ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲಕ್ಕೆ ಮತಹಾಕೊಲ್ಲ ಎಂದಾಗ ಬೇಸರವಾಗುತ್ತದೆ: ಮೇನಕಾ ಗಾಂಧಿ

|
Google Oneindia Kannada News

Recommended Video

ನಮಗೆ ಮತ ಹಾಕಲ್ಲ ಅಂದರೆ ಬೇಜಾರಾಗುತ್ತೆ..?

ನವದೆಹಲಿ, ಮೇ 8: ಮುಸ್ಲಿಮರು ತಮಗೆ ಮತ ಹಾಕದೆ ಇದ್ದರೆ ಅವರ ಕೆಲಸ ಮಾಡಿಕೊಡುವುದಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಮೇನಕಾ ಗಾಂಧಿ, ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದಿರುವ ಅವರು, ಬಿಜೆಪಿಗೆ ತಾವು ಮತ ಹಾಕುವುದಿಲ್ಲ ಎಂದು ಮುಸ್ಲಿಮರು ಹೇಳಿದಾಗ ಬೇಸರ ಉಂಟಾಗಿತ್ತು ಎಂದು ಹೇಳಿದ್ದಾರೆ.

ಮತಕ್ಕಾಗಿ ಮುಸ್ಲೀಮರ 'ಬೆದರಿಸಿದ' ಮೇನಕಾ ಗಾಂಧಿಗೆ ನೊಟೀಸ್ ಮತಕ್ಕಾಗಿ ಮುಸ್ಲೀಮರ 'ಬೆದರಿಸಿದ' ಮೇನಕಾ ಗಾಂಧಿಗೆ ನೊಟೀಸ್

ತಾವು ಕೆಲಸ ಮಾಡುವ ಸಂದರ್ಭದಲ್ಲಿ ಜಾತಿ ಅಥವಾ ಧರ್ಮಕ್ಕೆ ಎಂದಿಗೂ ಆದ್ಯತೆ ನೀಡುವುದಿಲ್ಲ. ಆದರೆ, 'ಕಮಲ'ದ ಗುರುತಿಗೆ ಮತ ಹಾಕಲು ಬಯಸದ ಕಾರಣಕ್ಕೆ ತಮಗೆ ಮತ ಚಲಾಯಿಸುವುದಿಲ್ಲ ಎಂದು ಜನರು ಹೇಳಿದಾಗ ಬೇಸರವಾಗುತ್ತದೆ ಎಂದಿದ್ದಾರೆ.

Lok Sabha Elections 2019 feel bad when people say wont vote for lotus maneka gandhi muslim remark

'ನಾನು ಎಲ್ಲಿಯೇ ಹೋಗಲಿ, ಎಲ್ಲ ಜಾತಿ ಧರ್ಮಗಳ ಬಗ್ಗೆ ಆಲೋಚನೆ ಹೊಂದಿರುತ್ತೇನೆ. ನಾವು ಕೆಲಸ ಮಾಡಿದಾಗ ಎಲ್ಲರಿಗಾಗಿ ಕೆಲಸ ಮಾಡುತ್ತೇವೆ. ಆಗ ಯಾರೂ 'ಕಮಲ'ದ ಬಗ್ಗೆ ಚಿಂತೆ ಮಾಡುವುದಿಲ್ಲ. ಆದರೆ, ಮತದಾನದ ಸಮಯ ಬಂದಾಗ ಜನರು ನನಗೆ ಮತ ಹಾಕುವುದಿಲ್ಲ ಎನ್ನುತ್ತಾರೆ. ಏಕೆಂದರೆ ಅವರು ಕಮಲದ ಗುರುತಿಗೆ ಮತ ಹಾಕಲು ಬಯಸುವುದಿಲ್ಲ. ಇದರಿಂದ ನನಗೆ ತುಂಬಾ ಬೇಸರವಾಗುತ್ತದೆ' ಎಂದು ಹೇಳಿದ್ದಾರೆ.

ಅಜಂ ಖಾನ್ ಹಾಗೂ ಮೇನಕಾ ಗಾಂಧಿಗೆ ಚುನಾವಣೆ ಪ್ರಚಾರಕ್ಕೆ ನಿಷೇಧಅಜಂ ಖಾನ್ ಹಾಗೂ ಮೇನಕಾ ಗಾಂಧಿಗೆ ಚುನಾವಣೆ ಪ್ರಚಾರಕ್ಕೆ ನಿಷೇಧ

ತಮ್ಮ ಹೇಳಿಕೆಗೆ ಚುನಾವಣಾ ಆಯೋಗ ಪ್ರಚಾರದ ಮೇಲೆ 48 ಗಂಟೆಗಳ ನಿಷೇಧ ವಿಧಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಅದನ್ನು ತಿರುಚಲಾಗಿದೆ. ನಾನು ನನ್ನ ಮಾತನ್ನು ಕೇಳಿದ್ದೇನೆ' ಎಂದಿದ್ದಾರೆ.

English summary
Lok Sabha Elections 2019: Union Minister Maneka Gandhi clarified on her remarks about Muslims, she will feels bad when people say won't vote for lotus symbol whough the work for them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X