• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭಾ ಚುನಾವಣೆ ಘೋಷಣೆ : ಮಾದರಿ ನೀತಿ ಸಂಹಿತೆ ಎಂದರೇನು?

|

ಬೆಂಗಳೂರು, ಮಾರ್ಚ್ 10 : ಕೇಂದ್ರ ಚುನಾವಣಾ ಆಯೋಗ 17ನೇ ಲೋಕಸಭಾ ಚುನಾವಣೆ ದಿನಾಂಕವನ್ನು ಭಾನುವಾರ ಘೋಷಣೆ ಮಾಡಿದೆ. ಚುನಾವಣಾ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ.

ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅವರು ವೇಳಾಪಟ್ಟಿ ಪ್ರಕಟಿಸಿದರು. ಏಪ್ರಿಲ್ 18 ಮತ್ತು 23ರಂದು ಕರ್ನಾಟಕದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಲೋಕಸಭಾ ಚುನಾವಣೆ : ಕರ್ನಾಟಕದಲ್ಲಿ 2 ಹಂತದ ಮತದಾನ

ಮಾದರಿ ಚುನಾವಣಾ ನೀತಿ ಸಂಹಿತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅನ್ವಯವಾಗುತ್ತದೆ. ಮತದಾನ ಮುಗಿದು, ಫಲಿತಾಂಶ ಘೋಷಣೆ ಆಗುವ ತನಕ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಯಾವ ನಿಯಮ ಪಾಲಿಸಬೇಕು, ಏನು ಮಾಡಬಾರದು ಎಂಬ ವಿವರಗಳು ಇಲ್ಲಿವೆ.

ಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿ

ದೇಶದಲ್ಲಿ ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಫಲಿತಾಂಶ ಪ್ರಕಟವಾದ ಬಳಿಕ ನೀತಿ ಸಂಹಿತೆ ತೆರವಾಗಲಿದೆ. ಚುನಾವಣಾ ನೀತಿ ಸಂಹಿತೆ ಎಂದರೇನು? ಎಂಬ ಮಾಹಿತಿ ಇಲ್ಲಿದೆ.

ಲೋಕ ಸಮರ : 7 ಹಂತದಲ್ಲಿ ಮತದಾನ, ಮೇ 23ರಂದು ಫಲಿತಾಂಶ

ಅಧಿಕಾರಿಗಳ ಸೇವೆ

ಅಧಿಕಾರಿಗಳ ಸೇವೆ

ಚುನಾವಣೆಗಾಗಿ ಸರ್ಕಾರಿ ಅಥವ ಸ್ಥಳೀಯ ಸಂಸ್ಥೆಗಳ ನೌಕರರ ಸೇವೆ ಬೇಕೆಂದು ಚುನಾವಣಾ ಪ್ರಾಧಿಕಾರದಿಂದ ಕೋರಿಕೆ ಬಂದಲ್ಲಿ ಆದ್ಯತೆಯ ಮೇಲೆ ಅದನ್ನು ಈಡೇರಿಸಬೇಕಾಗಿದೆ.

ವರ್ಗಾವಣೆ/ರಜೆ ಮಂಜೂರು

ವರ್ಗಾವಣೆ/ರಜೆ ಮಂಜೂರು

ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಸೇವೆ ಮತ್ತು ಸ್ಥಳೀಯ ಸಂಸ್ಥೆಗಳ ಸೇವೆಯ ಸಿಬ್ಬಂದಿ ಬೇಕಾಗುತ್ತದೆ. ಚುನಾವಣಾ ಆಯೋಗದೊಡನೆ ಸಮಾಲೋಚನೆ ನಡೆಸದ ಹೊರತು ನೌಕರರನ್ನು ವರ್ಗಾವಣೆ ಮಾಡುವಂತಿಲ್ಲ ಅಥವ ತರಬೇತಿಗೆ ಕಳಿಸುವಂತಿಲ್ಲ, ಯಾವುದೇ ರೀತಿಯ ರಜೆ ಮಂಜೂರು ಮಾಡುವಂತಿಲ್ಲ. ತುರ್ತು ಸಂದರ್ಭದಲ್ಲಿ 1-2 ದಿನದ ರಜೆ ನೀಡಬಹುದು. ತಾತ್ಕಾಲಿಕ ಮುಂಬಡ್ತಿ ನೇಮಕಾತಿಗಳನ್ನು ಸರ್ಕಾರಿ ಅಥವ ಖಾಸಗಿ ಉದ್ಯಮದಲ್ಲಿ ಮಾಡಬಾರದು.

ಸರ್ಕಾರಿ ಕಟ್ಟಡ

ಸರ್ಕಾರಿ ಕಟ್ಟಡ

ಚುನಾವಣೆ ಸಂಬಂಧಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲು ಅಥವ ಚುನಾವಣೆಗಾಗಿ ಬೇಕಾಗುವ ಶಾಲೆ, ಕಾಲೇಜು ಕಟ್ಟಡವನ್ನು ಮತ್ತು ಇತರ ಸರ್ಕಾರಿ ಕಟ್ಟಡಗಳನ್ನು ಅಗತ್ಯ ದುರಸ್ತಿಗಳೊಡನೆ ಸುಸ್ಥಿತಿಯಲ್ಲಿರುವ ಪೀಠೋಪಕರಣಗಳೊಂದಿಗೆ ಒದಗಿಸಿಬೇಕು.

ವಾಹನ ಒದಗಿಸುವುದು

ವಾಹನ ಒದಗಿಸುವುದು

ಚುನಾವಣೆಗಾಗಿ ಬೇಕಾಗುವ ವಾಹನಗಳನ್ನು ಚುನಾವಣಾ ಪ್ರಾಧಿಕಾರಿಗಳು ಕೋರಿಕೆ ಸಲ್ಲಿಸಿದಾಗ ಒದಗಿಸತಕ್ಕದ್ದು. ಅಂತಹ ವಾಹನಗಳು ಸುಸ್ಥಿತಿಯಲ್ಲಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ನೀತಿ ಸಂಹಿತೆ ನಿಯಮಗಳು

ನೀತಿ ಸಂಹಿತೆ ನಿಯಮಗಳು

* ಮಂತ್ರಿಗಳು ಚುನಾವಣಾ ಪ್ರವಾಸ ಕೈಗೊಂಡಾಗ ಸರ್ಕಾರಿ ಅಧಿಕಾರಿಗಳ ವರ್ತನೆ ಬಗ್ಗೆ ಹಲವಾರು ಸೂಚನೆಗಳನ್ನು ಆಯೋಗ ಹೊರಡಿಸಿದೆ.

* ಮಂತ್ರಿಗಳು ಪ್ರವಾಸ ಸರ್ಕಾರಿ ಕೆಲಸಗಳನ್ನು ಮಾತ್ರ ನಿರ್ವಹಿಸುತ್ತಿದ್ದರೆ ಅವರು ಕೆಲಸವನ್ನು ನಿರ್ವಹಿಸಲು ಅನುಕೂಲವಾಗುವಂತೆ ಎಲ್ಲಾ ವ್ಯವಸ್ಥೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಅನುವು ಮಾಡಿ ಕೊಡಬೇಕು.

* ತಮ್ಮ ಪ್ರವಾಸದಲ್ಲಿ ಮೇಲಿನ ಎರಡು ಅಂಶಗಳ ಬಗ್ಗೆ ಸ್ಪಷ್ಟ ಸೂಚನೆ ನೀಡದಿದ್ದಲ್ಲಿ ಅಥವ ಅವರು ತಮ್ಮ ಪ್ರವಾಸ ಕಾರ್ಯಕ್ರಮದ ಪಟ್ಟಿಯಲ್ಲಿ ಏನೂ ವಿವರಗಳನ್ನು ಕೊಡದಿದ್ದಲ್ಲಿ ಈ ಪ್ರವಾಸಗಳು ಚುನಾವಣಾ ಪ್ರವಾಸಗಳೆಂದು ಭಾವಿಸಲಾಗುತ್ತದೆ.

ವಿಮಾನ/ಹೆಲಿಕಾಪ್ಟರ್ ಬಳಕೆ

ವಿಮಾನ/ಹೆಲಿಕಾಪ್ಟರ್ ಬಳಕೆ

ಸರ್ಕಾರಿ ವಿಮಾನವನ್ನು/ಹೆಲಿಕಾಪ್ಟರ್ ವಿಶೇಷ ತುರ್ತು ಸನ್ನಿವೇಶಗಳಲ್ಲಿ ಉದಾಹಹರಣೆಗೆ ಪ್ರಕೃತಿ ವಿಕೋಪ ಸಮಯ ಹೊರತುಪಡಿಸಿ ಇತರೆ ಯಾವ ಸಂದರ್ಭದಲ್ಲೂ ಚುನಾವಣೆ ಘೋಷಿಸಿದ ದಿನಾಂಕದಿಂದ ಅದು ಮುಕ್ತಾಯವಾಗುವತನಕ ಉಪಯೋಗಿಸಕೂಡದು.

ಕಾರ್ಯಕ್ರಮ ಘೋಷಣೆ

ಕಾರ್ಯಕ್ರಮ ಘೋಷಣೆ

ಭಾರತ ಚುನಾವಣಾ ಆಯೋಗವು ಚುನಾವಣೆಗಳನ್ನು ಘೋಷಿಸಿದ ದಿನಾಂಕದಿಂದ ಚುನಾವಣೆಗಳ ಪ್ರಕ್ರಿಯೆ ಮುಗಿಯುವ ತನಕ ಹೊಸ ಯೋಜನೆ, ವಿದ್ಯುದ್ದೀಕರಣ, ಲೋಕೋಪಯೋಗಿ ಇಲಾಖೆಯ ಹೊಸ ಕೆಲಸಗಳು ಇತ್ಯಾದಿಗಳನ್ನು ಕೈಗೊಳ್ಳಬಾರದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Election Commission of India's announced schedule for 2019 general elections. Model Code of Conduct come to effect from immediate effect. Know about Model Code of Conduct.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more