ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ 2019 ಫಲಿತಾಂಶ LIVE : ಮೋದಿ ಸುನಾಮಿಗೆ ವಿಪಕ್ಷ ಕಂಗಾಲು

|
Google Oneindia Kannada News

ನವದೆಹಲಿ, ಮೇ 23 : ವಿರೋಧ ಪಕ್ಷಗಳ ನಿರೀಕ್ಷೆಗಳೆಲ್ಲ ಧೂಳಿಪಟವಾಗಿದ್ದು, ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದ ಎನ್ಡಿಎ ಮತ್ತೆ ಆಡಳಿತ ನಡೆಸಲಿದ್ದು, ನರೇಂದ್ರ ಮೋದಿಯವರು ಎರಡನೇ ಬಾರಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಲಿದ್ದಾರೆ.

ಭಾರತೀಯ ಜನತಾ ಪಕ್ಷ ಏಕಾಂಗಿಯಾಗಿ 300ರ ಗಡಿ ದಾಟಿದ್ದು, ಎನ್ಡಿಎ ಜೊತೆ 350ರ ಗಡಿಯನ್ನು ದಾಟಿದೆ. ಆದರೆ, ಕಾಂಗ್ರೆಸ್ 2014ರಲ್ಲಿ ಇದ್ಧ ಸ್ಥಿತಿಯಲ್ಲಿಯೇ ಇದ್ದು, ಹೀನಾಯ ಸೋಲು ಕಂಡಿದೆ.

ಮತಎಣಿಕೆ ಆರಂಭವಾದಾಗಿನಿಂದ ಎಲ್ಲ ಕ್ಷೇತ್ರಗಳ ಫಲಿತಾಂಶ ಹೊರಬೀಳುವವರೆಗೆ ಸಮಗ್ರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಈ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಕಂಡಿದ್ದು, 28 ಕ್ಷೇತ್ರಗಳಲ್ಲಿ 25ರಲ್ಲಿ ಗೆದ್ದು ಬೀಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೊಂದು ಕ್ಷೇತ್ರದಲ್ಲಿ ಜಯಗಳಸಿದರೆ, ಒಂದು ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.

Lok Sabha Election Results 2019 LIVE Updates

ಗುಜರಾತ್, ಛತ್ತೀಸ್ ಗಢ, ಉತ್ತರಾಖಂಡ್, ಹಿಮಾಚಲ ಪ್ರದೇಶ, ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಕ್ಲೀನ್ ಸ್ವೀಪ್ ಮಾಡಿದೆ. ಕಳೆದ ಚುನಾವಣೆಯಲ್ಲಿಯೂ ಇದೇ ರೀತಿ ಫಲಿತಾಂಶ ಹೊರಬಿದ್ದಿತ್ತು. ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿಯೂ ಇದೇ ರೀತಿ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಗೆದ್ದು ಸೋತಿದೆ.

Newest FirstOldest First
2:45 PM, 25 May

ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಸುಳ್ಳು- ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ
2:39 PM, 25 May

ಹದಿನಾರನೇ ಲೋಕಸಭೆಯನ್ನು ವಿಸರ್ಜಿಸುವ ಕೇಂದ್ರ ಸಚಿವ ಸಂಪುಟದ ಪ್ರಸ್ತಾಪಕ್ಕೆ ರಾಷ್ಟ್ರಪತಿಗಳಿಂದ ಅನುಮೋದನೆ
12:39 PM, 25 May

ನವದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನ ಕಾರ್ಯಕಾರಿಣಿ ಸಭೆ. ಸೋಲಿನ ಪರಾಮರ್ಶೆ.
8:12 AM, 25 May

"ನಾನು ಇದನ್ನು ಒಪ್ಪುವುದಿಲ್ಲ" ಎಂಬ ಶೀರ್ಷಿಕೆಯೊಂದಿಗೆ ಪದ್ಯವೊಂದನ್ನು ಬರೆದು ಫಲಿತಾಂಶಕ್ಕೆ ಪ್ರತಿಕ್ರಿಯೆ ನೀಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
7:23 PM, 24 May

ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಪ್ರಾರಂಭ. ರಾಜ್ಯದಲ್ಲಿ ಎಚ್‌.ಕೆ.ಪಾಟೀಲ್ ರಾಜೀನಾಮೆ. ಗುಜರಾತ್, ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರು ರಾಜೀನಾಮೆ ನೀಡುವ ಸಾಧ್ಯತೆ ಇದೆ.
4:27 PM, 24 May

ಶನಿವಾರ ದೆಹಲಿಯಲ್ಲಿ ನಡೆಯಲಿರುವ ಎನ್ ಡಿಎಯ ಸಂಸದೀಯ ಪಕ್ಷದ ಸಭೆ
3:31 PM, 24 May

ಡಿಎಂಕೆಯ ಸಂಸದೀಯ ಸಮಿತಿ ಸಭೆ ಚೆನ್ನೈನ ಕೇಂದ್ರ ಕಚೇರಿಯಲ್ಲಿ ನಾಳೆ 5 ಗಂಟೆಗೆ ನಡೆಯಲಿದೆ.
Advertisement
12:59 PM, 24 May

ಭೋಪಾಲದ ಬಿಜೆಪಿ ಕೇಂದ್ರ ಕಚೇರಿಗೆ ಆಗಮಿಸಿದ ಪ್ರಜ್ಞಾ ಸಿಂಗ್ ಠಾಕೂರ್. ಅವರು ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ಅವರನ್ನು 3,64,822 ಮತಗಳ ಅಂತರದಿಂದ ಸೋಲಿಸಿ, ಭೋಪಾಲ್ ನ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
12:16 PM, 24 May

ಮಯನ್ಮಾರ್ ಸ್ಟೇಟ್ ಕೌನ್ಸಲರ್ ಆಂಗ್ ಸಾನ್ ಸೂಕಿ ಯಿಂದ ನರೇಂದ್ರ ಮೋದಿ ಅವರಿಗೆ ಅಭಿನಂದನೆ
11:16 AM, 24 May

ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರ ಆಶಿರ್ವಾದ ಪಡೆದ ನರೇಂದ್ರ ಮೋದಿ
11:15 AM, 24 May

ನವದೆಹಲಿಯಲ್ಲಿ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಅವರನ್ನು ಭೇಟಿಯಾದ ನರೇಂದ್ರ ಮೋದಿ, ಅಮಿತ್ ಶಾ
10:08 AM, 24 May

11,000 ಮತಗಳಿಂದ ಒಡಿಶಾ ಪುರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರ ಸೋಲು. ಬಿಜೆಡಿಯ ಪಿನಾಕಿ ಮಿಶ್ರಾ ಗೆಲುವು
Advertisement
9:42 AM, 24 May

ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿಸದ ಕುವೈತ್ ರಾಜ ಸಬಾಹ್ ಅಲ್ ಅಹ್ಮದ್ ಅಲ್ ಜಾಬರ್ ಅಲ್ ಸಬಾಹ್
9:01 AM, 24 May

ಅಮೇಥಿಗೆ ಇದು ಹೊಸ ಬೆಳಗು: ಅಮೇಥಿ ಚುನಾಯಿತ ಪ್ರತಿನಿಧಿ ಸ್ಮೃತಿ ಇರಾನಿ ಹೇಳಿಕೆ
8:39 AM, 24 May

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಕೋರಿದ ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೋ
8:05 AM, 24 May

ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ

ಮೇ 30 ರಂದು ಮುಖ್ಯಮಂತ್ರಿಯಾಗಿ ವೈಎಸ್ ಆರ್ ಕಾಂಗ್ರೆಸ್ ನ ಜಗನ್ಮೋಹನ್ ರೆಡ್ಡಿ ಪ್ರಮಾಣವಚನ
7:44 AM, 24 May

ಮೇ 29 ರಂದು ಪ್ರಮಾಣ ವಚನ ಸ್ವೀಕರಿಸಲಿರುವ ಪ್ರಧಾನಿ ನರೇಂದ್ರ ಮೋದಿ
12:18 AM, 24 May

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಗಳಿಸಿದ ಮತಗಳು - 703,660. ಪ್ರತಿಸ್ಪರ್ಧಿ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಗಳಿಸಿದ ಮತಗಳು - 577,784. ಗೆಲುವಿನ ಅಂತರ - 125,876
11:59 PM, 23 May

ಸೋಲಿನ ಪರಾಮರ್ಶೆ ಮತ್ತು ಮುಂದಿನ ಚಟುವಟಿಕೆಗಳನ್ನು ನಿರ್ಧರಿಸಲು ಮೇ 25ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ದೆಹಲಿಯಲ್ಲಿ ಭೇಟಿಯಾಗಲಿದೆ.
11:45 PM, 23 May

ತಮ್ಮನ್ನು ಭರ್ಜರಿಯಾಗಿ ಗೆಲ್ಲಿಸಿದ ಬೆಂಗಳೂರು ಉತ್ತರ ಕ್ಷೇತ್ರದ ಮತದಾರರಿಗೆ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಧನ್ಯವಾದ ಅರ್ಪಿಸಿದ್ದಾರೆ. ಅವರು ಕೃಷ್ಣ ಬೈರೇ ಗೌಡರನ್ನು ಸೋಲಿಸಿ ಸಂಸತ್ತು ಪ್ರವೇಶಿಸಿದ್ದಾರೆ.
11:42 PM, 23 May

ಉತ್ತರ ಪ್ರದೇಶದ ಮಥುರಾದಲ್ಲಿ ಬಿಜೆಪಿಯ ಹೇಮಾ ಮಾಲಿನಿ ಅವರು ನರೇಂದ್ರ ಸಿಂಗ್ ಅವರ ವಿರುದ್ಧ 2 ಲಕ್ಷ 90 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.
11:38 PM, 23 May

ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಕಾರ್ತಿ ಚಿದಂಬರಂ ಅವರು ಶಿವಗಂಗಾ ಲೋಕಸಭಾ ಕ್ಷೇತ್ರದಲ್ಲಿ 3,32,244 ಮತಗಳ ಅಂತರ ಕಾಪಾಡಿಕೊಂಡು ಭರ್ಜರಿ ಗೆಲುವಿನ ಹಾದಿಯಲ್ಲಿದ್ದಾರೆ.
11:36 PM, 23 May

ಪುರಿ ಜಗನ್ನಾಥನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದರೂ ಮತಎಣಿಕೆಯಲ್ಲಿ ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಅವರು ಪುರಿ ಕ್ಷೇತ್ರದಲ್ಲಿ ಹಿಂದುಳಿದಿದ್ದಾರೆ.
11:34 PM, 23 May

ಅನಿರೀಕ್ಷಿತ ಸೋಲಿನಿಂದ ಕಂಗೆಟ್ಟಿರುವ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದು, ಅದನ್ನು ಸೋನಿಯಾ ಗಾಂಧಿ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
11:16 PM, 23 May

ನರೇಂದ್ರ ಮೋದಿ ಅವರು ಗಳಿಸಿದ ಅಭೂತಪೂರ್ವ ಯಶಸ್ಸಿಗಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ನಾವಿಬ್ಬರೂ ಜೊತೆಯಾಗಿ ಇನ್ನೂ ಬೇಕಾದಷ್ಟು ಕೆಲಸಗಳನ್ನು ಮಾಡಬೇಕಿದೆ ಎಂದು ಅವರು ಸಂದೇಶ ಕಳಿಸಿದ್ದಾರೆ.
5:18 PM, 23 May

ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರೆದುರು ಕಾಂಗ್ರೆಸ್ ನ ರಾಹುಲ್ ಗಾಂಧಿ ಸೋಲನುಭವಿಸಿದ್ದಾರೆ.
4:43 PM, 23 May

ನಾಳೆ ಕೇಂದ್ರ ಸಚಿವ ಸಂಪುಟ ಸಭೆ
4:28 PM, 23 May

ದುಬೈಯಲ್ಲಿ ಬಿಜೆಪಿ ಬೆಂಬಲಿಗರಿಂದ ಸಂಭ್ರಮಾಚರಣೆ
3:37 PM, 23 May

ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಗೆಲುವು
3:08 PM, 23 May

ಎಲ್ಲರೂ ಜೊತೆಯಾಗಿ ಬೆಳೆಯೋಣ, ಎಲ್ಲರೂ ಜೊತೆಯಾಗಿ ಸಮೃದ್ಧಿ ಕಾಣೋಣ, ಸದೃಢ ಭಾರತ ಕಟ್ಟಲು ಪಣತೊಡೋಣ. ಭಾರತ ಮತ್ತೆ ಗೆದ್ದಿದೆ. ವಿಜಯೀಭಾರತ-ನರೇಂದ್ರ ಮೋದಿ ಟ್ವೀಟ್
READ MORE

English summary
Lok Sabha Election Results 2019 LIVE updates in Kannada. Indian General Election 2019 Results news, analysis, videos etc in Oneindia Kannada. Lok Sabha Election Vote Counting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X