ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿ ಮತ್ತೆ ಪ್ರಧಾನಿಯಾಗಬೇಕು': ಬಿಜೆಪಿಗೆ 907 ಕಲಾವಿದರ ಬೆಂಬಲ

|
Google Oneindia Kannada News

Recommended Video

Lok Sabha Elections 2019 : ನರೇಂದ್ರ ಮೋದಿಗೆ ಸಿಗ್ತು ದೊಡ್ಡ ಬೆಂಬಲ

ನವದೆಹಲಿ, ಏಪ್ರಿಲ್ 11: ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂದು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಸುಮಾರು 600 ಮಂದಿ ಕಲಾವಿದರು ಸಹಿ ಅಭಿಯಾನ ನಡೆಸಿದ್ದರು. ಅದರ ಬೆನ್ನಲ್ಲೇ ಮೋದಿ ಅವರನ್ನು ಬೆಂಬಲಿಸಿ 900ಕ್ಕೂ ಅಧಿಕ ಕಲಾವಿದರು ಅಭಿಯಾನ ನಡೆಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೋದಿ ವಿರೋಧಿ ಬಣದ ಕಲಾವಿದರಿಗೆ ಪ್ರತಿಯಾಗಿ ಉತ್ತರ ನೀಡಲು ಮೋದಿ ಅವರ ಬಗ್ಗೆ ಒಲವು ಹೊಂದಿರುವ 907 ಕಲಾವಿದರು ಬಿಜೆಪಿ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ. ಇವರಲ್ಲಿ ಬಾಲಿವುಡ್ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ಸಂಗೀತ ವಿದ್ವಾಂಸರು, ಶಿಲ್ಪಿಗಳು, ನೃತ್ಯಪಟುಗಳು ಮುಂತಾದವರು ಸೇರಿದ್ದಾರೆ.

ಲೋಕಸಭೆ ಚುನಾವಣೆ LIVE: ಮಹಾರಾಷ್ಟ್ರದಲ್ಲಿ ಮತದಾರರನ್ನು ಆತಂಕಗೊಳಿಸಿದ IED ಸ್ಫೋಟ ಲೋಕಸಭೆ ಚುನಾವಣೆ LIVE: ಮಹಾರಾಷ್ಟ್ರದಲ್ಲಿ ಮತದಾರರನ್ನು ಆತಂಕಗೊಳಿಸಿದ IED ಸ್ಫೋಟ

ಸಂಗೀತಗಾರ ಪಂಡಿತ್ ಜಸ್‌ರಾಜ್, ಉಸ್ತಾದ್ ಗುಲಾಂ ಮುಸ್ತಫಾ ಖಾನ್, ರೀಟಾ ಗಂಗೂಲಿ, ಶಂಕರ್ ಮಹದೇವನ್, ಹನ್ಸ್ ರಾಜ್ ಹನ್ಸ್, ವಿವೇಕ್ ಒಬೆರಾಯ್, ಅನುರಾಧಾ ಪೌಡ್ವಾಲ್, ಪ್ರತಿಭಾ ಪ್ರಹ್ಲಾದ್, ಟಿ.ಎಸ್. ನಾಗಾಭರಣ, ಶ್ರೀನಾಥ್ ವಸಿಷ್ಠ ಮುಂತಾದವರು ಸಹಿಯೊಂದಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಮೋದಿ 'ವಿರುದ್ದ' ಮತ ಹಾಕುವಂತೆ ಕಲಾವಿದರ ಭಾರೀ ಅಭಿಯಾನಮೋದಿ 'ವಿರುದ್ದ' ಮತ ಹಾಕುವಂತೆ ಕಲಾವಿದರ ಭಾರೀ ಅಭಿಯಾನ

ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ವಿರೋಧಿ ವಲಯದಲ್ಲಿ ಗುರುತಿಸಿಕೊಂಡಿರುವ ಕಲಾವಿದರು, ದ್ವೇಷ ರಾಜಕಾರಣ ಮಾಡುತ್ತಿರುವ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಬೇಕು ಎಂದು ಅಭಿಯಾನ ಆರಂಭಿಸಿದ್ದರು. ಅದಕ್ಕೆ ವಿರುದ್ಧವಾಗಿ ಬಿಜೆಪಿ ಪರ ಕಲಾವಿದರು ಧ್ವನಿ ಎತ್ತಿದ್ದಾರೆ.

ಒತ್ತಡಕ್ಕೆ ಮಣಿಯದೆ ಮತ ಚಲಾಯಿಸಿ

'ನೇಷನ್ ಫರ್ಸ್ಟ್ ಕಲೆಕ್ಟಿವ್: ಆನ್ ಇನಿಷಿಯೇಟಿವ್ ಬೈ ಕ್ರಿಯೆಟಿವ್ ಕಲೆಕ್ಟಿವ್ ಟ್ರಸ್ಟ್' ಎಂಬ ಶೀರ್ಷಿಕೆಯಲ್ಲಿ, 'ನಾವು ಸಾಹಿತ್ಯಕ್ಕೆ ಸಂಬಂಧಿಸಿದ ವಲಯಕ್ಕೆ ಸೇರಿದ ಸೃಜನಶೀಲ ಕ್ಷೇತ್ರದಲ್ಲಿರುವ ಕಲಾವಿದರು ಮತ್ತು ವ್ಯಕ್ತಿಗಳು ಕಲಾವಿದರು, ಎಲ್ಲ ನಾಗರಿಕರಿಗೆ ಮನವಿ ಮಾಡುತ್ತೇವೆ. ಯಾವುದೇ ಒತ್ತಡ ಮತ್ತು ಪೂರ್ವಗ್ರಹಗಳಿಗೆ ಒಳಗಾಗದೆ ಹೊಸ ಸರ್ಕಾರ ಚುನಾಯಿಸಲು ತಮ್ಮ ಹಕ್ಕುಗಳನ್ನು ಚಲಾವಣೆ ಮಾಡಿ' ಎಂದು ಕೋರಿದ್ದಾರೆ.

ಮೋದಿ ಸರ್ಕಾರ ಈಗಿನ ಅಗತ್ಯ

ಮೋದಿ ಸರ್ಕಾರ ಈಗಿನ ಅಗತ್ಯ

'ಕಳೆದ ಐದು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಆಧಾರಿತ ಆಡಳಿತ ನಡೆಸಿರುವ ಸರ್ಕಾರವನ್ನು ಭಾರತ ನೋಡಿದೆ ಎಂದು ನಾವು ಭಾವಿಸುತ್ತೇವೆ. ಈ ಅವಧಿಯಲ್ಲಿ ಜಾಗತಿಕವಾಗಿ ಭಾರತ ಭಾರಿ ಗೌರವ ಪಡೆದುಕೊಂಡಿದೆ. ಇದು ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಈ ಗಳಿಗೆಯ ಅಗತ್ಯ ಎಂದು ಸರ್ಕಾರದ ಮುಂದುವರಿಕೆ ಆಗಬೇಕು ಎನ್ನುವುದು ನಮ್ಮ ದೃಢ ನಿರ್ಣಯವಾಗಿದೆ' ಎಂದು ಅವರು ಹೇಳಿದ್ದಾರೆ.

ಮೋದಿಗೆ ಚುನಾವಣೆಯಲ್ಲಿ ನೆರವಾಗಲು ಪಾಕಿಸ್ತಾನ ಪುಲ್ವಾಮಾ ದಾಳಿ ನಡೆಸಿದೆ: ಅರವಿಂದ್ ಕೇಜ್ರಿವಾಲ್ಮೋದಿಗೆ ಚುನಾವಣೆಯಲ್ಲಿ ನೆರವಾಗಲು ಪಾಕಿಸ್ತಾನ ಪುಲ್ವಾಮಾ ದಾಳಿ ನಡೆಸಿದೆ: ಅರವಿಂದ್ ಕೇಜ್ರಿವಾಲ್

ಮಜಬೂತ್ ಸರ್ಕಾರ ಬೇಕು

ಮಜಬೂತ್ ಸರ್ಕಾರ ಬೇಕು

ಇದರೊಟ್ಟಿಗೆ, ಭಯೋತ್ಪಾದನೆಯಂತಹ ಸವಾಲುಗಳು ನಮ್ಮೆಲ್ಲರ ಮುಂದೆ ಇದೆ. ನಮಗೆ 'ಮಜಬೂತ್ ಸರ್ಕಾರ'ದ ಅವಶ್ಯಕತೆ ಇದೆ ಹೊರತು 'ಮಜಬೂರ್ ಸರ್ಕಾರ'ವಲ್ಲ. ಹೀಗಾಗಿ ನಮಗೆ ಈಗಿರುವ ಸರ್ಕಾರವೇ ಮುಂದುವರಿಯುವ ಅಗತ್ಯವಿದೆ ಎಂದು ಅವರು ಬರೆದಿದ್ದಾರೆ.

Array

ಮೋದಿ ವಿರುದ್ಧ ಸಹಿ ಅಭಿಯಾನ

ಮೋದಿ ಅವರು ಮತ್ತೆ ಪ್ರಧಾನಿಯಾಗದಂತೆ ಮತ ಚಲಾಯಿಸಿ ಎಂದು ರಂಗಭೂಮಿ, ಸಿನಿಮಾ ಮತ್ತು ಇತರೆ ಕ್ಷೇತ್ರಗಳ 700ಕ್ಕೂ ಅಧಿಕ ಕಲಾವಿದರು ಸಹಿ ಅಭಿಯಾನ ನಡೆಸಿದ್ದರು. ಪ್ರಜಾಪ್ರಭುತ್ವ ಉಳಿಸಿ ಎಂಬ ಅಡಿಬರಹದೊಂದಿಗೆ ಆರ್ಟಿಸ್ಟ್ ಯುನೈಟೆಡ್ ಇಂಡಿಯಾ ಸಂಸ್ಥೆ ಅಂತರ್ಜಾಲದಲ್ಲಿ ಈ ಅಭಿಯಾನ ಆರಂಭಿಸಿತ್ತು.

ಇದಕ್ಕೆ ಗಿರೀಶ್ ಕಾರ್ನಾಡ್, ಪ್ರಕಾಶ್ ರೈ, ಶಶಿ ದೇಶಪಾಂಡೆ, ನಾಸಿರುದ್ದೀನ್ ಶಾ ಮುಂತಾದವರು ಸಹಿ ಹಾಕಿದ್ದರು.

ಬಿಜೆಪಿ ಪ್ರಣಾಳಿಕೆಯಲ್ಲಿನ 'ನದಿ ಜೋಡಣೆ' ಅಂಶ ಮೆಚ್ಚಿದ ರಜನಿ ಬಿಜೆಪಿ ಪ್ರಣಾಳಿಕೆಯಲ್ಲಿನ 'ನದಿ ಜೋಡಣೆ' ಅಂಶ ಮೆಚ್ಚಿದ ರಜನಿ

English summary
lok sabha elections 2019: 907 Artists begin counter campaign against Anti Modi campaign requesting continuance of Prime Minister Narendra Modi led NDA government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X