ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ 9ನೇ ಪಟ್ಟಿ ಪ್ರಕಟ: ಶಿವಗಂಗಾದಿಂದ ಕಾರ್ತಿ ಚಿದಂಬರಂ ಸ್ಪರ್ಧೆ

|
Google Oneindia Kannada News

ನವದೆಹಲಿ, ಮಾರ್ಚ್ 24: 2019ರ ಲೋಕಸಭೆ ಚುನಾವಣೆಗಾಗಿ 38 ಅಭ್ಯರ್ಥಿಗಳ ಹೊಚ್ಚ ಹೊಸ ಪಟ್ಟಿ ಪ್ರಕಟಿಸಿದ್ದ ಕಾಂಗ್ರೆಸ್, ಭಾನುವಾರ ಸಂಜೆ ತನ್ನ ಅಭ್ಯರ್ಥಿಗಳ 9ನೇ ಪಟ್ಟಿಯನ್ನು ಪ್ರಕಟಿಸಿದೆ. ಮಾಜಿ ವಿತ್ತ ಸಚಿವ ಪಿ ಚಿದಂಬರಂ ಪುತ್ರಿ ಕಾರ್ತಿ ಚಿದಂಬರಂ ಅವರು ಶಿವಗಂಗಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಕೆ ಹರಿಪ್ರಸಾದ್ ಅವರ ಹೆಸರು ಸೂಚಿಸಲಾಗಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಕಾಂಗ್ರೆಸ್ಸಿನ 8ನೇ ಪಟ್ಟಿಯಲ್ಲಿ ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ್, ಉತ್ತರಪ್ರದೇಶ, ಮಣಿಪುರ ಹಾಗೂ ಮಹಾರಾಷ್ಟ್ರದಿಂದ ಲೋಕಸಭೆ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರುಗಳನ್ನು ನೀಡಲಾಗಿತ್ತು. 9ನೇ ಪಟ್ಟಿಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ಬಿ.ಕೆ. ಹರಿಪ್ರಸಾದ್​ ಹೆಸರು ಅಂತಿಮಗೊಳಿಸಿದೆ. ಬಿ.ಕೆ. ಹರಿಪ್ರಸಾದ್​ಸದ್ಯ ರಾಜ್ಯಸಭಾ ಸದಸ್ಯರಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಇನ್ನಷ್ಟೇ ಅಂತಿಮಗೊಳಿಸಿಲ್ಲ.

Lok Sabha Elections 2019 : Congress Fields Karti Chidambaram From Sivaganga

ಕಾಂಗ್ರೆಸ್‌ನ 7ನೇ ಪಟ್ಟಿ ಬಿಡುಗಡೆ : 35 ಅಭ್ಯರ್ಥಿಗಳುಕಾಂಗ್ರೆಸ್‌ನ 7ನೇ ಪಟ್ಟಿ ಬಿಡುಗಡೆ : 35 ಅಭ್ಯರ್ಥಿಗಳು

9ನೇ ಪಟ್ಟಿಯಲ್ಲಿ ಬಿಹಾರದ 3, ಕರ್ನಾಟಕದ 1, ಜಮ್ಮು ಮತ್ತು ಕಾಶ್ಮೀರದ 1, ಮಹಾರಾಷ್ಟ್ರದ 4, ತಮಿಳುನಾಡಿನ 1 ಸೇರಿ ಒಟ್ಟು 10 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ತಮಿಳುನಾಡಿನ ಶಿವಗಂಗಾ ಕ್ಷೇತ್ರದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಕಣಕ್ಕಿಳಿಸಲು ಪಕ್ಷದ ಹೈಕಮಾಂಡ್​ ನಿರ್ಧರಿಸಿದೆ.

English summary
Announcing the ninth list for the Lok Sabha polls today, Indian National Congress’ Central Election Committee has confirmed that the party will field Karti Chidambaram, son of former Finance Minister P Chidambaram from Sivaganga in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X