್ನು ಚದುರಿಸುವ ಯತ್ನ ಮಾಡಿದ್ದಾರೆ. ಈ ಸಮಯ ಲಾಠಿ ಪ್ರಹಾರ ಮತ್ತು ಅಶ್ರು ವಾಯು ಪ್ರಯೋಗಿಸಲಾಗಿದೆ.
11:24 AM, 18 Apr

ಪಶ್ಚಿಮ ಬಂಗಾಳದ ರಾಯ್‌ಗಂಜ್‌ನಲ್ಲಿ ಟಿಎಂಸಿ ಕಾರ್ಯಕರ್ತರು ಬೂತ್ ಅನ್ನು ತಮ್ಮ ವಶಕ್ಕೆ ಪಡೆಯಲು ಯತ್ನಿಸುತ್ತಿದ್ದಾರೆ. ಅಲ್ಲಿ ಬೂತ್ ಒಳಗೆ ಪ್ರಚಾರ ಮಾಡಲಾಗುತ್ತಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಕಾರ್ಯದರ್ಶಿ ಆರೋಪಿಸಿದ್ದಾರೆ.
10:22 AM, 18 Apr

ಚತ್ತೀಸ್‌ಘಡದ ಕಾಂಕೇರ್‌ನ ಬೂತ್ ಸಂಖ್ಯೆ 186 ರಲ್ಲಿ ಮತಗಟ್ಟೆ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
10:09 AM, 18 Apr

ಚಾಮರಾಜನಗರ ಮತಗಟ್ಟೆ ಸಂಖ್ಯೆ 48 ರಲ್ಲಿ ಹೃದಯಾಘಾತದಿಂದ ಮತಗಟ್ಟೆ ಅಧಿಕಾರಿಯೊಬ್ಬರು ನಿಧನರಾಗಿದ್ದಾರೆ. ಮೃತರನ್ನು ಶಾಂತಮೂರ್ತಿ (48) ಎಂದು ಗುರುತಿಸಲಾಗಿದೆ.
10:07 AM, 18 Apr

ಜಮ್ಮು ಕಾಶ್ಮೀರದಲ್ಲಿ ಎರಡನೇ ಹಂತದ ಚುನಾವಣೆ ಈವರೆಗೆ ಶಾಂತಿಯುತವಾಗಿ ನಡೆಯುತ್ತಿದೆ. ಕಾಶ್ಮೀರದಲ್ಲಿ ಭಾರಿ ಬಗಿ ಭದ್ರತೆ ಏರ್ಪಡಿಸಲಾಗಿದ್ದು, ಭದ್ರತೆಯ ಕಾರಣದಿಂದಲಾಗಿಯೇ ಅಲ್ಲಿ ಐದು ಹಂತದಲ್ಲಿ ಚುನಾವಣೆ ನಡೆಸಲಾಗುತ್ತಿದೆ.
9:39 AM, 18 Apr

ಹಾನಸದ ಅರಕಲಗೂಡಿನ ಕಟ್ಟೇಪುರದಲ್ಲಿ ಮತಯಂತ್ರ ಗೊಂದಲ, ಏಳು ಮತ ಹಾಕಿದ್ದರೆ 10 ಮತ ಎಂದು ತೋರಿಸುತ್ತಿರುವ ಇವಿಎಂ. ಸ್ಥಳದಲ್ಲಿ ಗೊಂದಲದ ವಾತಾವರಣ.
9:31 AM, 18 Apr

ಬೆಳಗ್ಗೆಯಿಂದ ಇದುವರೆಗೆ ಅಸ್ಸಾಂನಲ್ಲಿ ಅತಿ ಹೆಚ್ಚು ಮತದಾನ

ಬೆಳಗ್ಗೆಯಿಂದ ಇದುವರೆಗೆ ಅಸ್ಸಾಂನಲ್ಲಿ ಅತಿ ಹೆಚ್ಚು ಅಂದರೆ ಶೇ. 9.51ರಷ್ಟು ಮತದಾನ, ಕರ್ನಾಟಕದಲ್ಲಿ ಶೇ.1.14, ಜಮ್ಮು ಮತ್ತು ಕಾಶ್ಮೀರದಲ್ಲಿ 0.99 ಅಷ್ಟು ಮತದಾನ, ತಮಿಳುನಾಡಿನಲ್ಲಿ 0.81 ಮತದಾನವಾಗಿದೆ.
9:23 AM, 18 Apr

ಮಣಿಪುರದ ಮುಖ್ಯಮಂತ್ರಿ ಬೀರೇನ್ ಸಿಂಗ್

ಮಣಿಪುರದ ಮುಖ್ಯಮಂತ್ರಿ ಬೀರೇನ್ ಸಿಂಗ್ ಇಂಫಾಲ್‌ನಲ್ಲಿ ಇಂದು ಮತ ಚಲಾಯಿಸಿದರು
9:18 AM, 18 Apr

ಸಿಎಂ ಕುಮಾರಸ್ವಾಮಿ

ಸಿಎಂ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಕೇತಿಗಾನಹಳ್ಳಿಗೆ ಮತ ಚಲಾಯಿಸಲು ಆಗಮನ
9:13 AM, 18 Apr

ಕೆ.ಎನ್. ರಾಜಣ್ಣ ಮನೆಗೆ ಬಿಜೆಪಿ ಅಭ್ಯರ್ಥಿ ಬಸವರಾಜು ಭೇಟಿ

ಮಧುಗಿರಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಮನೆಗೆ ಬಿಜೆಪಿ ಅಭ್ಯರ್ಥಿ ಬಸವರಾಜು ಭೇಟಿ, ದೇವೇಗೌಡರ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದ ಕೆಎನ್ ರಾಜಣ್ಣ
9:11 AM, 18 Apr

ಜಿ ಪರಮೇಶ್ವರ್

ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹಾಗೂ ಪತ್ನಿ ಕನ್ನಿಕಾ ಪರಮೇಶ್ವರಿ ತುಮಕೂರಿನ ಕೊರಟಗೆರೆಯಲ್ಲಿ ಮತ ಚಲಾಯಿಸಿದರು.
8:55 AM, 18 Apr

ಸುಮಲತಾ ಮನವಿ

ಯಾವ ಅಭ್ಯರ್ಥಿಯಿಂದ ಒಳ್ಳೆಯದಾಗಬಹುದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಮತದಾನ ಮಾಡಿ, ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೀರ ಎನ್ನುವ ಭರವಸೆ ನನಗಿದೆ, ನಿಮ್ಮ ಅಮೂಲ್ಯವಾದ ಮತವನ್ನು ನೀಡಬೇಕು ಎಂದು ಸುಮಲತಾ ಮನವಿ
8:53 AM, 18 Apr

ಕಮಲ್ ಹಾಸನ್

ತಮಿಳುನಾಡಿನಲ್ಲಿ ಮಕ್ಕಳ ನೀದಿ ಮೈಯ್ಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಹಾಗೂ ಪುತ್ರಿ ಶೃತಿ ಹಾಸನ್ ಮತಚಲಾಯಿಸಿದರು
8:51 AM, 18 Apr

ಕಿರಣ್ ಬೇಡಿ ಮತ ಚಲಾವಣೆ

ಪುದುಚೇರಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮತ ಚಲಾವಣೆ
8:23 AM, 18 Apr

ಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ ಚಲಾವಣೆ

ಜಯನಗರದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ ಚಲಾವಣೆ
8:17 AM, 18 Apr

ತಮಿಳುನಾಡು ಸಿಎಂ ಪಳನಿಸ್ವಾಮಿ

ಸೇಲಂನಲ್ಲಿ ತಮಿಳುನಾಡು ಸಿಎಂ ಪಳನಿಸ್ವಾಮಿ ಮತಚಲಾವಣೆ
8:09 AM, 18 Apr

ಚುನಾವಣಾಧಿಕಾರಿ ಸಂಜೀವ್ ಕುಮಾ

ಚುನಾವಣಾಧಿಕಾರಿ ಸಂಜೀವ್ ಕುಮಾರ್ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಲಾರೆನ್ಸ್ ಇಂಗ್ಲಿಷ್ ಶಾಲೆಯಲ್ಲಿ ಮತ ಚಲಾಯಿಸಿದರು
READ MORE

English summary
Lok Sabha Elections 2019 Phase 2 polling Live updates in Kannada. Including Karnataka ,Tamil Nadu, Uttar Pradesh, Jammu and Kashmir, Bihar 13 states will go to Voting Today.(April 18). Results will be on May 23rd. Lok Sabha elections over all India will Happen in 7 phases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X