ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿ ವೋಟರ್-ಎಬಿಪಿ ಸಮೀಕ್ಷೆ: ಸಣ್ಣ ರಾಜ್ಯಗಳಲ್ಲಿ ಯಾರಿಗೆ ಎಷ್ಟು ಸೀಟು?

|
Google Oneindia Kannada News

ನವದೆಹಲಿ, ಜನವರಿ 24: ಲೋಕಸಭೆ ಚುನಾವಣೆ 2019ರ ಚುನಾವಣಾ ಪೂರ್ವ ಸಮೀಕ್ಷೆಯನ್ನು ಸಿ ವೋಟರ್ ನಡೆಸಿದ್ದು, ಎಬಿಪಿ ಸುದ್ದಿ ವಾಹಿನಿ ಈ ಸಮೀಕ್ಷೆಯ ಫಲಿತಾಂಶವನ್ನು ಬಿತ್ತರಿಸಿದೆ.

ಕಡಿಮೆ ಲೋಕಸಭೆ ಕ್ಷೇತ್ರಗಳಿರುವ ಕೆಲವು ರಾಜ್ಯಗಳಲ್ಲಿನ ಫಲಿತಾಂಶ ವಿಭಿನ್ನವಾಗಿದೆ.

ಕಡಿಮೆ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕಾದಾಟ ಪ್ರಮುಖವಾಗಿ ಮಹತ್ವ ಪಡೆದುಕೊಳ್ಳದೆ ಇದ್ದರೂ, ಫಲಿತಾಂಶದ ದಿಕ್ಕು ಬದಲಿಸುವುದರಲ್ಲಿ ಅವುಗಳ ಪಾತ್ರ ನಿರ್ಣಾಯಕ ಎನಿಸಲಿವೆ.

ಸಿ ವೋಟರ್-ಎಬಿಪಿ ಸಮೀಕ್ಷೆ: ಕರ್ನಾಟಕದಲ್ಲಿ ಬಿಜೆಪಿಗೆ 3 ಸ್ಥಾನ ಕುಸಿತ ಸಿ ವೋಟರ್-ಎಬಿಪಿ ಸಮೀಕ್ಷೆ: ಕರ್ನಾಟಕದಲ್ಲಿ ಬಿಜೆಪಿಗೆ 3 ಸ್ಥಾನ ಕುಸಿತ

ಒಟ್ಟು 22,309 ಸಮೀಕ್ಷೆ ಮಾದರಿಗಳನ್ನು ಬಳಸಿಕೊಳ್ಳಲಾಗಿದ್ದು, 2018ರ ಡಿಸೆಂಬರ್‌ನಿಂದ ಜನವರಿ ಮೂರನೇ ವಾರದವರೆಗೆ ಸಮೀಕ್ಷೆ ನಡೆಸಲಾಗಿದೆ. ಎಲ್ಲ ರಾಜ್ಯಗಳಲ್ಲಿನ ಎಲ್ಲ 543 ಲೋಕಸಭೆ ಕ್ಷೇತ್ರಗಳಲ್ಲಿಯೂ ಸಮೀಕ್ಷೆ ನಡೆಸಲಾಗಿದೆ.

ದೇಶದಲ್ಲಿ ಕಳೆದ 24 ವರ್ಷಗಳಲ್ಲಿಯೇ ನಡೆದ ಅತಿ ದೊಡ್ಡ ಹಾಗೂ ನಿಖರ ಸ್ವತಂತ್ರ ಚುನಾವಣಾ ಪೂರ್ವ ಮಾದರಿ ಸಮೀಕ್ಷೆಯಾಗಿದೆ ಎಂದು ಸಿ ವೋಟರ್ ಹೇಳಿಕೊಂಡಿದೆ.

ಸಿ ವೋಟರ್ಸ್-ಎಬಿಪಿ ಸಮೀಕ್ಷೆ: ಪ್ರಮುಖ ರಾಜ್ಯಗಳಲ್ಲಿ ಯಾರಿಗೆ ಎಷ್ಟು ಕ್ಷೇತ್ರ? ಸಿ ವೋಟರ್ಸ್-ಎಬಿಪಿ ಸಮೀಕ್ಷೆ: ಪ್ರಮುಖ ರಾಜ್ಯಗಳಲ್ಲಿ ಯಾರಿಗೆ ಎಷ್ಟು ಕ್ಷೇತ್ರ?

ಎಬಿಪಿ ನ್ಯೂಸ್ ಮತ್ತು ಸಿವೋಟರ್ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯ ಕೆಲವು ಸಣ್ಣಪುಟ್ಟ ರಾಜ್ಯಗಳ ಫಲಿತಾಂಶ ಇಲ್ಲಿದೆ.

ಹರಿಯಾಣದಲ್ಲಿ ಎನ್‌ಡಿಎ ಮುಂದೆ

ಹರಿಯಾಣದಲ್ಲಿ ಎನ್‌ಡಿಎ ಮುಂದೆ

ಹರಿಯಾಣದಲ್ಲಿ 10 ಲೋಕಸಭೆ ಕ್ಷೇತ್ರಗಳಿವೆ. ಇದರಲ್ಲಿ ಎನ್‌ಡಿಎ ಮೈತ್ರಿಕೂಟ ಏಳು ಕ್ಷೇತ್ರಗಳಲ್ಲಿ ಗೆಲುವು ಕಾಣಲಿದೆ. ಯುಪಿಎ ಮೂರು ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ.

ಐದು ನದಿಗಳ ನಾಡಿನಲ್ಲಿ...

ಐದು ನದಿಗಳ ನಾಡಿನಲ್ಲಿ...

ಕಾಂಗ್ರೆಸ್ ಆಡಳಿತವಿರುವ ಪಂಜಾಬ್‌ನಲ್ಲಿ ಯುಪಿಎ ಪರ ಅಲೆಯಿದೆ. ಹೀಗಾಗಿ 13 ಲೋಕಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 12ರಲ್ಲಿ ಗೆಲುವು ಸಾಧಿಸಲಿದೆ. ಒಂದೇ ಒಂದು ಕ್ಷೇತ್ರ ಎನ್‌ಡಿಎಗೆ ಸಿಗಲಿದೆ.

ಸಿ ವೋಟರ್ಸ್-ಎಬಿಪಿ ಸಮೀಕ್ಷೆ: ಉ. ಪ್ರದೇಶದಲ್ಲಿ ಬಿಜೆಪಿಗೆ 25 ಸ್ಥಾನಸಿ ವೋಟರ್ಸ್-ಎಬಿಪಿ ಸಮೀಕ್ಷೆ: ಉ. ಪ್ರದೇಶದಲ್ಲಿ ಬಿಜೆಪಿಗೆ 25 ಸ್ಥಾನ

ಛತ್ತೀಸ್ ಗಢ ಲೋಕಸಭೆ

ಛತ್ತೀಸ್ ಗಢ ಲೋಕಸಭೆ

ಛತ್ತೀಸ್ ಗಢದಲ್ಲಿ 11 ಲೋಕಸಭೆ ಕ್ಷೇತ್ರಗಳಿವೆ. ಅದರಲ್ಲಿ 5 ಎನ್ಡಿಎ ವಶವಾಗಲಿವೆ. ಉಳಿದ ಆರು ಕ್ಷೇತ್ರಗಳು ಯುಪಿಎಗೆ ಗೆಲುವು ತಂದುಕೊಡಲಿವೆ.

ಜಾರ್ಖಂಡ್‌ನಲ್ಲಿ ಯುಪಿಎ ಮುಂದೆ

ಜಾರ್ಖಂಡ್‌ನಲ್ಲಿ ಯುಪಿಎ ಮುಂದೆ

ಜಾರ್ಖಂಡ್‌ನಲ್ಲಿನ 14 ಲೋಕಸಭೆ ಕ್ಷೇತ್ರಗಳಲ್ಲಿ 5 ಕ್ಷೇತ್ರಗಳು ಎನ್‌ಡಿಎಗೆ ಸಿಗಲಿವೆ. ಯುಪಿಎ ಎಂಟು ಕ್ಷೇತ್ರಗಳಲ್ಲಿ ಗೆಲುವು ಕಾಣಲಿದೆ. ಇನ್ನು ಜೆವಿಎಂ ಪಕ್ಷ ಒಂದು ಕ್ಷೇತ್ರದಲ್ಲಿ ಗೆಲ್ಲಲಿದೆ.

ಇಂಡಿಯಾ ಟುಡೆ ಸಮೀಕ್ಷೆ: ಲೋಕಸಭೆ ಚುನಾವಣೆ ಯಾವ ಪಕ್ಷಕ್ಕೆ ಗೆಲುವು? ಇಂಡಿಯಾ ಟುಡೆ ಸಮೀಕ್ಷೆ: ಲೋಕಸಭೆ ಚುನಾವಣೆ ಯಾವ ಪಕ್ಷಕ್ಕೆ ಗೆಲುವು?

ಈಶಾನ್ಯ ರಾಜ್ಯಗಳಲ್ಲಿ ಯಾರಿಗೆ ಗೆಲುವು?

ಈಶಾನ್ಯ ರಾಜ್ಯಗಳಲ್ಲಿ ಯಾರಿಗೆ ಗೆಲುವು?

ಹಿಮಾಚಲ ಪ್ರದೇಶದ ನಾಲ್ಕೂ ಕ್ಷೇತ್ರಗಳು ಎನ್‌ಡಿಎ ಪಾಲಾಗಲಿದೆ. ಅರುಣಾಚಲ ಪ್ರದೇಶದಲ್ಲಿ ಇರುವ ಎರಡು ಕ್ಷೇತ್ರಗಳನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಬಾಚಿಕೊಳ್ಳಲಿದೆ. ಮೇಘಾಲಯದಲ್ಲಿ ಎರಡು ಕ್ಷೇತ್ರಗಳಿದ್ದು, ಎನ್‌ಡಿಎ ಮತ್ತು ಯುಪಿಎ ಅವುಗಳನ್ನು ಹಂಚಿಕೊಳ್ಳಲಿವೆ. ಮಿಜೋರಾಂನಲ್ಲಿ ಇರುವ ಒಂದು ಸ್ಥಾನ ಪ್ರಾದೇಶಿಕ ಪಕ್ಷ ಎಂಎನ್‌ಎಫ್ ಪಾಲಾಗಲಿದೆ.

ಅಸ್ಸಾಂನಲ್ಲಿ 14 ಲೋಕಸಭಾ ಕ್ಷೇತ್ರಗಳಿದ್ದು, ಯುಪಿಎ ಮೈತ್ರಿಕೂಟ ಏಳರಲ್ಲಿ ಜಯಗಳಿಸಲಿದೆ. ಎನ್‌ಡಿಎ ಮಿತ್ರಪಕ್ಷಗಳಲ್ಲಿ 6ರಲ್ಲಿ ಜಯ ಪಡೆಯಲಿದೆ. ಇನ್ನೊಂದು ಕ್ಷೇತ್ರ ಎಐಯುಡಿಎಫ್ ಪಾಲಾಗಲಿದೆ.

ತ್ರಿಪುರದಲ್ಲಿ ಇರುವ ಎರಡು ಲೋಕಸಭೆ ಕ್ಷೇತ್ರಗಳಲ್ಲಿ ಕಮಲ ಬಾವುಟ ಹಾರಿಸಲಿದೆ.

ಇಲ್ಲಿ ಕ್ಷೇತ್ರಗಳ ಹಂಚಿಕೆ

ಇಲ್ಲಿ ಕ್ಷೇತ್ರಗಳ ಹಂಚಿಕೆ

ಏಕೈಕ ಕ್ಷೇತ್ರವಿರುವ ಚಂಡೀಗಢದಲ್ಲಿ ಎನ್‌ಡಿಎ ಗೆಲುವಿನ ನಗೆ ಬೀರಲಿದೆ. ಉಳಿದ ಪಕ್ಷಗಳಿಗೆ ಇಲ್ಲಿ ಖಾತೆ ತೆರೆಯಲು ಅವಕಾಶವಿಲ್ಲ.

ಗೋವಾದಲ್ಲಿನ ಎರಡು ಲೋಕಸಭೆ ಕ್ಷೇತ್ರಗಳು ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಹಂಚಿಕೆಯಾಗಲಿವೆ.

ಎನ್‌ಡಿಎ ಒಂದು ಕ್ಷೇತ್ರದಲ್ಲಿ ಗೆಲ್ಲಲಿದ್ದರೆ, ಯುಪಿಎ ಮೈತ್ರಿಕೂಟ ಒಂದು ಕ್ಷೇತ್ರದಲ್ಲಿ ಗೆಲುವು ಪಡೆಯಲಿದೆ.

ದೇಶದ ನೆತ್ತಿಯಲ್ಲಿ ಯುಪಿಎಗೆ ಒಲವು

ದೇಶದ ನೆತ್ತಿಯಲ್ಲಿ ಯುಪಿಎಗೆ ಒಲವು

ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ಕ್ಷೇತ್ರಗಳಿದ್ದು ಅದರಲ್ಲಿ ಯುಪಿಎಗೆ 4 ಮತ್ತು ಎನ್‌ಡಿಎಗೆ 2 ಕ್ಷೇತ್ರಗಳು ದಕ್ಕಲಿವೆ. ಉತ್ತರಾಖಂಡದಲ್ಲಿ ಐದು ಕ್ಷೇತ್ರಗಳಿದ್ದು, ಇವುಗಳಲ್ಲಿ ಎನ್‌ಡಿಎಯದ್ದೇ ಪಾರುಪತ್ಯ ನಡೆಯಲಿದೆ.

English summary
ABP News and C Voter have conducted 'Desh Ka Mood' (Mood of the Nation) survey. Here is the result of some of some states survey which have few constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X