• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರೇಂದ್ರ ಮೋದಿ-ಅಮಿತ್ ಶಾ ಜೋಡಿಯನ್ನು ಶ್ಲಾಘಿಸಿದ ಓಮರ್ ಅಬ್ದುಲ್ಲಾ

|

ಶ್ರೀನಗರ, ಮೇ 23 : ಎಕ್ಸಿಟ್ ಪೋಲ್ ಫಲಿತಾಂಶ ನಿಜವಾಗಿದೆ. ಅದ್ಭುತ ಸಾಧನೆ ತೋರಿದ್ದಕ್ಕಾಗಿ ಬಿಜೆಪಿ ಮತ್ತು ಎನ್‌ಡಿಎಗೆ ಶುಭಾಶಯ ಕೋರುವುದು ಬಿಟ್ಟು ಬೇರೇನೂ ಉಳಿದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಬಿಜೆಪಿಯನ್ನು ಶ್ಲಾಘಿಸಿದ್ದಾರೆ.

ಹುಟ್ಟಿದ ಒಂದು ವರ್ಷದ ದಿನವೇ ಮಹಾಘಟಬಂಧನ್ ಅವಸಾನ!

ಲೋಕಸಭೆ ಚುನಾವಣೆಯ ಸಂಪೂರ್ಣ ಫಲಿತಾಂಶ ಇನ್ನೂ ಬಂದಿಲ್ಲವಾದರೂ, ಈಗಿರುವ ಟ್ರೆಂಡ್ ನೋಡುತ್ತಿದ್ದರೆ, ಚುನಾವಣೋತ್ತರ ಸಮೀಕ್ಷೆಗಳು ನುಡಿದಂತೆ, ಫಲಿತಾಂಶ ಹೆಚ್ಚೂಕಡಿಮೆ ನಿಜವಾಗಿದೆ. ಎಕ್ಸಿಟ್ ಪೋಲ್ ಫಲಿತಾಂಶ ಸಂಪೂರ್ಣ ಉಲ್ಟಾಪುಲ್ಟಾ ಆಗುತ್ತದೆ ಎಂದಿದ್ದ ಕಾಂಗ್ರೆಸ್ ಅನಿಸಿಕೆ ಸಂಪೂರ್ಣ ಸುಳ್ಳಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸಾಬಿಬ್ ಮತ್ತು ಅಮಿತ್ ಶಾ ಅವರಿಗೆ ಈ ಅಭೂತಪೂರ್ವ ಗೆಲುವಿನ ಪೂರ್ತಿ ಶ್ರೇಯಸ್ಸು ಹೋಗಬೇಕು. ಅವರಿಬ್ಬರೂ ಒಟ್ಟಿಗೆ ಗೆಲ್ಲಬಲ್ಲಂಥ ಮೈತ್ರಿ ಮಾಡಿಕೊಂಡಿದ್ದರು ಮತ್ತು ಅತ್ಯಂತ ವೃತ್ತಿಪರತೆಯಿಂದ ಪ್ರಚಾರ ಮಾಡಿದ್ದರು. ಮುಂದಿನ ಐದು ವರ್ಷ ಚೆನ್ನಾಗಿ ಆಡಳಿತ ನೀಡಿ ಎಂದು ಓಮರ್ ಅಬ್ದುಲ್ಲಾ ಅವರು ಹೃತ್ಪೂರ್ವಕವಾಗಿ ಶ್ಲಾಘಿಸಿದ್ದಾರೆ.

ನರೇಂದ್ರ ಮೋದಿ ಮತ್ತು ಅವರ ಸರಕಾರದ ಟೀಕಾಕಾರರಲ್ಲಿ ಮೊದಲಿಗರಾಗಿದ್ದ ಓಮರ್ ಅಬ್ದುಲ್ಲಾ ಅವರು, ತಮ್ಮ ಕಹಿ ಅನಿಸಿಕೆಗಳನ್ನೆಲ್ಲಾ ಬದಿಗಿಟ್ಟು, ಉತ್ತಮ ಸಾಧನೆ ತೋರಿರುವ ನರೇಂದ್ರ ಮೋದಿಯವರ ಬೆನ್ನು ತಟ್ಟಿದ್ದಾರೆ ಮತ್ತು ಅಭಿನಂದನೆ ಸಲ್ಲಿಸಿದ್ದಾರೆ.

ಪುಲ್ವಾಮಾ ದಾಳಿ ನಡೆದ ನಂತರ, ಬಾಲಕೋಟ್ ನಲ್ಲಿ ಪಾಕ್ ಉಗ್ರರ ಮೇಲೆ ಏರ್ ಸ್ಟ್ರೈಕ್ ಆದ ನಂತರ, ಸಂವಿಧಾನದ ಅನುಚ್ಛೇದ 370 ಅನ್ನು ತೆಗೆದುಹಾಕುವುದಾಗಿ ನರೇಂದ್ರ ಮೋದಿ ಹೇಳಿದ್ದ ನಂತರ ಓಮರ್ ಅಬ್ದುಲ್ಲಾ ಅವರು ಕೇಂದ್ರದ ವಿರುದ್ಧ ತಿರುಗಿಬಿದ್ದಿದ್ದರು ಮತ್ತು ಟೀಕಾಪ್ರಹಾರ ಮಾಡಿದ್ದರು.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಅವರ ಈ ನಡೆಗೆ, ಟ್ವಿಟ್ಟರ್ ನಲ್ಲಿಯೂ ಶ್ಲಾಘನೆ ಕಂಡುಬಂದಿದೆ. ಅತ್ಯಂತ ಪ್ರಾಮಾಣಿಕತೆಯಿಂದ ವಿರೋಧಿಗಳನ್ನು ಶ್ಲಾಘಿಸುವವರಲ್ಲಿ ನೀವು ಮೊದಲಿಗರು. ಯಾವ ರಾಜಕಾರಣಿ ವಿನಮ್ರರಾಗಿರುತ್ತಾರೋ ಅಂಥವರನ್ನು, ಗಲಾಟೆ ಬಯಸದ ಇಂದಿನ ಯುವಪೀಳಿಗೆ ಮೆಚ್ಚಿಕೊಳ್ಳುತ್ತದೆ ಎಂದು ಓಮರ್ ಅವರನ್ನು ಟ್ವಿಟ್ಟಿಗರೋರ್ವರು ಶ್ಲಾಘಿಸಿದ್ದಾರೆ.

ನೀವು ರಾಹುಲ್ ಗಾಂಧಿ ಅವರಿಗಿಂತ ಉತ್ತಮ ನಾಯಕ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಕೇಂದ್ರ ಆಡಳಿತದಲ್ಲಿ ನಿಮ್ಮಂಥ ನಾಯಕರ ಅವಶ್ಯಕತೆಯಿದೆ. ನೀವು ಕೂಡ ಎನ್ಡಿಎ ಜೊತೆ ಸೇರಿಕೊಂಡು ಉತ್ತಮ ಆಡಳಿತ ನೀಡಿ. ಭಾರತಕ್ಕೆ ನಿಮ್ಮಂಥ ಉತ್ತಮ ನಾಯಕರ ಅವಶ್ಯಕತೆಯಿದೆ ಎಂದು ಹಲವಾರು ಜನರು ಅವರ ಮಾತನ್ನು ಮೆಚ್ಚಿಕೊಂಡಿದ್ದಾರೆ.

English summary
Lok Sabha Election Results 2019 : Former CM of Jammu and Kashmir Omar Abdullah has congratulated BJP for steller performance and appreciated Narendra Modi and Amit Shah pair for professional campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more