ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ನೈಪರ್ ಗನ್ ಲೇಸರ್ ಅಲ್ಲ, ಕಾಂಗ್ರೆಸ್ ಫೋಟೊಗ್ರಾಫರ್ ಮೊಬೈಲ್ ಬೆಳಕು!

|
Google Oneindia Kannada News

ನವದೆಹಲಿ, ಏಪ್ರಿಲ್ 11: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ. ಅಮೇಥಿಯಲ್ಲಿ ಅವರ ತಲೆಗೆ ಹಸಿರು ಲೇಸರ್ ಬೆಳಕು ಗುರಿಯಿಡಲಾಗಿತ್ತು. ಇದು ಸ್ನೈಪರ್ ಗನ್‌ನಿಂದ ಹೊರಟ ಬೆಳಕು ಇರಬೇಕು ಎಂದು ಪಕ್ಷದ ನಾಯಕರು ಆತಂಕ ವ್ಯಕ್ತಪಡಿಸಿದ ಗೃಹಸಚಿವಾಲಯಕ್ಕೆ ಪತ್ರ ಬರೆದಿದ್ದರು. ಆದರೆ, ಇದು ಗನ್ ಲೇಸರ್ ಬೆಳಕಲ್ಲ ಎಂದು ವಿಶೇಷ ಭದ್ರತಾ ಸಮೂಹ (ಎಸ್‌ಪಿಜಿ) ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಅಮೇಥಿಯಲ್ಲಿ ರಾಹುಲ್ ಗಾಂಧಿ ಹತ್ಯೆಗೆ ಸಂಚು?: ಗೃಹ ಸಚಿವಾಲಯಕ್ಕೆ ಕಾಂಗ್ರೆಸ್ ಪತ್ರಅಮೇಥಿಯಲ್ಲಿ ರಾಹುಲ್ ಗಾಂಧಿ ಹತ್ಯೆಗೆ ಸಂಚು?: ಗೃಹ ಸಚಿವಾಲಯಕ್ಕೆ ಕಾಂಗ್ರೆಸ್ ಪತ್ರ

ಕಾಂಗ್ರೆಸ್ ನಾಯಕರು ಪತ್ರ ಬರೆದಿದ್ದಾರೆ ಎಂಬ ಸುದ್ದಿ ಪ್ರಸಾರವಾದ ಬೆನ್ನಲ್ಲೆ ತನಿಖೆ ನಡೆಸಿದ ಪೊಲೀಸರಿಗೆ ಇದು ಗಂಭೀರ ಪ್ರಕರಣವಲ್ಲ ಎಂಬುದು ತಿಳಿದುಬಂದಿದೆ. ರಾಹುಲ್ ಗಾಂಧಿ ಅವರ ತಲೆಯ ಮೇಲೆ ಕಾಣಿಸಿದ ಹಸಿರು ಬಣ್ಣದ ಲೇಸರ್ ಬೆಳಕು ಅವರದೇ ಪಕ್ಷದ ಫೋಟೊಗ್ರಾಫರ್‌ನ ಮೊಬೈಲ್ ಫೋನ್‌ನಿಂದ ಹೊರಬಂದದ್ದು ಎಂದು ಎಸ್‌ಪಿಜಿ ನಿರ್ದೇಶಕರು ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ.

Lok Sabha elections 2019 laser light on Rahul Gandhi was from AICC photographer mobile phone

ಕಾಂಗ್ರೆಸ್ ನೀಡಿರುವ ವಿಡಿಯೋ ಪರಿಶೀಲಿಸಿದ್ದು, ರಾಹುಲ್ ಅವರು ಮಾಧ್ಯಮದೊಂದಿಗೆ ಮಾತನಾಡುವ ಸಂದರ್ಭದಲ್ಲಿ ಎಐಸಿಸಿ ಫೋಟೊಗ್ರಾಫರ್ ಅದನ್ನು ವಿಡಿಯೋ ಚಿತ್ರೀಕರಿಸಿಕೊಳ್ಳುತ್ತಿದ್ದರು. ಆಗ ಅವರ ಕೈಯಲ್ಲಿದ್ದ ಮೊಬೈಲ್‌ ಬೆಳಕು ರಾಹುಲ್ ಅವರ ತಲೆಯ ಮೇಲೆ ಬಿದ್ದಿದೆ ಎಂದು ತಿಳಿಸಿದ್ದಾರೆ.

ರಾಹುಲ್ ಗೆ ಪ್ರತಿಷ್ಠೆಯ ಕಣವಾಗಿರುವ 'ಅಮೇಥಿ' ಲೋಕಸಭಾ ಕ್ಷೇತ್ರರಾಹುಲ್ ಗೆ ಪ್ರತಿಷ್ಠೆಯ ಕಣವಾಗಿರುವ 'ಅಮೇಥಿ' ಲೋಕಸಭಾ ಕ್ಷೇತ್ರ

ಅಮೇಥಿಯಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿ ಹೊರಬರುವ ವೇಳೆ ಭದ್ರತಾ ವೈಫಲ್ಯ ಉಂಟಾಗಿದೆ ಎಂಬ ಆರೋಪದ ಕುರಿತಂತೆ ತಮಗೆ ಯಾವುದೇ ಪತ್ರ ಕಾಂಗ್ರೆಸ್‌ನಿಂದ ಬಂದಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ.

ಅಮೇಥಿಯ ರೈಫಲ್ ಫ್ಯಾಕ್ಟರಿ ಕುರಿತು ರಾಹುಲ್, ಸ್ಮೃತಿ ಟ್ವಿಟ್ಟರ್ ವಾರ್ ಅಮೇಥಿಯ ರೈಫಲ್ ಫ್ಯಾಕ್ಟರಿ ಕುರಿತು ರಾಹುಲ್, ಸ್ಮೃತಿ ಟ್ವಿಟ್ಟರ್ ವಾರ್

ಆದರೆ, ರಾಹುಲ್ ಅವರನ್ನು ಗುರಿಯನ್ನಾಗಿಸಿಕೊಂಡಿರುವ ಹಸಿರು ಬೆಳಕಿನ ಕುರಿತು ವರದಿಗಳು ಪ್ರಸಾರವಾಗಿರುವುದರಿಂದ ಅದರ ಬಗ್ಗೆ ತಕ್ಷಣ ಪರಿಶೀಲನೆ ನಡೆಸುವಂತೆ ಅದು ಎಸ್‌ಪಿಜಿ ನಿರ್ದೇಶಕರಿಗೆ ಸೂಚಿಸಿತ್ತು.

English summary
Lok Sabha elections 2019 : Director of SPG informed Home Ministry that the green light shown in clipping was found to be that a mobile phone used by AICC photographer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X