ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ: ಮೊದಲ ಹಂತದ ಮತದಾನ ಯಶಸ್ವಿ

|
Google Oneindia Kannada News

ನವದೆಹಲಿ, ಏಪ್ರಿಲ್ 11: 17ನೇ ಲೋಕಸಭೆ ಚುನಾವಣೆ ಗುರುವಾರ(ಏ.11) ದಿಂದ ಮತದಾನ ಆರಂಭವಾಗಿದ್ದು, ಒಟ್ಟು 91 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. 20 ರಾಜ್ಯಗಳ 1279 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯನ್ನು ಸೇರಲಿದೆ. ಬೆಳಿಗ್ಗೆ 7 ರಿಂದ ಸಂಜೆ 6 ವರೆಗೆ ಮತದಾನ ನಡೆಯಲಿದೆ.

ಆಂಧ್ರಪ್ರದೇಶ, ತೆಲಂಗಾಣ, ಅರುಣಾಚಲ ಪ್ರದೇಶ, ಉತ್ತರಾಖಂಡ್, ಮೇಘಾಲಯ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ತ್ರಿಪುರ, ಉತ್ತರ ಪ್ರದೇಶ, ಪಶ್ಚಿಮಬಂಗಾಳ, ಅಸ್ಸಾಂ, ಬಿಹಾರ, ಛತ್ತೀಸ್ ಗಢ, ಮಣಿಪುರ, ಒಡಿಶಾ, ತ್ರಿಪುರ, ಪಶ್ಚಿಮ ಬಂಗಾಳ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ಗಳಲ್ಲಿ ಅಂದರೆ 20 ರಾಜ್ಯಗಳಲ್ಲಿ ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ನಡೆಯಲಿದೆ.

ಲೋಕ ಸಮರ : 7 ಹಂತದಲ್ಲಿ ಮತದಾನ, ಮೇ 23ರಂದು ಫಲಿತಾಂಶಲೋಕ ಸಮರ : 7 ಹಂತದಲ್ಲಿ ಮತದಾನ, ಮೇ 23ರಂದು ಫಲಿತಾಂಶ

 Lok Sabha Elections 2019 Phase 1 Polling Live Updates in Kannada on 91 Constituencies

ಮಾರ್ಚ್ 10 ರಂದು ಲೋಕಸಭೆ ಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಿತ್ತು. ಅಂದಿನಿಂದಲೂ ನೀತಿಸಂಹಿತೆ ಜಾರಿಯಲ್ಲಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದ್ದು, ಏಪ್ರಿಲ್ 11 ರಿಂದ 19 ರವರೆಗೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿ

17 ನೇ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ಕ್ಷಣಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ಲೈವ್ ಬ್ಲಾಗ್ ಮೂಲಕ ನೀಡಲಿದೆ.

Newest FirstOldest First
5:01 PM, 11 Apr

ನೊಯ್ಡಾದಲ್ಲಿ ಕೆಟ್ಟುನಿಂತ ಇವಿಎಂ, ಮ್ಯಾಜಿಸ್ಟ್ರೇಟ್ ಹೊಸ ಮತಯಂತ್ರದೊಂದಿಗೆ ಆಗಮನ
4:58 PM, 11 Apr

ಮಧ್ಯಾಹ್ನ 3 ಗಂಟೆಯವರೆಗೆ ಆಂಧ್ರಪ್ರದೇಶದಲ್ಲಿ ಶೇ.55ರಷ್ಟು ಮತದಾನವಾಗಿದೆ
4:58 PM, 11 Apr

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತದಾನ
4:08 PM, 11 Apr

3 ಗಂಟೆಯ ಹೊತ್ತಿಗೆ ಮಿಜೋರಾ ನಲ್ಲಿ 55.20%, ತ್ರಿಪುರ ಪಶ್ಚಿಮ ಕ್ಷೇತ್ರದಲ್ಲಿ 68.65%, ಪಶ್ಚಿಮಬಂಗಾಳದಲ್ಲಿ 69.94% ಮತದಾನ ದಾಖಲಾಗಿದೆ.
3:58 PM, 11 Apr

3 ಗಂಟೆಯ ಹೊತ್ತಿಗೆ ಉತ್ತರ ಪ್ರದೇಶದಲ್ಲಿ ಶೇ.50.8 ರಷ್ಟು ಮತದಾನ ದಾಖಲು
3:48 PM, 11 Apr

3 ಗಂಟೆಯವರೆಗೆ ಮಹಾರಾಷ್ಟ್ರದ ನಾಗ್ಪುರ ಕ್ಷೇತ್ರದಲ್ಲಿ 38.35%. ರಷ್ಟು ಮತದಾನ
3:13 PM, 11 Apr

ಮತದಾನ ಮಾಡಿ ಮರಳುವ ಸಂದರ್ಭದಲ್ಲಿ ಮತದಾರರಿದ್ದ ಟ್ರ್ಯಾಕ್ಟರ್ ವೊಂದು ಅಪಘಾತಕ್ಕೀಡಾದ ಕಾರಣ ಮೂವರು ಸಾವಿಗೀಡಾದ ಘಟನೆ ಮಹಾರಾಷ್ಟ್ರದ ಶಂಕರಪುರದಲ್ಲಿ ನಡೆದಿದೆ.
Advertisement
2:57 PM, 11 Apr

ಹೈದರಾಬಾದ್ : ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ, ಕ್ರಿಕೆಟಿಗ ಮೊಹಮ್ಮದ್ ಅಜರುದ್ದಿನ್ ಅವರು ಮತಗಟ್ಟೆ ಸಂಖ್ಯೆ 71 ರಲ್ಲಿ ಮತಚಲಾಯಿಸಿದರು.
2:53 PM, 11 Apr

1 ಗಂಟೆಯವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 35.52%ರಷ್ಟು ಮತದಾನ ದಾಖಲು
2:30 PM, 11 Apr

ವಿಶ್ವದ ಅತೀ ಚಿಕ್ಕ ಮಹಿಳೆ ಜ್ಯೋತಿ ಆಮ್ಗೆಯಿಂದ ನಾಗ್ಪುರ ಮತಗಟ್ಟೆಯಲ್ಲಿ ಮತದಾನ
2:14 PM, 11 Apr

ಉತ್ತರಾಖಂಡ್ ನ ಹರಿದ್ವಾರದಲ್ಲಿ ಮತಚಲಾವಣೆ ಮಾಡಿದ ಯೋಗಗುರು ಬಾಬಾ ರಾಮದೇವ್
2:10 PM, 11 Apr

ಸಿದ್ದಿಪೇಟ್ ಮತಗಟ್ಟೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತಚಲಾವಣೆ
Advertisement
1:30 PM, 11 Apr

1 ಗಂಟೆಯವರೆಗೆ ಉತ್ತರಾಖಂಡ್ ನಲ್ಲಿ ಶೇ.41.27ರಷ್ಟು ಮತದಾನ.
1:28 PM, 11 Apr

"ಬುರ್ಖಾ ಧರಿಸಿ ಅಥವಾ ಮುಖಕ್ಕೆ ದುಪ್ಪಟ್ಟ ಮುಚ್ಚಿಕೊಂಡು ಬರುವ ಮಹಿಳೆಯರನ್ನು ಮಹಿಳಾ ಚುನಾವಣಾ ಸಿಬ್ಬಂದಿ ತಪಾಸಣೆ ಮಾಡಿಯೇ ಮತದಾನಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ." ಬುರ್ಖಾ ಹಾಕಿಕೊಂಡ ಮಹಿಳೆಯರನ್ನು ತಪಾಸಣೆ ಮಾಡದೆ, ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂಬ ಬಿಜೆಪಿ ಮುಖಂಡ ಸಂಜಿವ್ ಬಾಲ್ಯನ್ ಆರೋಪಕ್ಕೆ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಬಿ ಆರ್ ತಿವಾರಿ ಪ್ರತಿಕ್ರಿಯೆ.
1:14 PM, 11 Apr

ಹೈದರಾಬಾದ್: ಟಾಲಿವುಡ್ ತಾರಾದಂಪತಿ ನಾಗಚೈತನ್ಯ ಮತ್ತು ಸಮಂತಾ ನಾನಕ್ರಂಗುಡದ ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿದರು.
1:09 PM, 11 Apr

ಟಿಡಿಪಿಯ ಭಾಸ್ಕರ ರೆಡ್ಡಿ ಮತ್ತು ವೈಎಸ್ ಆರ್ ಸಿಪಿಯ ಪುಲ್ಲಾರೆಡ್ಡಿ ಅವರೇ ಮೃತ ದುರ್ದೈವಿಗಳು
1:06 PM, 11 Apr

ಅನಂತಪುರ ಜಿಲ್ಲೆಯ ಪೀಠಾಪುರ ಎಂಬಲ್ಲಿ ಟಿಡಿಪಿ ಮತ್ತು ವೈಎಸ್ ಆರ್ ಸಿಪಿ ಪಕ್ಷದ ಕಾರ್ಯಕರ್ತರ ನಡುವೆ ಕ್ಷುಲ್ಲಕ ವಿಷಯಕ್ಕಾಗಿ ಗಲಾಟೆ ಆರಂಭವಾಗಿತ್ತು. ಅದೇ ವಿಕೋಪಕ್ಕೆ ತಿರುಗಿದ ಕಾರಣ ಭಾಸ್ಕರ ರೆಡ್ಡಿ ಮತ್ತು ಪುಲ್ಲಾರೆಡ್ಡಿ ಎಂಬುವವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲ್ಲಲಾಗಿದೆ.
12:41 PM, 11 Apr

ಆಂಧ್ರಪ್ರದೇಶದ ಬಂದರ್ಲಾಪಳ್ಳಿ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಮತ್ತು ಟಿಡಿಪಿ ಕಾರ್ಯಕರ್ತರ ನಡುವೆ ಮಾರಾಮಾರಿ
12:17 PM, 11 Apr

ಮಹಾರಾಷ್ಟ್ರದ ಗಡ್ಚಿರೋಲಿಯ ಇಟಾಪಳ್ಳಿ ಎಂಬಲ್ಲಿಯ ನಕ್ಸಲ್ ಪೀಡಿತ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಬಳಸಿ ಸ್ಫೋಟ. ಯಾವುದೇ ಸಾವು-ನೋವಿನ ವರದಿಯಾಗಿಲ್ಲ.
12:16 PM, 11 Apr

ನಾನು ಅತೀ ಹೆಚ್ಚು ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂಬ ನಂಬಿಕೆ ಇದೆ: ನಿತಿನ್ ಗಡ್ಕರಿ, ನಾಗ್ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
12:11 PM, 11 Apr

"ನಾವು ಈ ರೇಸ್ ನಲ್ಲಿ ಗೆಲ್ಲುತ್ತೇವೆ. ನಾನು ಆಶಾವಾದಿಯಾಗಿದ್ದೇನೆ"- ಮತದಾನದ ನಂತರ ತೆಲಂಗಾಣದ ಖಾಮ್ಮಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರೇಣುಕಾ ಚೌಧರಿ ಹೇಳಿಕೆ
12:01 PM, 11 Apr

ತೆಲಂಗಾಣ ರಾಷ್ಟ್ರ ಸಮಿತಿ ಸಂಸದೆ ಕೆ ಕವಿತಾ ಅವರು ನಿಜಾಮಾಬಾದ್ ಕ್ಷೇತ್ರದ ಪೊತಂಗಲ್ ನಲ್ಲಿ ಮತಚಲಾಯಿಸಿದರು.
11:58 AM, 11 Apr

11 ಗಂಟೆಯವರೆಗೆ ತೆಲಂಗಾಣದಲ್ಲಿ 22.84%, ಉತ್ತರಾಖಂಡ್ ದಲ್ಲಿ 23.78% , ಲಕ್ಷದ್ವೀಪ ದಲ್ಲಿ 23.10% , ಮಹಾರಾಷ್ಟ್ರದಲ್ಲಿ 13.7% ರಷ್ಟು ಮತದಾನ ದಾಖಲು.
11:54 AM, 11 Apr

"2 ಕೋಟಿ ಉದ್ಯೋಗವಿಲ್ಲ, 15 ಲಕ್ಷ ನಿಮ್ಮ ಖಾತೆಗೆ ಬರಲಿಲ್ಲ, ಅಚ್ಚೇದಿನ(ಒಳ್ಳೆಯದಿನ)ವೂ ಬರಲಿಲ್ಲ! ಅದರ ಬದಲು, ನಿರುದ್ಯೋಗ, ಅಪನಗದೀಕರಣ, ರೈತರ ನೋವು, ಗಬ್ಬರ್ ಸಿಂಗ್ ಟ್ಯಾಕ್ಸ್, ಸೂಟ್ ಬೂಟ್ ಸರ್ಕಾರ, ರಫೇಲ್, ಸುಳ್ಳು, ಸುಳ್ಳು, ಸುಳ್ಳು, ಅಪನಂಬಿಕೆ, ಹಿಂಸೆ, ದ್ವೇಷ, ಭಯ... ನೀವು ಇಂದು ಭಾರತದ ಆತ್ಮಕ್ಕೆ ಮತಹಾಕುತ್ತಿದ್ದೀರಿ. ಅದರ ಭವಿಷ್ಯಕ್ಕೆ ಮತಹಾಕುತ್ತಿದ್ದೀರಿ, ಯೋಚಿಸಿ ಮತಚಲಾಯಿಸಿ" - ರಾಹುಲ್ ಗಾಂಧಿ
11:52 AM, 11 Apr

ಎಂಟು ಲೋಕಸಭಾಕ್ಷೆತ್ರಗಳಲ್ಲಿ 11 ಗಂಟೆಯ ಹೊತ್ತಿಗೆ ಶೇ 24.32 ರಷ್ಟು ಮತದಾನ
11:34 AM, 11 Apr

ದಿಬ್ರುಗಢ ಮತಕ್ಷೇತ್ರದಲ್ಲಿ ಮತಚಲಾಯಿಸಿದ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್
11:33 AM, 11 Apr

ಇವಿಎಂ ದೋಷದಿಂದಾಗಿ ಹಲವೆಡೆ 9:30 ರವರೆಗೂ ಮತದಾನ ಆರಂಭವಾಗಲಿಲ್ಲ. ನಂತರ ಮತದಾರರು ಮತ್ತೆ ಮತಗಟ್ಟೆಗೆ ಬಂದಿಲ್ಲ. ಆದ್ದರಿಂದ ಈ ಎಲ್ಲ ಮತಗಟ್ಟೆಗಳಲ್ಲಿ ಮರುಮತದಾನ ಮಾಡಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
11:02 AM, 11 Apr

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರದ ಉಧಾಂಪುರದ ಕಾಶ್ಮೀರಿ ಪಂಡಿತರು ಬಾರಾಮುಲ್ಲಾ ಕ್ಷೇತ್ರಕ್ಕಾಗಿ ವಿಶೇಷ ಮತಗಟ್ಟೆಯಲ್ಲಿ ಮತಚಲಾಯಿಸಿದರು.
10:48 AM, 11 Apr

ಗುರ್ಜಾಲಾ ಮತಕ್ಷೇತ್ರದಲ್ಲಿ ಟಿಡಿಪಿ-ವೈಸಿಪಿ ಪಕ್ಷದ ಸಸದಸ್ಯರ ನಡುವೆ ಮಾರಾಮಾರಿ
10:31 AM, 11 Apr

ಪಶ್ಚಿಮಬಂಗಾಳ

ಪಶ್ಚಿಮಬಂಗಾಳದಲ್ಲಿ 9 ಗಂಟೆಯ ವೇಳೆಗೆ ಶೇ.18.12 ರಷ್ಟು ಮತದಾನ
READ MORE

English summary
Lok Sabha Elections 2019 Phase 1 Polling Live Updates in Kannada on 91 Constituencies.Including Maharashtra, Andhra Pradesh, Telangana, Arunachal Pradesh, Uttar Pradesh, West Bengal 20 states will go to voting today(April 1st).Results will be on May 23rd. Lok Sabha elections overall India will happen in 7 phases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X