ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕ ಚುನಾವಣಾ ಅಕ್ರಮ : ದೇಶದೆಲ್ಲೆಡೆ 613 ಕೋಟಿ ರು ವಶ

|
Google Oneindia Kannada News

ವದೆಹಲಿ, ಮಾರ್ಚ್ 28: ಚುನಾವಣಾ ಸಂಹಿತೆ ಜಾರಿಗೊಂಡ ಮೂರು ವಾರಗಳ ಬಳಿಕ ದೇಶದ 29 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಂಡು ಬಂದಿರುವ ಚುನಾವಣಾ ಅಕ್ರಮಗಳಿಂದ ಸಂಗ್ರಹಿಸಿರುವ ಮೊತ್ತವನ್ನು ಕೇಂದ್ರ ಚುನಾವಣಾ ಆಯೋಗವು ಇಂದು ಪ್ರಕಟಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮಾರ್ಚ್ 27ರ ತನಕದ ಲೆಕ್ಕಾಚಾರದಂತೆ ಒಟ್ಟಾರೆ, 613.176 ಕೋಟಿ ರು ನಗದು ಹಾಗೂ ಇನ್ನಿತರ ಸಾಮಾಗ್ರಿಗಳು ವಶಪಡಿಸಿಕೊಳ್ಳಲಾಗಿದೆ. ದೇಶದೆಲ್ಲೆಡೆ ಸಂಗ್ರಹಿಸಿದ ಅಕ್ರಮ ಮದ್ಯದ ಬೆಲೆ 104.49 ಕೋಟಿ ರು ದಾಟುತ್ತದೆ.

ದೇಶದೆಲ್ಲೆಡೆ ವಶಪಡಿಸಿಕೊಂಡ ಅಕ್ರಮ ಡ್ರಗ್ಸ್ ಹಾಗೂ ಮಾದಕ ವಸ್ತುಗಳ ಮೌಲ್ಯ 145.384 ಕೋಟಿ ರು ನಷ್ಟಿದೆ, ಬೆಲೆ ಬಾಳುವ ಲೋಹಗಳ ಮೊತ್ತ 170.708 ಕೋಟಿ ರು ನಷ್ಟಿದೆ. ಉಚಿತ ಗಿಫ್ಟ್ ಪದಾರ್ಥಗಳು ಇನ್ನಿತರ ಸಾಮಾಗ್ರಿಗಳ ಮೌಲ್ಯ 11.67 ಕೋಟಿ ರು ಎಂದು ಚುನಾವಣಾ ಆಯೋಗ ಹೇಳಿದೆ.

ಚುನಾವಣಾ ಅಕ್ರಮ ವರದಿ : ಸಿ-ವಿಜಿಲ್ ಆಪ್ ಬಳಸುವುದು ಹೇಗೆ? ಚುನಾವಣಾ ಅಕ್ರಮ ವರದಿ : ಸಿ-ವಿಜಿಲ್ ಆಪ್ ಬಳಸುವುದು ಹೇಗೆ?

ಏಪ್ರಿಲ್ 11 ರಿಂದ ಮೇ 19 ರ ತನಕ ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ, ಮೇ 23ರಂದು ಫಲಿತಾಂಶ ಹೊರ ಬರಲಿದೆ.

ಆಂಧ್ರದಲ್ಲೇ ಹೆಚ್ಚು ಅಕ್ರಮ

ಆಂಧ್ರದಲ್ಲೇ ಹೆಚ್ಚು ಅಕ್ರಮ

ಆಂಧ್ರದಲ್ಲೇ ಹೆಚ್ಚು ಅಕ್ರಮ: ಚುನಾವಣಾ ಅಕ್ರಮಗಳ ಪೈಕಿ ಆಂಧ್ರಪ್ರದೇಶ(62.29 ಕೋಟಿ ರು) ಮುಂಚೂಣಿಯಲ್ಲಿದ್ದರೆ, ತಮಿಳುನಾಡು(49.48 ಕೋಟಿ ರು) ಎರಡನೇ ಸ್ಥಾನದಲ್ಲಿದೆ.

ಮಾರ್ಚ್ 27ರ ತನಕದ ಲೆಕ್ಕಾಚಾರದಂತೆ ಒಟ್ಟಾರೆ, 613.176 ಕೋಟಿ ರು ನಗದು ಹಾಗೂ ಇನ್ನಿತರ ಸಾಮಾಗ್ರಿಗಳು ವಶಪಡಿಸಿಕೊಳ್ಳಲಾಗಿದೆ
ಮಾರ್ಚ್ 15ರ ತನಕ ಸಂಗ್ರಹವಾದ ವಸ್ತುಗಳ ಮೌಲ್ಯ

ಮಾರ್ಚ್ 15ರ ತನಕ ಸಂಗ್ರಹವಾದ ವಸ್ತುಗಳ ಮೌಲ್ಯ

ಕಡಿಮೆ ಹಣ, ಮದ್ಯ ವಶವಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಇದೆ. ಕರ್ನಾಟಕದಲ್ಲಿ ಈವರೆಗೆ 26.53 ಕೋಟಿ ಮೌಲ್ಯದ ಅಕ್ರಮ ಹಣ, ಮದ್ಯ ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದಲ್ಲಿ 19.11 ಕೋಟಿ, ತೆಲಂಗಣದಲ್ಲಿ 8.2 ಕೋಟಿ ಅಕ್ರಮ ಹಣ, ಮದ್ಯ ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಡ್ರಗ್ಸ್ ಮಾರಾಟ

ಅಕ್ರಮ ಡ್ರಗ್ಸ್ ಮಾರಾಟ

ಅಕ್ರಮ ಡ್ರಗ್ಸ್ ಮಾರಾಟ: ಪಂಜಾಬ್ ನಲ್ಲಿ ಹೆಚ್ಚು ಅಕ್ರಮ ಡ್ರಗ್ಸ್ ಮಾರಾಟ ಕಂಡು ಬಂದಿದ್ದು, 29.45 ಕೋಟಿ ರು ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ನಂತರದ ಸ್ಥಾನದಲ್ಲಿ ಮಣಿಪುರ(23.58 ಕೋಟಿ ರು) ಹಾಗೂ ಉತ್ತರಪ್ರದೇಶ(17.04 ಕೋಟಿ ರು)

ಅಕ್ರಮ ಮದ್ಯದ ಬೆಲೆ 104.49 ಕೋಟಿ ರು

ಅಕ್ರಮ ಮದ್ಯದ ಬೆಲೆ 104.49 ಕೋಟಿ ರು

ಅಬಕಾರಿ ಅಕ್ರಮದಲ್ಲಿ ಉತ್ತರಪ್ರದೇಶದಲ್ಲಿ 24.50 ಕೋಟಿ ರು ಸಂಗ್ರಹವಾಗಿದ್ದರೆ, ನಂತರದ ಸ್ಥಾನದಲ್ಲಿ ಕರ್ನಾಟಕ (20.45 ಕೋಟಿ ರು) ಹಾಗೂ ಆಂಧ್ರಪ್ರದೇಶ (17.13 ಕೋಟಿ ರು) ಇದೆ. ದೇಶದೆಲ್ಲೆಡೆ ಸಂಗ್ರಹಿಸಿದ ಅಕ್ರಮ ಮದ್ಯದ ಬೆಲೆ 104.49 ಕೋಟಿ ರು ದಾಟುತ್ತದೆ.

English summary
Nearly three weeks after the Model Code of Conduct (MCC) came into force, the Election Commission has seized Rs 613.176 crore worth of cash and other material from 29 states and seven Union Territories (UT).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X