ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ಆನ್‌ಲೈನ್ ಸಮೀಕ್ಷೆ: ಮುಂದೆಯೂ ಮೋದಿ ಸರ್ಕಾರ ಬರೋದು ಪಕ್ಕಾ

|
Google Oneindia Kannada News

Recommended Video

lok sabha elections 2019: ಹೆಚ್ಚು ಜನರಿಗೆ ಮೋದಿಯವರೇ ಮತ್ತೆ ಪ್ರಧಾನಿ ಆಗಬೇಕಂತೆ | Oneindia Kannada

ನವದೆಹಲಿ, ಫೆಬ್ರವರಿ 21: ಲೋಕಸಭೆ ಚುನಾವಣೆಯ ಕಾವು ಈಗ ಹೆಚ್ಚುತ್ತಿದೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿ ಮುಗಿದು ಹೊಸ ಸರ್ಕಾರ ರಚನೆಗೆ ಇನ್ನು ಕೆಲವೇ ವಾರಗಳು ಬಾಕಿ ಇವೆ. ಮುಂದೆಯೂ ಮೋದಿ ಅವರದ್ದೇ ಸರ್ಕಾರ ಅಸ್ತಿತ್ವಕ್ಕೆ ಬರಲಿದೆಯೇ ಅಥವಾ ಬಿಜೆಪಿಗೆ ಸವಾಲೆಸೆದು ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ರಚಿಸಿಕೊಂಡಿರುವ ಮಹಾಮೈತ್ರಿಕೂಟ ಅಧಿಕಾರಕ್ಕೆ ಬರಲಿದೆಯೇ ಎಂಬ ಕುತೂಹಲ ತೀವ್ರಗೊಂಡಿದೆ.

ಆದರೆ, ಟೈಮ್ಸ್ ಸಮೂಹ ನಡೆಸಿದ ಮೆಗಾ ಆನ್‌ಲೈನ್ ಸಮೀಕ್ಷೆ ಪ್ರಕಾರ, 2019ರ ಚುನಾವಣೆಯಲ್ಲಿಯೂ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವೇ ಅಧಿಕಾರಕ್ಕೆ ಬರಲಿದೆ.

ಪಶ್ಚಿಮ ಬಂಗಾಳ ಸಮೀಕ್ಷೆ: ದೀದಿಗೆ ಕಠಿಣ ಸವಾಲೆಸೆಯಲಿದೆ ಮೋದಿ ಬಳಗ ಪಶ್ಚಿಮ ಬಂಗಾಳ ಸಮೀಕ್ಷೆ: ದೀದಿಗೆ ಕಠಿಣ ಸವಾಲೆಸೆಯಲಿದೆ ಮೋದಿ ಬಳಗ

ಟೈಮ್ಸ್ ಸಮೀಕ್ಷೆಯಲ್ಲಿ ಸುಮಾರು 2 ಲಕ್ಷ ಮಂದಿ ಭಾಗವಹಿಸಿದ್ದರು. ಇವರಲ್ಲಿ ಮೂರನೇ ಎರಡಕ್ಕಿಂತ ಹೆಚ್ಚು, ಅಂದರೆ ಶೇ 83ರಷ್ಟು ಮಂದಿ ಮೋದಿ ನಾಯಕತ್ವದ ಸರ್ಕಾರವೇ ಮತ್ತೆ ಗದ್ದುಗೆ ಏರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಮೀಕ್ಷೆ : ರಾಹುಲ್ ಜನಪ್ರಿಯತೆಯ ಮಟ್ಟ ಏರಿದೆಯಾ? ಇಳಿದಿದೆಯಾ?ಸಮೀಕ್ಷೆ : ರಾಹುಲ್ ಜನಪ್ರಿಯತೆಯ ಮಟ್ಟ ಏರಿದೆಯಾ? ಇಳಿದಿದೆಯಾ?

ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಜನಪ್ರಿಯತೆ ಕೊಂಚವೂ ಕುಗ್ಗಿಲ್ಲ ಎಂದು ಸಮೀಕ್ಷೆ ತಿಳಿಸಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿರೋಧಪಕ್ಷಗಳು ಪ್ರಧಾನಿ ಮೋದಿ ವಿರುದ್ಧ ಎಷ್ಟೇ ವಾಗ್ದಾಳಿ ನಡೆಸಿದ್ದರೂ, ಶೇ 84ರಷ್ಟು ಜನರು ಲೋಕಸಭೆ ಚುನಾವಣೆ ಇಂದೇ ನಡೆದರೂ ನರೇಂದ್ರ ಮೋದಿ ಅವರೇ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಬಯಸಿದ್ದಾರೆ.

ರಾಜಸ್ಥಾನದ ಸಮೀಕ್ಷೆ: ಲೋಕಸಭೆ ಸಮರದಲ್ಲಿ ಕೇಸರಿ ಪಡೆಗೆ ಜಯ ರಾಜಸ್ಥಾನದ ಸಮೀಕ್ಷೆ: ಲೋಕಸಭೆ ಸಮರದಲ್ಲಿ ಕೇಸರಿ ಪಡೆಗೆ ಜಯ

ಆನ್‌ಲೈನ್‌ ಮತದಾರರಿಗೆ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಎರಡನೆ ಆಯ್ಕೆಯಾಗಿದ್ದಾರೆ. ಪ್ರಧಾನಿ ಯಾರಾಗಲು ಬಯಸುತ್ತೀರೆಂಬ ಪ್ರಶ್ನೆಗೆ ಶೇ 8.33ರಷ್ಟು ಮಂದಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಲು ಬಯಸಿದ್ದರೆ, ಶೇ 1.44ರಷ್ಟು ಮಂದಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಇನ್ನು ಶೇ 0.43ರಷ್ಟು ಜನರು ಬಿಎಸ್‌ಪಿ ನಾಯಕಿ ಮಾಯಾವತಿ ಅವರನ್ನು ಆಯ್ಕೆ ಮಾಡಿದ್ದಾರೆ. ಶೇ 5.9ರಷ್ಟು ಜನರು ಈ ಆಯ್ಕೆಗಳ ಬದಲು ಬೇರೆಯವರು ಪ್ರಧಾನಿಯಾಗಲಿ ಎಂದು ಅಪೇಕ್ಷಿಸಿದ್ದಾರೆ.

ಟೈಮ್ಸ್ ನೌ ಆನ್‌ಲೈನ್ ಮೆಗಾ ಸಮೀಕ್ಷೆ

ಚುನಾವಣೆ ಬಳಿಕ ಯಾರು ಬರಬೇಕು?

ಚುನಾವಣೆ ಬಳಿಕ ಯಾರು ಬರಬೇಕು?

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ- 83.03%
ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ- 9.25%
ಮೋದಿ ಪ್ರಧಾನಿಯಾಗಿಲ್ಲದ ಎನ್‌ಡಿಎ ಸರ್ಕಾರ- 4.25%
ಮಹಾಮೈತ್ರಿಕೂಟದ ಸರ್ಕಾರ- 3.47%

ಇಂದು ಚುನಾವಣೆ ನಡೆದರೆ ಪ್ರಧಾನಿ ಯಾರಾಗಬೇಕು?

ಇಂದು ಚುನಾವಣೆ ನಡೆದರೆ ಪ್ರಧಾನಿ ಯಾರಾಗಬೇಕು?

ನರೇಂದ್ರ ಮೋದಿ- 83.89%
ರಾಹುಲ್ ಗಾಂಧಿ- 8.33%
ಮಮತಾ ಬ್ಯಾನರ್ಜಿ- 1.44%
ಮಾಯಾವತಿ- 0.43%
ಇತರೆ ಯಾವುದೇ ನಾಯಕ- 5.92%

Times Now-VMR ಸಮೀಕ್ಷೆ: ಎನ್ ಡಿಎ 252, ಯುಪಿಎ 147, ಇತರರು 144Times Now-VMR ಸಮೀಕ್ಷೆ: ಎನ್ ಡಿಎ 252, ಯುಪಿಎ 147, ಇತರರು 144

2014ಕ್ಕೆ ಹೋಲಿಸಿದರೆ ರಾಹುಲ್ ಹೆಚ್ಚು ಜನಪ್ರಿಯರೇ?

2014ಕ್ಕೆ ಹೋಲಿಸಿದರೆ ರಾಹುಲ್ ಹೆಚ್ಚು ಜನಪ್ರಿಯರೇ?

2014ನೇ ಚುನಾವಣೆ ಸಂದರ್ಭಕ್ಕೆ ಹೋಲಿಸಿದರೆ ರಾಹುಲ್ ಗಾಂಧಿ ಈಗ ಹೆಚ್ಚು ಜನಪ್ರಿಯ ನಾಯಕರಾಗಿದ್ದಾರೆಯೇ ಎಂಬ ಪ್ರಶ್ನೆ ಇರಿಸಲಾಗಿತ್ತು. ಅದಕ್ಕೆ ಬಂದ ಉತ್ತರಗಳು ಹೀಗಿವೆ...
ಇಲ್ಲ- 63.03%
ಹೌದು- 31.15%
ಹೇಳಲು ಸಾಧ್ಯವಿಲ್ಲ- 5.82%

ಮೋದಿ ಸರ್ಕಾರದ ಆಡಳಿತ ಹೇಗಿದೆ?

ಮೋದಿ ಸರ್ಕಾರದ ಆಡಳಿತ ಹೇಗಿದೆ?

ಅತ್ಯುತ್ತಮ- 59.51%
ಉತ್ತಮ- 22.29%
ಕಳಪೆ- 9.94%
ಸಾಧಾರಣ- 8.25%

ಫಸ್ಟ್ ನ್ಯೂಸ್ ಸಮೀಕ್ಷೆ: ಮೋದಿ-ಅತ್ಯಂತ ವಿಶ್ವಾಸಾರ್ಹ ರಾಜಕೀಯ ನಾಯಕಫಸ್ಟ್ ನ್ಯೂಸ್ ಸಮೀಕ್ಷೆ: ಮೋದಿ-ಅತ್ಯಂತ ವಿಶ್ವಾಸಾರ್ಹ ರಾಜಕೀಯ ನಾಯಕ

ಮೋದಿ ಸರ್ಕಾರದ ಅತಿ ದೊಡ್ಡ ಸಾಧನೆ ಯಾವುದು?

ಮೋದಿ ಸರ್ಕಾರದ ಅತಿ ದೊಡ್ಡ ಸಾಧನೆ ಯಾವುದು?

ಬಡವರಿಗೆ ಹೆಚ್ಚಿನ ಸವಲತ್ತುಗಳು- 34.39%
ಜಿಎಸ್‌ಟಿ- 29.09%
ಸ್ವಚ್ಛ ಭಾರತ್- 18.68%
ಸರ್ಜಿಕಲ್ ಸ್ಟ್ರೈಕ್ಸ್- 17.84%

ಮೋದಿ ಸರ್ಕಾರದ ಅತಿ ದೊಡ್ಡ ವೈಫಲ್ಯ ಯಾವುದು?

ಮೋದಿ ಸರ್ಕಾರದ ಅತಿ ದೊಡ್ಡ ವೈಫಲ್ಯ ಯಾವುದು?

ರಾಮಮಂದಿರದಲ್ಲಿ ಪ್ರಗತಿ ಆಗದಿರುವುದು- 35.72%
ಉದ್ಯೋಗ ಸೃಷ್ಟಿ- 29.52%
ಅಪನಗದೀಕರಣ- 13.5%
ಅಸಹಿಷ್ಣುತೆ ಹೆಚ್ಚಳ- 12.97%
ಇತರೆ- 8.29%

ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ದೊಡ್ಡ ವಿಚಾರ ಯಾವುದು?

ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ದೊಡ್ಡ ವಿಚಾರ ಯಾವುದು?

ಉದ್ಯೋಗ- 40.21%
ರೈತರ ಸಂಕಷ್ಟ- 21.82%
ರಾಮಮಂದಿರ- 10.16%
ಜಿಎಸ್‌ಟಿ ಜಾರಿ- 4.52%
ಇತರೆ ಯಾವುದೇ ಸಮಸ್ಯೆ- 23.3%

ಮೋದಿ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ಅಭದ್ರತೆ ಕಾಡಿದೆಯೇ?

ಮೋದಿ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ಅಭದ್ರತೆ ಕಾಡಿದೆಯೇ?

ಇಲ್ಲ- 65.51%
ಹೌದು- 24.26%
ಹೇಳಲು ಸಾಧ್ಯವಿಲ್ಲ- 10.24%

ಆರ್ಥಿಕ ದುರ್ಬಲರಿಗೆ ಮೀಸಲಾತಿ ಬಿಜೆಪಿಗೆ ನೆರವಾಗಲಿದೆಯೇ?

ಆರ್ಥಿಕ ದುರ್ಬಲರಿಗೆ ಮೀಸಲಾತಿ ಬಿಜೆಪಿಗೆ ನೆರವಾಗಲಿದೆಯೇ?

ಹೌದು- 72.66%
ಇಲ್ಲ- 15.25%
ಹೇಳಲು ಸಾಧ್ಯವಿಲ್ಲ- 12.1%

ರಫೇಲ್ ವಿವಾದ ಪರಿಣಾಮ ಬೀರಲಿದೆಯೇ?

ರಫೇಲ್ ವಿವಾದ ಪರಿಣಾಮ ಬೀರಲಿದೆಯೇ?

ಇಲ್ಲ- 74.59%
ಹೌದು- 17.51%
ಹೇಳಲು ಸಾಧ್ಯವಿಲ್ಲ- 7.9%

English summary
lok sabha elections 2019: 84% of the people said Narendra Modi led NDA government will comes to power again in the mega online poll survey conducted by Times Group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X