• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

17 ರಾಜ್ಯಗಳಿಗೆ ಚುನಾವಣಾ ಉಸ್ತುವಾರಿ ನೇಮಿಸಿದ ಬಿಜೆಪಿ

|
   Lok Sabha elections 2019 :17 ರಾಜ್ಯಗಳ ಮೇಲೆ ಬಿಜೆಪಿ ಕಣ್ಣು | Oneindia Kannada

   ನವದೆಹಲಿ, ಡಿಸೆಂಬರ್ 27: ಲೋಕಸಭೆ ಚುನಾವಣೆಗಾಗಿ ಭರ್ಜರಿಯಾಗಿ ತಯಾರಿ ನಡೆಸಿರುವ ಭಾರತೀಯ ಜನತಾ ಪಕ್ಷವು 17 ರಾಜ್ಯಗಳೀಗೆ ಉಸ್ತುವಾರಿಗಳನ್ನು ನೇಮಿಸಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಆರೆಸ್ಸೆಸ್ ಮುಖಂಡರ ಸಲಹೆ, ಸೂಚನೆಯನ್ನು ಪಡೆದು ಈ ಪಟ್ಟಿಯನ್ನು ತಯಾರಿಸಿದ್ದಾರೆ ಎನ್ನಲಾಗಿದೆ.

   ಅಚ್ಚರಿಯೆಂದರೆ ಗುಜರಾತಿನಲ್ಲಿ ಮೋದಿ ವಿರುದ್ಧ ದನಿಯೆತ್ತಿದ್ದ ಮಾಜಿ ಸಚಿವ್ವ ಗೋವರ್ಧನ್ ಝಡಫಿಯಾ ಅವರನ್ನು ಉತ್ತರಪ್ರದೇಶದ ಪ್ರಭಾರಿಯಾಗಿ ನೇಮಿಸಲಾಗಿದೆ. ದುಷ್ಯಂತ್ ಗೌತಮ್ ಹಾಗೂ ನರೋತ್ತಮ್ ಮಿಶ್ರಾ ಅವರು ಗೋವರ್ಧನ್ ಗೆ ಸಹಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

   ಶಿವಸೇನೆಗೆ RSS ಖಡಕ್ ಎಚ್ಚರಿಕೆ?

   ತೆಲಂಗಾಣಕ್ಕೆ ಕರ್ನಾಟಕ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರನ್ನು ನೇಮಿಸಲಾಗಿದೆ. ತೆಲಂಗಾಣ ವಿಧಾನಸಭೆಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದರೂ, ಆಡಳಿತಾರೂಢ ಟಿಆರ್ ಎಸ್ ಜತೆ ಮೈತ್ರಿ ಸಾಧ್ಯತೆಯನ್ನು ತಳ್ಳಿ ಹಾಕಿದೆ.

   'ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಪಕ್ಷವೂ ಏಕಾಂಗಿಯಾಗಿ ಹೋರಾಡಲಿದೆ. ನಾವು ಇಲ್ಲಿ ಸಾಧ್ಯವಾದಷ್ಟು ಲೋಕಸಭಾ ಸೀಟುಗಳನ್ನು ಗೆಲ್ಲಲು ಪ್ರಯತ್ನಿಸುತ್ತೇವೆ. ರಾಜ್ಯದ ಜನರ ಭರವಸೆಯನ್ನು ಈಡೇರಿಸುವಲ್ಲಿ ಟಿಆರ್​ಎಸ್​ವಿಫಲವಾಗಿದೆ ಎಂದು ಬಿಜೆಪಿ ನಾಯಕ ಕೆ. ಲಕ್ಷ್ಮಣ್ ಹೇಳಿದ್ದಾರೆ.

   ತೆಲಂಗಾಣಕ್ಕೆ ಅರವಿಂದ್ ಲಿಂಬಾವಳಿ ಉಸ್ತುವಾರಿ

   ತೆಲಂಗಾಣಕ್ಕೆ ಅರವಿಂದ್ ಲಿಂಬಾವಳಿ ಉಸ್ತುವಾರಿ

   * ಆಂಧ್ರಪ್ರದೇಶ: ವಿ.ಮುರುಳೀಧರನ್, ಸಹ ಉಸ್ತುವಾರಿ- ಸುನೀಲ್ ದೇವಧರ್​

   * ತೆಲಂಗಾಣ: ಅರವಿಂದ ಲಿಂಬಾವಳಿ

   * ಆಸ್ಸಾಂ - ಮಹೇಂದ್ರ ಸಿಂಗ್

   * ಬಿಹಾರ- ಭೂಪೇಂದ್ರ ಯಾದವ್

   ಈಶಾನ್ಯ ಭಾರತದ ಮೇಲೆ ಬಿಜೆಪಿಗೆ ವಿಶೇಷ ಕಾಳಜಿ

   ಈಶಾನ್ಯ ಭಾರತದ ಮೇಲೆ ಬಿಜೆಪಿಗೆ ವಿಶೇಷ ಕಾಳಜಿ

   * ಹಿಮಾಚಲ ಪ್ರದೇಶ: ತೀರಥ್ ಸಿಂಗ್ ರಾವತ್.

   * ಜಾರ್ಖಂಡ್ : ಮಂಗಲ್ ಪಾಂಡೆ

   * ಮಧ್ಯಪ್ರದೇಶ: ಸ್ವತಂತ್ರದೇವ್ ಸಿಂಗ್ ಹಾಗೂ ಸತೀಶ್ ಉಪಾಧ್ಯಾಯ.

   * ಮಣಿಪುರ ಹಾಗೂ ನಾಗಾಲ್ಯಾಂಡ್: ನಳೀನ್ ಕೊಹ್ಲಿ

   * ಒಡಿಶಾ : ಅರುಣ್ ಸಿಂಗ್

   ರಾಜಸ್ಥಾನಕ್ಕೆ ಪ್ರಕಾಶ್ ಜಾವಡೇಕರ್

   ರಾಜಸ್ಥಾನಕ್ಕೆ ಪ್ರಕಾಶ್ ಜಾವಡೇಕರ್

   * ಛತ್ತೀಸ್​ಗಡ: ಡಾ.ಅನಿಲ್ ಜೈನ್

   * ಗುಜರಾತ್ - ಓಂ ಪ್ರಕಾಶ್ ಮಥೂರ್

   * ರಾಜಸ್ಥಾನ - ಪ್ರಕಾಶ್ ಜಾವಡೇಕರ್, ಸಹ ಉಸ್ತುವಾರಿ- ಸುಧಾಂಶು ತ್ರಿವೇದಿ

   * ಸಿಕ್ಕಿಂ - ನಿತಿನ್​ ನವೀನ್​

   ಉತ್ತರಪ್ರದೇಶಕ್ಕೆ ಮೂವರು ಪ್ರಭಾರಿಗಳ ನೇಮಕ

   ಉತ್ತರಪ್ರದೇಶಕ್ಕೆ ಮೂವರು ಪ್ರಭಾರಿಗಳ ನೇಮಕ

   * ಉತ್ತರಾಖಂಡ -ತಾವರ್​ಚೆಂದ್​ ಗೆಹ್ಲೋಟ್​ (ಚಿತ್ರದಲ್ಲಿ)

   * ಉತ್ತರಪ್ರದೇಶ - ಗೋವರ್ಧನ್ ​ಝಡಾಪಿಯಾ, ಸಹ ಉಸ್ತುವಾರಿ- ದುಶ್ಯಂತ್​ ಗೌತಮ್​, ನರೋತ್ತಮ್​ ಮಿಶ್ರಾ

   * ಪಂಜಾಬ್ ಹಾಗೂ ಚಂಡೀಗಢ- ಕ್ಯಾಪ್ಟನ್​ ಅಭಿಮನ್ಯು

   English summary
   Lok Sabha elections 2019 : BJP appoints In charge for 17 States. Karnataka leader Arvind Limbavali has been put in charge of Telangana.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X