ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬಿಪಿ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಲ್ಲ ಕಿಮ್ಮತ್ತು

|
Google Oneindia Kannada News

ನವದೆಹಲಿ, ನವೆಂಬರ್ 01: ಲೋಕಸಭೆ ಚುನಾವಣೆ 2019 ರ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಎಬಿಪಿ ನ್ಯೂಸ್‌ ಮಾಡಿದ್ದು, ಸಮೀಕ್ಷೆಯನ್ವಯ ದಕ್ಷಿಣ ಭಾರತದ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ಮಕಾಡೆ ಮಲಗಲಿವೆ.

ಆಂಧ್ರ ಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಮುನ್ನಡೆ ಸಾಧಿಸಲಿವೆ, ಕೇರಳದಲ್ಲಿ ಕಮ್ಯೂನಿಸ್ಟ್‌ ಪಕ್ಷ ಹೆಚ್ಚು ಸೀಟು ಗಳಿಸಿದರೆ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.

ಎಬಿಪಿ ಸಮೀಕ್ಷೆ: ಎನ್‌ಡಿಎಗೆ 300, ಯುಪಿಎಗೆ 116, ಇತರೆ 127 ಸ್ಥಾನಗಳುಎಬಿಪಿ ಸಮೀಕ್ಷೆ: ಎನ್‌ಡಿಎಗೆ 300, ಯುಪಿಎಗೆ 116, ಇತರೆ 127 ಸ್ಥಾನಗಳು

ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವು ಎಂಟು ಸೀಟುಗಳನ್ನು ಗೆದ್ದರೆ ಬಿಜೆಪಿ ಒಂದೂ ಸೀಟು ಗೆಲ್ಲದು ಎಂದು ಸಮೀಕ್ಷೆ ಹೇಳಿದೆ. ಆದರೆ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲಿದೆ ಎಂದು ಸಮೀಕ್ಷೆ ಹೇಳಿದೆ.

Lok Sabha elections 2019 ABP news survey of south India states

ಸಮೀಕ್ಷೆ ಅನ್ವಯ ದಕ್ಷಿಣ ಭಾರತ ರಾಜ್ಯಗಳ ಒಟ್ಟು 129 ಸೀಟುಗಳಲ್ಲಿ ಎನ್‌ಡಿಎ 20 ಸೀಟು ಗೆದ್ದರೆ, ಯುಪಿಎ 34 ಮತ್ತು ಇತರೆ ಪಕ್ಷಗಳು 75 ಸೀಟುಗಳನ್ನು ಗೆಲ್ಲಲಿದೆ.

ಎಬಿಪಿ ಸಮೀಕ್ಷೆ: ಉ.ಪ್ರ.ದಲ್ಲಿ ಎನ್ ಡಿಎ ತಡೆಯಲು ಮಹಾಘಟಬಂಧನ್ ಆಗಬೇಕುಎಬಿಪಿ ಸಮೀಕ್ಷೆ: ಉ.ಪ್ರ.ದಲ್ಲಿ ಎನ್ ಡಿಎ ತಡೆಯಲು ಮಹಾಘಟಬಂಧನ್ ಆಗಬೇಕು

ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿಯೇ ಬಿಜೆಪಿ ಯು ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ತೆಲಂಗಾಣದಲ್ಲಿ ಸಹ ಬಿಜೆಪಿ ಖಾತೆ ತೆರೆಯಲಾರದು ಎಂದು ಸಮೀಕ್ಷೆ ಹೇಳಿದೆ.

English summary
As per the ABP news survey of Lok Sabha elections 2019, In south India states NDA will win in only 20 seats, UPA will get 34 and other parties will win 75 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X