ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಹಣ್ಣೆಲೆ ಹೌದು, ಆದ್ರೂ ನನ್ನೊಂದು ಮತವೇ ದೇಶದ ಭವಿಷ್ಯವಾಗಬಹುದು!

|
Google Oneindia Kannada News

ನವದೆಹಲಿ, ಏಪ್ರಿಲ್ 18: ವ್ಹೀಲ್ ಚೇರ್ ಮೇಲೆ ಕೂತ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ತೋರು ಬೆರಳಿಗೆ ಅಂಟಿದ ಶಾಯಿಯನ್ನು ಹೆಮ್ಮೆಯಿಂದ ತೋರಿಸುವಾಗ, ಅಂಬುಲೆನ್ಸ್ ನಿಂದ ಬಂದ ರೋಗಿಯೊಬ್ಬರ ಮುಖದಲ್ಲಿ ಮತ ಚಲಾಯಿಸಿದ ಸಾರ್ಥಕ ಭಾವವೊಂದು ಇಣುಕುವಾಗ, ಹಣ್ಣು ಹಣ್ಣು ಅಜ್ಜಿಯೊಬ್ಬರು ತಾವು ಸಂವಿಧಾನ ನೀಡಿದ ಅತ್ಯಮೂಲ್ಯ ಹಕ್ಕನ್ನು ಚಲಾಯಿಸಿದೆ ಎಂದು ಸಂಭ್ರಮಿಸುವಾಗ... ಈ ಪ್ರಜಾಪ್ರಭುತ್ವ ಹಬ್ಬ ಸಾರ್ಥಕ ಅನ್ನಿಸೋದು ಸತ್ಯ!

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದೇಶ ಇಂದು ಎರಡನೇ ಹಂತದ ಮತದಾನಕ್ಕೆ ಸಾಕ್ಷಿಯಾಗಿರುವಾಗ ಇಂಥ ನೂರಾರು ದೃಶ್ಯಗಳು ಕಣ್ಣಿಗೆ ರಾಚಿವೆ. ಮತದಾನದಂಥ ಅತ್ಯಮೂಲ್ಯ ಹಕ್ಕನ್ನು ಚಲಾಯಿಸುವ ಮಹತ್ವವನ್ನು ಅವು ಸಾರಿ ಹೇಳಿವೆ.

ಏಪ್ರಿಲ್ 11 ರಿಂದ ಆರಂಭವಾಗಿರುವ ಲೋಕಸಭೆ ಚುನಾವಣೆ ಮೇ 19 ರ ವರೆಗೆ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ. ಒಟ್ಟು 543 ಸದಸ್ಯ ಬಲದ 17ನೇ ಲೋಕಸಭೆಯ ಹಣೆ ಬರಹ ಅಂದು ನಿರ್ಧಾರವಾಗಲಿದೆ.

ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

ಇಂದು ದೇಶದಾದ್ಯಂತ ನಡೆದ ಮತದಾನದ ಹಬ್ಬದಲ್ಲಿ ಲಕ್ಷಾಂತರ ಜನರು ಮತದಾನ ಮಾಡಿದರು. ಆ ಒಂದೊಂದು ಚಿತ್ರಕ್ಕೂ ಬೇರೆಯದೇ ತೂಕವಿದೆ. ಅವುಗಳಲ್ಲಿ ಮನಸ್ಸನ್ನು ಸೆಳೆದ ಕೆಲವು ನಿಮಗಾಗಿ ಇಲ್ಲಿವೆ.

ನನ್ನೊಂದು ಮತದಲ್ಲೂ ಇದೆ ದೇಶದ ಭವಿಷ್ಯ

ನನ್ನೊಂದು ಮತದಲ್ಲೂ ಇದೆ ದೇಶದ ಭವಿಷ್ಯ

ಅಲಿಘರ್ ನಲ್ಲಿ ಹಣ್ಣು ಹಣ್ಣು ಅಜ್ಜಿಯೊಬ್ಬರು ಮತ ಚಲಾಯಿಸಿ, ಮತದಾನದ ಮಹತ್ವದ ಅರಿವು ಮೂಡಿಸಿದರು. ತಾನು ಹಣ್ಣೆಲೆ ಅನ್ನೋದು ಸತ್ಯ. ಆದರೆ ನನ್ನೊಂದು ಮತದಲ್ಲೇ ದೇಶದ ಭವಿಷ್ಯವಿರಬಹುದು ಎಂಬಂತೆ ಅಜ್ಜಿ ಫೋಟೋಕ್ಕೆ ಪೋಸು ನೀಡಿದ್ದು ಹೀಗೆ!

ಮತಹಾಕಿ ಕರ್ತವ್ಯ ನಿಭಾಯಿಸಬೇಕಾದ ಯುವಜನತೆಗೇನಾಗಿದೆ?ಮತಹಾಕಿ ಕರ್ತವ್ಯ ನಿಭಾಯಿಸಬೇಕಾದ ಯುವಜನತೆಗೇನಾಗಿದೆ?

ಮತ ಹಾಕಿದ್ದಕ್ಕೂ ನಾಚಿಕೇನಾ?

ಮತ ಹಾಕಿದ್ದಕ್ಕೂ ನಾಚಿಕೇನಾ?

ಮತ ಹಾಕಿದ್ದಕ್ಕೂ ನಾಚಿಕೆನಾ? ಬುಲಂದ್ ಶಹರ್ ನಲ್ಲಿ ಮಹಿಳೆಯೊಬ್ಬರು ಮತಚಲಾಯಿಸಿದ ನಂತರ ಪೋಸು ನೀಡೀದ್ದು ಹೀಗೆ!

ಬೆಂಗಳೂರು ನಗರದಲ್ಲಿ ಈ ವರೆಗೆ ಅತಿ ಕಡಿಮೆ ಮತದಾನ ಬೆಂಗಳೂರು ನಗರದಲ್ಲಿ ಈ ವರೆಗೆ ಅತಿ ಕಡಿಮೆ ಮತದಾನ

ಹಸೆಮಣೆಯಿಂದ ಮತಗಟ್ಟೆಗೆ

ಹಸೆಮಣೆಯಿಂದ ಮತಗಟ್ಟೆಗೆ

ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ನವ ವಧು-ವರರು ಮದುವೆಯ ನಂತರ ಹಸೆಮಣೆಯಿಂದ ಮತಗಟ್ಟೆಗೆ ಬಂದು ಮತಚಲಾಯಿಸಿದರು.

ದೌರ್ಬಲ್ಯ ದೇಹಕ್ಕಷ್ಟೆ!

ದೌರ್ಬಲ್ಯ ದೇಹಕ್ಕಷ್ಟೆ!

ದೌರ್ಬಲ್ಯ ದೇಹಕ್ಕಷ್ಟೆ, ನಾಗರಿಕ ಪ್ರಜ್ಞೆಗಲ್ಲ ಎಂದು ವ್ಯಕ್ತಿಯೊಬ್ಬರು ಅಸ್ಸಾಂನಲ್ಲಿ ಮತಗಟ್ತೆಗೆ ಬಮದು ಮತಚಲಾಯಿಸಿದ್ದು ಹೀಗೆ!

ಮತದಾನಕ್ಕಾಗಿ ಸಾಲು ಸಾಲು

ಮತದಾನಕ್ಕಾಗಿ ಸಾಲು ಸಾಲು

ಜಮ್ಮು ಕಾಶ್ಮೀರದ ಉಧಾಂಪುರದಲ್ಲಿ ಮತದಾನಕ್ಕೆಂದು ಸಾಲು ಸಾಲಾಗಿ ಜನರು ನಿಂತ ದೃಶ್ಯ ಕಂಡಿದ್ದು ಹೀಗೆ.

ಮತ ಚಲಾಯಿಸಿದ ಪ್ರಕಾಶ್ ರಾಜ್

ಮತ ಚಲಾಯಿಸಿದ ಪ್ರಕಾಶ್ ರಾಜ್

ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ನಟ ಪ್ರಕಾಶ್ ರಾಜ್ ಮತದಾನ ಮಾಡಿದರು. ಮತದಾನದ ನಂತರ ಅವರು ಫೋಟೋಕ್ಕೆ ಪೋಸು ನೀಡಿದ್ದು ಹೀಗೆ.

ಮೂರ್ತಿ ದಂಪತಿಯಿಂದ ಮತದಾನ

ಮೂರ್ತಿ ದಂಪತಿಯಿಂದ ಮತದಾನ

ಬೆಂಗಳೂರಿನಲ್ಲಿ ಮತ ಚಲಾಯಿಸಿದ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ ಕಂಡಿದ್ದು ಹೀಗೆ.

ಎಸ್ ಎಂ ಕೃಷ್ಣ ಮತದಾನ

ಎಸ್ ಎಂ ಕೃಷ್ಣ ಮತದಾನ

ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಸ್ ಎಂ ಕೃಷ್ಣ ಅವರು ಪತ್ನಿ ಪ್ರೇಮಾ ಕೃಷ್ಣ ಅವರೊಂದಿಗೆ ಮತಚಲಾಯಿಸಿ, ನಂತರ ಫೋಟೋಕ್ಕೆ ಫೋಸು ನೀದ್ದು ಹೀಗೆ.

English summary
Lok Sabha Elections 2018: the nation is facing 2nd phase of electons today(April 18). Here are some memorable photos from election diary!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X