ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ: ಮಾರ್ಚ್ 5ರಂದು ಅಧಿಸೂಚನೆ, ರಾಜ್ಯದಲ್ಲಿ ಏ.11ರಂದು ಮತದಾನ?

|
Google Oneindia Kannada News

Recommended Video

Lok Sabha Elections 2019 : ಮಾರ್ಚ್ 5ರಂದು ಅಧಿಸೂಚನೆ, ರಾಜ್ಯದಲ್ಲಿ ಏ.11ರಂದು ಮತದಾನ? | Oneindia Kannada

ನವದೆಹಲಿ, ಫೆಬ್ರವರಿ 13: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಧಿಕಾರಾವಧಿ ಪೂರ್ಣಗೊಳ್ಳುತ್ತಿದ್ದು, ಹೊಸ ಸರ್ಕಾರ ರಚನೆಗಾಗಿ ಲೋಕಸಭೆಗೆ ಚುನಾವಣೆ ನಡೆಸಲು ಮಾರ್ಚ್ 5ರಂದು ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ.

ದೇಶದಾದ್ಯಂತ ವಿವಿಧ ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಏಪ್ರಿಲ್ 11ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎನ್ನಲಾಗಿದೆ.

ಮಾರ್ಚ್‌ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆ ದಿನಾಂಕ ಪ್ರಕಟ? ಮಾರ್ಚ್‌ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆ ದಿನಾಂಕ ಪ್ರಕಟ?

ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಮೂಲಗಳಿಂದ ದೊರೆಯಿರುವ ಮಾಹಿತಿಯಂತೆ ದೇಶದೆಲ್ಲೆಡೆ ಒಟ್ಟು 9 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 5 ರಂದು ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.

ಚುನಾವಣೆ ಪ್ರಕ್ರಿಯೆಗಳ ಸಂಬಂಧ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾ ಮಟ್ಟಗಳಲ್ಲಿ ಜಿಲ್ಲಾಧಿಕಾರಿಗಳು ಚುನಾವಣೆಗೆ ಅಗತ್ಯ ಸಿದ್ಧತೆಗಳನ್ನು ಮುಗಿಸಿದ್ದಾರೆ. ಅವುಗಳ ವಿವರ ಆಯೋಗದ ಕೈಸೇರಿದ್ದು, ಅದಕ್ಕೆ ಅನುಗುಣವಾಗಿ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಜೂನ್ 3ರಂದು ಅಂತ್ಯ

ಜೂನ್ 3ರಂದು ಅಂತ್ಯ

ಈಗಿನ ಸರ್ಕಾರದ ಅಧಿಕಾರಾವಧಿಯು ಜೂನ್ 3ರಂದು ಅಂತ್ಯಗೊಳ್ಳಲಿದೆ. ಭದ್ರತಾ ಪಡೆಗಳ ಲಭ್ಯತೆ ಮತ್ತು ಇತರೆ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಯ ಹಂತಗಳನ್ನು ಅಂತಿಮಗೊಳಿಸಲಾಗುತ್ತದೆ.

ಲೋಕಸಭೆಯ ಚುನಾವಣೆಯು ಜತೆಗೇ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳ ವಿಧಾನಸಭೆಗಳಿಗೂ ಚುನಾವಣೆ ನಡೆಸಲು ಆಯೋಗ ಚಿಂತನೆ ನಡೆಸಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಚುನಾವಣೆ

ಜಮ್ಮು ಮತ್ತು ಕಾಶ್ಮೀರಕ್ಕೆ ಚುನಾವಣೆ

ಅಲ್ಲದೆ, ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ವಿಸರ್ಜನೆಗೊಂಡಿರುವುದರಿಂದ ಆರು ತಿಂಗಳ ಒಳಗೆ ಅಲ್ಲಿಯೂ ಹೊಸದಾಗಿ ಚುನಾವಣೆ ನಡೆಸಬೇಕಿದೆ. ನವೆಂಬರ್ 2018ರಂದು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯನ್ನು ವಿಸರ್ಜನೆ ಮಾಡಲಾಗಿತ್ತು. ಮೇ ತಿಂಗಳಿನಲ್ಲಿ ಇದರ ಗರಿಷ್ಠ ಅವಧಿಯ ಮಿತಿ ಮುಗಿಯಲಿದೆ. ಇದರಿಂದ ಅಲ್ಲಿಯೂ ಲೋಕಸಭೆ ಚುನಾವಣೆಯೊಂದಿಗೆ ಏಕಕಾಲಕ್ಕೆ ಮತದಾನ ಪ್ರಕ್ರಿಯೆ ನಡೆಸಲು ಆಯೋಗ ಬಯಸಿದೆ. ಆದರೆ, ಇದು ಅಲ್ಲಿನ ಸಂಕೀರ್ಣ ಭದ್ರತಾ ಸ್ಥಿತಿಗತಿಯ ಮೇಲೆ ಅವಲಂಬಿತವಾಗಿದೆ.

ಬೇರೆ ರಾಜ್ಯಗಳಲ್ಲಿ ಚುನಾಯಿತ ಸರ್ಕಾರದ ಅವಧಿ ಐದು ವರ್ಷಗಳಾದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ವರ್ಷಗಳ ಕಾಲ ಅಧಿಕಾರಾವಧಿ ಇರಲಿದೆ. ಅದರಂತೆ ಈ ಸರ್ಕಾರದ ಅವಧಿಯು 2021ರ ಮಾರ್ಚ್ 16ರಂದು ಕೊನೆಗೊಳ್ಳಬೇಕಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂದಕ್ಕೆ ಪಡೆದಿದ್ದರಿಂದ ಸರ್ಕಾರ ಪತನಗೊಂಡಿತ್ತು. ಅಲ್ಲಿ ಈಗ ರಾಷ್ಟ್ರಪತಿ ಆಳ್ವಿಕೆ ಇದೆ.

ಚುನಾವಣೆ ದಿನಾಂಕ ಕುರಿತ ಸುಳ್ಳು ಸುದ್ದಿ: ಕ್ರಮಕ್ಕೆ ಆಯೋಗ ಸೂಚನೆ ಚುನಾವಣೆ ದಿನಾಂಕ ಕುರಿತ ಸುಳ್ಳು ಸುದ್ದಿ: ಕ್ರಮಕ್ಕೆ ಆಯೋಗ ಸೂಚನೆ

ನಾಲ್ಕು ರಾಜ್ಯಗಳ ವಿಧಾನಸಭೆ

ನಾಲ್ಕು ರಾಜ್ಯಗಳ ವಿಧಾನಸಭೆ

ಸಿಕ್ಕಿಂ ವಿಧಾನಸಭೆಯ ಅವಧಿಯು 2019ರ ಮೇ 27ಕ್ಕೆ ಅಂತ್ಯಗೊಳ್ಳಲಿದೆ. ಅರುಣಾಚಲಪ್ರದೇಶ ವಿಧಾನಸಭೆ ಜೂನ್ 1ರಂದು, ಒಡಿಶಾ ಜೂನ್ 1 ಮತ್ತು ಆಂಧ್ರಪ್ರದೇಶದಲ್ಲಿ ಜೂನ್ 18 ರಂದು ವಿಧಾನಸಭೆ ಅವಧಿ ಅಂತ್ಯಗೊಳ್ಳಲಿವೆ.

ಕಳೆದ ಮೂರು ಅವಧಿಯಲ್ಲಿ ಚುನಾವಣೆ

ಕಳೆದ ಮೂರು ಅವಧಿಯಲ್ಲಿ ಚುನಾವಣೆ

2004ರಲ್ಲಿ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಯನ್ನು ನಾಲ್ಕು ಹಂತಗಳಲ್ಲಿ ನಡೆಸಿತ್ತು. ಫೆಬ್ರವರಿ 29ರಂದು ಅಧಿಸೂಚನೆ ಪ್ರಕಟಿಸಲಾಗಿತ್ತು. ಏಪ್ರಿಲ್ 20ರಂದು ಮೊದಲ ಹಂತದ ಚುನಾವಣೆ ನಡೆದು ಮೇ 10ರಂದು ಪ್ರಕ್ರಿಯೆ ಪೂರ್ಣಗೊಂಡಿತ್ತು.

2009ರಲ್ಲಿ ಮಾರ್ಚ್ 2ರಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿತ್ತು. ಆಗ ಏಪ್ರಿಲ್ 16ರಿಂದ ಮೇ 13ರವರೆಗೆ ಐದು ಹಂತಗಳಲ್ಲಿ ಮತದಾನ ನಡೆದಿತ್ತು.

2014ರಲ್ಲಿ ಮಾರ್ಚ್ 5ರಂದು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಏಪ್ರಿಲ್‌ 7ರಿಂದ ಮೇ 12ರ ಅವಧಿಯಲ್ಲಿ ಒಟ್ಟು ಒಂಬತ್ತು ಹಂತಗಳಲ್ಲಿ ಚುನಾವಣೆ ನಡೆದಿತ್ತು.

ಮತದಾರರ ಪಟ್ಟಿಯಲ್ಲಿ 5 ಕೋಟಿ ಹೆಸರು: ಚುನಾವಣಾ ಆಯೋಗ ಮತದಾರರ ಪಟ್ಟಿಯಲ್ಲಿ 5 ಕೋಟಿ ಹೆಸರು: ಚುನಾವಣಾ ಆಯೋಗ

English summary
Election Commission likely to announce the date of Lok Sabha elections 2019 on March 5. Elections may held in 9 phases across the nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X