ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ಪಂಡಿತರ ಮತಕ್ಕಾಗಿ ದೆಹಲಿಗೆ ಬಂದ ಬಿಜೆಪಿ ಅಭ್ಯರ್ಥಿ!

|
Google Oneindia Kannada News

ನವದೆಹಲಿ, ಏಪ್ರಿಲ್ 9: ಮೂಲ ಕಾಶ್ಮೀರದವರಾದ ಕಾಶ್ಮೀರಿ ಪಂಡಿತ ಸಮುದಾಯದ ಜನರು ಜೀವಭಯದಿಂದ ದೇಶದ ವಿವಿಧೆಡೆ ಬಂದು ನೆಲೆಸಿದ್ದಾರೆ. ಅವರಲ್ಲಿ ಹೆಚ್ಚಿನ ಸಂಖ್ಯೆ ಜನರು ದೆಹಲಿಯಲ್ಲಿ ಆಶ್ರಯ ಕಂಡುಕೊಂಡಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಅವರ ಮತದಾನದ ಹಕ್ಕು ಇದೆ. ಆದರೆ ಅವರು ಮತದಾನ ಮಾಡದೆ ಯಾವುದೋ ಕಾಲವಾಗಿದೆ. ಅವರನ್ನು ಮತ ಬ್ಯಾಂಕ್ ಆಗಿ ಯಾವ ಪಕ್ಷಗಳೂ ಪರಿಗಣಿಸಿಲ್ಲ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ, ಶ್ರೀನಗರದ ಬಿಜೆಪಿ ಅಭ್ಯರ್ಥಿ ದೆಹಲಿಗೆ ಬಂದು ಕಾಶ್ಮೀರಿ ಪಂಡಿತರ ಮನೆ ಬಾಗಿಲು ತಟ್ಟಿದ್ದಾರೆ. ಅವರೊಂದಿಗೆ ಸಂವಾದ ನಡೆಸಿ, ಭರವಸೆಗಳನ್ನು ನೀಡಿ ಮತಯಾಚನೆ ಮಾಡಿದ್ದಾರೆ. ಅಭ್ಯರ್ಥಿಯೊಬ್ಬರು ತಮ್ಮ ಮತಕ್ಕಾಗಿ ಪ್ರಚಾರ ನಡೆಸಲು ದೆಹಲಿಗೆ ತೆರಳಿದ್ದು ಬಹುಶಃ ಇದೇ ಮೊದಲ ಬಾರಿ ಎನ್ನಲಾಗಿದೆ.

ಒಮರ್ ಅಬ್ದುಲ್ಲಾ, ಗೌತಮ್ ಗಂಭೀರ್ ನಡುವೆ ಟ್ವಿಟರ್ ವಾರ್! ಒಮರ್ ಅಬ್ದುಲ್ಲಾ, ಗೌತಮ್ ಗಂಭೀರ್ ನಡುವೆ ಟ್ವಿಟರ್ ವಾರ್!

ಶ್ರೀನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಖಾಲಿದ್ ಜಹಾಂಗೀರ್ ವಾರಾಂತ್ಯದಲ್ಲಿ ಕಾಶ್ಮೀರಿ ಪಂಡಿತರ ಸಮುದಾಯದ ಜನರೊಂದಿಗೆ ಸಂವಾದ ನಡೆಸಿದ್ದಾರೆ.

Lok Sabha elections 2019 bjp srinagar candidate khalid jehangir went to delhi for kashmiri pandits vote

ಕಾಶ್ಮೀರದಿಂದ ಹೊರಬಂದ ಸುಮಾರು 4 ಸಾವಿರ ಹಿಂದೂಗಳು ಈಗಲೂ ಅಲ್ಲಿಯೇ ಮತದಾನದ ಹಕ್ಕು ಹೊಂದಿದ್ದಾರೆ. ದೆಹಲಿಯಲ್ಲಿ ಇರುವವರಲ್ಲಿ 40 ಕ್ಕಿಂತಲೂ ಕಡಿಮೆ ಕಾಶ್ಮೀರಿಗಳು ಮಾತ್ರ ರಾಜಧಾನಿಯಲ್ಲಿ ಮತದಾನದ ಹಕ್ಕು ಪಡೆದುಕೊಂಡಿದ್ದಾರೆ. ಹೆಚ್ಚಿನವರಿಗೆ ವಲಸೆ ಅರ್ಜಿ ಬಳಸಿ ಮತದಾನದ ಹಕ್ಕು ಪಡೆಯುವ ಅವಕಾಶದ ಬಗ್ಗೆ ತಿಳಿವಳಿಕೆಯೇ ಇಲ್ಲ.

ಪ್ರಣಾಳಿಕೆ: ಸಂವಿಧಾನದ 370ನೇ ವಿಧಿ ಹಿಂಪಡೆಯಲು ಮುಂದಾದ ಬಿಜೆಪಿಪ್ರಣಾಳಿಕೆ: ಸಂವಿಧಾನದ 370ನೇ ವಿಧಿ ಹಿಂಪಡೆಯಲು ಮುಂದಾದ ಬಿಜೆಪಿ

'ಕಾಶ್ಮೀರ ಕಣಿವೆಯ ಯಾವ ಮುಖಂಡರೂ ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳದಿದ್ದರೂ ಕಾಶ್ಮೀರದಲ್ಲಿನ ನನ್ನ ವಾಸ ಮತ್ತು ಮತದಾನದ ಹಕ್ಕನ್ನು ನಾನು ಬಿಟ್ಟುಬಿಡುವುದಿಲ್ಲ. ಚೆನ್ನಾಗಿ ಓದಿದ ವ್ಯಕ್ತಿಯೊಬ್ಬರು ನಮ್ಮನ್ನು ಸಂಪರ್ಕಿಸಿ ನಮ್ಮ ಸಂಕಷ್ಟಗಳನ್ನು ಆಲಿಸುವುದನ್ನು ಕಂಡು ಅಚ್ಚರಿಯಾಯಿತು. ಅವರು ಯೋಗ್ಯ ಎನಿಸುತ್ತಿದ್ದಾರೆ' ಎಂದು ಶ್ರೀನಗರದ ಗಾನ್‌ಪತ್ಯಾರ್ ಮೂಲದ ರಾಕೇಶ್ ರಾಜ್ದಾನ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿವಾಹಿನಿಯೊಂದರ ಪತ್ರಕರ್ತರಾಗಿದ್ದ ಖಾಲಿದ್ ಜಹಾಂಗೀರ್ 2014ರಲ್ಲಿ ಬಿಜೆಪಿ ಸೇರಿಕೊಂಡಿದ್ದರು. ಜಮ್ಮುವಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಪರಿಚಯಿಸಿದ್ದರು. ಅವರು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಡಾ. ಫಾರೂಕ್ ಅಬ್ದುಲ್ಲಾ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

English summary
Lok Sabha elections 2019: BJP candidate Khalid Jehangir from Srinagar constituency reached displaced Kashmiri Pandits living in Delhi for their votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X