ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಬಯೋಪಿಕ್ ಬಿಡುಗಡೆಗೆ ಚುನಾವಣಾ ಆಯೋಗ ತಡೆ

|
Google Oneindia Kannada News

ನವದೆಹಲಿ, ಏಪ್ರಿಲ್ 10: ವ್ಯಾಪಕ ವಿರೋಧದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್ ಬಿಡುಗಡೆಗೆ ಒಂದು ದಿನ ಇರುವ ಮುನ್ನವಷ್ಟೇ ಚುನಾವಣಾ ಆಯೋಗ ತಡೆ ನೀಡಿದೆ.

ಸಿನಿಮಾ ಬಿಡುಗಡೆಯು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ. ಹೀಗಾಗಿ ಚುನಾವಣಾ ಮುಗಿಯುವವರೆಗೂ ಸಿನಿಮಾ ಬಿಡುಗಡೆ ಸಾಧ್ಯವಿಲ್ಲ ಎಂದು ಆಯೋಗ ಹೇಳಿದೆ.

ಮೋದಿ ಚಿತ್ರ ಬಿಡುಗಡೆಗೆ ತಡೆ ನೀಡಿ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿಮೋದಿ ಚಿತ್ರ ಬಿಡುಗಡೆಗೆ ತಡೆ ನೀಡಿ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ

ಈ ನಿರ್ಧಾರ ತೆಗೆದುಕೊಳ್ಳಲು ಚುನಾವಣಾ ಆಯೋಗ 324ನೇ ವಿಧಿಯ ಅಧಿಕಾರವನ್ನು ಬಳಸಿಕೊಂಡಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವವರೆಗೂ ಸಿನಿಮಾ ಬಿಡುಗಡೆ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

lok sabha elections 2019 election commission stopped release of PM Narendra Modi biopic movie

'ಪಿಎಂ ನರೇಂದ್ರ ಮೋದಿ' ಸಿನಿಮಾ, ಗುರುವಾರ (ಏಪ್ರಿಲ್ 11ರಂದು) ಬಿಡುಗಡೆಯಾಗಲು ಸಿದ್ಧತೆ ನಡೆದಿತ್ತು. ಆದರೆ, ಅದೇ ದಿನ ವಿವಿಧ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದೆ. ಇದು ವಿರೋಧಪಕ್ಷಗಳ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಮೋದಿ ಅವರ ಕುರಿತಾದ ಸಿನಿಮಾ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಒದಗಿಸಲಿದೆ ಎಂದು ವಿರೋಧಿಸಲಾಗಿತ್ತು.

ರಾಹುಲ್ ಗಾಂಧಿ ಬಯೋಪಿಕ್ ಗೆ ಹೀರೋಯಿನ್ ಯಾರು? ಉತ್ತರ ಕೇಳಿ... ರಾಹುಲ್ ಗಾಂಧಿ ಬಯೋಪಿಕ್ ಗೆ ಹೀರೋಯಿನ್ ಯಾರು? ಉತ್ತರ ಕೇಳಿ...

ಚಿತ್ರದ ತಡೆಗೆ ಕೋರಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾ ಮಾಡಿತ್ತು. ಸಣ್ಣ ಟ್ರೇಲರ್‌ನಿಂದ ಸಿನಿಮಾವನ್ನು ಅಳೆಯಲು ಸಾಧ್ಯವಿಲ್ಲೆ ಎಂದಿದ್ದ ಕೋರ್ಟ್, ಈ ವಿಚಾರವನ್ನು ಬಗೆಹರಿಸಲು ಚುನಾವಣಾ ಆಯೋಗವೇ ಸೂಕ್ತ ಸಂಸ್ಥೆ ಎಂದು ಹೇಳಿತ್ತು.

ವಿವೇಕ್ ಒಬೆರಾಯ್ ಅವರು ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರವು, ಸಿಬಿಎಫ್‌ಸಿಯಿಂದ 'ಯು' ಪ್ರಮಾಣಪತ್ರ ಪಡೆದುಕೊಂಡಿದೆ.

English summary
lok sabha elections 2019: Election Commission on Wednesday refused to allow the release of Prime Minister Narendra Modi's biopic which was set to release on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X