ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4ನೇ ಹಂತದ ಮತದಾನ: 6 ಗಂಟೆಯವರೆಗೆ 62.15% ಮತದಾನ ದಾಖಲು

|
Google Oneindia Kannada News

ನವದೆಹಲಿ, ಏಪ್ರಿಲ್ 29 : ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ಇಂದು
(ಸೋಮವಾರ) ಆರಂಭವಾಗಿದೆ.

ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಆರಂಭವಾಗಿದ್ದು, ರಾಜಸ್ಥಾನ ಮತ್ತು ಉತ್ತರ ಪ್ರದೇಶದಂಥ ಪ್ರಮುಖ ರಾಜ್ಯಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಲಿದೆ.

9 ರಾಜ್ಯಗಳ 71 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಟ್ಟು ಏಳು ಹಂತದಲ್ಲಿ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

ಲೋಕಸಭಾ ಚುನಾವಣೆ : ಏ.29ರಂದು 9 ರಾಜ್ಯ, 71 ಕ್ಷೇತ್ರದಲ್ಲಿ ಮತದಾನಲೋಕಸಭಾ ಚುನಾವಣೆ : ಏ.29ರಂದು 9 ರಾಜ್ಯ, 71 ಕ್ಷೇತ್ರದಲ್ಲಿ ಮತದಾನ

Lok Sabha Elections 2019: 4th Phase voting on April 29: LIVE Updates

ನಾಲ್ಕನೇ ಹಂತದಲ್ಲಿ ಒಟ್ಟು 943 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಬಿಹಾರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡರ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಎಲ್ಲಾ ರಾಜ್ಯಗಳಲ್ಲೂ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.

ಮಹಾರಾಷ್ಟ್ರದಲ್ಲಿ 17, ರಾಜಸ್ಥಾನದಲ್ಲಿ 13, ಉತ್ತರ ಪ್ರದೇಶದಲ್ಲಿ 13, ಪಶ್ಚಿಮ ಬಂಗಾಳದಲ್ಲಿ 8, ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ತಲಾ 6, ಬಿಹಾರದಲ್ಲಿ 5 ಮತ್ತು ಜಾರ್ಖಂಡ್ ನಲ್ಲಿ 3 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.

Newest FirstOldest First
8:07 PM, 29 Apr

ಲೋಕಸಭೆ ಚುನಾವಣೆ 4ನೇ ಹಂತದ ಮತದಾನ ಅಂತ್ಯದ ವೇಳೆಗೆ (6 ಗಂಟೆ) ಬಿಹಾರದಲ್ಲಿ 58.92%, ಜಮ್ಮು ಕಾಶ್ಮೀರದಲ್ಲಿ 9.79%, ಮಧ್ಯ ಪ್ರದೇಶ 66.68%, ಮಹಾರಾಷ್ಟ್ರ 55.85%, ಒಡಿಸ್ಸಾ 64.05%, ರಾಜಸ್ಥಾನ 66.75%, ಉತ್ತರ ಪ್ರದೇಶ 56.79%, ಪಶ್ಚಿಮ ಬಂಗಾಳ 76.59%, ಜಾರ್ಖಂಡ್ 63.77% ಸರಾಸರಿ ಮತದಾನ ಆಗಿದೆ.
8:04 PM, 29 Apr

ಮತದಾನ ಮುಕ್ತಾಯದ ಸಮಯ 6 ಗಂಟೆ ವೇಳೆಗೆ 62.15% ಮತದಾನವು ಲೋಕಸಭೆ ಚುನಾವಣೆ 4ನೇ ಹಂತದಲ್ಲಿ ಆಗಿದೆ.
5:53 PM, 29 Apr

ಸಂಜೆ ಐದು ಗಂಟೆ ಅಂತ್ಯಕ್ಕೆ ನಾಲ್ಕೇ ಹಂತದ ಚುನಾವಣೆ ಸರಾಸರಿ ಮತದಾನ ಇಂತಿದೆ. ಪಶ್ಚಿಮ ಬಂಗಾಳ 71.97%, ಮಧ್ಯ ಪ್ರದೇಶ 60.44%, ಒಡಿಸ್ಸಾ 57.37%, ಜಾರ್ಖಂಡ್ 57.13%, ರಾಜಸ್ಥಾನ 56.98%, ಬಿಹಾರ 53.49%, ಉತ್ತರ ಪ್ರದೇಶ 49.67%, ಮಹಾರಾಷ್ಟ್ರ 45.08%, ಜಮ್ಮು ಕಾಶ್ಮೀರ 9.98% ಮತದಾನ ಆಗಿದೆ.
4:05 PM, 29 Apr

3 ಗಂಟೆಯವರೆಗೆ 49.53% ಮತದಾನ ದಾಖಲು
3:02 PM, 29 Apr

ಪಶ್ಚಿಮ ಬಂಗಾಳದ ಬಿರ್ಭುಮ್ ಕ್ಷೇತ್ರದ ದುಬ್ರಾಜ್ಪುರ ಮತಗಟ್ಟೆಯ ಒಳಗೇ ಭದ್ರತಾ ಪಡೆಯಿಂದ ಫೈರಿಂಗ್ ನಡೆದಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ ತೃಣಮೂಲ ಕಾಂಗ್ರೆಸ್ ನಾಯಕರು.
1:59 PM, 29 Apr

ಮಹಾರಾಷ್ಟ್ರ

ಮುಂಬೈಯಲ್ಲಿ ಮತ ಚಲಾಯಿಸಿದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಪತ್ನಿ ಅಂಜಲಿ, ಪುತ್ರ ಅರ್ಜುನ್, ಪುತ್ರಿ ಸಾರಾ
1:58 PM, 29 Apr

1 ಗಂಟೆಯವರೆಗೆ 38.39 % ಮತದಾನ ದಾಖಲು
Advertisement
1:48 PM, 29 Apr

ಮುಂಬೈಯ ಜುಹು ಮತಗಟ್ಟೆಯಲ್ಲಿ ಮತ ಚಲಾಯಿಸಿದ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್
1:47 PM, 29 Apr

ಮಹಾರಾಷ್ಟ್ರ

ಮುಂಬೈಯಲ್ಲಿ ಮತಗಟ್ಟೆ ಸಂಖ್ಯೆ 283 ರಲ್ಲಿ ಮತ ಚಲಾಯಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್
1:39 PM, 29 Apr

ಮಹಾರಾಷ್ಟ್ರ

ಮತ ಚಲಾಯಿಸಿದ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್
1:38 PM, 29 Apr

ಯಾವ ರಾಜ್ಯದಲ್ಲಿ ಎಷ್ಟು?

ಬಿಹಾರ : 18.26% ಜಮ್ಮು ಮತ್ತು ಕಾಶ್ಮೀರ: 3.74% ಜಾರ್ಖಂಡ್: 29.21% ಮಧ್ಯಪ್ರದೇಶ: 26.62% ಮಹಾರಾಷ್ಟ್ರ: 16.47% ಒಡಿಶಾ: 19.67 ರಾಜಸ್ಥಾನ: 29.19 ಉತ್ತರ ಪ್ರದೇಶ: 21.18 ಪಶ್ಚಿಮ ಬಂಗಾಳ: 35.10
1:34 PM, 29 Apr

12 ಗಂಟೆವರೆಗೆ ಒಂಬತ್ತು ರಾಜ್ಯಗಳಲ್ಲಿ 23.48% ಮತದಾನ ದಾಖಲು
Advertisement
1:17 PM, 29 Apr

ಮಹಾರಾಷ್ಟ್ರ

"ಇದು ಒಂದು ಸುನಾಮಿ ಚುನಾವಣೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಲ್ಲೆಡೆಯೂ ಮೋದಿ ಅಲೆ ಇದೆ. ಅದು ಇಡೀ ದೇಶವನ್ನೂ ಆವರಿಸಿದೆ. ಪ್ರಧಾನಿ ಮೋದಿ ಈ ದೇಶದ ಅತೀ ಎತ್ತರದ ವ್ಯಕ್ತಿತ್ವ ಎನ್ನಿಸಿದ್ದಾರೆ"- ಮತಚಲಾವಣೆಯ ನಂತರ ಪಿಯೂಶ್ ಗೋಯಲ್ ಹೇಳಿಕೆ
1:14 PM, 29 Apr

ಮಹಾರಾಷ್ಟ್ರ

ಮತ ಚಲಾಯಿಸಿದ ಕೇಂದ್ರ ಸಚಿವ ಪಿಯೂಶ್ ಗೋಯಲ್. ಮುಂಬೈಯ ಮಲಾಬರ್ ಹಿಲ್ ನಲ್ಲಿ ಮತ ಚಲಾವಣೆ
1:12 PM, 29 Apr

ಮಹಾರಾಷ್ಟ್ರ

ಮುಂಬೈಯಲ್ಲಿ ಮತ ಚಲಾಯಿಸಿದ ಬಾಲಿವುಡ್ ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ. ಜೊತೆಗೆ ಪುತ್ರಿಯರಾದ ಇಶಾ ಡಿಯೋಲ್, ಅಹಾನಾ ಡಿಯೋಲ್ ಮತ ಚಲಾಯಿಸಿದರು.
12:50 PM, 29 Apr

ಮಹಾರಾಷ್ಟ್ರ

ಮುಂಬೈಯ ಗಾಂಧಿನಗರ ಕ್ಷೇತ್ರದಲ್ಲಿ ಮತಚಲಾಯಿಸಿದ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ, ಪತ್ನಿ ರಶ್ನಿ ಠಾಕ್ರೆ, ಪುತ್ರ ಆದಿತ್ಯ ಠಾಕ್ರೆ
12:41 PM, 29 Apr

ಮಹಾರಾಷ್ಟ್ರ

ಮುಂಬೈಯಲ್ಲಿ ಮತ ಚಲಾಯಿಸಿದ ಬಾಲಿವುಡ್ ನಟರಾದ ಜಾವೇದ್ ಅಖ್ತರ್, ಶಬಾನಾ ಆಜ್ಮಿ
12:39 PM, 29 Apr

ಮಹಾರಾಷ್ಟ್ರ

ಮುಂಬೈಯ ಮತಗಟ್ಟೆ ಸಂಖ್ಯೆ 167 ರಲ್ಲಿ ಮತ ಚಲಾಯಿಸಿದ ಫಿಲ್ಮ್ ಮೇಕರ್ ಮಧು ಬಂಡಾರ್ಕರ್, ಪತ್ನಿ ರೆನು ನಂಬೂದಿರಿ
12:09 PM, 29 Apr

ಮಹಾರಾಷ್ಟ್ರ

ಮತಚಲಾಯಿಸಿಸದ ಬಾಲಿವುಡ್ ನಟಿ ಕಂಗನಾ ರನೌತ್
11:11 AM, 29 Apr

ಮಹಾರಾಷ್ಟ್ರ

ಕ್ಯಾನ್ಸರ್ ನಿಂದ ಬಳಲುತ್ತಿರುವ ಸೋನಾಲಿ ಬೇಂದ್ರೆ ಯವರಿಂದ ಮುಂಬೈಯಲ್ಲಿ ಮತಚಲಾವಣೆ
11:06 AM, 29 Apr

ಮಧ್ಯ ಪ್ರದೇಶ

ಮಧ್ಯ ಪ್ರದೇಶದ ಛಿಂದ್ವಾರಾದಲ್ಲಿ ಹೃದಯಾಘಾತಕ್ಕೊಳಗಾಗಿ ಪೋಲಿಂಗ್ ಆಫೀಸರ್ ಸಾವು
11:04 AM, 29 Apr

ಮಹಾರಾಷ್ಟ್ರ

ಮುಂಬೈಯ ಜುಹುವಿನಲ್ಲಿ ಮತಗಟ್ಟೆ ಸಂಖ್ಯೆ 235-240 ರಲ್ಲಿ ಮತ ಚಲಾಯಿಸಿದ ಬಾಲಿವುಡ್ ನಟ ಅನುಪಮ್ ಖೇರ್
10:22 AM, 29 Apr

ಮಹಾರಾಷ್ಟ್ರ

ಮುಂಬೈಯ ಸೇಂಟ್ ಆನ್ನೆಸ್ ಹೈ ಸ್ಕೂಲ್ ನ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಬಾಲಿವುಡ್ ನಟ ಆಮಿರ್ ಖಾನ್ ಮತ್ತು ಪತ್ನಿ ಕಿರಣ್ ರಾವ್
10:13 AM, 29 Apr

ಒಟ್ಟು ಮತದಾನ ಪ್ರಮಾಣ

9 ಗಂಟೆಯವರೆಗೆ 9 ರಾಜ್ಯಗಳಲ್ಲಿ ಶೇ.10.27 ರಷ್ಟು ಮತದಾನ ದಾಖಲು
9:59 AM, 29 Apr

ಯಾವ ರಾಜ್ಯದಲ್ಲಿ ಎಷ್ಟು ಮತದಾನ?

9 ಗಂಟೆಯವರೆಗೆ ಮಹಾರಾಷ್ಟ್ರದಲ್ಲಿ 6.82%, ಮಧ್ಯಪ್ರದೇಶದಲ್ಲಿ 6.82%, ಒಡಿಶಾದಲ್ಲಿ 9%, ಪಶ್ಚಿಮ ಬಂಗಾಳದಲ್ಲಿ 16.90% ರಷ್ಟು ಮತದಾನ
9:50 AM, 29 Apr

ಮಹಾರಾಷ್ಟ್ರ

ಮುಂಬೈ ಜುಹುದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್
9:42 AM, 29 Apr

ಮುಂಬೈ

ಮುಂಬೈಯ ತರೆದಿಯೋದ ಮತಗಟ್ಟೆ ಸಂಖ್ಯೆ 31 ರಲ್ಲಿ ಮತಚಲಾಯಿಸಿದ ಎನ್ ಸಿಪಿ ಮುಖಂಡ ಶರದ್ ಪವಾರ್
9:41 AM, 29 Apr

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ ಅಸಾನೋಲ್ ನಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ. ಪೊಲೀಸರಿಂದ ಲಾಠಿ ಚಾರ್ಚ್
9:31 AM, 29 Apr

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ ಅಸಾನೋಲ್ ಕ್ಷೇತ್ರದ ಟಿಎಂಸಿ ಸಂಸದ ಬಾಬುಲ್ ಸುಪ್ರಿಯೋ ಕಾರನ್ನು ದ್ವಂಸ ಮಾಡಿದ ಘಟನೆ ನಡೆದಿದೆ
9:20 AM, 29 Apr

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರ ಕುಲ್ಗಾಮ್ ನ ಕುರಿಗಮ್ ಪ್ರದೇಶದಲ್ಲಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಜನರು
READ MORE

English summary
Lok Sabha Elections 2019: 71 constituencies of 9 states incuding Uttar Pradesh, Madhya Pradesh, rajasthan, JK, WB and others across India will vote in 4th Phase on April 29: Here are LIVE Updates in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X