ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳಿಗೂ ಸಾಲಮನ್ನಾ: ಪ್ರಣಾಳಿಕೆಯಲ್ಲಿ ಸೇರಿಸಲು ಕಾಂಗ್ರೆಸ್ ಚಿಂತನೆ

|
Google Oneindia Kannada News

Recommended Video

Lok Sabha Elections 2019: ವಿದ್ಯಾರ್ಥಿಗಳಿಗೂ ಸಾಲಮನ್ನಾ: ಪ್ರಣಾಳಿಕೆಯಲ್ಲಿ ಸೇರಿಸಲು ಕಾಂಗ್ರೆಸ್ ಚಿಂತನೆ

ನವದೆಹಲಿ, ಫೆಬ್ರವರಿ 20: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯುವಜನರು, ವಿದ್ಯಾರ್ಥಿಗಳನ್ನು ಮುಖ್ಯವಾಗಿ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರನ್ನು ಸೆಳೆಯುವ ಸಲುವಾಗಿ ಕಾಂಗ್ರೆಸ್ ವಿದ್ಯಾರ್ಥಿ ಸಾಲಮನ್ನಾ ಮಾಡುವ ವಿಚಾರವನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲು ಚಿಂತನೆ ನಡೆಸಿದೆ.

ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ವಿವಿಧ ಯೋಜನೆಗಳ ಅಡಿ ಬ್ಯಾಂಕುಗಳಿಂದ ತೆಗೆದುಕೊಳ್ಳುವ ಸಾಲವನ್ನು ಮನ್ನಾ ಮಾಡುವ ಭರವಸೆಯನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸುವ ಕುರಿತು ಕಾಂಗ್ರೆಸ್‌ನಲ್ಲಿ ಚರ್ಚೆ ನಡೆದಿದೆ.

ಬೆಂಗಳೂರು ಸೆಂಟ್ರಲ್‌ ಕ್ಷೇತ್ರ ಸುತ್ತಾಡಿ ಪ್ರಣಾಳಿಕೆ ತಯಾರಿಸಲಿದ್ದಾರೆ ಪ್ರಕಾಶ್ ರೈ ಬೆಂಗಳೂರು ಸೆಂಟ್ರಲ್‌ ಕ್ಷೇತ್ರ ಸುತ್ತಾಡಿ ಪ್ರಣಾಳಿಕೆ ತಯಾರಿಸಲಿದ್ದಾರೆ ಪ್ರಕಾಶ್ ರೈ

ಶಿಕ್ಷಣದ ವೆಚ್ಚದ ಕುರಿತಂತೆ ವಿದ್ಯಾರ್ಥಿಗಳಲ್ಲಿ ತೀವ್ರ ಕಳವಳವಿದೆ. ಮುಖ್ಯವಾಗಿ ಮಧ್ಯಮವರ್ಗದ ವಿದ್ಯಾರ್ಥಿಗಳು ತೀರಾ ದುಬಾರಿಯಾಗುತ್ತಿರುವ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಲು ಪರದಾಡುತ್ತಿದ್ದಾರೆ. ಹೀಗಾಗಿ ಇದು ಚುನಾವಣೆಯ ವಿಚಾರವೂ ಆಗಲಿದೆ.

lok sabha elections 2019 Congress manifesto poll promise of students education loan waive

ಸಾಲಮನ್ನಾ ಮಾಡಿದರೆ ಅದರ ಫಲಾನುಭವಿಗಳು ಯಾರಾಗುತ್ತಾರೆ, ಅದಕ್ಕೆ ಎಷ್ಟು ವೆಚ್ಚ ತಗುಲಬಹುದು ಇತ್ಯಾದಿ ಅಂಶಗಳ ಬಗ್ಗೆ ಪ್ರಣಾಳಿಕೆ ತಯಾರು ಮಾಡುವ ಸಮಿತಿ ಸಮಾಲೋಚನೆ ನಡೆಸಿದೆ.

ಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ ಸಮಿತಿ ಹೊಣೆ ರಾಜನಾಥ್ ಹೆಗಲಿಗೆ ಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ ಸಮಿತಿ ಹೊಣೆ ರಾಜನಾಥ್ ಹೆಗಲಿಗೆ

ಪಕ್ಷದ ವಿವಿಧ ಘಟಕಗಳಿಂದ ವಿದ್ಯಾರ್ಥಿ ಸಾಲಮನ್ನಾದ ಸಲಹೆಗಳು ಬಂದಿವೆ. ಅದರ ಬಗ್ಗೆ ಚರ್ಚೆ ನಡೆಯುತ್ತಿವೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಇದರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

2019ರ ಫೆಬ್ರವರಿ ಅಥವಾ ಮಾರ್ಚ್ ಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ 2019ರ ಫೆಬ್ರವರಿ ಅಥವಾ ಮಾರ್ಚ್ ಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

ಸರ್ಕಾರಿ ಮಾಹಿತಿಯ ಪ್ರಕಾರ 2018ರ ಡಿಸೆಂಬರ್ 21ಕ್ಕೆ ಭಾರತೀಯ ಬ್ಯಾಂಕುಗಳು ಒಟ್ಟು 69,100 ಕೋಟಿ ರೂಪಾಯಿಯಷ್ಟು ಶೈಕ್ಷಣಿಕ ಸಾಲ ನೀಡಿವೆ.

ಕಳೆದ ವರ್ಷ ರಾಜ್ಯದಲ್ಲಿಯೂ ಸಮ್ಮಿಶ್ರ ಸರ್ಕಾರ ವಿದ್ಯಾರ್ಥಿಗಳ ಸಾಲಮನ್ನಾದ ಪ್ರಸ್ತಾವವನ್ನು ಮುಂದಿರಿಸಿತ್ತು.

English summary
lok sabha elections 2019: Congress is discussing to include Students education loan waive in their poll manifesto.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X